Health Tips: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಿ

- ಬೆಚ್ಚಗಿನ ನೀರಿನಲ್ಲಿ ನಿಂಬೆ ಮತ್ತು ಹರಳೆಣ್ಣೆ ಬೆರೆಸಿ ಕುಡಿಯುವುದರಿಂದ ಮಲಬದ್ಧತೆಗೆ ಪರಿಹಾರ ಕಾಣಬಹುದು. - ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ಬೆರೆಸಿ ಕುಡಿಯಿರಿ. - ರಾತ್ರಿ ಮಲಗುವ ಮುನ್ನ ಹರಳೆಣ್ಣೆಯನ್ನು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಧುನಿಕ ಜೀವನ ಶೈಲಿಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಸಾಮಾನ್ಯವಾಗಿ ಕಂಡುಬರುವ ಈ ಸಮಸ್ಯೆ ಅನೇಕ ರೋಗಗಳಿಗೂ ಕಾರಣವಾಗಬಹುದು. ಈ ಸಮಸ್ಯೆ ಕಾಣಿಸಿಕೊಂಡರೆ ಅನೇಕ ಬಾರಿ ನಾವು ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಸಹ ತೆಗೆದುಕೊಳ್ಳುತ್ತೇವೆ. ಆದರೆ ಅವುಗಳ ಪರಿಣಾಮಗಳು ಹಲವು ದಿನಗಳವರೆಗೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಲ ಮನೆಮದ್ದುಗಳ ಸಹಾಯದಿಂದ ಮಲಬದ್ಧತೆ ಸಮಸ್ಯೆಯನ್ನು ತೊಡೆದುಹಾಕಬಹುದು.

    ಮಲಬದ್ಧತೆಯನ್ನು ನಿವಾರಿಸಲು ಕೆಲ ಮನೆಮದ್ದುಗಳು ಹೀಗಿವೆ:
    - ಬೆಚ್ಚಗಿನ ನೀರಿನಲ್ಲಿ ನಿಂಬೆ ಮತ್ತು ಹರಳೆಣ್ಣೆ ಬೆರೆಸಿ ಕುಡಿಯುವುದರಿಂದ ಮಲಬದ್ಧತೆಗೆ ಪರಿಹಾರ ಕಾಣಬಹುದು.
    - ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ಬೆರೆಸಿ ಕುಡಿಯಿರಿ.
    - ರಾತ್ರಿ ಮಲಗುವ ಮುನ್ನ ಹರಳೆಣ್ಣೆಯನ್ನು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯಿರಿ.
    - ರಾತ್ರಿ ಮಲಗುವ ಮೊದಲು 1 ಗ್ಲಾಸ್ ಹಾಲಿಗೆ 1 ಟೀ ಚಮಚ ಜೇನುತುಪ್ಪವನ್ನು ಸೇರಿಸಿ ನಿಧಾನವಾಗಿ ಕುಡಿಯಿರಿ.
    - ಬೆಳಿಗ್ಗೆ ಜಾವ ಬೆಚ್ಚಗಿನ ನೀರಿನಲ್ಲಿ ನಿಂಬೆ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಕುಡಿಯಿರಿ.
    - ಬೆಳಗಿನ ಉಪಾಹಾರದ ಬಳಿಕ ಪಪ್ಪಾಯಿ ಅಥವಾ ಸೀಬೆಹಣ್ಣನ್ನು ತಿನ್ನಿರಿ.
    - ರಾತ್ರಿ ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ.
    - ಅಂಜೂರವನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಕುಡಿಯುವುದು ಕೂಡ ಉತ್ತಮ.
    - ಪ್ರತಿದಿನ 6 ರಿಂದ 7 ಲೋಟ ನೀರು ಕುಡಿಯಿರಿ.



    ಮಲಬದ್ಧತೆಗೆ ಕಾರಣಗಳೇನು?
    - ದಿನವಿಡೀ ಕಡಿಮೆ ನೀರನ್ನು ಕುಡಿಯುವುದು
    - ಹೆಚ್ಚು ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸುವುದು.
    - ನಿರಂತರವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು.
    - ಪೆನ್ ಕಿಲ್ಲರ್ ಔಷಧಗಳ ಹೆಚ್ಚು ಬಳಕೆ.
    - ಆಹಾರದಲ್ಲಿ ಕಡಿಮೆ ಫೈಬರ್ ಅಂಶ ಇರುವುದು. ಅಥವಾ ಕಡಿಮೆ ಫೈಬರ್ ಅಂಶವಿರುವ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವುದು.

    ಈ ಎಲ್ಲಾ ಕಾರಣಗಳಿಂದ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತಿರುತ್ತದೆ.
    Published by:zahir
    First published: