ನೂಡಲ್ಸ್ನಲ್ಲಿ ವೆರೈಟಿ ನೂಡೆಲ್ಸ್ಗಳನ್ನು ನಾವು ಕೇಳಿರುತ್ತೇವೆ. ತರಕಾರಿ ನೂಡಲ್ಸ್, ಪನೀರ್ ನೂಡೆಲ್ಸ್, ಮಶ್ರೂಮ್ ನೂಡಲ್ಸ್ ಬೇಬಿ ಕಾರ್ನ್ ನೂಡೆಲ್ಸ್, ಗೋಬಿ ನೂಡೆಲ್ಸ್ ಹೀಗೆ ನಾನಾ ರೀತಿಯ ನೂಡಲ್ಸ್ ಇದೆ. ಆದರೆ ನೂಡಲ್ಸ್ನಲ್ಲಿ ನಾನ್ ವೆಜ್ ನಿರೀಕ್ಷೆ ಮಾಡುವವರು ಚಿಕನ್ ನೂಡಲ್ಸ್ ಅನ್ನು ಟ್ರೈ ಮಾಡಬಹುದು. ಸಾಮಾನ್ಯವಾಗಿ ರಸ್ತೆಬದಿಗಳಲ್ಲಿ, ರೆಸ್ಟೊರೆಂಟ್ಗಳಲ್ಲಿ ಡಾಬಾಗಳಲ್ಲಿ ನೀವು ಚಿಕನ್ ನೂಡಲ್ಸ್ ತಿಂದಿರಬಹುದು. ಆದರೆ ಈಗ ಚಿಕನ್ ನೂಡಲ್ಸ್ ಸವಿಯಲು ಹೊರಗಡೆ ಹೋಗುವ ಅಗತ್ಯವಿಲ್ಲ ಏಕೆಂದರೆ ಮನೆಯಲ್ಲಿಯೇ ನೀವು ಈ ಟೆಸ್ಟಿ ನೂಡಲ್ಸ್ ಅನ್ನು ಸುಲಭವಾಗಿ ಮತ್ತು ಸರಳವಾಗಿ ತಯಾರಿಸಿ ತಿನ್ನಬಹುದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಚೈನೀಸ್ ಸ್ಪೆಷಲ್ ನೂಡಲ್ಸ್ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.
![Homemade restaurant style testy chicken noodles]()
ಚಿಕನ್ ನೂಡೆಲ್ಸ್
ಬೇಕಾಗುವ ಸಾಮಾಗ್ರಿಗಳು
- 200 ಗ್ರಾಂ ಚಿಕನ್
- 2 ಮೊಟ್ಟೆ
- 1 ಕಪ್ ವಿನೆಗರ್ ಸಾಸ್
- 1 ಕಪ್ ಸೋಯಾ ಸಾಸ್
- 1 ಸ್ಪೋನ್ ಗ್ರೀನ್ ಚಿಲ್ಲಿ ಸಾಸ್
- 2 ಸ್ಪೋನ್ ರೆಡ್ ಚಿಲ್ಲಿ ಸಾಸ್
- 1 ಕಪ್ ಟೊಮೆಟೋ ಸಾಸ್
- 1 ಕಪ್ ಮೆಣಸಿನ ಪುಡಿ
- 1 ಕಪ್ ಉಪ್ಪು
- 200 ಗ್ರಾಂ ನೂಡೆಲ್ಸ್
- 1 ಕಪ್ ಎಣ್ಣೆ
- 1 ಕಪ್ ಕತ್ತರಿಸಿಟ್ಟುಕೊಂಡಿರುವ ಬೆಳ್ಳುಳ್ಳಿ
- 1 ಕಪ್ ಕತ್ತರಿಸಿಟ್ಟುಕೊಂಡಿರುವ ಶುಂಠಿ
- 1 ಈರುಳ್ಳಿ
- 1 ಕ್ಯಾಪ್ಸಿಕಮ್
- 1/2 ಕಪ್ ಎಲೆಕೋಸು
- 1 ಕಪ್ ಸ್ಪ್ರಿಂಗ್ ಆನಿಯನ್
- 1 ಕಪ್ ಕೊತ್ತಂಬರಿ ಸೊಪ್ಪು
![Homemade restaurant style testy chicken noodles]()
ಚಿಕನ್ ನೂಡೆಲ್ಸ್
ಚಿಕನ್ ನೂಡಲ್ಸ್ ಮಾಡುವ ವಿಧಾನ
- ಮೊದಲಿಗೆ 200 ಗ್ರಾಂ ಬೋನ್ಲೇಸ್ ಚಿಕನ್ ಅನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು. ನಂತರ ಅದಕ್ಕೆ ಅರ್ಥ ಚಮಚ ಉಪ್ಪು, 1 ಚಮಚ ವಿನೆಗರ್ ಅಥವಾ ನಿಂಬೆ ರಸ, 1 ಚಮಚ ಸೋಯಾ ಸಾಸ್, 1/4 ಚಮಚ ಮೆಣಸಿನ ಪುಡಿ , ಅರ್ಧದಷ್ಟು ಮೊಟ್ಟೆ ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ ಅರ್ಧ ಗಂಟೆಗಳ ಕಾಲ ನೆನೆಸಬೇಕು.
- ನಂತರ ಒಲೆ ಮೇಲೆ ಒಂದು ಕಾಡಾಯಿ ಇಟ್ಟು, ಅದಕ್ಕೆ 2 ಲೀ. ನೀರು ಹಾಕಿ, ಒಂದು ಚಮಚ ಉಪ್ಪು, 2 ಚಮಚ ಎಣ್ಣೆ, 200 ಗ್ರಾಂ ನೂಡಲ್ಸ್ ಹಾಕಬೇಕು. ಹೀಗೆ ಕುದಿಯುವ ನೀರಿನಲ್ಲಿ 5 ನಿಮಿಷಗಳ ಕಾಲ ನೂಡಲ್ಸ್ ಬೇಯಿಸಿಕೊಳ್ಳಬೇಕು.
- ಬಳಿಕ ನೀರು ಸೋರುವ ಪಾತ್ರೆ (ಸ್ಟ್ರೇನ್)ಯಲ್ಲಿ ನೂಡಲ್ಸ್ ಹಾಕಿ ಅದರ ಮೇಲೆ ಒಂದು ಚಮಚ ಎಣ್ಣೆ ಹಾಕಿ, ಮಿಕ್ಸ್ ಮಾಡಿ ಆ ನೂಡಲ್ಸ್ ಅನ್ನು ಒಂದು ಪ್ಲೇಟ್ನಲ್ಲಿ ಹಾಕಿಕೊಳ್ಳಬೇಕು.
- ಮತ್ತೆ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ. ಕಾದ ಪ್ಯಾನ್ಗೆ ಒಂದೂವರೆ ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಉರಿದುಕೊಳ್ಳಬೇಕು. ಬಳಿಕ ಅದನ್ನು ಒಂದು ಸಣ್ಣ ಕಪ್ನಲ್ಲಿ ಹಾಕಿಕೊಂಡು ಇಟ್ಟುಕೊಳ್ಳಬೇಕು.
![Homemade restaurant style testy chicken noodles]()
ಚಿಕನ್ ನೂಡೆಲ್ಸ್
- ಅದೇ ಪ್ಯಾನ್ಗೆ 3 ಚಮಚದಷ್ಟು ಎಣ್ಣೆ ಹಾಕಿ, ನೆನೆಸಿಟ್ಟ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಫ್ರೈ ಆದ ಚಿಕನ್ಗೆ 2 ಚಮಚದಷ್ಟು ಬೆಳ್ಳುಳ್ಳಿ, 2 ಚಮಚ ಶುಂಠಿ, ಸ್ಲೈಸ್ ಮಾಡಿರುವ 2 ಹಸಿಮೆಣಸಿನಕಾಯಿ ಹಾಕಿ ಎರಡು ನಿಮಿಷ ಉರಿಯಬೇಕು. ಇದಕ್ಕೆ ಸ್ಲೈಸ್ ಮಾಡಿಕೊಂಡಿದ್ದ 1 ಈರುಳ್ಳಿ, 1 ದಪ್ಪ ಮೆಣಸಿನಕಾಯಿ, 1 ಕ್ಯಾರೆಟ್, ಅರ್ಧ ಕಪ್ ಎಲೆಕೋಸು ಹಾಕಿ ಚಿಕನ್ ಜೊತೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ತರಕಾರಿ ಚಿಕನ್ ಎಲ್ಲವೂ ಬೆಂದ ಬಳಿಕ ಪ್ಲೇಟ್ನಲ್ಲಿಟ್ಟುಕೊಂಡಿದ್ದ ನೂಡಲ್ಸ್ ಅನ್ನು ಅದಕ್ಕೆ ಹಾಕಿ, 1 ಚಮಚ ಗ್ರೀನ್ ಚಿಲ್ಲಿ ಸಾಸ್, 2 ಚಮಚ ರೆಡ್ ಚಿಲ್ಲಿ ಸಾಸ್, 2 ಚಮಚ ವಿನಿಗರ್, 2 ಚಮಚ ಸೋಯಾ ಸಾಸ್, 3 ಚಮಚ ಟೋಮೆಟೋ ಸಾಸ್, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ 2 ಚಮಚದಷ್ಟು ಶೇಸ್ವಾನ್ ಸಾಸ್ ಹಾಕಿ, 3 ಚಮಚದಷ್ಟು ಕೊತ್ತಂಬರಿ ಸೊಪ್ಪು, ಉರಿದಿಟ್ಟುಕೊಂಡಿದ್ದ ಮೊಟ್ಟೆ, ಸ್ಪ್ರಿಂಗ್ ಆನಿಯನ್ ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಒಂದು ಪ್ಲೇಟ್ಗೆ ಚಿಕನ್ ನೂಡಲ್ಸ್ ಹಾಕಿ ಅದರ ಮೇಲೆ ಸ್ಪ್ರಿಂಗ್ ಆನಿಯನ್ ಮೂಲಕ ಅಲಂಕರಿಸಿ, ಟೊಮೆಟೋ ಸಾಸ್ ಜೊತೆಗೆ ನೀಡಿದರೆ ಚಿಕನ್ ನೂಡಲ್ಸ್ ಸವಿಯಲು ಸಿದ್ಧ.