Horoscope Today: ಕುಂಭ ರಾಶಿಯವರಿಗೆ ಈ ದಿನ ಹೇಗಿರಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

horoscope today june 2: ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭಾ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ

ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

 • Share this:
  ಮೇಷ ರಾಶಿ: ಕಾರ್ಯಕ್ಷಮತೆಯ ಮಟ್ಟ ಹೆಚ್ಚಿರಲಿದೆ. ಭವಿಷ್ಯದ ಮೇಲೆ ಬಂಡಾವಳ ಹೂಡಿಕೆಯಿಂದ ಲಾಭಾ. ಮಕ್ಕಳೊಂದಿಗೆ ಕಲಹದಿಂದ ಈ ದಿನ ನಿರಾಶೆಯಾಗಲಿದೆ. ಮನರಂಜನಾ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ. ಅಂದುಕೊಂಡ ಯೋಜನೆಗಳು ಮುಂದೂಡಿಕೆಯಾಗುವ ಸಾಧ್ಯತೆ

  ವೃಷಭ ರಾಶಿ: ಋಣಾತ್ಮಕ ಆಲೋಚನೆಗಳಿಂದ ಭಯ, ಕೋಪಗಳನ್ನು ಎದಿರುತ್ತೀರಾ. ಬಂಡವಾಳ ಹೂಡಿಕೆಗೆ ಸಕಾಲ. ಬಾಕಿ ಉಳಿದಿರುವ ಸಾಲಗಳು ಮರಳಲಿದೆ. ಅತಿ ಹೆಚ್ಚು ಕೆಲಸದಿಂದ ಬಳಲಿಕೆ.

  ಮಿಥುನ ರಾಶಿ: ಆರೋಗ್ಯ ವೃದ್ಧಿ, ಕೆಲಸಕ್ಕೆ ತಕ್ಕ ಪ್ರತಿಫಲದಿಂದ ಯಶಸ್ಸು ಸಿಗಲಿದೆ. ಸ್ನೇಹಿತರೊಂದಿಗೆ ಉತ್ತಮ ಕ್ಷಣ ಕಳೆಯುತ್ತೀರಾ. ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಅವಕಾಶ. ವೈವಾಹಿಕ ಜೀವನದಲ್ಲಿ ತೊಂದರೆ

  ಸಿಂಹ ರಾಶಿ: ಸ್ವಾರ್ಥತೆಯಿಂದ ಹೆಚ್ಚಿನ ನಷ್ಟ ಹೊಂದಲಿದ್ದೀರಾ. ಕುಟುಂಬಸ ಸಮಸ್ಯೆಗಳು ಪರಿಹಾರವಾಗಲಿದೆ. ಅನಿರೀಕ್ಷಿತ ಪ್ರಯಾಣದಿಂದ ಒತ್ತಡ. ಓದಿನ ಆಸಕ್ತಿ ಹೆಚ್ಚಲಿದೆ.

  ಕಟಕ ರಾಶಿ: ಧಾರ್ಮಿಕ ಕಾರ್ಯದಿಂದ ಸಾಕಷ್ಟು ಲಾಭ. ಮಾನಸಿಕ ನೆಮ್ಮದಿಯತ್ತ ಹೆಚ್ಚಿನ ಗಮನಹರಿಸಿ. ಅನಿರೀಕ್ಷಿತ ಉಡುಗೊರೆಗಳಿಂದು ಮನಸ್ಸು ಸಂತಸ. ವಾಹನ ಚಾಲನೆ ಬಗ್ಗೆ ಎಚ್ಚರ ವಹಿಸಿ. ಆತ್ಮೀಯರೊಂದಿಗೆ ಸಾಕಷ್ಟ ಸಮಯ ಕಳೆಯುವುದರಿಂದ ಲಾಭಾ.

  ತುಲಾ ರಾಶಿ : ಆತ್ಮೀಯರು ದೂರಾಗುವ ಸಾದ್ಯತೆ. ಸಂಬಂಧಿಕರಿಂದ ಉತ್ತಮ ಪ್ರಶಂಸೆ. ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಜಯ. ಪಾಲುದಾರಿಕೆ ವ್ಯವಹಾರದ ಬಗ್ಗೆ ಎಚ್ಚರ. ಲಾಭಾದ ವಿಷಯದಲ್ಲಿ ಪಾಲುದಾರರೊಂದಿಗೆ ವಾಗ್ವಾದ ಸಾಧ್ಯತೆ

  ವೃಶ್ಚಿಕ ರಾಶಿ: ಅದ್ದೂರಿನ ಖರ್ಚಿನ ಬಗ್ಗೆ ಹೆಚ್ಚಿನ ಗಮನವಿರಲಿ. ವೃತ್ತಾ ಟೀಕೆಯಿಂದ ಮಾನಸಿಕ ಕಸಿವಿಸಿ. ನಿಮ್ಮ ಗುರಿಗಳತ್ತ ಹೆಚ್ಚಿನ ಗಮನ ಕೊಡಿ. ಇಷ್ಟ ಪಟ್ಟ ವಸ್ತುಗಳು ಕೈ ಸೇರಲಿದೆ. ಕೌಶಲ್ಯಭಿವೃದ್ಧಿಯಿಂದ ಪ್ರಶಂಸೆ.

  ಧನು ರಾಶಿ : ಕುಟುಂಬ ಸದಸ್ಯರಿಂದ ಸಿಹಿ ಸುದ್ದಿ ಸಿಗಲಿದೆ. ವ್ಯವಹಾರದಲ್ಲಿ ಸಾಕಷ್ಟು ಲಾಭಾ. ಗೃಹಪಯೋಗಿ ವಸ್ತುಗಳಿಂದ ವೃತ್ತ ಖರ್ಚು. ಪ್ರಯತ್ನಗಳ ಸೋಲಿನಿಂದ ಕಂಗೆಡದಿರಿ. ಹೊಸ ಯೋಜನೆಗೆ ಕುಟುಂಬದವರ ಬೆಂಬಲ

  ಮಕರ ರಾಶಿ: ದೂರದ ದಂಪತಿಗಳು ಒಂದಾಗಲಿದ್ದಾರೆ. ಬಟ್ಟೆಯ ವಿಷಯದಲ್ಲಿ ಎಚ್ಚರಿಕೆ. ಮಾತಿನ ಬಗ್ಗೆ ಸಾಕಷ್ಟು ಎಚ್ಚರಿಕೆ ಇರಲಿ. ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

  ಕುಂಭ ರಾಶಿ: ವೃತ್ತಾ ಆಲೋಚನೆಗಳಿಂದ ಸಮಯ ವ್ಯರ್ಥ. ಮಕ್ಕಳಿಂದ ಸಾಕಷ್ಟು ಖುಷಿ ಸಿಗಲಿದೆ. ಕುಟುಂಬದಲ್ಲಿ ಸಿಹಿ ಸುದ್ದಿಯಿಂದ ಮಾನಸಿಕ ನೆಮ್ಮದಿ. ಉದ್ಯೋಗದಲ್ಲಿ ಬಡ್ತಿ. ಅನಿರೀಕ್ಷಿತ ಯಶಸ್ಸು ಲಭ್ಯ

  ಮೀನಾ ರಾಶಿ; ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಎಚ್ಚರ. ಆರೋಗ್ಯದ ಬಗ್ಗೆ ಎಚ್ಚರ
  Published by:Seema R
  First published: