ನಿಮ್ಮ ಫಿಟ್ನೆಸ್ ಗೆಳೆಯನಿಗೆ ಕ್ರಿಸ್‌ಮಸ್ ಹಬ್ಬಕ್ಕೆ ನೀಡಬಹುದಾದ ಅತ್ಯುತ್ತಮ ಉಡುಗೊರೆ Honor Band 5

Honor Band 5: ನಿಮ್ಮ ಸ್ನೇಹಿತ ಜಿಮ್‌ನಲ್ಲಿ ಕಸರತ್ತು ಮಾಡುತ್ತ, ತೂಕ ಎತ್ತುವಾಗ ಅವರ ಪ್ಯಾಕ್ಸ್ ಮತ್ತು ಬೈಸೆಪ್ಸ್ ತೋರಿಸುತ್ತಾರೆ ಅಂದುಕೊಳ್ಳಿ. ಆ ದೃಶ್ಯವನ್ನು ಇನ್ನೂ ಚೆನ್ನಾಗಿ ಕಾಣುವಂತಾಗಲು ಏನು ಬೇಕು ಗೊತ್ತೇ?

news18-kannada
Updated:December 24, 2019, 2:42 PM IST
ನಿಮ್ಮ ಫಿಟ್ನೆಸ್ ಗೆಳೆಯನಿಗೆ ಕ್ರಿಸ್‌ಮಸ್ ಹಬ್ಬಕ್ಕೆ ನೀಡಬಹುದಾದ ಅತ್ಯುತ್ತಮ ಉಡುಗೊರೆ Honor Band 5
Honor5
  • Share this:
ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಸುಂದರವಾಗಿ ಹೊಳೆಯುವ ಲೈಟ್‌ಗಳು ಮತ್ತು ಕೆಂಪು ಹಸಿರು ಬಣ್ಣದ ಸೆಂಟರ್‌ಪೀಸ್‌ಗಳಿಂದ ಮನೆಯನ್ನು ಅಲಂಕರಿಸಲಾಗಿದೆ. ಕ್ರಿಸ್‌ಮಸ್ ಪಾರ್ಟಿಯಲ್ಲಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಎಲ್ಲಾ ರಜಾದಿನಗಳಿಂದ ಜನರ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹವನ್ನು ಮೂಡುತ್ತಿದೆ. ಈ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವ ಮೂಲಕ ರಜಾದಿನದ ಮಜಾ ಅನುಭವಿಸಲು ನಾವು ಕೂಡ ನಿಮ್ಮಷ್ಟೇ ಉತ್ಸಾಹದಿಂದ ಕಾಯುತ್ತಿದ್ದೇವೆ. ನಮ್ಮ ಕುಟುಂಬದವರು ಹಾಗೂ ಸ್ನೇಹಿತರು ನಮ್ಮ ಮೇಲಿನ ಪ್ರೀತಿಯನ್ನು ಹೆಚ್ಚಿಸಲು ಕಾರಣವಾಗುವಂತಹ ಒಳ್ಳೆಯ-ಚಿಂತನಶೀಲ ಉಡುಗೊರೆಗಳನ್ನು ನಾವೆಲ್ಲಾ ಕೊಟ್ಟು-ತೆಗೆದುಕೊಳ್ಳುತ್ತೇವೆ.

ಅದರ ಬಗ್ಗೆ ಮಾತನಾಡುವುದಾದರೆ, ಜಿಮ್‌ನಲ್ಲಿ ಮೂರು ಗಂಟೆ ಕಸರತ್ತು ಮಾಡುತ್ತ, ಡಜನ್‌ಗಟ್ಟಲೆ ಬೇಯಿಸಿದ ಮೊಟ್ಟೆ ಅಥವಾ ತೋಫು ತಿನ್ನುವ ಮತ್ತು ಉತ್ತಮ ಕ್ರೀಡಾಧಿರಿಸು ಧರಿಸುವ ಆಸಕ್ತಿ ಹೊಂದಿದ ವ್ಯಕ್ತಿಯೊಬ್ಬರು ನಿಮಗೆ ಗೊತ್ತು ಅಂದುಕೊಳ್ಳಿ, ಹಾಗಾದರೆ ನೀವು ಸರಿಯಾದ ಜಾಗದಲ್ಲಿದ್ದೀರಿ. ಏಕೆಂದರೆ ನಿಮ್ಮ ಫಿಟ್ನೆಸ್ ಗೆಳೆಯನಿಗೆ ಕ್ರಿಸ್‌ಮಸ್ ಉಡುಗೊರೆಯೊಂದನ್ನು ಕೊಡಲು ತುಂಬಾ ಹುಡುಕುತ್ತಿರುವುದೇ ನೀವು ಈಗ ಇದನ್ನು ಓದುತ್ತಿರುವುದಕ್ಕೆ ಕಾರಣ. ನಮ್ಮಲ್ಲಿ ಅಂತಹ ಸರಿಯಾದ ಉಡುಗೊರೆಯೊಂದಿದೆ, ಅದೇ - Honor Band 5!

ನಿಮ್ಮ ಜಿಮ್ ಶೈಲಿಯನ್ನು ವೃದ್ಧಿಸುತ್ತದೆ:
ನಿಮ್ಮ ಸ್ನೇಹಿತ ಜಿಮ್‌ನಲ್ಲಿ ಕಸರತ್ತು ಮಾಡುತ್ತ, ತೂಕ ಎತ್ತುವಾಗ ಅವರ ಪ್ಯಾಕ್ಸ್ ಮತ್ತು ಬೈಸೆಪ್ಸ್ ತೋರಿಸುತ್ತಾರೆ ಅಂದುಕೊಳ್ಳಿ. ಆ ದೃಶ್ಯವನ್ನು ಇನ್ನೂ ಚೆನ್ನಾಗಿ ಕಾಣುವಂತಾಗಲು ಏನು ಬೇಕು ಗೊತ್ತೇ? Honor Band 5. ಇದು ಕೇವಲ ಒಂದು ಸಾಮಾನ್ಯ ಫಿಟ್ನೆಸ್ ಬ್ಯಾಂಡ್ ಅಲ್ಲ. ಇದರಲ್ಲಿ ಇರುವಂತಹ 2.5D ಕವರ್ಡ್​ ಗ್ಲಾಸ್ ಮತ್ತು 120x240 ಪಿಕ್ಸೆಲ್ ರೆಸಲೂಶನ್ ಇರುವ 0.95” AMOLED ಪ್ಯಾನೆಲ್‌ಗೆ ಧನ್ಯವಾದ ಹೇಳಲೇಬೇಕು.

Pc: Honor


ಏಕೆಂದರೆ ಇದು ತುಂಬಾ ಆಕರ್ಷಕವಾಗಿದ್ದು ನೋಡುಗರ ನೋಟವನ್ನು ತನ್ನತ್ತ ಸೆಳೆಯುತ್ತದೆ. ಡಿಸ್‌ಪ್ಲೇ ಕೆಳಗೆ ಹೋಮ್ ಪೇಜಿಗೆ ಹೋಗುವ ಬಟನ್ ಇದೆ. ಈಗ, ಇಂತಹ ಒಂದು ಫಿಟ್ನೆಸ್ ಸ್ಟೈಲನ್ನು ಯಾರೂ ಕೂಡ ತೋರಿಸಿಕೊಳ್ಳದೇ ಉಳಿಯಲಾರ. ಅವರ ಆಸಕ್ತಿಯನ್ನು ಆಧರಿಸಿ, ನೀವು ಅವರಿಗೆ ಮೆಟೋರೈಟ್ ಬ್ಲ್ಯಾಕ್, ಕೋರಲ್ ಪಿಂಕ್, ಮತ್ತು ಮಿಡ್‌ನೈಟ್ ನೇವಿ ಬಣ್ಣದ ಫಿಟ್ನೆಸ್ ಬ್ಯಾಂಡನ್ನು ನೀವು ಉಡುಗೊರೆಯಾಗಿ ನೀಡಬಹುದು. ತನ್ನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ Honor Band 5 ಸುಧಾರಿತ ಡಿಸ್‌ಪ್ಲೇ ಹೊಂದಿದ್ದು, ಇದು ಹೊರಾಂಗಣದಲ್ಲಿಯೂ ಸುಲಭವಾಗಿ ರೀಡ್ ಮಾಡಲು ಸಾಕಷ್ಟು ಬೆಳಕನ್ನು ಒದಗಿಸುತ್ತದೆ.

ನಿಮ್ಮ ಫಿಟ್ನೆಸ್ ಮೂಡ್ ಹೇಗಿದೆ?ಬ್ಯಾಂಡ್ ಟ್ರ್ಯಾಕ್ ಮಾಡಬಹುದಾದ ಹತ್ತು ವಿವಿಧ ಬಗೆಯ ಫಿಟ್ನೆಸ್ ಮೋಡ್‌ಗಳಲ್ಲಿ ನಿಮ್ಮ ಫಿಟ್ನೆಸ್ ಸ್ನೇಹಿತರು ಆಸಕ್ತಿ ತೋರುತ್ತಾರೆಯೇ. ಹೊರಾಂಗಣ ರನ್ನಿಂಗ್, ಒಳಾಂಗಣ ರನ್ನಿಂಗ್, ಹೊರಾಂಗಣ ಸೈಕ್ಲಿಂಗ್, ಒಳಾಂಗಣ ಸೈಕ್ಲಿಂಗ್, ಫ್ರೀ ಟ್ರೈನಿಂಗ್‌ನಿಂದ ಸ್ವಿಮ್ಮಿಂಗ್ ಪೂಲ್ ಈಜು, ಒಳಾಂಗಣ ವಾಕಿಂಗ್, ಎಲ್ಲಿಪ್ಟಿಕಲ್ ಮಷೀನ್, ಮತ್ತು ರೋವಿಂಗ್ ಮಷೀನ್‌ವರೆಗೆ ಅವರು ಬಯಸಿದಾಗಲೆಲ್ಲ ಈ ಬ್ಯಾಂಡ್ ತನ್ನನ್ನು ತಾನು ತೋರ್ಪಡಿಸುತ್ತದೆ. ಈ ಬ್ಯಾಂಡ್, ಈಜಿನ ವೇಗ, ದೂರ, ಕ್ಯಾಲರಿಯನ್ನು ರೆಕಾರ್ಡ್ ಮಾಡುತ್ತದೆ, ಸ್ವಾಲ್ಫ್ ಸ್ಕೋರ್ ಲೆಕ್ಕ ಹಾಕುತ್ತದೆ ಮತ್ತು ಫ್ರೀಸ್ಟೈಲ್, ಬಟರ್‌ಫ್ಲೈ, ಬ್ರೀಸ್ಟ್‌ಸ್ಟ್ರೋಕ್ ಮುಂತಾದ ಸ್ವಿಮ್ ಸ್ಟ್ರೋಕ್‌ಗಳನ್ನು ಗುರುತಿಸುತ್ತದೆ. ಚಿಂತಿಸಬೇಡಿ, ಈ ಬ್ಯಾಂಡ್ 50 ಮೀಟರ್‌ವರೆಗೆ ಜಲ-ನಿರೋಧಕವಾಗಿದೆ. ವಾಸ್ತವವಾಗಿ, ನಿಮ್ಮ ಸ್ನೇಹಿತರು ಬ್ಯಾಂಡ್‌ನ ಬೇಸಿಕ್ ಸೆಟ್ಟಿಂಗ್‌ಗಳನ್ನು ಅದರಲ್ಲಿಯೇ ಸರಿ ಹೊಂದಿಸಬಹುದು, ಬೇರೆ ಬ್ಯಾಂಡ್​ಗಳಲ್ಲಿ ಅದಕ್ಕಾಗಿ ಆ್ಯಪ್ ಬಳಸಬೇಕಾಗುತ್ತದೆ.

ಉತ್ತಮವಾಗಿ ಟ್ರ್ಯಾಕಿಂಗ್ ಮಾಡುವುದು
ನಿಮ್ಮ ಫಿಟ್ನೆಸ್ ಗೆಳೆಯ ತನ್ನ ಹೃದಯ ಬಡಿತ, ಉಸಿರಾಟ ಮತ್ತು ಆತನ ನಿದ್ರೆಯನ್ನು ಟ್ರ್ಯಾಕ್ ಮಾಡುವ ಇಚ್ಛೆಯನ್ನು ಹೊಂದಿದ್ದರೆ, ಅವರಿಗೆ ಖಂಡಿತಾ ನಿರಾಸೆಯಾಗುವುದಿಲ್ಲ, ಏಕೆಂದರೆ ನಿದ್ರೆಯ ಆರು ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು 200 ಕಸ್ಟಮೈಸ್ ಮಾಡಲಾದ ನಿದ್ರೆಯ ಸಲಹೆಗಳನ್ನು ನೀಡಲು ಸಹಾಯ ಮಾಡುವ ಉದ್ದೇಶದಿಂದ Honor Band 5 ನಲ್ಲಿ Huawei ನ ‘TrueSleep2.0’ ಬಳಸಲಾಗುತ್ತದೆ. ಇದಕ್ಕೆ ಹೋಲಿಸಿದರೆ Mi Band 4 ಬೇಸಿಕ್ ಮತ್ತು ಸಾಧಾರಣವಾಗಿ ಮಾನಿಟರ್ ಮಾಡುತ್ತದೆ ಎಂಬುದು ತಿಳಿಯುತ್ತದೆ. ವಾಸ್ತವವಾಗಿ, Honor Band 5 ನಲ್ಲಿ ಹೃದಯಬಡಿತದ ಮಾನಿಟರಿಂಗ್ ನೈಜಸಮಯದಲ್ಲಾದರೆ, Mi Band 4 ನಲ್ಲಿ ಅದು ಸಾಧ್ಯವಿಲ್ಲ. ಅಲ್ಲದೇ, Mi Band 4 ಗೆ ಹೋಲಿಸಿದರೆ Honor Band 5 ನಲ್ಲಿ ಹೆಜ್ಜೆ ಲೆಕ್ಕವು ಹೆಚ್ಚು ನಿಖರವಾಗಿದೆ ಎಂಬ ಅಂಶವನ್ನು ನೀವು ಗಮನಿಸಬೇಕು.

Pc: Honor


ನಿಮ್ಮ ಉಸಿರಾಟ ಸರಿಯಾಗಿದೆಯೇ?
Honor Band 5 ನ SpO2 ಮಾನಿಟರ್ ನಿಮ್ಮ ರಕ್ತಪ್ರವಾಹದಲ್ಲಿರುವ ಆಮ್ಲಜನಕದ ಶುದ್ಧತ್ವವನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಗೆಳೆಯ ಕಸರತ್ತು ಮಾಡುವಾಗ ಅಥವಾ ಹೆಚ್ಚಿನ ಎತ್ತರದ ಪ್ರದೇಶದಲ್ಲಿ ಪ್ರಯಾಣಿಸುವಾಗ ಆ ಪರಿಸ್ಥಿತಿಗೆ ತನ್ನ ದೇಹ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲು ಬಯಸಿದರೆ, ಈ ಫೀಚರ್ ಅವರ ಸಹಾಯಕ್ಕೆ ಬರಬಲ್ಲದು. ಈ ರೇಂಜಿನಲ್ಲಿ ಬೇರೆ ಯಾವುದೇ ಬ್ಯಾಂಡ್‌ಗಳು ಈ ಫೀಚರ್ ಹೊಂದಿಲ್ಲ ಎಂದರೆ ಅದು ಅತಿಶಯೋಕ್ತಿಯೇನಲ್ಲ.

ಸೆಲ್ಫಿ ತೆಗೆದುಕೊಳ್ಳಿ:
Honor Band 5 ನಲ್ಲಿ ತುಂಬಾ ಆಕರ್ಷಕವಾದ ಫಂಕ್ಷನ್ ಅಂದರೆ ರಿಮೋಟ್ ಕ್ಯಾಮರಾ ಫೀಚರ್. ಬ್ಲೂಟೂಥ್ ಮೂಲಕ Honor band ನಿಮ್ಮ ಗೆಳೆಯನ ಮೊಬೈಲ್‌ನೊಂದಿಗೆ ಸಂಪರ್ಕದಲ್ಲಿರುವಾಗ, ಇದು ತಂತಾನೇ ರಿಮೋಟ್ ಕಂಟ್ರೋಲ್ ಫೋಟೋ ಇಂಟರ್‌ಫೇಸಿಗೆ ಪ್ರವೇಶಿಸುತ್ತದೆ.

Pc: Honor


ಹೆಚ್ಚು ಕಾಲ ನಿಮ್ಮ ಜೊತೆಗಿರುವ ಸ್ನೇಹಿತ
ಬ್ಯಾಟರಿ ಲೈಫ್ ವಿಷಯಕ್ಕೆ ಬಂದರೆ, ಒಂದು ಗಂಟೆಯ ಸಿಂಗಲ್ ಚಾರ್ಜ್ ನಂತರ ಸುಮಾರು 2 ವಾರಗಳವರೆಗೆ ಬರುತ್ತದೆ. ಎಷ್ಟೇ ಆದರೂ, ಇದರಲ್ಲಿ 110mAh ಬ್ಯಾಟರಿ ಪವರ್ ಇದೆ. ಕೆಟ್ಟ ಬ್ಯಾಟರಿ ಲೈಫ್ ಕಾರಣದಿಂದಾಗಿ ಬ್ಯಾಂಡ್ ಆಫ್ ಆಗುವ ಕುರಿತು ನಿಮ್ಮ ಸ್ನೇಹಿತರು ನಿಮ್ಮ ಮೇಲೆ ಬೇಸರ ಮಾಡಿಕೊಳ್ಳುವುದಿಲ್ಲ.

"ನೀವು Honor Band 5 ಅನ್ನು Amazon ಮತ್ತು Flipkart ನಲ್ಲಿ ಆನ್ಲೈನ್ ಮೂಲಕ ಕೂಡ ಕೊಳ್ಳಬಹುದು"
ಈಗ, ನೀವು ಈಗಾಗಲೇ Honor Band 5 ಗಾಗಿ ಆರ್ಡರ್ ಮಾಡಿರಬಹುದು. ನಮ್ಮನ್ನು ನಂಬಿ, ನಿಮ್ಮ ಫಿಟ್ನೆಸ್ ಗೆಳೆಯ ಖಂಡಿತಾ ಇದನ್ನು ಇಷ್ಟಪಡುವುದರಲ್ಲಿ ಸಂಶಯವಿಲ್ಲ. ಅವರು ಕ್ರಿಸ್‌ಮಸ್ ಹಬ್ಬದಲ್ಲಿ ಸಂತಸದ ನಗೆ ಬೀರುವುದನ್ನು ನೀವು ನೋಡಲಿದ್ದೀರಿ. ಯಾರಿಗೆ ಗೊತ್ತು? Honor Band 5 ನಿಂದ ನಿಮ್ಮ ಸ್ನೇಹಿತ ಸ್ಟೈಲಿಶ್‌ನಲ್ಲಿ ನಿಜವಾಗಿಯೂ ಸೊಗಸಾಗಿ ಕಾಣಬಹುದೇನೋ.

ಇದನ್ನೂ ಓದಿ: ಅರ್ಧದಲ್ಲೇ ಕೈ ಕೊಟ್ಟ ನಾಯಕಿ: ನಟಿಯ ವಿರುದ್ಧ ಕ್ರಿಮಿನಲ್ ಕೇಸ್..!
Published by: zahir
First published: December 24, 2019, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading