ಮುಖದ ಮೇಲೆ ಮೊಡವೆಗಳು(Pimple) ಕಪ್ಪು ಕಲೆಗಳು(Dark Circle) ಕಪ್ಪು ಗೆರೆಗಳು ಕಾಣಿಸಿಕೊಂಡರೆ ಮುಖದ ಅಂದವನ್ನು ಮತ್ತು ಮೋಹಕವಾಗಿ ಕಾಣುವುದನ್ನು ಹಾಳು ಮಾಡುತ್ತದೆ. ಈ ಕಣ್ಣಿನ ಸುತ್ತಲ ಕಪ್ಪು ಕಲೆ ಹೆಚ್ಚಾಗಿ ವಯಸ್ಕರಲ್ಲಿ(Aged) ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ದೆ(Sleep) ಮಾಡದೇ, ಕಣ್ಣಿಗೆ(Eye) ಸರಿಯಾಗಿ ಆರೈಕೆ ಮಾಡದೇ ಇರುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆಯಾಗುತ್ತದೆ. ಅದರಲ್ಲೂ ಕಂಪ್ಯೂಟರ್ ಮುಂದೆ ಹೆಚ್ಚಾಗಿ ಕುಳಿತು ಕೆಲಸ ಮಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುತ್ತದೆ.ಮುಖದ ಸೌಂದರ್ಯವನ್ನೂ ಹೆಚ್ಚಿಸಲು ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇವು ಬಹಳ ದಿನಗಳವರೆಗೆ ಮುಖದ ಸೌಂದರ್ಯವನ್ನು ಕಾಯ್ದು ಕೊಳ್ಳುವುದಿಲ್ಲ. ಹೀಗಾಗಿ ಇದನ್ನು ತಡೆಯಲು ಮನೆಯಲ್ಲಿಯೇ ಮದ್ದು ಮಾಡಬಹುದು.
ಆಯಿಲ್ ಫುಡ್ ಜಂಕ್ ಫುಡ್ ಸೇವನೆ ಮಾಡುವುದರಿಂದ ನಿಮಗೆ ಡಾರ್ಕ್ ಸರ್ಕಲ್ ಫೈನ್ ಲೈನ್ಸ್, ರಿಂಕಲ ನಿಮ್ಮ ಮುಖದ ಮೇಲೆ ಬೇಗನೆ ಬರುತ್ತದೆ. ಇನ್ನೂ ಕೆಲವರಗೆ ಸನ್ ಟ್ಯಾನ್ ನಿಂದಾಗಿ ಡಾರ್ಕ್ ಸರ್ಕಲ್ ಬರುತ್ತದೆ. ಏಕೆಂದರೆ ಸೂರ್ಯನ ಕೆಳಗೆ ಹೋದಾಗ ಕಣ್ಣಿನ ಭಾಗ ತುಂಬಾ ಸೂಕ್ಷ್ಮವಾಗಿ ಇರುವುದರಿಂದ ಸನ್ ಟ್ಯಾನ್ ನಿಂದ ಡಾರ್ಕ್ ಸರ್ಕಲ್ ಬೇಗನೆ ಮೂಡುತ್ತದೆ. ಹಾಗೆಯೇ ನೀವು ಮೊಬೈಲ್ ಲ್ಯಾಪ್ಟಾಪ್ ಬಳಕೆ ಮಾಡುವುದರಿಂದ ಕೂಡ ನಿಮಗೆ ಡಾರ್ಕ್ ಸರ್ಕಲ್ ಬರುತ್ತದೆ. ಹೀಗಾಗಿ ಮನೆಯಲ್ಲಿಯೇ ಕಣ್ಣಿನ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸಲು ಹಲವು ವಿಧಾನಗಳು ಇಲ್ಲಿವೆ.
1) ಕೊಬ್ಬರಿ ಎಣ್ಣೆ ಮತ್ತು ಅರಿಶಿನ ಪುಡಿ: ಅರ್ಧ ಚಮಚ ಕೊಬ್ಬರಿ ಎಣ್ಣೆ ಜೊತೆಗೆ ಚಿಟಕಿ ಅರಿಶಿಣ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಂತರ ಇದನ್ನು ಕಣ್ಣಿನ ಸುತ್ತ ಆಗಿರುವ ಕಪ್ಪು ಅಥವಾ ಸುಕ್ಕ ಕಲೆಗಳ ಮೇಲೆ ನಿಧಾನವಾಗಿ ಅನ್ವಯಿಸಿ. 15ನಿಮಿಷಗಳ ಕಾಲ ಇದನ್ನು ತ್ವಚೆಯೆ ಮೇಲೆ ಬಿಡಿ.ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.ಬೇಗನೆ ಫಲಿತಾಂಶವನ್ನು ಕಾಣಲು ವಾರದಲ್ಲಿ ಮೂರು ಬಾರಿ ಇದನ್ನು ಮಾಡಿ
ಇದನ್ನೂ ಓದಿ: ಕೆಂಪಾಗಿ ಇರೋ ತುಟಿ ನಿಮಗೆ ಬೇಕಾ..? ಹಾಗಿದ್ರೆ ಮನೆಯಲ್ಲಿಯೇ ಈ ಟಿಪ್ಸ್ ಟ್ರೈ ಮಾಡಿ
2) ಚೆನ್ನಾಗಿ ನೀರು ಕುಡಿಯಿರಿ: ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.. ನಿರ್ಜಲೀಕರಣ ಕಡಿಮೆಯಾಗದಂತೆ ಎಚ್ಚರ ವಹಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ. ಹಲೋ ಪ್ರತಿ ನಿತ್ಯ ನಿಯಮಿತವಾಗಿ ನೀರು ಕುಡಿಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.ಹೀಗಾಗಿ ಪ್ರತಿನಿತ್ಯ ಒಂದು ಲೀಟರ್ ಗೂ ಅಧಿಕ ನೀರು ಕುಡಿಯುವುದು ಸೂಕ್ತ.
3) ಹರಳೆಣ್ಣೆ ಮತ್ತು ತೆಂಗಿನ ಎಣ್ಣೆ ಮಿಶ್ರಣ ಹಚ್ಚಿ: ಈ ಎರಡು ಎಣ್ಣೆಯನ್ನು ಮಿಕ್ಸ್ ಮಾಡಿ, ಮಲಗುವ ಮುನ್ನ ಕಣ್ಣಿನ ಕೆಳಗಡೆ ಮಸಾಜ್ ಮಾಡಿ ಮಲಗಿ, ಬೆಳಗ್ಗೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು ಹಾಗೂ ಕಪ್ಪು ಕಲೆ ಇಲ್ಲವಾಗುವುದು.
4) ಕಾಫಿ ಬೀಜ ಮತ್ತು ಕೊಬ್ಬರಿ ಎಣ್ಣೆ: ಅರ್ಧ ಚಮಚ ಕಾಫಿ ಬೀಜ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ನಿಧಾನವಾಗಿ ತ್ವಚೆಗೆ ಹಚ್ಚಿರಿ.15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಹಚ್ಜುವ ಮೊದಲು ತ್ವಚೆಯನ್ನು ಶುದ್ಧಗೊಳಿಸಿರಿ
5)ಸೌತೆಕಾಯಿ: ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗೆಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಸೌತೆಕಾಯಿ ಪೀಸ್ ಇಡುವ ಬದಲು ಅದರ ರಸವನ್ನು ಕಣ್ಣಿನ ಸುತ್ತ ಹಚ್ಚಿದರೂ ಸಾಕು ಕಪ್ಪು ಕಲೆ ಕಡಿಮೆಯಾಗುವುದು.
ಇದನ್ನೂ ಓದಿ: ಸೌಂದರ್ಯವಿರುವುದೇ ಮುಖದಲ್ಲಿ, ಹೀಗಾಗಿ ಮುಖ ತೊಳೆಯಲು ಈ ಟ್ರಿಕ್ಸ್ ಫಾಲೋ ಮಾಡಿ
6)ಹಾಲಿನ ಪುಡಿ ಮತ್ತು ಮೊಸರು: ಒಂದು ಚಮಚ ತಾಜಾ ಮೊಸರಿನ ಜೊತೆಗೆ ಅರ್ಧ ಚಮಚ ಹಾಲಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಿಈ ಪೇಸ್ಟ್ ಅನ್ನು ತ್ವಚೆಯ ಮೇಲೆ ನಿಧಾನವಾಗಿ ಅನ್ವಯಿಸಿ. ಕೆಲವು ನಿಮಿಷಗಳ ಕಾಲ ಇದನ್ನು ತ್ವಚೆಯ ಮೇಲೆ ಬಿಡಿ.ಒಂದು ಮೃದುವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹದ್ದಿ ಹಿಂಡಿ ತ್ವಚೆಯ ಮೇಲಿನ ಪೇಸ್ಟ್ ಅನ್ನು ಒರೆಸಿ. ಹೀಗೆ ಮಾಡುವುದರಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ