Astrology: ಧನುರಾಶಿಯವರಿಗೆ ಧನಲಾಭ, ವಿವಾಹದ ಯೋಗವೂ ಇದೆ... ಎಲ್ಲಾ ರಾಶಿಗಳ ಫಲದ ಬಗ್ಗೆ ಪೂರ್ಣ ವಿವರ ಇಲ್ಲಿದೆ

Horoscope Today June 21: ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣ - ಗ್ರೀಷ್ಮ ಋತು ಮಿಥುನ ಮಾಸದ 06 ನೇ ದಿನ ಇಂದು. ಜ್ಯೇಷ್ಠ ಶುಕ್ಲ ತಿಥಿ, ಏಕಾದಶಿಯ ಇಂದು ರಾಹುಕಾಲ ಬೆಳಿಗ್ಗೆ 07-30 ರಿಂದ 09-00 ಗಂಟೆಯವರಗೆ ಇರುತ್ತದೆ. ಇಂದು ನಿರ್ಜಲ ಏಕಾದಶಿಯಾಗಿದೆ. ಈ ದಿನದ ದ್ವಾದಶ ರಾಶಿ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ರಾಶಿ ಭವಿಷ್ಯ

ರಾಶಿ ಭವಿಷ್ಯ

 • Share this:
  ನಮ್ಮ ಅಂದಿನ ದಿನ ಹೇಗಿರುತ್ತದೆ ಎನ್ನುವುದು ನಮ್ಮ ರಾಶಿಗಳು ಯಾವ ಸ್ಥಾನದಲ್ಲಿವೆ ಎನ್ನುವುದರ ಮೇಲೆ ನಿರ್ಧಾರವಾಗಿರುತ್ತದೆ. ಪ್ರತೊಯೊಂದು ರಾಶಿಗೂ ಅದರದ್ದೇ ಆದ ಫಲಾಫಲಗಳು ಇರುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಮೊದಲೇ ತಿಳಿದರೆ ಅಂದಿನ ನಮ್ಮ ಕೆಲಸಗಳನ್ನು ಅದರಂತೆ ನಿರ್ಧರಿಸಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ದ್ವಾದಶ ರಾಶಿಗಳ ಈ ದಿನಭವಿಷ್ಯ ಅನೇಕ ಅನುಮಾನಗಳಿಗೆ ಪರಿಹಾರವನ್ನೂ ಒದಗಿಸುತ್ತದೆ.

  ಮೇಷ: ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಮ್ಮ ನಿರ್ಧಾರವು ಬಹಳ ಅನುಕೂಲಕರವಾಗುವುದು. ಅವರು ಕೊಡುವ ಸಲಹೆಯಿಂದ ನಿಮಗೆ ಅನುಕೂಲವಾಗುವಂತಹ ಸನ್ನಿವೇಶ ಒದಗಿ ಬರಲಿದೆ. ಹಣದ ವಿಚಾರದಲ್ಲಿ ಜಿಗುಟುತನ ತೋರುವಿರಿ.

  ವೃಷಭ: ದಿನದ ಕೆಲಸ ಕಾರ್ಯಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಔಷಧ ಮಾರಾಟಗಾರರಿಗೆ ಹೆಚ್ಚಿನ ಲಾಭ ಉಂಟಾಗಲಿದೆ. ನ್ಯಾಯಾಲಯದ ಮೆಟ್ಟಿಲನ್ನು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ. ದಿನಾಂತ್ಯದಲ್ಲಿ ಆಶ್ಚರ್ಯ ಸುದ್ದಿ ಕೇಳುವಿರಿ.

  ಮಿಥುನ: ಆಫೀಸಿನ ಸಿಬ್ಬಂದಿಯೊಂದಿಗೆ ಮಾತುಗಳನ್ನು ಕಡಿಮೆ ಮಾಡುವಿರಿ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡ ಬೇಕಾದ ಸಂದರ್ಭ ಬರುವುದು. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಸೇವನೆಯ ಮೊದಲಾಗಿ ಗಮನಿಸಿ. ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.

  ಕರ್ಕಾಟಕ: ಮಾನಸಿಕ ನೆಮ್ಮದಿ ಇರುವುದು. ನಿಮ್ಮ ಆಪ್ತರು ನಿಮ್ಮ ಸಕಾಲಿಕ ನೆರವಿಗಾಗಿ ನಿಮಗೆ ಧನ್ಯವಾದ ತಿಳಿಸುವರು. ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ನಿಮ್ಮ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು.

  ಸಿಂಹ: ಬಹಳ ದಿನಗಳಿಂದ ಕಾಡುತ್ತಿದ್ದ ನಿಮ್ಮ ಸಮಸ್ಯೆಯೊಂದು ಇಂದು ದೂರಾಗುವುದು. ಸ್ವ ಉದ್ಯೋಗಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಅಧಿಕ ಸಂಪಾದನೆ. ಈ ದಿನ ಕೈಗೊಳ್ಳುವ ವಿಶೇಷವಾದ ಹಾಗು ಮುಖ್ಯವಾದ ಕೆಲಸವು ಮುಕ್ತಾಯದ ಹಂತವನ್ನು ಬಹಳ ವಿಳಂಬವಾಗಿ ನೋಡುತ್ತದೆ.

  ಕನ್ಯಾ: ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿಗಳನ್ನು ಕಾಣಲು ದಿನವಿಡೀ ಓಡಾಟ ನಡೆಸುವಿರಿ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ. ಮಹಾವಿಷ್ಣುವಿನ ಸೇವೆಯಿಂದ ದೈವಾನುಕೂಲ ಒದಗಿ ಬರುವುದು.

  ತುಲಾ: ಅಮೂಲ್ಯವಾದ ವಸ್ತುವೊಂದು ಉಡುಗೊರೆಯಾಗಿ ಪಡೆಯಲಿದ್ದೀರಿ. ದ್ವಿಚಕ್ರ ವಾಹನಗಳ ಮಾರಾಟಗಾರರು ಜೋರಿನ ವಹಿವಾಟು ನಡೆಸುವರು. ಚಟುವಟಿಕೆಯಿಂದ ದಿನವನ್ನು ಕಳೆಯಲಿದ್ದೀರಿ. ಮಕ್ಕಳಿಂದ ಅನಾವಶ್ಯಕ ಖರ್ಚು ಸಂಭವಿಸಲಿದೆ.

  ವೃಶ್ಚಿಕ: ಕ್ರೀಡೆಗಳಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಮನೆಯ ಜವಾಬ್ದಾರಿಯನ್ನು ಮಗನಿಗೆ ವಹಿಸುವ ಆಲೋಚನೆಗಳು ಬರುವುದು, ಆದರೆ ಯಾವುದೇ ತರಹದ ತೀರ್ಮಾನ ತೆಗೆದುಕೊಳ್ಳಬೇಡಿ. ಕಾಲು ನೋವು ನಿವಾರಿಸಿಕೊಳ್ಳಲು ತೈಲ ಕೊಳ್ಳುವಿರಿ.

  ಧನು: ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸುವುದಕ್ಕೆ ಸಹೋದ್ಯೋಗಿ ನೆರವಾಗುವರು. ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರುವುದು. ಹಣದ ಅಭಾವ ಇರುವುದಿಲ್ಲ. ವಿವಾಹದ ವಿಷಯಗಳು ಚರ್ಚೆಯಾಗುವುದು.

  ಮಕರ: ಸಂಶೋಧನಾ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಮುನ್ನಡೆ ಕಂಡು ಬರುತ್ತದೆ. ಗದ್ದೆ ಅಥವಾ ತೋಟದ ಕೆಲಸಗಳಿಗೆ ಮಗನಿಂದ ಸಹಾಯ ಸಿಗುವುದು. ದಿನದ ಅಂತ್ಯದಲ್ಲಿ ನಾಳೆಯ ದಿನದ ಅಧಿಕವಾದ ಕೆಲಸಗಳ ಬಗ್ಗೆ ಗಮನ ಹರಿಸುವಿರಿ.

  ಕುಂಭ: ಷೇರು ಮಾರಾಟದಿಂದ ಅಧಿಕ ಲಾಭವನ್ನು ಹೊಂದಬಹುದು. ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕಥೆ ನಡೆಯುವುದು. ನೀವು ಈ ದಿನ ಮಾಡುವ ಕೆಲಸದಿಂದ ಗುಂಪಿನಲ್ಲಿ ಗುರುತಿಸುವ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ. ಅಲರ್ಜಿಯಾಗುವ ಸಾಧ್ಯತೆಗಳಿದೆ.

  ಮೀನ: ಹಿರಿಯರ ಮಾತಿನಂತೆ ನಡೆದುಕೊಳ್ಳುವಿರಿ. ಲೇವಾ ದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ. ಮಗನ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. ಶಿಕ್ಷಕ ವರ್ಗದವರಿಗೆ ಅನುಕೂಲದ ದಿನವಾಗಲಿದೆ. ಸಂತೋಷದಿಂದ ದಿನ ಕಳೆಯುವಿರಿ.
  Published by:Soumya KN
  First published: