Chicken Dum Biryani: ಧಮ್​ ಇದ್ಯಾ? ಹಾಗಿದ್ರೆ ಮಧ್ಯಾಹ್ನ ಧಮ್ ಬಿರಿಯಾನಿ ಮಾಡಿ ಸೇವಿಸಿ

ವಾರದ ರಜಾ ದಿನವಾದ ಆದಿತ್ಯವಾರದಂದು ಚಿಕನ್​ ಬಳಸಿ ಧಮ್​ ಬಿರಿಯಾನಿ ತಯಾರಿಸಿ, ಮನೆಯಲ್ಲೇ ಭರ್ಜರಿ ಭೋಜನ ಮಾಡಿ. ಅಂದಹಾಗೆಯೇ ಈ ಧಮ್​ ಬಿರಿಯಾನಿ ತಯಾರಿಸುವುದು ಹೇಗೆ ಅನ್ನುವ ಗೊಂದಲವೇ? ಹಾಗಿದ್ರೆ ಚಿಂತೆ ಬೇಡ. ಸುಲಭವಾಗಿ ಮತ್ತು ವೇಗವಾಗಿ ಚಿಕನ್​ ಧಮ್​ ಬಿರಿಯಾನಿ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಬಿರಿಯಾನಿ

ಬಿರಿಯಾನಿ

  • Share this:
    ಸಿನಿಮಾಗಳಲ್ಲಿ ಕಳನಾಯಕ ಹೀರೋ ಬಳಿ ನಿನಗೆ ಧಮ್​ ಇದ್ಯಾ ಎಂದು ಹೇಳುವ ಡೈಲಾಗ್​ ಕೇಳಿರಬಹುದು. ಆದರೆ ಇದೇ ಧಮ್​ ಅನ್ನು ಬಿರಿಯಾನಿಗೂ (Biryani) ಇಟ್ಟಿದ್ದಾರೆ ನೋಡಿ. ಹೌದು ನಾವಿಂದು ಚಿಕನ್​ ಧಮ್​ ಬಿರಿಯಾನಿ (Chicken Dum biryani) ಬಗ್ಗೆ ಮಾತನಾಡುತ್ತಿದ್ದೇವೆ. ಅಂದಹಾಗೆಯೇ ಚಿಕನ್​ ಬಿರಿಯಾನಿ ಸವಿದಿದ್ದೀರಾ? ಬಿರಿಯಾನಿಯಂತೂ ವಿಶ್ವದಾದ್ಯಂತ ಫೇಮಸ್ (Famous)​. ಆದರೆ ಚಿಕನನ್​ ಬಳಸಿ ಧಮ್​ ಬಿರಿಯಾನಿ ತಯಾರಿಸುತ್ತಾರೆ. ಈ ಧಮ್​ ಬಿರಿಯಾನಿ ಸೇವಿಸಿದ್ದೀರಾ? ಹಾಗಿದ್ರೆ ಮಾಮೂಲಿ ಬಿರಿಯಾನಿಗೂ ಧಮ್​ ಬಿರಿಯಾನಿಗೂ ವ್ಯತ್ಯಾಸವೇನು? ಇದನ್ನು ಮಾಡುವ ವಿಧಾನ ಹೇಗೆ? ಎಂಬ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

    ವಾರದ ರಜಾ ದಿನವಾದ ಆದಿತ್ಯವಾರದಂದು ಚಿಕನ್​ ಬಳಸಿ ಧಮ್​ ಬಿರಿಯಾನಿ ತಯಾರಿಸಿ, ಮನೆಯಲ್ಲೇ ಭರ್ಜರಿ ಭೋಜನ ಮಾಡಿ. ಅಂದಹಾಗೆಯೇ ಈ ಧಮ್​ ಬಿರಿಯಾನಿ ತಯಾರಿಸುವುದು ಹೇಗೆ ಅನ್ನುವ ಗೊಂದಲವೇ? ಹಾಗಿದ್ರೆ ಚಿಂತೆ ಬೇಡ. ಸುಲಭವಾಗಿ ಮತ್ತು ವೇಗವಾಗಿ ಚಿಕನ್​ ಧಮ್​ ಬಿರಿಯಾನಿ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ. ಜೊತೆಗೆ ವಿಡಿಯೋ ಕೂಡ ಇದೆ. ಇದನ್ನು ವೀಕ್ಷಿಸುವ ಮೂಲಕ ಧಮ್​ ಬಿರಿಯಾನಿ ತಯಾರಿಸಬಹುದಾಗಿದೆ.

    ಚಿಕನ್ ಧಮ್ ಬಿರಿಯಾನಿ


    ಬೇಕಾಗುವ ಸಾಮಗ್ರಿಗಳು:
    ಎಣ್ಣೆ,4 ದೊಡ್ಡ ಗಾತ್ರದ ಈರುಳ್ಳಿ,1 ಕೆಜಿ ಚಿಕನ್, ಮೆಣಸಿನ ಪುಡಿ,ಕೊತ್ತಂಬರಿ ಪುಡಿ,ಜೀರಿಗೆ ಪುಡಿ,ಗರಂ ಮಸಾಲಾ, ಅರಶಿಣ ಪುಡಿ,ಚಕ್ಕೆ ,ಲವಂಗ,ಏಲಕ್ಕಿ,ಪುಲಾವ್ ಎಲೆ,ಕೊತಂಬರಿ ಸೊಪ್ಪು, ಪುದೀನ ಸೊಪ್ಪು ,6 ಹಸಿ ಮೆಣಸಿನಕಾಯಿ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್,ಲಿಂಬೆ ರಸ,ಕಲ್ಲು ಉಪ್ಪು,ಬಾಸುಮತಿ ಅಕ್ಕಿ, ತುಪ್ಪ,ಬೇಯಿಸಿದ ಮೊಟ್ಟೆ.


    ಚಿಕನ್​ ಧಮ್​ ಬಿರಿಯಾನಿ ಮಾಡುವ ವಿಧಾನ:

    ಒಂದು ಬಾಣಲೆಗೆ ಎಣ್ಣೆ ಹಾಕಿ,4 ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ತಣ್ಣಗಾಗಲು ಇಡಿ. ಒಂದು ಪಾತ್ರೆಗೆ 1 ಕೆಜಿ ಚಿಕನ್, 1.5 ಚಮಚ ಮೆಣಸಿನ ಪುಡಿ, 1.5 ಚಮಚ ದನಿಯ ಪುಡಿ, 1/2 ಚಮಚ ಜೀರಿಗೆ ಪುಡಿ, 1.5 ಚಮಚ ಗರಂ ಮಸಾಲ, 2 ಚಮಚ ಅರಿಶಿಣ ಪುಡಿ, ಚಕ್ಕೆ , ಲವಂಗ, ಪುಲಾವ್ ಎಲೆ, ಏಲಕ್ಕಿ, ಕೊತಂಬರಿ ಸೊಪ್ಪು, ಪುದೀನ ಸೊಪ್ಪು, ಹಸಿ ಮೆಣಿನಕಾಯಿ, 1 ಕಪ್ ಮೊಸರು, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಲಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, 1/4 ಚಮಚ ಎಣ್ಣೆ, ಹುರಿದ ಈರುಳ್ಳಿ, ಹಾಕಿ 30 ನಿಮಿಷಗಳ ಕಾಲ ನೆನೆಯಲು ಬಿಡಿ.

    ಇದನ್ನೂ ಓದಿ:Mutton Sukka Recipe: ಮಟ ಮಟ ಮಧ್ಯಾಹ್ನ ಮಟನ್ ಸುಕ್ಕ ಸವಿಯಿರಿ! ಇದು ಬಕ್ರೀದ್ ಸ್ಪೆಷಲ್

    ಒಂದು ಪಾತ್ರೆಗೆ ಗೆ ನೀರು ಹಾಕಿ, ನೀರು ಕುದಿದ ನಂತರ ಚಕ್ಕೆ,ಲವಂಗ,ಪಲಾವ್ ಎಲೆ, 1 ಚಮಚ ಎಣ್ಣೆ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಚೆನ್ನಾಗಿ ತೊಳೆದು ಇಟ್ಟುಕೊಂಡ ಬಾಸುಮತಿ ಅಕ್ಕಿ ಹಾಕಿ,90% ಅಕ್ಕಿ ಬೆಂದ ನಂತರ ಒಂದು ಪಾತ್ರೆಗೆ ಅನ್ನವನ್ನು ತೆಗೆದು, ತಣ್ಣೀರು ಹಾಕಿ ಸೋಸಿಕೊಳ್ಳಿ. 30 ನಿಮಿಷಗಳ ನಂತರ, ನೆನೆಯಲು ಇಟ್ಟಿದ್ದ ಚಿಕನ್ ಅನ್ನು ಬೇಯಲು ಇಡಿ.

    ಇದನ್ನೂ ಓದಿ: Monsoon Snacks: ಮಳೆಗಾಲದ ಹಾಟ್ ಫೆವರಿಟ್‍ಗಳ ತಿನಿಸುಗಳ ಪಟ್ಟಿಯಲ್ಲಿ ಏನೇನಿದೆ ನೋಡಿ

    ಒಂದು ಪಾತ್ರೆಗೆ,ತುಪ್ಪ ಹಾಕಿ, ಬೇಯಿಸಿದ ಚಿಕನ್ ಹಾಕಿ , ನಂತರ ಬೇಯಿಸಿದ ಅನ್ನ, ಹಾಕಿ ಪದರ ಮಾಡಿ ನಂತರ ಹುರಿದ ಈರುಳ್ಳಿ, ಹುರಿದ ಗೋಡಂಬಿ ದ್ರಾಕ್ಷಿ ಹಾಕಿ ,ಬೇಯಿಸಿದ ಮೊಟ್ಟೆ, ಕೊತ್ತಂಬರಿಸೊಪ್ಪು ಹಾಕಿ ಪದರ ಮಾಡಿ. ಮತ್ತೆ ಪುನಃ ಅನ್ನ ಹಾಕಿ, ಮೇಲೆ ತಿಳಿಸಿದಂತೆ ಪದರ ಮಾಡಿ. ನಂತರ ಪಾತ್ರೆಗೆ ಮುಚ್ಚಳ ಮುಚ್ಚಿ, ಅಲ್ಯೂಮಿನಿಯಂ ಶೀಟ್ ಇಂದ ಕವರ್ ಮಾಡಿ. 15 ನಿಮಿಷಗಳ ಕಾಲ ಕಡಿಮೆ ಹುರಿಯಲ್ಲಿ ಬೇಯಿಸಿ.
    Published by:Harshith AS
    First published: