Health Tips: ಬಿಸಿ ಅಥವಾ ತಂಪು ಹಾಲು : ಆರೋಗ್ಯಕ್ಕೆ ಯಾವುದು ಉತ್ತಮ..?

ಹಾಲು ಬಿಸಿ ಅಥವಾ ತಂಪು, ಹೇಗೆ ಇರಲಿ ಎರಡೂ ಬಗೆಯ ಹಾಲು ದೇಹಕ್ಕೆ ಉತ್ತಮವೇ ಆಗಿವೆ. ಈ ಎರಡೂ ರೀತಿಯ ಹಾಲು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿದ್ದು ಅದನ್ನು ತೆಗೆದುಕೊಳ್ಳುವುದು ಯಾವ ಕಾಲ ಹಾಗೂ ಸಮಯ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಲು (Milk) ಆರೋಗ್ಯವನ್ನು ಕಾಪಾಡಲು ಬೇಕಾಗಿರುವ ಅವಶ್ಯಕ (Essential ) ಪೋಷಕಾಂಶಗಳನ್ನು (Nutrients) ಹೊಂದಿರುವ ಪದಾರ್ಥಗಳಲ್ಲಿ ಒಂದು. ಹಾಲು ಸೇವಿಸುವವರಿಗೆ ಹಾಲಿನ ಪ್ರಯೋಜನಗಳ (Benefits of milk)ಕುರಿತು ತಿಳಿದೇ ಇರುತ್ತದೆ. ಆದರೂ, ಅದರಲ್ಲಿ ಬಿಸಿ ಹಾಲು ಅಥವಾ ತಂಪು ಹಾಲು ಇವೆರಡರಲ್ಲಿ ಶರೀರಕ್ಕೆ ಯಾವುದು ಬಲು ಉತ್ತಮ ಎಂಬ ಪ್ರಶ್ನೆ ಒಮ್ಮೆಯೂ ಮೂಡಿರದೆ ಇರಲಾರದು. ಕ್ಯಾಲ್ಶಿಯಂ, ವಿಟಮಿನ್‌ ಡಿ, (vitamin D and potassium) ಪೊಟ್ಯಾಶಿಯಂನಂತಹ ಪೋಷಕಾಂಶಗಳಿರುವ ಹಾಲನ್ನು ಒಂದು ಸಂಪೂರ್ಣ ಆಹಾರ ಎಂದು ಸಹ ಕರೆಯಲಾಗುತ್ತದೆ.

ಬಹಳಷ್ಟು ಜನರು ಹಾಲನ್ನು ಬಿಸಿಯಾಗಿ ತೆಗೆದುಕೊಳ್ಳಲು ಬಯಸಿದರೆ ತಂಪಾಗಿರುವ ಹಾಲನ್ನು ಸೇವಿಸ ಬಯಸುವ ಜನರ ಸಂಖ್ಯೆಯೇನು ಕಡಿಮೆಯಿಲ್ಲ. ಆದರೆ, ಡಯಟ್ ಪರಿಣಿತೆಯಾದ ಡಾ. ರಂಜನಾ ಸಿಂಗ್ ಪ್ರಕಾರ, ಹಾಲು ಬಿಸಿ ಅಥವಾ ತಂಪು, ಹೇಗೆ ಇರಲಿ ಎರಡೂ ಬಗೆಯ ಹಾಲು ದೇಹಕ್ಕೆ ಉತ್ತಮವೇ ಆಗಿವೆ. ಈ ಎರಡೂ ರೀತಿಯ ಹಾಲು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿದ್ದು ಅದನ್ನು ತೆಗೆದುಕೊಳ್ಳುವುದು ಯಾವ ಕಾಲ ಹಾಗೂ ಸಮಯ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Milk Benefits: ಸರ್ವ ರೋಗಕ್ಕೂ ಮದ್ದು ಹಾಲೆಂಬ ಅಮೃತ

ಕೆಲ ಜನರಿಗೆ ಹಾಲು ಎಂದರೆ ಆಗದು. ಅವರು ಅದನ್ನು ಸೇವಿಸಲು ಬಯಸುವುದೇ ಇಲ್ಲ. ಆದರೆ, ನೆನಪಿಡಿ, ಹಾಲಿನಿಂದ ನಮ್ಮ ಶರೀರಕ್ಕೆ ಸಾಕಷ್ಟು ಲಾಭವಿದೆ. ನಮ್ಮ ಎಲುಬುಗಳು ಹಾಗೂ ಮಾಂಸಖಂಡಗಳ ಆರೋಗ್ಯ ಕಾಪಾಡುವಲ್ಲಿ ಹಾಲು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಕನಿಷ್ಠ ದಿನಕ್ಕೆ ಒಂದು ಲೋಟದಷ್ಟಾದರೂ ಹಾಲನ್ನು ಸೇವಿಸುವುದು ಬಲು ಉತ್ತಮ.

ಬಿಸಿ ಅಥವಾ ತಂಪು, ಯಾವ ಹಾಲು ಉತ್ತಮ..?
ಹಾಗೆ ನೋಡಿದರೆ ಈ ಪ್ರಶ್ನೆಗೆ ಉತ್ತರ ಬಲು ಸರಳ. ನೀವು ದಿನದ ಸಮಯದಲ್ಲಿ ಅದರಲ್ಲೂ ಬೇಸಿಗೆಯ ಕಾಲದಲ್ಲಿ ಹಾಲನ್ನು ಸೇವಿಸುತ್ತಿದ್ದರೆ ತಂಪಾದ ಹಾಲು ಸೇವಿಸುವುದು ಉತ್ತಮ. ಏಕೆಂದರೆ ಇದು ನಿಮ್ಮ ಶರೀರದ ಉಷ್ಣತೆ ಕುಗ್ಗಿಸಿ ನಿಮ್ಮನ್ನು ತಂಪಾಗಿಡಲು ಸಹಕಾರಿಯಾದರೆ ಚಳಿಗಾಲದಲ್ಲಿ ಅದರಲ್ಲೂ ರಾತ್ರಿಯ ಸಮಯದಲ್ಲಿ ಹಾಲನ್ನು ಸೇವಿಸುವವರು ಬಿಸಿಯಾಗಿರುವ ಹಾಲನ್ನು ಸೇವಿಸಿದಾಗ ಬೆಚ್ಚಗಿನ ಅನುಭವ ಉಂಟಾಗಿ ಶರೀರಕ್ಕೆ ಹಿತವನ್ನುಂಟು ಮಾಡುತ್ತದೆ.

ಡಯಟ್ ಪರಿಣಿತೆಯಾದ ಡಾ. ರಂಜನಾ ಸಿಂಗ್ ಪ್ರಕಾರ, ಹಾಲು ಹಲವಾರು ಜೀವಸತ್ವ, ಪ್ರೋಟೀನ್, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಹೊಂದಿರುವುದರಿಂದ ಒಂದು ಸಂಪೂರ್ಣ ಆಹಾರ ಎಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ, ಹಾಲು ಬಿಸಿಯೇ ಇರಲಿ, ತಂಪಾಗಿಯೇ ಇರಲಿ ಅದನ್ನು ಸೇವಿಸಿದಾಗ ಅದರಲ್ಲಿರುವ ಎಲ್ಲ ಪೋಷಕಾಂಶಗಳು ನಮ್ಮ ಶರೀರಕ್ಕೆ ದಕ್ಕುತ್ತವೆ.

ಬಿಸಿ ಹಾಲಿನಿಂದಾಗುವ ಲಾಭಗಳು
ಡಾ. ಸಿಂಗ್ ಸಂದರ್ಶನದಲ್ಲಿ ಹೇಳುವಂತೆ ಬಿಸಿ ಹಾಲು ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಸುಲಭವಾಗಿ ಪಚನವಾಗುತ್ತದೆ ಹಾಗೂ ಬಿಸಿ ಹಾಲಿನ ಸೇವನೆ ಮೂಲಕ ಡಯೇರಿಯಾ, ಗ್ಯಾಸ್‌ನಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದಾಗಿದೆ. ಬಿಸಿ ಹಾಲು ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಹೊಂದಿದ್ದು ಇದು ನಿದ್ದೆ ಬರಲು ಕಾರಣವಾಗಿರುವ ಸಿರೊಟೋನಿನ್ ಹಾಗೂ ಮೆಲಟೋನಿನ್ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ.

ತಂಪು ಹಾಲಿನಿಂದಾಗುವ ಲಾಭಗಳು
ತಂಪಾದ ಹಾಲನ್ನು ಸೇವಿಸಿದಾಗ ಶರೀರಕ್ಕೆ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಶಿಯಂ ದೊರೆಯುತ್ತದೆ ಎಂದು ಹೇಳುತ್ತಾರೆ ಡಾ.ಸಿಂಗ್. ಹಾಗಾಗಿ ತಂಪಾದ ಹಾಲಿನ ಹೆಚ್ಚಿನ ಸೇವನೆಯು ಹೊಟ್ಟೆಯಲ್ಲುಂಟಾಗುವ ಕಿರಿಕಿರಿ ಹಾಗೂ ಆಮ್ಲೀಯತೆಯನ್ನು ಹೋಗಲಾಡಿಸುತ್ತದೆ. ಈ ಹಾಲಿನಲ್ಲಿ ಎಲೆಕ್ಟ್ರೋಲೈಟ್‌ಗಳು ಹೇರಳವಾಗಿರುವುದರಿಂದ ಇದರ ಸೇವನೆಯಿಂದಾಗಿ ಶರೀರವು ದಿನಪೂರ್ತಿ ಹೈಡ್ರೇಟ್ ಆಗಿರುತ್ತದೆ.

ಆದರೆ, ಸಾಧ್ಯವಾದಷ್ಟು ರಾತ್ರಿಯ ಸಮಯದಲ್ಲಿ ತಂಪಾದ ಹಾಲು ಸೇವಿಸದಿರಿ. ಏಕೆಂದರೆ, ಇದು ಪಚನ ಕ್ರಿಯೆಗೆ ಕಷ್ಟವಾಗಬಹುದು ಹಾಗೂ ಶೀತ, ಕೆಮ್ಮುಗಳು ಉಲ್ಬಣವಾಗುವಂತೆ ಮಾಡುತ್ತದೆ. ತಂಪಾದ ಹಾಲು ನೈಸರ್ಗಿಕ ಮುಖದ ಕ್ಲಿನ್ಸರ್ ಆಗಿರುವುದರಿಂದ ಮುಖದ ಚರ್ಮದ ಸ್ವಚ್ಛತೆಗೂ ಇದನ್ನು ಬಳಸುತ್ತಾರೆ.

ಹಾಲಿನ ಬಗೆಗಿರುವ ತಪ್ಪು ತಿಳುವಳಿಕೆ
ಡಾ. ಸಿಂಗ್ ಹೇಳುವಂತೆ, ಕೆಲ ಜನರು ಹಾಲಿನ ಸೇವನೆ ತೂಕ ಹೆಚ್ಚಿಸುತ್ತದೆ ಎಂದು ತಿಳಿದಿದ್ದಾರೆ. ಆದರೆ ಇದು ಖಂಡಿತ ತಪ್ಪಾಗಿರುವ ತಿಳುವಳಿಕೆ. ಹಾಲಿನಲ್ಲಿರುವ ಕ್ಯಾಲ್ಶಿಯಂ ದೇಹದ ಮೆಟಾಬಾಲಿಸಮ್ ಅನ್ನು ವೃದ್ಧಿಸುವುದರ ಕಾರಣದಿಂದಾಗಿ ಶರೀರವು ವೇಗವಾಗಿ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಅಷ್ಟೆ ಅಲ್ಲ, ತಂಪಾದ ಹಾಲಿನ ಸೇವನೆಯು ಹೊಟ್ಟೆಯನ್ನು ದೀರ್ಘ ಕಾಲದವರೆಗೆ ತೃಪ್ತಿಯಾಗಿರುವಂತೆ ಇಟ್ಟಿರುತ್ತದೆ. ಇದರಿಂದ ನೀವು ಪದೇ ಪದೇ ತಿನ್ನುವುದರಿಂದ ದೂರವಿರುತ್ತೀರಿ.

ಇದನ್ನೂ ಓದಿ: Goat Milk Soap: ಅಬ್ಬಾಬ್ಬ ಮೇಕೆ ಹಾಲಿನ ಸಾಬೂನಿನಿಂದ ಎಷ್ಟು ಪ್ರಯೋಜನವಿದೆ ಗೊತ್ತೇ..?

ಒಟ್ಟಿನಲ್ಲಿ, ನೀವು ಲ್ಯಾಕ್ಟೋಸ್ ಇಂಟಾಲರೆಂಟ್ ಆಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಎರಡೂ ಬಗೆಯ ಹಾಲು ಲ್ಯಾಕ್ಟೋಸ್ ಇಂಟಾಲರೆಂಟ್ ಆಗಿರುವ ವ್ಯಕ್ತಿಗಳಿಗೆ ಸೂಕ್ತವಾಗಿಲ್ಲ.
Published by:vanithasanjevani vanithasanjevani
First published: