Honey And Health: ಈ ಪದಾರ್ಥಗಳ ಜೊತೆ ಜೇನುತುಪ್ಪ ಸೇವಿಸುವ ಮುನ್ನ ಒಮ್ಮೆ ಯೋಚಿಸಿ

ಜೇನುತುಪ್ಪವನ್ನು ಆಯುರ್ವೇದದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆಗಾಗಿ ಅದರ ಔಷಧೀಯ ಗುಣಗಳಿಂದಾಗಿ ಬಳಕೆ ಮಾಡುತ್ತಾರೆ. ಜೇನುತುಪ್ಪದ ಪ್ರಯೋಜನಗಳ ಹಲವು ಇವೆ. ಜೇನುತುಪ್ಪವು ಕಣ್ಣುಗಳಿಗೆ ಮತ್ತು ದೃಷ್ಟಿಗೆ ತುಂಬಾ ಒಳ್ಳೆಯದು. ಜೇನುತುಪ್ಪವು ಇದು ಬಾಯಾರಿಕೆ ನೀಗಿಸುತ್ತದೆ. ಕಫ ಕರಗಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೇನುತುಪ್ಪವು (Honey) ಉತ್ತಮ ರುಚಿಯ (Sweet) ಜೊತೆಗೆ ಇದನ್ನು ಔಷಧವಾಗಿಯೂ (Medicinal) ಬಳಕೆ ಮಾಡುತ್ತಾರೆ. ಜೇನುತುಪ್ಪವು ಅದರ ಸಿಹಿ ರುಚಿ ಮತ್ತು ಔಷಧೀಯ ಗುಣಗಳಿಗಾಗಿ ಆಯುರ್ವೇದದಲ್ಲಿ (Ayurveda) ಮುಖ್ಯ ಸ್ಥಾನ ಗಳಿಸಿದೆ. ಜೇನುತುಪ್ಪವನ್ನು ನೈಸರ್ಗಿಕ (Natural) ಸಿಹಿಕಾರಕ ಎಂದು ಹೇಳಲಾಗಿದೆ. ಇದು ಹಲವು ಆರೋಗ್ಯ ಪ್ರಯೋಜನ (Health Benefits) ಹೊಂದಿದೆ. ಜೇನುತುಪ್ಪವನ್ನು ಆಯುರ್ವೇದದಲ್ಲಿ ಮಧು ಎಂದು ಕರೆಯುತ್ತಾರೆ. ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಅವರ ಪ್ರಕಾರ ಜೇನುತುಪ್ಪವನ್ನು ಆಯುರ್ವೇದದಲ್ಲಿ ಅನೇಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆಗಾಗಿ ಅದರ ಔಷಧೀಯ ಗುಣಗಳಿಂದಾಗಿ ಬಳಕೆ ಮಾಡುತ್ತಾರೆ. ಜೇನುತುಪ್ಪದ ಪ್ರಯೋಜನಗಳ ಹಲವು ಇವೆ. ಜೇನುತುಪ್ಪವು ಕಣ್ಣುಗಳಿಗೆ ಮತ್ತು ದೃಷ್ಟಿಗೆ ತುಂಬಾ ಒಳ್ಳೆಯದು.

    ಜೇನುತುಪ್ಪ ಆರೋಗ್ಯಕ್ಕೆ ಸಂಜೀವಿನಿ

    ಜೇನುತುಪ್ಪವು ಇದು ಬಾಯಾರಿಕೆ ನೀಗಿಸುತ್ತದೆ. ಕಫ ಕರಗಿಸುತ್ತದೆ. ಇದು ಮೂತ್ರನಾಳದ ಅಸ್ವಸ್ಥತೆ, ಅಸ್ತಮಾ, ಕೆಮ್ಮು, ಅತಿಸಾರ ಮತ್ತು ವಾಕರಿಕೆ-ವಾಂತಿ ತಡೆಗೆ ತುಂಬಾ ಉಪಯುಕ್ತ ಪದಾರ್ಥ ಆಗಿದೆ. ಜೇನುತುಪ್ಪ ನೈಸರ್ಗಿಕ ನಿರ್ವಿಶೀಕರಣ ಪದಾರ್ಥವೂ ಆಗಿದೆ.

    ಇದು ಹೃದಯ ಆರೋಗ್ಯಕ್ಕೆ ಉತ್ತಮ ಪದಾರ್ಥ. ಚರ್ಮದ ಆರೈಕೆಗೆ ಬೇಕು. ಆಳವಾದ ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ ಜೇನುತುಪ್ಪ. ಜೊತೆಗೆ ಇದು ಲೈಂಗಿಕ ತ್ರಾಣವನ್ನು ಸುಧಾರಿಸುತ್ತದೆ.

    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

    ತೂಕ ನಷ್ಟಕ್ಕೆ ಜೇನುತುಪ್ಪ ಬಳಸಬಹುದೇ?

    ತೂಕ ಇಳಿಕೆಗೆ ಹಲವು ಜನರು ಲಿಂಬೆ ಮತ್ತು ಜೇನುತುಪ್ಪ ಬಳಕೆ ಮಾಡುತ್ತಾರೆ. ಹಾಗಾದ್ರೆ ತೂಕ ನಷ್ಟಕ್ಕೆ ಜೇನುತುಪ್ಪ ಬಳಸಬಹುದೇ? ನೀವು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದರೆ ಜೇನುತುಪ್ಪವು ನಿಮ್ಮ ನಿಜವಾದ ಒಡನಾಡಿ. ವೈದ್ಯರು ಇದನ್ನು ಆಯುರ್ವೇದ ಕೊಬ್ಬು ಬರ್ನರ್ ಎಂದು ಪರಿಗಣಿಸಿದ್ದಾರೆ. ಆದರೆ ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂದು ನೀವು ತಿಳಿದರೆ ನಿಮ್ಮ ಆರೋಗ್ಯಕ್ಕೆ ಸರಿಯಾದ ಪ್ರಯೋಕನ ನೀಡುತ್ತದೆ.

    ಜೇನುತುಪ್ಪವು ಹೆಚ್ಚು ಪರಿಣಾಮಕಾರಿ ಆಗಿದೆ

    ಜೇನುಗೂಡಿನಿಂದ ಆಗಲೇ ಬಿಡಿಸಿದ ಜೇನುತುಪ್ಪವು ದೇಹದ ತೂಕ ಹೆಚ್ಚಿಸುತ್ತದೆ ಮತ್ತು ಸೌಮ್ಯ ವಿರೇಚಕ ಎಂದು ಆಯುರ್ವೇದ ವೈದ್ಯರು ಹೇಳ್ತಾರೆ. ಆದರೆ ಸಂಗ್ರಹಿಸಿಟ್ಟಿರುವ ಜೇನುತುಪ್ಪವು ಕೊಬ್ಬಿನ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಮತ್ತು ಕಫ ತೆಗೆದು ಹಾಕುತ್ತದೆ.

    ಗಿಡಮೂಲಿಕೆ ಜೊತೆ ಸೇವಿಸಿದರೆ ಸಿಗುವ ಪ್ರಯೋಜನಗಳು

    ಆಯುರ್ವೇದ ಜೇನುತುಪ್ಪವನ್ನು ಯೋಗವಾಹಿ ಎಂದು ಕರೆಯುತ್ತಾರೆ. ಆಳವಾದ ಅಂಗಾಂಶ ಭೇದಿಸುವ ಗುಣ ಹೊಂದಿರುವ ವಸ್ತುವನ್ನು ಯೋಗವಾಹಿ ಎಂದು ಕರೆಯುತ್ತಾರೆ. ಜೇನುತುಪ್ಪವನ್ನು ಇತರ ಗಿಡಮೂಲಿಕೆಗಳ ಜೊತೆ ಬಳಸಿದರೆ ಅದು ಅವುಗಳ ಔಷಧೀಯ ಗುಣ ಹೆಚ್ಚಿಸುತ್ತದೆ. ಮತ್ತು ಆಳವಾದ ಅಂಗಾಂಶ ತಲುಪಲು ಸಹಾಯ ಮಾಡುತ್ತದೆ.

    ಬಿಸಿ ಜೇನುತುಪ್ಪ ಸೇವನೆ ಮಾಡಬೇಡಿ

    ಆಯುರ್ವೇದದ ಪ್ರಕಾರ ಹಸಿ ಜೇನುತುಪ್ಪ ಸೇವನೆ ದೇಹಕ್ಕೆ ಯಾವುದೇ ಹಾನಿ ಉಂಟು ಮಾಡಲ್ಲ. ಜೇನುತುಪ್ಪವನ್ನು ಬಿಸಿ ಮಾಡಿದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳು ನಾಶ ಆಗುತ್ತವೆ. ಹಾಗಾಗಿ ಸೇವಿಸಿದಾಗ ದೇಹದಲ್ಲಿ ಅಮಾ ಟಾಕ್ಸಿನ್ ಉತ್ಪತ್ತಿ ಆಗುತ್ತದೆ.

    ಯಾವ ಪದಾರ್ಥಗಳ ಜೊತೆ ಜೇನುತುಪ್ಪ ಸೇವಿಸಬಾರದು

    ಜೇನುತುಪ್ಪವನ್ನು ಎಂದಿಗೂ ಬಿಸಿ ಆಹಾರ ಅಥವಾ ನೀರಿನೊಂದಿಗೆ ಬೆರೆಸಿ ಸೇವಿಸಬಾರದು. ಬಿಸಿ ವಾತಾವರಣದಲ್ಲಿ ಕೆಲಸ ಮಾಡುವಾಗ ಜೇನುತುಪ್ಪ ಸೇವಿಸಬಾರದು. ಜೇನುತುಪ್ಪವನ್ನು ಎಂದಿಗೂ ತುಪ್ಪ ಅಥವಾ ಬಿಸಿ, ಮಸಾಲೆಯುಕ್ತ ಆಹಾರದ ಜೊತೆ ಬೆರೆಸಿ ಸೇವಿಸಬಾರದು.

    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

    ಜೇನುತುಪ್ಪ ಬಳಸಲು ಉತ್ತಮ ಮಾರ್ಗ

    ಒಂದು ಲೋಟ ಉಗರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದು ಸ್ಥೂಲಕಾಯ ಇಳಿಸಲು ಉತ್ತಮ ಮಾರ್ಗವಾಗಿದೆ. 1 ಟೀಸ್ಪೂನ್ ಜೇನುತುಪ್ಪವನ್ನು 1 ಟೀಸ್ಪೂನ್ ಅರಿಶಿನ ಮತ್ತು 1 ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ಕೆಮ್ಮು, ಶೀತ, ಸೈನುಟಿಸ್ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
    Published by:renukadariyannavar
    First published: