Astrology: ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today june 19: ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣದ ಗ್ರೀಷ್ಮ ಋತು ಮಿಥುನ ಮಾಸದ 4ನೇ ದಿನ ಇಂದು. ಜೇಷ್ಠ ಶುಕ್ಲ ತಿಥಿ, ಉತ್ತರ ಫಲ್ಗುಣಿಯ ಈ ದಿನ ರಾಹುಕಾಲ ಬೆಳಗ್ಗೆ 09-00ರಿಂದ 10-30 ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೇಷ ರಾಶಿ: ಈ ದಿನ ಮಕ್ಕಳಿಂದ ನೆಮ್ಮದಿ. ಗೃಹ ನಿರ್ಮಾಣ ಮಾಡುವ ಆಲೋಚನೆಯು ಕುಟುಂಬ ಸದಸ್ಯರ ಸಂತಸಕ್ಕೆ ಕಾರಣವಾಗುತ್ತದೆ. ನೀವು ಧರ್ಮ-ಕರ್ಮಗಳಲ್ಲಿ ಆಸಕ್ತಿ ತೋರಿದರೆ, ಕಾರ್ಯ ಕ್ಷೇತ್ರದಲ್ಲಿ ಹಾಗೂ ಜೀವನದಲ್ಲಿ ಅಭೀಷ್ಟ ಪಡೆಯಬಹುದು.

  ವೃಷಭ ರಾಶಿ: ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕವಾಗಬೇಕಿಲ್ಲ. ಮನೆಮದ್ದುಗಳಿಂದ ಸರಿ ಹೋಗುತ್ತದೆ. ನೀವು ಮಾಡುತ್ತಿರುವ ನಿಮ್ಮ ಗಮನಕ್ಕೆ ಬರುವ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು.

  ಮಿಥುನ ರಾಶಿ: ಈ ದಿನ ಎಚ್ಚರದಿಂದ ಕಾರ್ಯ ನಿರ್ವಹಿಸಿ. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಂಭವವಿದೆ. ತೈಲ ವ್ಯಾಪಾರ ಮಾಡುವವರಿಗೆ ಅಧಿಕವಾಗಿ ಲಾಭ ಸಿಗಲಿದೆ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ.

  ಕರ್ಕಾಟಕ ರಾಶಿ: ಈ ದಿನದ ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಮತ್ತು ಸ್ವಂತ ಬುದ್ಧಿಯಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆಯು ಪ್ರಾಪ್ತಿಯಾಗುವುದು. ನಿರಾಸೆಯ ಜೀವನ ಶೈಲಿಯು ಹಂತ-ಹಂತವಾಗಿ ಮುಕ್ತಾಯವಾಗುವುದು.

  ಸಿಂಹ ರಾಶಿ: ಈ ದಿನ ಮಗಳ ವಿವಾಹ ಪ್ರಸ್ತಾವನೆ ನಡೆದು ಶುಭದಲ್ಲಿ ಮುಕ್ತಾಯವಾಗಲಿದೆ. ದಾಯಹಾದಿಗಳು ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು. ಸಾಲಗಳಿಂದ ದೂರವಾಗುವ ವಿಚಾರದ ಬಗ್ಗೆ ಗಮನ ನೀಡಿ.

  ಕನ್ಯಾ ರಾಶಿ: ಈ ದಿನ ಮಾತು ಕಡಿಮೆ ಮಾಡಿ ಕೆಲಸದಲ್ಲಿ ಮಗ್ನರಾಗುವುದರಿಂದ ನಿಮ್ಮ ಕೆಲಸಗಳು ಸುಖ-ಶಾಂತಿಯಿಂದ ತುಂಬಿರುತ್ತವೆ. ಕಳೆದುಹೋದ ಆಸ್ತಿಯ ಬಗ್ಗೆ ಯೋಚಿಸದೆ ವೃತ್ತಿಯಲ್ಲಿ ಶ್ರಮಪಡುವ ಮನೋಭಾವ ಬೆಳೆಸಿಕೊಳ್ಳಿರಿ.

  ತುಲಾ ರಾಶಿ: ಇಂದು ಶ್ರೀ ವೆಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ನಿಮ್ಮ ಬಾಳು ಹಸನವಾಗುವುದರೊಂದಿಗೆ ವೈವಾಹಿಕ ಜೀವನ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ತರಹದ ಅವಕಾಶಗಳು ಒದಗಿ ಬರುತ್ತವೆ.

  ವೃಶ್ಚಿಕ ರಾಶಿ: ಎಷ್ಟೇ ಕಷ್ಟ ಬಂದರೂ ನಿಮ್ಮ ಗುರಿಯನ್ನು ಸಾಧಿಸಿಯೇ ತೀರುತ್ತೀರಿ. ಅದರ ಪರಿಣಾಮವಾಗಿ ನಿಮ್ಮ ಜೀವನದ ಮುಂದಿನ ಹಾದಿಯು ಸುಗಮವಾಗಲಿದೆ. ಒಂದು ಶಿಶುವಿನ ಜನನರ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.

  ಧನು ರಾಶಿ: ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಕಿರಿಕಿರಿ ಉಂಟಾಗಬಹುದು. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲವನ್ನು ಇಂದು ಪಡೆಯುತ್ತೀರಿ. ಹೊಸ ಜೀವನ ಖರೀದಿಗೆ ಯೋಚಿಸಿದವರು ಸ್ವಲ್ಪ ಮಟ್ಟಿಗೆ ತಟಸ್ಥರಾಗಿರಿ. ಸುಂದರ ಸಂಜೆ ನಿಮ್ಮದಾಗುತ್ತದೆ.

  ಮಕರ ರಾಶಿ: ರಕ್ತದೊತ್ತಡ, ಮೂತ್ರ ಸಂಬಂಧದ ದೋಷಗಳ ಬಗ್ಗೆ ಜಾಗ್ರತೆ ವಹಿಸಿ. ಈ ದಿನ ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ದಿಯಾಗುತ್ತದೆ. ಆತಂಕ ತುಂಬಿದ ಕೆಲಸ ಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು.

  ಕುಂಭ ರಾಶಿ: ಈ ದಿನ ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಬಲಪಡಿಸುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳಿಂದ ಬಹಳ ಉಪಯೋಗವಾಗಲಿದೆ. ಸೇವಾ ಮನೋಭಾವವಿರುವ ವ್ಯಕ್ತಿಗಳು ಹೆಚ್ಚು ಪ್ರಶಂಸೆ ಪಡೆಯುವರು. ಸಿದ್ಧಿವಿನಾಯಕನ ಆರಾಧನೆಯು ಶುಭವನ್ನು ಉಂಟುಮಾಡುತ್ತದೆ.

  ಮೀನ ರಾಶಿ: ಅನೇಕ ಕ್ಷೇತ್ರಗಳಲ್ಲಿ ದುಡಿಯುವ ನಿಮಗೆ ಜನಗಳ ದೃಷ್ಟಿ ದೋಷವು ಸ್ವಲ್ಪ ಮಟ್ಟಿನ ಆರೋಗ್ಯವನ್ನು ಹಾಳು ಮಾಡುವುದು. ಈ ದಿನ ಎರಡನೇ ದರ್ಜೆಯ ನೌಕರರಿಗೆ ವರ್ಗಾವಣೆಯಿಂದ ಆರ್ಥಿಕವಾಗಿ ಅನುಕೂಲವಾಗುವುದು. ಇದು ನಿಮ್ಮ ಆನಂದವನ್ನು ಇಮ್ಮಡಿಗೊಳಿಸಲಿದೆ.
  Published by:Latha CG
  First published: