HOME » NEWS » Lifestyle » HOROSCOPE TODAY ASTROLOGICAL PREDICTION 8 JUNE 2021 SESR

Astrology: ವೃಶ್ಚಿಕ ರಾಶಿಯವರು ಹಿತಶತ್ರಗಳ ಬಗ್ಗೆ ಎಚ್ಚರವಹಿಸುವುದು ಅಗತ್ಯ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today June 8 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ಭವಿಷ್ಯದಲ್ಲಿ ಅನೇಕ ಮಾರ್ಪಡುಗಳಾಗುತ್ತವೆ. ರಾಶಿ ಚಕ್ರಕ್ಕೆ ಅನುಗುಣವಾಗಿ 12 ರಾಶಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬ ವಿವರ ಇಲ್ಲಿದೆ.

news18-kannada
Updated:June 8, 2021, 6:16 AM IST
Astrology: ವೃಶ್ಚಿಕ ರಾಶಿಯವರು ಹಿತಶತ್ರಗಳ ಬಗ್ಗೆ ಎಚ್ಚರವಹಿಸುವುದು ಅಗತ್ಯ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
  • Share this:
ಮೇಷ ರಾಶಿ: ನಿಮ್ಮ ಅಸಡ್ಡೆ ವರ್ತನೆ ನಿಮ್ಮ ಪ್ರೀತಿಪಾತ್ರರನ್ನು ಅತೃಪ್ತಿಗೊಳಿಸುತ್ತದೆ. ಉದ್ಯೋಗಿಗಳೇ, ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯುವ ಅವಕಾಶವನ್ನು ನೀವು ಪಡೆಯಬಹುದು. ಸಾಲದ ಹೊರೆ ನಿಮ್ಮ ಮೇಲೆ ಹೆಚ್ಚಾಗುತ್ತದೆ

ವೃಷಭ ರಾಶಿ: ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಬೆನ್ನು ನೋವಿನಿಂದ ತೊಂದರೆಗೊಳಗಾಗಬಹುದು. ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಮತ್ತು ಹಾಳಾದ ವಿಷಯವನ್ನು ನಿಭಾಯಿಸಲು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡುವುದು ಉತ್ತಮ.

ಮಿಥುನ ರಾಶಿ: ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವ ಜನರು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಮಕ್ಕಳ ಶಿಕ್ಷಣಕ್ಕಾಗಿ ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಬಹುದು. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಖುಷಿಯಾಗಿರುವಿರಿ.

ಕಟಕ ರಾಶಿ: ಆರ್ಥಿಕ ರಂಗದಲ್ಲಿ, ಇಂದಿನ ದಿನವು ಲಾಭಾ ನಷ್ಟದಿಂದ ಕೂಡಿರಲಿದೆ. ಅನಗತ್ಯವಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯ ದಿನವಾಗಲಿದೆ.

ಸಿಂಹ ರಾಶಿ: ಒತ್ತಡ ಮತ್ತು ಆಯಾಸವು ನಿಮ್ಮ ಆರೋಗ್ಯದಲ್ಲಿ ಜೀವನ ಸಂಗಾತಿಯ ಮೇಲೆ ನಿಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಿ ಮತ್ತು ಪರಸ್ಪರ ಹೆಚ್ಚು ಸಮಯವನ್ನು ನೀಡಲು ಪ್ರಯತ್ನಿಸಿ

ಕನ್ಯಾ ರಾಶಿ: ಸುಖಾಸುಮ್ಮನೆ ಯೋಚನೆಗಳಿಂದ ಮಾನಸಿಕ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ವಾಗ್ವಾದ ಸಾಧ್ಯತೆ. ಮೋಸ ಹೋಗುವ ಸಾಧ್ಯತೆ ಹೆಚ್ಚು ಎಚ್ಚರದಿಂದ ವ್ಯವಹಾರ ನಡೆಸಿ.

ತುಲಾ ರಾಶಿ: ಅನಗತ್ಯ ಪ್ರಯಾಣವು ವ್ಯಾಪಾರಿಗಳಿಗೆ ಲಾಭಾ ತರಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ಏರಿಳಿತದಿಂದ ಕೂಡಿರಲಿದೆ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಅವಶ್ಯಕ. ಆದಾಯಕ್ಕಿಂತ ಹೆಚ್ಚಿನ ಖರ್ಚಾಗಲಿದೆ.ವೃಶ್ಚಿಕ ರಾಶಿ: ಹಿತ ಶತ್ರುಗಳ ಬಗ್ಗೆ ಎಚ್ಚರವಹಿಸಿ. ಅತಿ ಬುದ್ಧಿವಂತಿಕೆಯಿಂದ ನಷ್ಟವಾಗುವ ಸಂಭವ ಹೆಚ್ಚಿರಲಿದೆ. ಹಿರಿಯ ಮಾತುಗಳನ್ನು ಉಪೇಕ್ಷಿಸದಿರಿ. ವೈಯಕ್ತಿಕ ಜೀವನದ ಗುಟ್ಟುಗಳು ರಟ್ಟಾಗುವ ಸಾಧ್ಯತೆ ಇದೆ.

ಧನು ರಾಶಿ: ಮಗುವಿನ ಆಗಮನದಿಂದ ಮನೆಯಲ್ಲಿ ಸಂತಸ ಹೆಚ್ಚಲಿದೆ. ಕೆಲಸದ ಶ್ರಮಕ್ಕೆ ತಕ್ಕ ಲಾಭಾ ಸಿಗಲಿದೆ, ಪ್ರೀತಿ ಪಾತ್ರರ ಉಡುಗೊರೆ ಅಚ್ಚರಿ ಮೂಡಸಲಿದೆ. ಸರ್ಕಾರಿ ಉದ್ಯೋಗಿಗಳು ಈ ದಿನ ಹೆಚ್ಚಿನ ಒತ್ತಡದ ಕೆಲಸ ನಿಭಾಯಿಸುವ ಸಾಧ್ಯತೆ.

ಮಕರ ರಾಶಿ: ಹೂಡಿಕೆ ವ್ಯವಹಾರದಲ್ಲಿ ಸಾಕಷ್ಟು ಲಾಭಾ. ಇಂದು ಬಂಡಾವಳ ಹೂಡಿಕೆಗೆ ಉತ್ತಮ ದಿನವಾಗಿದೆ. ನೆರೆ ಹೊರೆಯವರಿಂದ ಮನಸ್ತಾಪವಾಗುವ ಸಾಧ್ಯತೆ ಹೆಚ್ಚು. ಉದ್ಯೋಗ ಹುಡುಕುತ್ತಿರುವವರಿಗೆ ಇಂದು ಕೆಲಸ ಸಿಗುವ ನಿರೀಕ್ಷೆ.

ಕುಂಭ ರಾಶಿ: ಯಾವುದೇ ಕಷ್ಟವನ್ನು ಧೈರ್ಯದಿಂದ ಎದುರಿಸುವುದರಿಂದ ಯಶಸ್ಸು ಸಿಗಲಿದೆ. ಸಂಬಂಧಿಕರ ಮಾತಿನಿಂದ ಮನಸಿಗೆ ನೋವಾಗುವ ಸಂಭವ ಹೆಚ್ಚಿದೆ. ಉದ್ಯೋಗದಲ್ಲಿ ಇಂದು ಯಶಸ್ಸು. ವ್ಯಾಪಾರಿಗಳಿಗೆ ಆರ್ಥಿಕ ಲಾಭಾ

ಮೀನಾ ರಾಶಿ: ಸಹೋದ್ಯೋಗಿಗಳೊಂದಿಗೆ ಕಿರಿಕಿರಿಯಾಗುವ ಸಾಥ್ಯತೆ. ಹೊಸ ಮನೆ ಅಥವಾ ವಸ್ತುಗಳನ್ನು ಕೊಂಡು ಕೊಳ್ಳಲು ಸಕಾಲ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕುಟುಂಬದಲ್ಲಿನ ಪ್ರೀತಿಯಿಂದ ಮಾನಸಿಕ ನೆಮ್ಮದಿ ಹೆಚ್ಚಲಿದೆ.
Published by: Seema R
First published: June 8, 2021, 6:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories