HOME » NEWS » Lifestyle » HOROSCOPE TODAY ASTROLOGICAL PREDICTION 18 JUNE 2021 SESR

Astrology: ಸಿಂಹ ರಾಶಿಯವರಿಗೆ ಈ ದಿನ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today june 17: ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣದ ಗ್ರೀಷ್ಮ ಋತು ಮಿಥುನ ಮಾಸದ 3ನೇ ದಿನ ಇಂದು. ಜೇಷ್ಠ ಶುಕ್ಲ ತಿಥಿ, ಉತ್ತರ ಫಲ್ಗುಣಿಯ ಈ ದಿನ ರಾಹುಕಾಲ ಬೆಳಗ್ಗೆ 10- 30ರಿಂದ 12ಗಂಟೆವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

news18-kannada
Updated:June 18, 2021, 6:06 AM IST
Astrology: ಸಿಂಹ ರಾಶಿಯವರಿಗೆ ಈ ದಿನ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಇಂದು ಯಾವ ರಾಶಿಗೆ ಯಾವ ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
  • Share this:
ಮೇಷ ರಾಶಿ : ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಕೈಗೊಳ್ಳುವ ನಿರ್ಧಾರಗಳು ಮನಸ್ಸಿಗೆ ನೆಮ್ಮದಿ ತರಲಿದೆ. ಪಾಲುದಾರರೊಂದಿಗೆ ಕೇವಲ ಮಾತುಕತೆ ನಡೆಸಿ, ಯಾವುದೇ ರೀತಿಯ ಕಾಗದ ಪತ್ರಗಳಿಗೆ ಸಹಿಯನ್ನು ಹಾಕದಿರಿ. ಧಾನ್ಯಗಳ ವ್ಯಾಪಾರಗಳಿಂದ ಹೆಚ್ಚಿನ ಲಾಭ ಪಡೆಯಬಹುದು.

ವೃಷಭ ರಾಶಿ: ವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿದೆ. ಸಮಸ್ಯೆಗಳನ್ನು ಶೀಘ್ರವಾಗಿ ಬಗೆ ಹರಿಸಿಕೊಳ್ಳಲು ಪ್ರಯತ್ನಿಸುವಿರಿ. ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಅದರಿಂದ ದಿನನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.

ಮಿಥುನ ರಾಶಿ: ವಾಣಿಜ್ಯ ವ್ಯವಹಾರಗಳು ಲಾಭ ತರಲಿದೆ. ಗಣ್ಯವ್ಯಕ್ತಿಯ ಭೇಟಿಯಿಂದ ಅನುಕೂಲ ಉಂಟಾಗುವುದು. ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿ ಬರುತ್ತದೆ. ಹಿಂದೆ ತೆಗೆದುಕೊಂಡ ನಿಲುವನ್ನು ಬದಲಾಯಿಸಬೇಡಿ.

ಕರ್ಕಾಟಕ ರಾಶಿ: ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆ ಸಂಭವ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ. ಕೆಲಸಗಳು ಸರಾಗವಾಗಿ ನೆರವೇರುವುದು. ಮಾರಾಟದ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ. ಸಮಸ್ಯೆಗಳು ಸುಲಭವಾಗಿ ಪರಿಹಾರಗೊಳ್ಳುವುದು. ದೇವತಾಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.

ಸಿಂಹ ರಾಶಿ: ಪರಿಸ್ಥಿತಿ ನಿಮಗೆ ಅನುಕೂಲಕರವಾಗಿದೆ. ಅಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಬರಲಿದೆ. ಪ್ರಯಾಣ ಲಾಭ ತರಲಿದೆ. ಜವಳಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಪ್ರಾಪ್ತಿಯಾಗುತ್ತದೆ. ಮಕ್ಕಳ ಖರ್ಚುವೆಚ್ಚಗಳನ್ನು ಸರಿದೂಗಿಸುವಿರಿ. ಆಕಸ್ಮಿಕವಾಗಿ ಧನ ಲಾಭವಾಗಲಿದೆ.

ಕನ್ಯಾ ರಾಶಿ: ಆದಾಯದಷ್ಟೇ ಖರ್ಚು ಇರುವುದು. ವ್ಯವಹರಿಸುವಾಗ ಎಚ್ಚರ ಅಗತ್ಯ. ಮಕ್ಕಳ ವ್ಯಾಸಾಂಗದ ಬಗ್ಗೆ ಸಂಬಂಧಿಕರಲ್ಲಿ ಚರ್ಚೆ ನಡೆಸಿ, ಬಹಳ ಉಪಯೋಗಕಾರಿಯಾದ ವಿಷಯ ದೊರಕುವುದು. ದಾಂಪತ್ಯದಲ್ಲಿ ಆಗಾಗಾ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ.

ತುಲಾ ರಾಶಿ: ಕೃಷಿ ಚಟುವಟಿಕೆಗಳು ಹೆಚ್ಚಲಿವೆ. ಜೀವನ ಶೈಲಿ ಬದಲಾವಣೆಯಾಗುವ ದಿನ. ನಿಮ್ಮ ಆಸೆ ಆಕಾಂಕ್ಷೆ ಸಾಧ್ಯವಾದಷ್ಟು ನಿಯಂತ್ರಿಸಿಕೊAಡಲ್ಲಿ, ಋಣ ಮುಕ್ತರಾಗುವ ಅವಕಾಶ ಒದಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ.ವೃಶ್ಚಿಕ ರಾಶಿ: ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ತೊಡಗಿಸುವಿರಿ. ಉದ್ಯೋಗದಲ್ಲಿ ತೊಂದರೆಗಳಿರುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿದೆ. ವ್ಯವಹಾರ ನಿಮಿತ್ತ ಪ್ರಯಾಣ ನಡೆಸುವಾಗ ನಯವಂಚಕರ ಬಗ್ಗೆ ಎಚ್ಚರವಹಿಸಿ.

ಧನು ರಾಶಿ : ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ಸಿಗಲಿದೆ. ವಿಶ್ರಾಂತಿಯಿಲ್ಲದ ಕಾರ್ಯದೊತ್ತಡದಿಂದ ಅನಾರೋಗ್ಯ ಉಂಟಾಗಬಹುದು. ಅವಿವಾಹಿತರು ಆದಷ್ಟು ಬೇಗ ವಿವಾಹದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಲಕ್ಷಿ÷್ಮÃ ವೇಂಕಟರಮಣನ ಸೇವೆಯಿಂದ ಶುಭ.

ಮಕರ ರಾಶಿ: ಕೆಲವು ಬಾರಿ ಆತಂಕ ಎದುರಾಗುವ ಸಾಧ್ಯತೆ ಇರುತ್ತದೆ. ಆದರೂ ಜೀವನದಲ್ಲಿ ಸೋಮಾರಿತನವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಕಿದರೂ ಸಮಸ್ಯೆ ಆಗುದಿಲ್ಲ. ವೈಯಕ್ತಿಕ ವಿಚಾರಗಳತ್ತ ಗಮನ ಹರಿಸುವಿರಿ.

ಕುಂಭ ರಾಶಿ: ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ. ಅನಿವಾರ್ಯವಾಗಿ ದೂರ ಪ್ರಯಾಣ ಕೈಗೊಳ್ಳ ಬೇಕಾಗುವುದು. ಕೃಷಿ ಕೆಲಸಗಳಿಗಾಗಿ ಪರಿಶ್ರಮ ವಹಿಸುವಿರಿ. ಹಿತಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು. ಜಗನ್ಮಾತೆಯನ್ನು ಆರಾಧಿಸಿ.

ಮೀನಾ ರಾಶಿ: ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುವುದು. ವ್ಯಾಪಾರ ವ್ಯವಹಾರಗಳ ಮಾರುಕಟ್ಟೆ ವಿಸ್ತರಿಸಿಕೊಳ್ಳುವಿರಿ. ವೃತ್ತಿಪರ ಹೊಸ ವಿಷಯಗಳು ನಿಮ್ಮ ಅನುಭವಕ್ಕೆ ಬರಲಿವೆ. ಸಂಯಮದಿಂದ ನಡೆದುಕೊಳ್ಳುವುದು ವ್ಯಾವಹಾರಿಕವಾಗಿ ಲಾಭವನ್ನು ತಂದುಕೊಡುವುದು.
Published by: Seema R
First published: June 18, 2021, 6:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories