• Home
  • »
  • News
  • »
  • lifestyle
  • »
  • Cracker Eye Injury: ಪಟಾಕಿಯಿಂದ ಏಟಾದ್ರೆ ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಕೂಡಲೇ ಚಿಕಿತ್ಸೆ ಸಿಗುತ್ತೆ, ಗಮನಿಸಿ

Cracker Eye Injury: ಪಟಾಕಿಯಿಂದ ಏಟಾದ್ರೆ ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಕೂಡಲೇ ಚಿಕಿತ್ಸೆ ಸಿಗುತ್ತೆ, ಗಮನಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Deepavali 2022: ಈ ರೀತಿ ಸಮಸ್ಯೆಯಾದಾಗ ಬೆಂಗಳೂರಿನಲ್ಲಿ (Bengaluru) ಯಾವ ಆಸ್ಪತ್ರೆಗಳಿಗೆ ಹೋಗಬಹುದು ಹಾಗೂ ಯಾವ ರೀತಿ ಮುನ್ನಚ್ಚರಿಕೆವಹಿಸಬೇಕು ಎಂಬುದು ಎಲ್ಲಿದೆ.

  • Share this:

ದೀಪಾವಳಿ ಹಬ್ಬದ (deepavali festival) ಸಂಭ್ರಮ ಆರಂಭವಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಸಂತಸದಿಂದ ಈ ಹಬ್ಬವನ್ನು (Festival) ಆಚರಿಸಲಾಗುತ್ತಿದೆ. ಈ ಹಬ್ಬದ ಸಮಯದಲ್ಲಿ ಪಟಾಕಿ (Crackers) ಹೊಡೆಯುವುದು ಬಹಳ ಹೆಚ್ಚು. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಪಟಾಕಿ ಹೊಡೆಯಲು ಇಷ್ಟಪಡುತ್ತಾರೆ. ಆದರೆ, ಈ ಸಮಯದಲ್ಲಿಯೇ ಅಪಾಯಗಳು ಸಹ ಹೆಚ್ಚು. ನಾವು ಟಿವಿ, ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ,  ಈ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಗಾಯಗಳಾಗಿರುವುದು ಹಾಗೂ ಕಣ್ಣಿಗೆ ಹೊಡೆತ ಬಿದ್ದಿರುವ ಹಲವು ಸುದ್ದಿಗಳನ್ನು ಸಹ ನಾವು ಕೇಳಿರುತ್ತೇವೆ. ಅದರಲ್ಲೂ ಏನೂ ಅರಿಯದ ಪುಟ್ಟ ಮಕ್ಕಳಿಗೆ ಇದು ಬಹಳ ಹೆಚ್ಚು. ಪಟಾಕಿ ಹಚ್ಚುವಾಗ ಈ ಸಮಸ್ಯೆಗಳು ಸಾಮಾನ್ಯ. ಈ ರೀತಿ ಸಮಸ್ಯೆಯಾದಾಗ ಬೆಂಗಳೂರಿನಲ್ಲಿ (Bengaluru) ಯಾವ ಆಸ್ಪತ್ರೆಗಳಿಗೆ ಹೋಗಬಹುದು ಹಾಗೂ ಯಾವ ರೀತಿ ಮುನ್ನಚ್ಚರಿಕೆವಹಿಸಬೇಕು ಎಂಬುದು ಎಲ್ಲಿದೆ.


ಮಿಂಟೋ ಆಸ್ಪತ್ರೆ, ಚಾಮರಾಜಪೇಟೆ, ಬೆಂಗಳೂರು


ಬೆಂಗಳೂರಿನಲ್ಲಿ ಪಟಾಕಿ ಸಮಯದಲ್ಲಿ ಉಂಟಾಗುವ ಕಣ್ಣಿನ ಸಮಸ್ಯೆಗೆ ಈ ಆಸ್ಪತ್ರೆಯೇ ಬಹಳ ಮುಖ್ಯ. ಬೆಂಗಳೂರಿನ ಬಹುಪಾಲು ಜನರು ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.


ವಿಳಾಸ: SH6K+9K2, ಚಾಮರಾಜಪೇಟೆ, ಟಿಪ್ಪು ಸುಲ್ತಾನ್ ಅರಮನೆ ರೋಡ್​, V V ಪುರಂ ಪೊಲೀಸ್ ಠಾಣೆ ಎದುರು, ಹೊಸ ತಾರಗುಪೇಟೆ, ಬೆಂಗಳೂರು, ಕರ್ನಾಟಕ 506002 


ಸಾಮಾನ್ಯವಾಗಿ ಪಟಾಕಿ ಹೊಡೆಯುವಾಗ ಆಗುವ ಕೆಲ ಸಮಸ್ಯೆಗಳನ್ನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಮೂಲಕ ತಡೆಯಬಹುದು. ಅದರ ವಾಸನೆಯಿಂದ ಉಸಿರಾಟದ ಸಮಸ್ಯೆ ಬರಬಹುದು ಎಂದರೆ ಮೊದಲೇ ಮಾಸ್ಕ್​ ಧರಿಸುವುದು ಉತ್ತಮ. ಇದು ಸಮಸ್ಯೆ ಬರದಂತೆ ತಡೆಯುತ್ತದೆ.


ಶಂಕರ್ ಕಣ್ಣಿನ ಆಸ್ಪತ್ರೆ, ವರ್ತೂರ್ ರೋಡ್, ಬೆಂಗಳೂರು


ಈ ಕಣ್ಣಿನ ಆಸ್ಪತ್ರೆಯಲ್ಲಿ ದೀಪಾವಳಿ ಸಮಯದಲ್ಲಿ ಹೆಚ್ಚಿನ ಜನರಿರುತ್ತಾರೆ. ಪಟಾಕಿ ಸಿಡಿದ ತಕ್ಷಣ ಆಸ್ಪತ್ರೆಗೆ ಹೋದರೆ ಬೇಗ ಪರಿಹಾರ ಪಡೆಯಬಹುದು.


ವಿಳಾಸ: ವರ್ತೂರ್ ರಸ್ತೆ, ವೈಕುಂಟಂ ಲೇಔಟ್, ಲಕ್ಷ್ಮೀನಾರಾಯಣ ಪುರ, ಕುಂದಲಹಳ್ಳಿ, ಮುನ್ನೇಕೊಳ್ಳಲ್, ಬೆಂಗಳೂರು, ಕರ್ನಾಟಕ 560037 


ಇದನ್ನೂ ಓದಿ: ಕ್ಯಾರೆಟ್​ ಹೇಗೇಗೋ ತಿನ್ಬೇಡಿ, ಈ ರೀತಿ ತಿಂದು ಪ್ರಯೋಜನ ಪಡೆಯಿರಿ


ಪಟಾಕಿ ಹೊಡೆಯುವಾಗ ಗಾಯವಾಯಿತು ಎಂದು ನೀವು ಕೇಳಿರಬಹುದು. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ಪಟಾಕಿ ಹೊಡೆಯುತ್ತಿರುವವರಿಗಿಂತ, ಪಕ್ಕ ನಿಂತು ನೋಡುವವರಿಗೆ ಬಹಳಷ್ಟು ಬಾರಿ ಪಟಾಕಿ ತಾಗಿರುವ ಘಟನೆಗಳು ನಡೆದಿವೆ. ಒಂದು ವರದಿಯ ಪ್ರಕಾರ ಶೇಕಡ 70ರಷ್ಟು ಈ ಪಟಾಕಿ ಅನಾಹುತದ ಪ್ರಕರಣದಲ್ಲಿ ಈ ರೀತಿ ಬೇರೆಯವರಿಗೆ ತಾಗಿದ್ದು ಹೆಚ್ಚು ಎಂದು ತಿಳಿದು ಬಂದಿದೆ.
ನಾರಾಯಣ ಕಣ್ಣಿನ ಆಸ್ಪತ್ರೆ, ಇಸ್ಕಾನ್ ದೇವಸ್ಥಾನದ ಹತ್ತಿರ, ಬೆಂಗಳೂರು


ವಿಳಾಸ: 121/S,  ಕಾರ್ಡ್​ ರೋಡ್​, ಇಸ್ಕಾನ್ ದೇವಸ್ಥಾನದ ಹತ್ತಿರ, 1 ನೇ Sr ಬ್ಲಾಕ್, ರಾಜಾಜಿನಗರ, ಬೆಂಗಳೂರು, ಕರ್ನಾಟಕ 560010 


ಸಾಮಾನ್ಯವಾಗಿ ಎಲ್ಲರೂ ಮಾಡುವ ಒಂದು ತಪ್ಪು ಎಂದರೆ ಪಟಾಕಿ ಸಿಡಿದು ಕಣ್ಣಿಗೆ ತಾಗಿದ ತಕ್ಷಣ ಉಜ್ಜುವುದು. ಕಣ್ಣನ್ನ ಈ ರೀತಿ ಉಜ್ಜಿದರೆ, ಪಟಾಕಿಯಿಂದ ಬಂದ ರಾಸಾಯನಿಕ ಇನ್ನೂ ಆಳವಾಗಿ ಕಣ್ಣಿನ ಒಳಗೆ ಸೇರುತ್ತದೆ. ಹಾಗಾಗಿ ಆ ತಪ್ಪು ಮಾಡಲೇಬೇಡಿ. ಅಲ್ಲದೇ, ಪಟಾಕಿ ಸಿಡಿದ ತಕ್ಷಣ 108ಕ್ಕೆ ಕರೆ ಮಾಡಿ, ಆಸ್ಪತ್ರೆಗೆ ಹೋಗಿ.


ನೇತ್ರಧಾಮ, ಜಯನಗರ, ಬೆಂಗಳೂರು


ವಿಳಾಸ: 256/14, ಕನಕಪುರ ರಸ್ತೆ, ಎದುರು. ICICI ಬ್ಯಾಂಕ್, 7ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560070 


ಕೇವಲ ಕಣ್ಣು ಉಜ್ಜುವುದು ಮಾತ್ರವಲ್ಲದೇ, ಮತ್ತೊಂದು ತಪ್ಪು ಮಾಡುವುದು ನಲ್ಲಿಯ ನೀರನ್ನು ಕಣ್ಣಿಗೆ ಹಾಕುವುದು. ಹೌದು, ಪಟಾಕಿಯಲ್ಲಿದ್ದ ರಾಸಾಯನಿಕಗಳನ್ನು ಹೊರ ಹಾಕಲು ನೀರು ಹಾಕಿ ತೊಳೆಯುವುದು ಉತ್ತಮ ಎಂದು ಹೇಳುತ್ತಾರೆ. ಆದರೆ, ಸ್ವಚ್ಛವಾದ ನೀರು ಎಂಬುದನ್ನ ಜನ ಮರೆತುಬಿಡುತ್ತಾರೆ. ಫಿಲ್ಟರ್​ ವಾಟರ್​ ಬಳಸುವುದು ಬಹಳ ಸೂಕ್ತ.


ಇದನ್ನೂ ಓದಿ: ಪಟಾಕಿ ಹೊಡೆಯುವಾಗ ಮಿಸ್​ ಮಾಡದೇ ಈ ವಸ್ತುಗಳನ್ನು ಹತ್ತಿರವಿಟ್ಟುಕೊಳ್ಳಿ


ವಿಕ್ಟೋರಿಯಾ ಆಸ್ಪತ್ರೆ, ಕೆ.ಆರ್, ಮಾರ್ಕೆಟ್​, ಬೆಂಗಳೂರು


ವಿಳಾಸ: ಕೆ.ಆರ್.ಮಾರ್ಕೆಟ್​ ಮೆಟ್ರೋ ಸ್ಟೇಷನ್ ಹತ್ತಿರ ಬೆಂಗಳೂರು, ಕರ್ನಾಟಕ 560002 


ಪಟಾಕಿ ಸಿಡಿದ ನಂತರ ಅಲ್ಲಿ ನಿಂತು ವಾದ ಮಾಡುವುದು ಅಥವಾ ಅದಕ್ಕೆ ಯಾರು ಹೊಣೆ ಎಂದು ದೂಷಿಸುತ್ತಾ  ಕೂರುವ ಬದಲು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಎಷ್ಟು ಬೇಗ ಚಿಕಿತ್ಸೆ ಲಭಿಸುತ್ತದೆಯೋ ಅಷ್ಟೇ ಬೇಗ ಗುಣವಾಗುತ್ತದೆ. ನಿಮಗೆ ಈ ಆಸ್ಪತ್ರೆಗಳು ದೂರ ಎನಿಸಿದರೆ, ತಕ್ಷಣವೇ ಹತ್ತಿರವೇ ಇರುವ ಕ್ಲಿನಿಕ್​ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ.

Published by:Sandhya M
First published: