Weight Loss: ಸೊಂಟದ ಸುತ್ತಲಿನ ಕೊಬ್ಬು ಕರಗಿಸಲು ಪ್ರತಿನಿತ್ಯ ನೀವು ಹೀಗೆ ಮಾಡಿದ್ರೆ ಸಾಕು
Garlic and Red Wine : ಬೆಳ್ಳುಳ್ಳಿ ಮತ್ತು ಕೆಂಪು ಬಣ್ಣದ ವೈನ್ ಮಿಶ್ರಿತ ಪಾನೀಯ - ಸೊಂಟದ ಕೊಬ್ಬಿಗೆ ಒಂದು ಅತ್ಯುತ್ತಮ ಪರಿಹಾರ.ಇದನ್ನ ಮನೆಯಲ್ಲಿಯೇ ತಯಾರು ಮಾಡಿಕೊಂಡು ಸೊಂಟದ ಸುತ್ತಲಿನ ಕೊಬ್ಬು ಇಳಿಸಿಕೊಳ್ಳಬಹುದು
ಸ್ಥೂಲಕಾಯ(Obesity)ಹೊಂದಿರುವವರಲ್ಲಿ ಬಹುತೇಕ ಎಲ್ಲರೂ ಕಳೆದುಕೊಳ್ಳ ಬಯಸುವ ಕೊಬ್ಬು(Fat) ಎಂದರೆ ಸೊಂಟದ ಕೊಬ್ಬು(Belly Fat). ತೂಕ ಇಳಿಕೆ ಹೇಳಿದಷ್ಟು ಸುಲಭವಲ್ಲ ಎಂದು ಈ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ಸ್ಪಷ್ಟವಾಗುತ್ತದೆ. ಅದರಲ್ಲೂ, ಸೊಂಟದ ಕೊಬ್ಬು ಎಷ್ಟು ವ್ಯಾಯಾಮ(Exercise) ಮಾಡಿದರೂ ಬಗ್ಗದೇ ಇರುವುದು ಚಕಿತರನ್ನಾಗಿಸುತ್ತದೆ..ಅಲ್ಲದೆ ತೂಕ(Weight) ಇಳಿಕೆಯಲ್ಲಿ ನಮ್ಮ ಕೆಲವು ಅಭ್ಯಾಸಗಳೂ(Habits) ತೂಕ ಇಳಿಕೆಯ ಪ್ರಯತ್ನಗಳಿಗೆ ಹಿನ್ನಡೆ ನೀಡುತ್ತವೆ. ಅಲ್ಲದೆ ಬೊಜ್ಜುಮೈ ಅಧಿಕ ರಕ್ತದೊತ್ತಡಕ್ಕೆ, ಟೈಪ್ 2 ಮಧುಮೇಹಕ್ಕೆ, ಹೃದ್ರೋಗಗಳಿಗೆ, ಸಂಧಿವಾತಕ್ಕೆ, ಅತ್ಯಧಿಕ ಕೊಲೆಸ್ಟೆರಾಲ್ ಹೀಗೆ ಜೀವಕ್ಕೇ ಆಪತ್ತು ತರಬಹುದಾದಂತಹ ಹತ್ತು ಹಲವು ಮಾರಕ ರೋಗಗಳಿಗೆ ದಾರಿಮಾಡಿಕೊಡಬಲ್ಲದು. ಜೊತೆಗೆ ತೂಕ ಇಳಿಯಬೇಕು ಅಂದರೆ ನಮಗೆ ಅವಶ್ಯ ಇರುವಷ್ಟು ಮಾತ್ರ ಪೋಷಕಾಂಶಗಳು ಇರುವಂತಹ ಆಹಾರ ಸರ್ವನೆ ಮಾಡಬೇಕು. ಅದರ ಜೊತೆಗೆ 30 ರಿನ 45 ನಿಮಿಷಗಳ ಕಾಲ ವ್ಯಾಯಾಮದ ಅವಶ್ಯಕತೆ ಕೂಡಾ ಇರುತ್ತದೆ. ಜೊತೆಗೆ ಹೆಚ್ಚುವರಿ ದೇಹತೂಕಾನಾ ಆದಷ್ಟು ಬೇಗನೇ ನಿಮ್ಮ ದೇಹದಿಂದ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳ ಮೂಲಕ ಇಳಿಸಿಕೊಳ್ಳೋದು ತುಂಬಾನೇ ಒಳ್ಳೇದು.
*ಬೆಳ್ಳುಳ್ಳಿ ಮತ್ತು ಕೆಂಪು ಬಣ್ಣದ ವೈನ್ : ಬೆಳ್ಳುಳ್ಳಿ ಮತ್ತು ಕೆಂಪು ಬಣ್ಣದ ವೈನ್ ಮಿಶ್ರಿತ ಪಾನೀಯ - ಸೊಂಟದ ಕೊಬ್ಬಿಗೆ ಒಂದು ಅತ್ಯುತ್ತಮ ಪರಿಹಾರ.ಇದನ್ನ ಮನೆಯಲ್ಲಿಯೇ ತಯಾರು ಮಾಡಿಕೊಂಡು ಸೊಂಟದ ಸುತ್ತಲಿನ ಕೊಬ್ಬು ಇಳಿಸಿಕೊಳ್ಳಬಹುದು..
ಬೆಳ್ಳುಳ್ಳಿಯಲ್ಲಿ ಇರುವಂತಹ ವಿಟಮಿನ್ ಬಿ6 ಮತ್ತು ಸಿ, ನಾರಿನಾಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ ತೂಕ ಇಳಿಕೆಗೆ ತುಂಬಾ ಪರಿಣಾಮಕಾರಿ ಆಗಿರುವುದು. ಮಹಿಳೆಯರಲ್ಲಿ ತೂಕ ಇಳಿಕೆಗೆ ಇದು ತುಂಬಾ ಪ್ರಮುಖ ಪಾತ್ರ ವಹಿಸಿದೆ .
ಬೆಳ್ಳುಳ್ಳಿಯು ಪ್ರತಿರೋಧಕ ಶಕ್ತಿ ವೃದ್ಧಿಸುವುದು, ದೇಹವನ್ನು ನಿರ್ವಿಷಗೊಳಿಸುವುದು, ಶೀತ ಹಾಗೂ ಜ್ವರದ ವಿರುದ್ಧ ಹೋರಾಡಲು ನೆರವಾಗುವುದು. ನಿಮ್ಮ ಆಹಾರ ಕ್ರಮದಲ್ಲಿ ಬೆಳ್ಳುಳ್ಳಿ ಸೇರಿಸಿಕೊಂಡರೆ ಆಗ ದೇಹದ ಶಕ್ತಿಯ ಮಟ್ಟವು ಹೆಚ್ಚಾಗುವುದು ಮತ್ತು ಚಯಾಪಚಯ ಕ್ರಿಯೆಯು ವೃದ್ಧಿಸುವುದು.
ಇಲಿಗಳ ಮೇಲೆ ಬೆಳ್ಳುಳ್ಳಿ ಆಹಾರ ಕ್ರಮವನ್ನು ಪ್ರಯೋಗ ಮಾಡಿದಾಗ, ಎಂಟು ವಾರಗಳಲ್ಲಿ ಅವುಗಳ ತೂಕವು ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಕಂಡುಬಂದಿದೆ.
ಸೊಂಟದ ಕೊಬ್ಬು ಕರಗಲು ವೈನ್ ಹೇಗೆ ಸಹಕಾರಿ
ದಿನದಲ್ಲಿ ಸಣ್ಣ ಪ್ರಮಾಣದಲ್ಲಿ ಹಲವು ಬಾರಿ ವೈನ್ ಕುಡಿಯುವುದರಿಂದ ಸೊಂಟದ ಭಾಗದ ಕೊಬ್ಬು ಕರಗುತ್ತದೆ ಎಂದು ಹೇಳುತ್ತಾರೆ.ಏಕೆಂದರೆ ಇದರಲ್ಲಿ ಕಂಡುಬರುವಂತಹ ಕೆಲವು ನೈಸರ್ಗಿಕ ರಾಸಾಯನಿಕ ಅಂಶಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಮತ್ತು ಬೊಜ್ಜಿನ ಪ್ರಮಾಣವನ್ನು ಕರಗಿಸುವ ಶಕ್ತಿ ಪಡೆದುಕೊಂಡಿವೆ.ಇವುಗಳ ಕಾರಣದಿಂದ ಹೃದಯದ ಆರೋಗ್ಯ ಅತ್ಯುತ್ತಮಗೊಳ್ಳುತ್ತದೆ ಎಂದು ಹೇಳಬಹುದು. ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬಿನ ಅಂಶವನ್ನು ಕರಗಿಸಲು ಕೂಡ ಇದು ನೆರವಾಗುತ್ತದೆ.
*ಸುಮಾರು 10ರಿಂದ 12 ಬೆಳ್ಳುಳ್ಳಿ ಎಸಳುಗಳು
*ಅರ್ಧ ಲೀಟರ್ ವೈನ್
ತಯಾರಿಸುವ ವಿಧಾನ
ಮೊದಲಿಗೆ ಒಂದು ಜಾರ್ ತೆಗೆದುಕೊಂಡು ಅದರಲ್ಲಿ ಕೆಂಪು ಬಣ್ಣದ ವೈನ್ ಸೇರಿಸಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಅದನ್ನು ಎರಡು ವಾರಗಳ ತನಕ ಸೂರ್ಯನ ಬಿಸಿಲಿನಲ್ಲಿ ಇರಿಸಬೇಕು.ನಂತರ ಇದನ್ನು ಸೋಸಿಕೊಂಡು, ಒಂದು ಗಾಜಿನ ಬಾಟಲ್ ನಲ್ಲಿ ಹಾಕಿ ಶೇಖರಣೆ ಮಾಡಿ ಇರಿಸಿಕೊಳ್ಳಬೇಕು.ಅಲ್ಲದೆ ಪ್ರತಿನಿತ್ಯ 3 ಸ್ಪೋನ್ ನಷ್ಟು ಬೆಳ್ಳುಳ್ಳಿ ಮತ್ತು ಕೆಂಪು ಬಣ್ಣದ ವೈನ್ ನಿಂದ ಮಾಡಿದ ಮಿಶ್ರಣ ಸೇವನೆ ಮಾಡುತ್ತ ಬಂದರೆ ದೇಹದ ತೂಕ ಇಳಿಯುವುದು.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ