ತ್ವಚೆಯ ಸೌಂದರ್ಯವನ್ನು (Skin Care) ಕಾಪಾಡಿಕೊಳ್ಳಲು ನಿಯಮಿತವಾಗಿ ಕ್ಲೆನ್ಸಿಂಗ್, ಟೋನಿಂಗ್ (Toning) ಮತ್ತು ಮಾಯಿಶ್ಚರೈಸಿಂಗ್ ಅತ್ಯಗತ್ಯ. ಈ ತ್ವಚೆಯ ಆರೈಕೆಯ ಜೊತೆಗೆ, ಚರ್ಮದಿಂದ ಅನಗತ್ಯ ಕೂದಲನ್ನು (Hair) ತೆಗೆದುಹಾಕುವುದು ಸಹ ಅಗತ್ಯವಾಗಿದೆ. ಮಹಿಳೆಯರು ಮತ್ತು ಪುರುಷರು ದೇಹದ ಅನಗತ್ಯ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಅನ್ನು(Waxing) ಬಳಸುತ್ತಾರೆ. ವ್ಯಾಕ್ಸಿಂಗ್ ಚರ್ಮದಿಂದ ಅನಗತ್ಯ ಕೂದಲನ್ನು ತೆಗೆದುಹಾಕುತ್ತದೆ ಮತ್ತು ಚರ್ಮವು ಸ್ವಚ್ಛವಾಗಿ ಕಾಣುತ್ತದೆ. ಆದರೆ ವ್ಯಾಕ್ಸಿಂಗ್ ಮಾಡಿದ ನಂತರ, ಅನೇಕ ಜನರು ಅಲರ್ಜಿಯನ್ನು ಸಮಸ್ಯೆಗೆ ತುತ್ತಾಗುತ್ತಾರೆ ಮತ್ತು ತುರಿಕೆ ಮತ್ತು ದದ್ದುಗಳಂತಹ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಮದ್ದುಗಳಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೌದು, ಮನೆಯಲ್ಲಿರುವ ಸರಳ ವಸ್ತುಗಳನ್ನು ಬಳಸಿ ನೀವು ವ್ಯಾಕ್ಸಿಂಗ್ನಿಂದ ಉಂಟಾಗುವ ತುರಿಗೆ ಹಾಗೂ ಅಲರ್ಜಿಗಳಿಗೆ ಪರಿಹಾರ ಪಡೆಯಬಹುದು.
ವ್ಯಾಕ್ಸಿಂಗ್ ಮಾಡುವಾಗ ಈ ಸಲಹೆಗಳನ್ನು ಅನುಸರಿಸಿ:
1) ವ್ಯಾಕ್ಸಿಂಗ್ ಮಾಡುವ ಮೊದಲು ಚರ್ಮಕ್ಕೆ ಯಾವುದೇ ರೀತಿಯ ಮಾಯಿಶ್ಚರೈಸರ್ ಅನ್ನು ಹಚ್ಚಬೇಡಿ. ಬದಲಿಗೆ ಸ್ವಲ್ಪ ಪೌಡರ್ ಅನ್ನು ಮಾತ್ರ ಹಚ್ಚಿ. ಇದು ವ್ಯಾಕ್ಸಿಂಗ್ ಮಾಡುವಾಗ ಕೂದಲು ಬೇಗ ಬರಲು ಸಹಾಯ ಮಾಡುತ್ತದೆ. ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ಅಲ್ಲದೇ, ನೋವು ಸಹ ಕಡಿಮೆಯಾಗುತ್ತದೆ.
2) ಅತಿಯಾದ ಕೂದಲು ಬೆಳವಣಿಗೆಯಾಗಿದ್ದರೆ ಒಮ್ಮೆಲೇ ವ್ಯಾಕ್ಸಿಂಗ್ ಮಾಡಿ ಕೂದಲು ತೆಗೆಯುವ ತಪ್ಪನ್ನು ಮಾಡಬೇಡಿ. ಇದರಿಂದ ಚರ್ಮವೂ ಉದುರುವ ಸಾಧ್ಯತೆ ಇದೆ. ಹಾಗಾಗಿ ಸ್ವಲ್ಪ ಭಾಗವನ್ನು ಮೊದಲು ಮಾಡಿ, ನಂತರ ಮತ್ತೊಂದು ಭಾಗವನ್ನು ಮಾಡಿ. ಹೀಗೆ ನಿಧಾನವಾಗಿ ಮಾಡಿ.
3) ನೀವು ಮನೆಯಲ್ಲಿ ವ್ಯಾಕ್ಸಿಂಗ್ ಮಾಡುತ್ತಿದ್ದರೆ, ಕೂದಲು ಬೆಳೆಯುವ ದಿಕ್ಕಿನಲ್ಲಿ ವ್ಯಾಕ್ಸ್ ಅನ್ನು ಹಚ್ಚಿ. ಅದಕ್ಕಾಗಿ ವ್ಯಾಕ್ಸಿಂಗ್ ಚಾಕು ಬಳಸಬೇಕು. ಆಗ ಮಾತ್ರ ಕೂದಲು ಸರಿಯಾಗಿ ಬರುತ್ತದೆ.
ವ್ಯಾಕ್ಸಿಂಗ್ ನಂತರ ಅಲರ್ಜಿ ಉಂಟಾದರೆ, ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ:
ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಚರ್ಮ ಮತ್ತು ಕೂದಲಿಗೆ ವರದಾನವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತೆಂಗಿನ ಎಣ್ಣೆಯಲ್ಲಿ ಫೀನಾಲಿಕ್ ಆಮ್ಲಗಳು ಮತ್ತು ಪಾಲಿಫಿನಾಲ್ಗಳಂತಹ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ಗಳಿವೆ. ಹಾಗಾಗಿ ವ್ಯಾಕ್ಸಿಂಗ್ ಮಾಡಿದ ನಂತರ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ ಅಲರ್ಜಿ ದೂರವಾಗುತ್ತದೆ.
ಆಲಿವ್ ಎಣ್ಣೆ: ಆಲಿವ್ ಎಣ್ಣೆಯನ್ನು ಚರ್ಮಕ್ಕೆ ವ್ಯಾಕ್ಸಿಂಗ್ ನಂತರ ಚರ್ಮದ ದದ್ದುಗಳು ಅಥವಾ ಕೆಂಪು ಬಣ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಆಲಿವ್ ಎಣ್ಣೆಯಲ್ಲಿ ಎರಡರಿಂದ ಮೂರು ಹನಿ ಟೀ ಟ್ರೀ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ ಮತ್ತು ಕೆಲವು ಗಂಟೆಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ. ವ್ಯಾಕ್ಸಿಂಗ್ ಹೊರತುಪಡಿಸಿ ಬೇರೆ ಯಾವುದೇ ಕಾರಣದಿಂದ ಮೊಡವೆಗಳಿದ್ದರೆ ನೀವು ಆಲಿವ್ ಎಣ್ಣೆ ಮತ್ತು ಟೀ ಟ್ರೀ ಎಣ್ಣೆಯನ್ನು ಸಹ ಬಳಸಬಹುದು.
ಅಲೋವೆರಾ: ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮವು ಕೆಂಪಾಗಿದ್ದರೆ ಮತ್ತು ಕಿರಿಕಿರಿ ಅನುಭವ ಆಗುತ್ತಿದ್ದರೆ, ತಕ್ಷಣ ಅಲೋವೆರಾ ಜೆಲ್ ಅಥವಾ ಅಲೋವೆರಾದ ಪದಾರ್ಥಗಳನ್ನು ಚರ್ಮದ ಮೇಲೆ ಹಚ್ಚಿ. ಅಲರ್ಜಿ ಇರುವ ಚರ್ಮದ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚಿ, ಅದನ್ನು ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ಬಿಡಿ. ಇದು ದದ್ದು ಮತ್ತು ಉರಿಯೂತ ಎರಡನ್ನೂ ನಿವಾರಿಸುತ್ತದೆ. ಇತರ ಅಲರ್ಜಿಗಳಿಗೆ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ: ನಿಮ್ಮ ಮುದ್ದು ಸಾಕುಪ್ರಾಣಿಗಳನ್ನು ಚಳಿಗಾಲದಲ್ಲಿ ಈ ರೀತಿ ಕೇರ್ ಮಾಡಿ
ವ್ಯಾಕ್ಸಿಂಗ್ ಅಲರ್ಜಿಯನ್ನು ಹೋಗಲಾಡಿಸಲು ಮೇಲಿನ ಸಲಹೆಗಳನ್ನು ಯಾವುದೇ ಸಮಸ್ಯೆ ಇಲ್ಲದೇ ಅನುಸರಿಸಬಹುದು. ಮತ್ತೊಂದು ಮುಖ್ಯವಾದ ಅಂಶವೆಂದರೆ,ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ