Astrology: ಕನ್ಯಾರಾಶಿಯವರಿಗೆ ಇಂದು ಶುಭದಿನ; ಇಲ್ಲಿದೆ ಈ ದಿನದ ದ್ವಾದಶ ರಾಶಿ ಭವಿಷ್ಯ..!

Today Horoscope May 31 : ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಲಾಭದಾಯಕ ದಿನ. ನಿಮ್ಮ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ. ಜೊತೆಗೆ ನೀವು ಅಪರೂಪಕ್ಕೆ ಭೇಟಿ ಮಾಡುವ ನಿಮ್ಮ ಆಪ್ತರನ್ನು ಸಂಪರ್ಕಿಸಲು ಇಂದು ಒಳ್ಳೆಯ ದಿನವಾಗಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಪಡೆಯುವ ಅವಕಾಶವಿದೆ. ಇದಕ್ಕೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ನಿಮ್ಮ ಸಂಗಾತಿ ಇಂದು ನಿಮಗೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಾರೆ.

  ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಪತ್ನಿ ಜೊತೆ ಜಗಳ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮಾನಸಿಕ ಒತ್ತಡ ಉಂಟಾಗಬಹುದು. ಅನುಭವಿಗಳ ಜೊತೆ ಒಡನಾಟ ಬೆಳೆಸಿಕೊಂಡು ಅವರ ಸಲಹೆಗಳನ್ನು ಪಡೆಯಿರಿ. ಇಂದು ಉತ್ತಮ ಕಾದಂಬರಿಗಳು ಅಥವಾ ಪುಸ್ತಕಗಳನ್ನು ಓದುವ ಮೂಲಕ ನಿಮ್ಮ ಈ ದಿನವನ್ನು ಅದ್ಭುತವಾಗಿ ಕಳೆಯಬಹುದು.

  ಮಿಥುನ ರಾಶಿ: ಅತಿಯಾದ ಸಂತೋಷ ದುಃಖಕ್ಕೂ ಕಾರಣವಾಗಬಹುದು. ಹೀಗಾಗಿ ನಿಮ್ಮ ಖುಷಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಮಿಥುನ ರಾಶಿಯವರಿಗೆ ಹಣದ ಸಮಸ್ಯೆ ಎದುರಾಗಬಹುದು. ನಿಮ್ಮ ಸ್ನೇಹಿತರಿಂದ ಸಾಲವನ್ನು ಕೇಳುವ ಸಾಧ್ಯತೆ ಇರುತ್ತದೆ. ಕುಟುಂಬದವರೊಂದಿಗೆ ಹಾಗೂ ಗೆಳೆಯರೊಂದಿಗೆ ನಿಮ್ಮ ದಿನವನ್ನು ಕಳೆಯುವಿರಿ. ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ತೋರುವುದು ಒಳಿತು. ಇಂದು ನಿಮ್ಮ ಸಂಗಾತಿಯ ಜೊತೆ ಹೆಚ್ಚಿನ ಕಾಲ ಕಳೆಯುವಿರಿ.

  ಕರ್ಕಾಟಕ ರಾಶಿ: ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಮಾನಸಿಕ ಶಾಂತಿಗಾಗಿ ದಾನ-ಧರ್ಮ ಮಾಡಿ. ನಿಮ್ಮ ಕೆಲಸಗಳ ಮೇಲೆ ಗಮನ ಹರಿಸಿ. ಆದಷ್ಟು ಭಾವನಾತ್ಮಕ ವ್ಯಾಜ್ಯಗಳಿಂದ ದೂರವಿರುವುದು ಒಳಿತು. ನಿಮ್ಮ ಜೀವನದ ಪ್ರಮುಖ ವಿಷಯಗಳನ್ನು ನಿಮ್ಮ ಕುಟುಂಬದವರ ಜೊತೆ ಹಂಚಿಕೊಳ್ಳಿ. ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕಳೆಯುವುದು ಕೂಡ ಅಗತ್ಯವಾಗಿದೆ.

  ಸಿಂಹ ರಾಶಿ: ಹಣದ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇಂದು ಶುಭದಿನ. ಯಾವ ಮೂಲದಿಂದಾದರೂ ಹಣ ಬರುವ ಸಾಧ್ಯತೆ ಇದೆ. ನಿಮ್ಮ ಗೆಳೆಯರೊಂದಿಗೆ ಸಮಯ ಕಳೆಯುವಿರಿ. ಸದ್ದಿಲ್ಲದೇ ನಿಮ್ಮ ಗುರಿಯೆಡೆಗೆ ಸಾಗಿ. ಆದರೆ ಯಾರೊಂದಿಗೆ ನಿಮ್ಮ ಉದ್ದೇಶಗಳನ್ನು ಹೇಳಬೇಡಿ. ನೀವು ಮತ್ತೆ ನಿಮ್ಮ ಸಂಗಾತಿಯ ಪ್ರೀತಿಯಲ್ಲಿ ಬೀಳಬಹುದು.

  ಕನ್ಯಾ ರಾಶಿ: ಕನ್ಯಾರಾಶಿಯವರಿಗೆ ಇಂದು ಶುಭದಿನ. ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ನೀವು ಇಂದು ಏಕಾಂತವನ್ನು ಬಯಸಲು ಇಚ್ಛಿಸುವಿರಿ. ಸದ್ಯ ನೀವು ಮಾಡುತ್ತಿರುವ ಕೆಲಸ ಸರಿ ಹೊಂದುತ್ತಿಲ್ಲವೆಂದರೆ, ಅದನ್ನು ಬಿಟ್ಟು ಮಾರ್ಕೆಟಿಂಗ್ ಕೆಲಸಕ್ಕೂ ಸೇರಬಹುದು. ಜನ ನಿಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ನಿಮ್ಮ ಸಂಗಾತಿಯ ಜೊತೆ ಸಮಯ ಕಳೆಯಿರಿ. ಅವರು ನಿಮಗೊಂದು ಅಚ್ಚರಿ ನೀಡಬಹುದು.

  ತುಲಾರಾಶಿ: ಇಂದು ತುಲಾರಾಶಿಯವರಿಗೆ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ಉತ್ತಮ ಬಜೆಟ್​ನ್ನು ರೂಪಿಸಿಕೊಂಡು ಹಣವನ್ನು ವ್ಯಯಿಸಿ. ಇಂದು ನೀವು ನಿಮ್ಮ ಗೆಳೆಯರ ಜೊತೆ ಸಮಯ ಕಳೆಯುವಿರಿ. ಇಂದು ನಿಮ್ಮ ವೈವಾಹಿಕ ಜೀವನ ಬಹಳ ಸುಮಧುರವಾಗಿರುತ್ತದೆ.

  ವೃಶ್ಚಿಕ ರಾಶಿ: ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಧ್ಯಾನ, ಯೋಗ ಮಾಡಿ. ಹಲವು ಮೂಲಗಳಿಂದ ಹಣ ಹರಿದು ಬರಬಹುದು. ನಿಮ್ಮ ಬಾಸ್​ ಜೊತೆ ಉತ್ತಮ ಸಂಬಂಧ ಇರಲಿ. ನಿಮ್ಮ ಸಂಗಾತಿಯನ್ನು ನಿರಾಸೆಗೊಳಿಸಬೇಡಿ. ಅಪೂರ್ತಿಗೊಂಡಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿವೆ.

  ಧನು ರಾಶಿ: ಇಂದು ವೈಯಕ್ತಿಕ ಸಮಸ್ಯೆಗಳು ನಿಮ್ಮ ಸಂತೋಷವನ್ನು ಹಾಳು ಮಾಡಬಹುದು. ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಅಗತ್ಯ ಇದ್ದವರಿಗೆ ಸಹಾಯ ಮಾಡಿ. ಕೆಲವು ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಲಾಭ ಗಳಿಸುವಿರಿ. ಕಾರ್ಯಕ್ಷೇತ್ರದಲ್ಲಿ ನೆಮ್ಮದಿ ಇರಲಿದೆ.

  ಮಕರ ರಾಶಿ: ಒತ್ತಡದ ಬದುಕಿನ ನಡುವೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮುಕ್ತ ಭಾವನೆಯಿಂದಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗ ಅಥವಾ ವ್ಯಾಪಾರದಲ್ಲಿ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ.

  ಕುಂಭ ರಾಶಿ: ಇಂದು ನಿಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಇಂದು ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ.

  ಮೀನ ರಾಶಿ: ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ನಿಮ್ಮ ಗೆಳೆಯರೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ನಿಮ್ಮದಾಗುತ್ತದೆ. ಆರೋಗ್ಯದ ಕಡೆ ಗಮನಹರಿಸಿ, ವೈದ್ಯಕೀಯ ಸಲಹೆ ಪಡೆಯಿರಿ
  Published by:Latha CG
  First published: