Horoscope: ಪಾಲುದಾರಿಕೆ ವ್ಯವಹಾರದಿಂದ ಮಿಥುನ ರಾಶಿಗೆ ಇಂದು ಹೆಚ್ಚಿನ ಲಾಭ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ!

Today Horoscope June 14: ಜನ್ಮ ರಾಶಿಗಳು ದಿನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ ಯಾವ ರಾಶಿಗೆ ಧನಲಾಭಾ, ಯಾರಿಗೆ ನಷ್ಟ ಎಂಬ ಕುರಿತ ಮಾಹಿತಿ ಇಲ್ಲಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಮೇಷ ರಾಶಿ : ವಸ್ತುಗಳ ಖರೀದಿ ಮುನ್ನ ಯೋಚಿಸಿ. ಅಗತ್ಯವಿಲ್ಲದ ವಸ್ತುಗಳ ಮೇಲೆ ಅನಗತ್ಯ ಖರ್ಚಾಗಲಿದೆ. ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಇಂದು ಲಾಭಾವಾಗಲಿದೆ, ಈ ದಿನ ಲಾಭಾ ನಷ್ಟದ ದಿನವಾಗಿದ್ದು, ಉದ್ಯಮಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಅವಶ್ಯ

  ವೃಷಭ ರಾಶಿ : ಸಂತೋಷ ಮತ್ತು ಶಾಂತಿಯಿಂದ ಕುಟುಂಬದಲ್ಲಿ ಶಾಂತಿ ನೆಲಸಲಿದೆ. ಕೃಷಿ ಕೆಲಸದಲ್ಲಿ ಪ್ರಗತಿಯಾಗಲಿದೆ. ಉದ್ಯಮಿಗಳಿಗೆ ಈ ದಿನ ಲಾಭಾವಾಗಲಿದೆ. ಮಕ್ಕಳ ಆರೋಗ್ಯ ವಿಚಾರದಲ್ಲಿ ಜಾಗೃತೆ ಅವಶ್ಯಕ.

  ಮಿಥುನ ರಾಶಿ: ಪಾಲುದಾರಿಕೆ ವ್ಯವಹಾರದಿಂದ ಹೆಚ್ಚಿನ ಲಾಭಾವಾಗಲಿದೆ. ಉನ್ನತ ಉದ್ಯೋಗದಲ್ಲಿರುವವರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ. ಬಟ್ಟೆ ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನ ಸಾಧ್ಯತೆ

  ಕಟಕ ರಾಶಿ: ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ ಅಗತ್ಯ. ಕ್ಷುಲಕ ವಿಚಾರಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಸಮಸ್ಯೆ ಹೆಚ್ಚಾಗಲಿದೆ. ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಹಣದ ಸಂಗ್ರಹಕ್ಕೆ ಬಹಳಷ್ಟು ಅಡ್ಡಿಯಾಗಲಿದೆ.

  ಸಿಂಹ ರಾಶಿ: ಮನೆಯವರ ಬೆಂಬಲದಿಂದ ಅಂದುಕೊಂಡ ಕಾರ್ಯದಲ್ಲಿ ಯಶಸ್ವಿ. ದೀರ್ಘ ಕಾಲದ ಕೆಲಸಗಳಿಗೆ ಇದ್ದ ತಡೆ ನಿವಾರಣೆಯಾಗಲಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಾ. ವೈದ್ಯರಿಗೆ ಈ ದಿನ ಬಿಡುವಿಲ್ಲದ ದಿನವಾಗಿರಲಿದೆ.

  ಕನ್ಯಾ ರಾಶಿ: ಮದುವೆಗೆ ವರ ಅಥವಾ ವಧು ಅನ್ವೇಷಣೆಯಲ್ಲಿ ತೊಡಗಿದ್ದರೆ, ಈ ಕಾರ್ಯ ಸಿದ್ಧಿಸಲಿದೆ. ಸೃಜನ ಶೀಲ ಕಾರ್ಯದಿಂದ ಮೆಚ್ಚುಗೆ ಪಾತ್ರವಾಗಲಿದ್ದೀರಾ. ಯಾವುದೇ ಯೋಜನೆಗಳನ್ನು ಆರಂಭಿಸುವ ಮೊದಲು ಸಾಧಕ ಬಾಧಕ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಒತ್ತಡದಿಂದ ಬಳಲುವ ಸಾಧ್ಯತೆ.

  ತುಲಾ ರಾಶಿ: ಮಗಳ ಆರೋಗ್ಯದ ವಿಚಾರದಲ್ಲಿ ಸಂತಸದ ಸುದ್ದಿ. ದೀರ್ಘ ಕಾಲದ ಬಳಿಕ ಸಂಬಂಧಿಕರ ಭೇಟಿಯಾಗುವುದರಿಂದ ಮನಸಿಗೆ ಖುಷಿ. ಆಟೋ ಮೊಬೈಲ್​ ಉದ್ಯಮಿಗಳಿಗೆ ಈ ದಿನ ಹೆಚ್ಚಿನ ಲಾಭಾವಾಗಲಿದೆ.ವೃಶ್ಚಿಕ ರಾಶಿ: ಅನೀರಿಕ್ಷಿತ ಸಂಬಂಧಿಕರಿಂದ ಈ ದಿನ ಹಾಳಾಗುವ ಸಾಧ್ಯತೆ. ಅಭದ್ರತಾ ಭಾವನೆ ಕಾಡಲಿದೆ. ಖರ್ಚಿನ ಬಗ್ಗೆ ನಿಗಾ ಇರಲಿ. ಕ್ರೀಡಾ ಚಟುವಟಿಕೆಯಲ್ಲಿರುವವರಿಗೆ ಹೆಚ್ಚಿನ ಲಾಭ. ವ್ಯಾಪಾರ ಮತ್ತು ಶಿಕ್ಷಣ ಉದ್ಯೋಗದಲ್ಲಿರುವವರು ಜಾಗರುಕತೆ ಅವಶ್ಯ. ಸಂಗಾತಿಗಳೊಂದಿಗೆ ಈ ದಿನ ಉತ್ತಮ ವಾಗಲಿದೆ

  ಧನು ರಾಶಿ : ವೃತ್ತಿಜೀವನದ ಪ್ರಗತಿಗೆ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು. ಹೊಸ ತಂತ್ರಗಳನ್ನು ಕಲಿಯುವುದು ಮುಖ್ಯವಾಗಿರುತ್ತದೆ. ಏಕಾಗ್ರತೆ ಭಂಗದಿಂದ ಕಲಿಕೆಗೆ ಅಡ್ಡಿ. ಮನೆಯ ಸದಸ್ಯರಿಂದ ಕಿರಿಕಿರಿ

  ಮಕರ ರಾಶಿ: ಆರೋಗ್ಯ ವೃದ್ಧಿಯಿಂದ ಮಾನಸಿಕ ಸ್ಥೈರ್ಯ ಮತ್ತು ಚೈತನ್ಯ ಹೆಚ್ಚಲಿದೆ, ನ್ಯಾಯಾಲಯದ ವ್ಯವಹಾರದಲ್ಲಿ ಜಯ ಸಿಗಲಿದೆ, ಪ್ರೇಮಿಗಳಿಗೆ ಇಂದು ಶುಭ ದಿನ. ಮನೆಯ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ

  ಕುಂಭ ರಾಶಿ: ಅಲಂಕಾರಿಕ ವಸ್ತುಗಳು ಹೆಚ್ಚು ಹಣ ವಿನಿಯೋಗವಾಗಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹೆಚ್ಚಿನ ಖರ್ಚು ಆಗಲಿದ್ದು, ಮೋಸದಿಂದ ತೊಂದರೆಯಾಗಲಿದೆ. ಇದರ ನಿವಾರಣೆಗೆ ಲಕ್ಷ್ಮೀ ಸ್ತೋತ್ರ ಪರಾಯಣ ಮಾಡಿ

  ಮೀನಾ ರಾಶಿ: ಆರೋಗ್ಯದ ಕಡೆ ಗಮನಹರಿಸಬೇಕು. ಮೊದಲಿನಿಂದಲೂ ಶೀತ ಸಮಸ್ಯೆ ಇದ್ದರೆ ಉಲ್ಬಣ ಈ ಹಿನ್ನಲೆ ಚಂದ್ರ ಸಂಬಂಧಿತ ವಸ್ತು ಅಂದರೆ, ಹಾಲು ಮೊಸರು, ಅಕ್ಕಿ ಈ ರೀತಿ ವಸ್ತುವನ್ನು ಶಿವನ ದೇವಾಲಯಕ್ಕೆ ಅಪರ್ಣೆ ಮಾಡಿದರೆ ಆರೋಗ್ಯವೂ ಸುಧಾರಿಸುತ್ತದೆ. ಚಂಚಲ ಮನಸ್ಸಿದ್ದರೆ ನಿವಾರಣೆ ಯಾಗುತ್ತದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: