HOME » NEWS » Lifestyle » HOROSCOPE TODAY ASTROLOGICAL PREDICTION 6 JUNE 2021 SESR

Astrology: ಈ ರಾಶಿಯವರು ಅಂತರ್ಮುಖಿಗಳಂತೆ; ಯಾವ ರಾಶಿಯವರು ಈ ಸ್ವಭಾವ ಹೊಂದಿದ್ದಾರೆ?

Horoscope today june 6: ಎಲ್ಲಾ ಮನುಷ್ಯರು ಒಂದೇ ತರಹ ಇರುವುದಿಲ್ಲ. ಕೆಲವರು ಸಲೀಸಾಗಿ ಹೊಂದಿಕೊಳ್ಳುತ್ತಾರೆ, ಇನ್ನು ಕೆಲವರನ್ನು ಮೆಚ್ಚಿಸುವುದೇ ಕಷ್ಟ, ಮತ್ತೆ ಕೆಲವರು ಸಾಹಸ ಪ್ರಿಯರು. ಇವೆಲ್ಲದರ ಹೊರತಾಗಿ, ನಮ್ಮನ್ನು ಪರಸ್ಪರ ಭಿನ್ನರನ್ನಾಗಿ ಬಿಂಬಿಸುವ ಇನ್ನೂ ಒಂದಷ್ಟು ಅಂಶಗಳಿವೆ. ಅವುಗಳಲ್ಲಿ ಒಬ್ಬ ವ್ಯಕ್ತಿಯನ್ನು ವರ್ಣಿಸಲು ಸಾಮಾನ್ಯವಾಗಿ ಬಳಸುವ ಎರಡು ಗುಣಗಳೆಂದರೆ, ‘ಅಂತರ್ಮುಖಿ’ ಮತ್ತು ‘ಬಹಿರ್ಮುಖಿ’.

Trending Desk
Updated:June 6, 2021, 6:24 AM IST
Astrology: ಈ ರಾಶಿಯವರು ಅಂತರ್ಮುಖಿಗಳಂತೆ; ಯಾವ ರಾಶಿಯವರು ಈ ಸ್ವಭಾವ ಹೊಂದಿದ್ದಾರೆ?
ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
  • Share this:
ಮೇಷ ರಾಶಿ: ಮೇಷ ರಾಶಿಯವರ ಶಕ್ತಿಶಾಲಿ ಮತ್ತು ಪ್ರಬಲ ವ್ಯಕ್ತಿತ್ವ ಅವರನ್ನು ಅತ್ಯಂತ ಜನಪ್ರಿಯರನ್ನಾಗಿಸುತ್ತದೆ. ಅವರು ಅತ್ಯಂತ ದೊಡ್ಡ ಬಹಿಮುರ್ಖಿಗಳಲ್ಲಿ ಒಬ್ಬರು. ಅವರಿಲ್ಲದೆ ಯಾವ ಪಾರ್ಟಿಯೂ ಸಂಪೂರ್ಣ ಎನಿಸುವುದಿಲ್ಲ. ಅವರ ಸರಳ ಸ್ವಭಾವ, ಸಕಾರಾತ್ಮಕ ಶಕ್ತಿ ಮತ್ತು ಮುಕ್ತ ಮನೋಭಾವ ಜನರು ಅವರನ್ನು ಪ್ರೀತಿಸುವಂತೆ ಮತ್ತು ಸುಲಭವಾಗಿ ಬೆರೆಯುವಂತೆ ಮಾಡುತ್ತದೆ.

 ವೃಷಭ ರಾಶಿ: ನಿಮಗೆ ಅಪರಿಚಿತರ ಜೊತೆ ಸ್ನೇಹ ಮತ್ತು ಸಂಬಂಧ ಬೆಳೆಸುವುದು ಅಷ್ಟು ಇಷ್ಟವಾಗುವುದಿಲ್ಲ. ಈ ಹಿಂದೆ ನಿಮಗೆ ಆಗಿರುವ ನೋವೇ ಅದಕ್ಕೆ ಕಾರಣ. ಆದರೆ ನಿಮ್ಮ ಅಂತರಂಗದ ಸ್ನೇಹಿತರ ಜೊತೆ ತಮಾಷೆ ಹಾಗೂ ಖುಷಿಯಿಂದ ಕಾಲ ಕಳೆಯುತ್ತೀರಿ.

ಮಿಥುನ ರಾಶಿ: ಇವರು ಅಂತರ್ಮುಖಿಗಳು ಹೌದು ಮತ್ತು ಬಹಿರ್ಮುಖಿಗಳು ಹೌದು. ಪಾರ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವವರೂ ಅವರೇ, ಎಲ್ಲರಿಗಿಂತ ಕೊನೆಯಲ್ಲಿ ಹೊರಡುವವರೂ ಅವರೇ. ಆದರೆ ಆಮೇಲೆ ಇಡೀ ವಾರ ಅವರಿಂದ ಸುದ್ದಿಯೇ ಇರುವುದಿಲ್ಲ. ಏಕೆಂದರೆ ಅವರು ಪಾರ್ಟಿಯನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಮತ್ತು ಅದರಿಂದ ಚೇತರಿಸಿಕೊಳ್ಳಲು ದೀರ್ಘ ಸಮಯವನ್ನು ಕೂಡ ತೆಗೆದುಕೊಳ್ಳುತ್ತಾರೆ.

ಕಟಕ ರಾಶಿ: ನೀವು ಸ್ನೇಹಜೀವಿ, ಆದರೆ ನಿಮಗೆ ನಿಮ್ಮ ಏಕಾಂತದ ಸಮಯ ಕೂಡ ಅಷ್ಟೇ ಮುಖ್ಯ. ಹಾಗಂತ ನೀವು ಯಾವಾಗಲೂ ಒಂಟಿಯಾಗಿರಲು ಬಯಸುತ್ತೀರಿ ಎಂದು ಅರ್ಥವಲ್ಲ. ನಿಮ್ಮ ಕ್ರಿಯಾಶೀಲ ಚಟುವಟಿಕೆಗಳ ಕೆಲಸ ಮುಗಿದ ಮೇಲೆ, ಮತ್ತೆ ಆರಾಮವಾಗಿ ಜನರ ಜೊತೆ ಬೆರೆಯಲು ಸಿದ್ಧರಾಗುತ್ತೀರಿ.

ಸಿಂಹ ರಾಶಿ : ಸಿಂಹ ರಾಶಿಯವರು ಸ್ವತಂತ್ರ ಜೀವಿಗಳು ಮತ್ತು ಸಭೆಯಲ್ಲಿ ಯಾವಾಗಲೂ ಅವರೇ ಕೇಂದ್ರಬಿಂದುವಾಗಲು ಬಯಸುತ್ತಾರೆ. ಅವರು ಸದಾ ಇತರರ ಗಮನವನ್ನು ಸೆಳೆಯಲು ಬಯಸುತ್ತಾರೆ. ಅವರು ನಿಮ್ಮ ಸೆಳೆಯಲು ಸಾಧ್ಯವಾಗದಿದ್ದರೆ, ನೀವು ಅವರನ್ನು ನೋಡುವಂತೆ ಮಾಡಲು ಎಲ್ಲಾ ತಂತ್ರಗಳನ್ನು ಮಾಡುತ್ತಾರೆ.

ಕನ್ಯಾ ರಾಶಿ: ಕನ್ಯಾ ರಾಶಿಯ ಹುಡುಗರು ಅಂತರ್ಮುಖಿಗಳು, ಸಾಮಾನ್ಯವಾಗಿ ಪಾರ್ಟಿ ತೊರೆದು ಹೋಗುವವರಲ್ಲಿ ಅವರೇ ಮೊದಲಿಗರು, ಆದರೆ ಈ ರಾಶಿಯ ಹುಡುಗಿಯರು ಪಾರ್ಟಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ರಾಶಿಯ ಹುಡುಗರು ಆಳವಾದ ಚಿಂತಕರು, ಹುಡುಗಿಯರು ಮೋಜು ಪ್ರಿಯರು.

ತುಲಾ ರಾಶಿ: ಇವರು ಸಾಮಾನ್ಯವಾಗಿ ಅಂತರ್ಮುಖಿಗಳು , ಆದರೆ ಅಷ್ಟೇ ಒಳ್ಳೆಯ ಸಾಮಾಜಿಕ ಮಾತುಗಾರರು ಕೂಡ. ಏಕಾಂತವಾಗಿ ಇದ್ದಾಗ ಆರಾಮಾಗಿ ಇರುತ್ತಾರೆ, ಆದರೆ ವೇದಿಕೆ ಸಿಕ್ಕರೆ ಇಡೀ ಜಗತ್ತನೇ ಆಳಬಲ್ಲರು. ಸರಳವಾಗಿ ಹೇಳುವುದಾದರೆ ನೀವು ಸ್ವಲ್ಪ ಅಂತರ್ಮುಖಿ ಅಷ್ಟೆ.ವೃಶ್ಚಿಕ ರಾಶಿ: ಇವರಲ್ಲಿ ‘ಅಂತರ್ಮುಖಿ’ ಮತ್ತು ‘ಬಹಿರ್ಮುಖಿ’ ಎರಡೂ ಗುಣಗಳ ಲಕ್ಷಣಗಳಿವೆ. ಉದಾಹರಣೆಗೆ, ಯಾವುದಾದರೂ ಸಭೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಅವರು, ಅಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರೆ!

ಮಕರ ರಾಶಿ: ಮಕರ ರಾಶಿಯವರು ಮೀನರಾಶಿಯವರಷ್ಟು ಅಂತರ್ಮುಖಿಯಲ್ಲ. ಅವರು ಕೆಲವೇ ವ್ಯಕ್ತಿಗಳನ್ನು ತಮ್ಮ ಜೀವನದಲ್ಲಿ ಪ್ರವೇಶಿಸಲು ಬಿಡುತ್ತಾರೆ, ಅದು ಕೂಡ ಕಟ್ಟು ನಿಟ್ಟಿನ ಪರೀಕ್ಷೆಯ ನಂತರ. ನಿಮಗೂ ನಿಮ್ಮದೇ ಪ್ರಚಂಚದಲ್ಲಿ ತೇಲಾಡುವ ಗುಣವಿದೆ.

ಧನು ರಾಶಿ
ಧನು ರಾಶಿಯವರದ್ದು ಸ್ವೇಚ್ಚಾಹಾರಿ ಮತ್ತು ವಿನೋದ ಪ್ರಿಯ ವ್ಯಕ್ತಿತ್ವ. ಕೈಯಲ್ಲಿರುವ ಎಲ್ಲಾ ಕೆಲಸಗಳನ್ನು ಬಿಟ್ಟು, ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋಗಲು ಹಿಂಜರಿಯುವವರಲ್ಲ. ಅವರಿಗೆ ಒಬ್ಬಂಟಿಯಾಗಿರುವುದು ಇಷ್ಟವಾಗುವುದಿಲ್ಲ, ಏಕೆಂದರೆ ಅವರಲ್ಲಿ ವರ್ಣಮಯ ಜಗತ್ತನ್ನು ನೋಡುವ ಅದಮ್ಯ ಆಕಾಂಕ್ಷೆ ಇರುತ್ತದೆ.

ಕುಂಭ ರಾಶಿ: ನೀವು ಶಾಂತ ವ್ಯಕ್ತಿತ್ವದವರು ಮತ್ತು ಬುದ್ಧಿಜೀವಿ. ಹಾಗಾಗಿ, ಆಲೋಚನೆ ಮತ್ತು ಮಾತಿನಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ನೀವು ಸಮಾಜ ವಿರೋಧಿ ಅಲ್ಲದಿದ್ದರೂ, ನಿಮಗೆ ಆಲೋಚನೆಗಳಲ್ಲಿ ಕಳೆದು ಹೋಗುವ ಭಯವಿಲ್ಲ. ನೀವು ಒಬ್ಬ ನಿಜವಾದ ಕನಸುಗಾರ.

ಮೀನಾ ರಾಶಿ : ನಿಮ್ಮ ಪಾಡಿಗೆ ನೀವಿರಲು ಇಷ್ಟಪಡುತ್ತೀರಿ. ನಿಮ್ಮದೇ ಕನಸಿನ ಲೋಕದಲ್ಲಿ ತೇಲಾಡುವುದು ನಿಮಗಿಷ್ಟ. ಜನರು ನಿಮ್ಮನ್ನು ಸೊಕ್ಕು ಮತ್ತು ಜಂಭದ ವ್ಯಕ್ತಿ ಎಂದು ತಪ್ಪು ತಿಳಿಯಬಹುದು. ಆದರೆ ಅದು ನಿಜವಲ್ಲ, ನಿಮಗೆ ನಿಮ್ಮೊಳಗಿನ ಪ್ರಪಂಚವೇ ಹೊರಗಿನ ಪ್ರಪಂಚಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿ ಕಾಣುತ್ತದೆ ಅಷ್ಟೆ.


Published by: Seema R
First published: June 6, 2021, 6:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories