ವಿಶ್ವದ ಮೊದಲ ಬಿಯರ್ ಹೊಟೇಲ್ ಕಾರ್ಯಾರಂಭ

news18
Updated:August 29, 2018, 12:37 PM IST
ವಿಶ್ವದ ಮೊದಲ ಬಿಯರ್ ಹೊಟೇಲ್ ಕಾರ್ಯಾರಂಭ
news18
Updated: August 29, 2018, 12:37 PM IST
-ನ್ಯೂಸ್ 18 ಕನ್ನಡ

ಮದ್ಯದ ಅಮಲೇರಿದಾಗ ಕೂತಲ್ಲೇ ನಿದ್ದೆ ಮಾಡುವವರು ಇರುತ್ತಾರೆ. ಇಲ್ಲ ಮದ್ಯಪಾನದ ಬಳಿಕ ಆಯಾ ತಪ್ಪಿ ನಾಲ್ಕು ಕಾಲುಗಳಲ್ಲಿ ನಡೆದಾಡುವವರನ್ನು ನೋಡಿರುತ್ತೀರಿ. ಇಂತಹ ಸಮಯದಲ್ಲಿ ಕುಡುಕರಿಗೆ ಮಲಗುವಲ್ಲೇ ಮದ್ಯ ಸಿಕ್ಕಿದರೆ ಹೇಗೆ ಎಂಬ ಆಲೋಚನೆಗಳು ಬಂದಿರಬಹುದು. ಅಂತಹದೊಂದು ಕಲ್ಪನೆಯನ್ನು ಬ್ರಿವ್​ಡಾಗ್ ಎಂಬ ಬಿಯರ್ ಸಂಸ್ಥೆ ನನಸಾಗಿದೆ. ವಿಶ್ವದ ಮೊಟ್ಟ ಮೊದಲ ಬಿಯರ್ ಹೊಟೇಲ್​ನ್ನು  ಅಮೆರಿಕದ ಕೊಲಂಬಸ್ ನಗರದಲ್ಲಿ  ಪ್ರಾರಂಭಿಸಲಾಗಿದೆ. ಇಲ್ಲಿನ ವಿಶೇಷತೆ ಏನೆಂದರೆ ನೀವು ಬುಕ್ ಮಾಡಿರುವ ಕೊಠಡಿಗಳ ನಲ್ಲಿಗಳಲ್ಲೂ ಕೂಡ ಬಿಯರ್ ಸಿಗಲಿದೆ. ಈ ಹೊಟೇಲ್​​ನಲ್ಲಿ 32 ರೂಮ್​​ಗಳಿದ್ದು, ಪ್ರತಿಯೊಂದು ಕೋಣೆಯಲ್ಲೂ ಬಿಯರ್ ಶವರ್ ಫ್ರಿಡ್ಜ್​ನ್ನು ಕೂಡ ಇರಿಸಲಾಗಿದೆ. ಇಲ್ಲಿ ಕೂಡ ತಣ್ಣನೆಯ ಬಿಯರ್​ನ್ನು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಿಯರ್ ಪ್ರಿಯರು ಹೆಚ್ಚಾಗಿದ್ದು, ಮದ್ಯಪಾನಿಗಳ ಕೆಲ ಕಲ್ಪನೆಯನ್ನು ಸಕಾರಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬ್ರೂಡಾಗ್ ಸಹ ಸಂಸ್ಥಾಪಕ ಜೇಮ್ಸ್​ ವ್ಯಾಟ್​ ತಿಳಿಸಿದ್ದಾರೆ.

ಈ ಬಿಯರ್​ ಹೊಟೇಲ್​ನಲ್ಲಿ ಒಟ್ಟು 32 ಕೊಠಡಿಗಳಿದ್ದು, ಇದಲ್ಲದೆ 6 ಸಾವಿರ ಚದರ ಅಡಿಯ ಬಿಯರ್ ಹೌಸ್​ನ್ನು​ ಕೂಡ ಈ ಹೊಟೇಲ್​ನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನೀವು ರೂಮ್ ಬುಕ್​ ಮಾಡದೇ ಕೂಡ ಬಿಯರ್​ನ್ನು ಹೀರಬಹುದು. ಆದರೆ ಹೆಚ್ಚಿನ ಮದ್ಯದಂಗಡಿಯಲ್ಲಿ ಸಿಗುವಂತೆ ಟೇಬಲ್ ಮುಂಭಾಗದಲ್ಲಿ ಮದ್ಯಗಳು ಸಿಗುವುದಿಲ್ಲ. ಹಾಗಯೇ ಇಲ್ಲಿ ಅಂತಹ ಯಾವುದೇ ಪರಿಚಾರಕರು ಸಹ ಇರುವುದಿಲ್ಲ. ಬದಲಾಗಿ ನಿಮ್ಮ ಇಚ್ಛೆಗೆ ತಕ್ಕಂತೆ ಬಿಯರ್​ಗಳನ್ನು ನಲ್ಲಿಗಳ ಮೂಲಕ ತುಂಬಿಸಿ ಕುಡಿಯಬಹುದು.

ಇದಲ್ಲದೆ ನೀವು ರೂಮ್ ಬುಕ್ ಮಾಡಿ ಕುಡಿಯಬೇಕೆಂದರೆ ಹೊಟೇಲ್​ನ ಕೊಠಡಿಗಳಿಗೆ ನೀವು ಪ್ರವೇಶಿಸುವಂತೆ ಪ್ರತಿಯೊಂದು ಬಿಯರ್​ ನಲ್ಲಿಗಳು ಸಕ್ರೀಯಗೊಳ್ಳುತ್ತದೆ. ಪ್ರತಿ ಕೋಣೆಯಲ್ಲೂ ಬಿಯರ್​ನ್ನು ತುಂಬಿಸಿರುವ ಫ್ರಿಡ್ಜ್​ಗಳನ್ನು ಇಡಲಾಗಿದ್ದು, ಅದರಲ್ಲಿ ಬ್ರೂಡಾಗ್​ನ ಕ್ರಾಫ್ಟ್​ ಬಿಯರ್, ಕಾಲೋಚಿತ ರುಚಿಯ ಬಿಯರ್ ಮತ್ತು ಅತಿಥಿಗಳ ಮೆಚ್ಚಿನ ಪಾನೀಯಗಳನ್ನು ಇರಿಸಲಾಗುತ್ತದೆ. ಅಲ್ಲದೆ ಸ್ನಾನಗೃಹದಲ್ಲೂ ಶವರ್ ಮೂಲಕ ಬಿಯರ್​ ಒದಗಿಸುವ ಸೇವೆಯನ್ನು ನೀವು ಬ್ರೂಡಾಗ್ ಹೊಟೇಲ್​ನಲ್ಲಿ ಪಡೆಯಬಹುದು ಎಂದು ಹೊಟೇಲ್ ಮಾಲೀಕರಾದ ಜೇಮ್ಸ್ ವ್ಯಾಟ್ ತಿಳಿಸಿದ್ದಾರೆ.

ಮುಷ್ಕರ ಮತ್ತು ಇನ್ನಿತರ ಘಟನೆಗಳಿಂದ ಮದ್ಯಪಾನಿಗಳಿಗೆ ಸಮಸ್ಯೆಯಾದಲ್ಲಿ ಬ್ರೂಡಾಗ್​ ಮೂಲಕ ಬಿಯರ್ ಪ್ರಿಯರ ಬಾಯಿ ತಣಿಸಲು ಅಮೆರಿಕ ಮೂಲದ ಈ ಹೊಟೇಲ್​ ಈಗ ಅಲ್ಲಿನ ಮದ್ಯಪಾನಿಗಳ ನೆಚ್ಚಿನ ತಾಣವಾಗಿರುವುದಂತು ಸುಳ್ಳಲ್ಲ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ