ತಂಬಾಕು ಮತ್ತು ಗುಟ್ಕಾ ಸೇವನೆ ಚಟದಿಂದ ಮುಕ್ತರಾಗಲು ಇಲ್ಲಿವೆ ಮನೆಮದ್ದು

news18
Updated:June 29, 2018, 6:08 PM IST
ತಂಬಾಕು ಮತ್ತು ಗುಟ್ಕಾ ಸೇವನೆ ಚಟದಿಂದ ಮುಕ್ತರಾಗಲು ಇಲ್ಲಿವೆ ಮನೆಮದ್ದು
news18
Updated: June 29, 2018, 6:08 PM IST
-ನ್ಯೂಸ್ 18 ಕನ್ನಡ

ಮಾದಕ ವಸ್ತುಗಳಿಂದ ಸಾವು ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಕೂಡ ಇಂದಿನ ಪೀಳಿಗೆ ಗಾಂಜಾ, ಅಫೀಮು, ತಂಬಾಕು ಉತ್ಪನ್ನಗಳಿಗೆ ಮಾರು ಹೋಗುತ್ತಿದೆ. ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ತಂಬಾಕು ಪದಾರ್ಥಗಳಿಗೆ ಬಹುತೇಕರು ದಾಸರಾಗುತ್ತಿದ್ದಾರೆ. ತಂಬಾಕುವಿನ ಗುಟ್ಕಾಗಳಲ್ಲಿ ಕಟೇಜು ಮತ್ತು ಸುಪಾರಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಇದರಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ಬಾಯಿಯ ಮೂಲಕ ದೇಹದ ಇತರೆ ಭಾಗಗಳಿಗೆ ಬಾಧಿಸಿ ಮಾರಣಾಂತಿಕ ರೋಗಕ್ಕೀಡಾಗುವಂತೆ ಮಾಡುತ್ತದೆ.

ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ. ಬಾಯಿ ಕ್ಯಾನ್ಸರ್​ಗೆ ಮುಖ್ಯ ಕಾರಣ ತಂಬಾಕು ಮತ್ತು ಗುಟ್ಕಾಗಳ ಸೇವನೆ ಎಂದು ಈ ಹಿಂದೆಯೇ ವೈದ್ಯಲೋಕ ಸ್ಪಷ್ಟಪಡಿಸಿದೆ.

ಇದರರಿಂದ ಉಂಟಾಗುವ ಅಡ್ಡ ಪರಿಣಾಮಗಳು

* ನಿರಂತರ ಗುಟ್ಕಾ ಅಥವಾ ತಂಬಾಕು ಸೇವನೆಯಿಂದ ಹಲ್ಲುಗಳು ಸಡಿಲಗೊಂಡು ದುರ್ಬಲವಾಗುತ್ತದೆ. ಹಲ್ಲುಗಳ ಎಡೆಗಳಲ್ಲಿ ಬ್ಯಾಕ್ಟೀರಿಯಾ ಉಂಟಾಗಲು ತಂಬಾಕು ಸೇವನೆ ಮುಖ್ಯ ಕಾರಣ. ಇದರಿಂದ ಹಲ್ಲುಗಳ ಬಣ್ಣವು ಬದಲಾಗಿ, ದಂತಕ್ಷಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

* ದೇಹದ ಕಿಣ್ವಗಳ ಮೇಲೆ ತಂಬಾಕು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಗುಟ್ಕಾದಲ್ಲಿ ಹಲವಾರು ರೀತಿಯ ನಶೆಯ ಪದಾರ್ಥಗಳನ್ನು ಬಳಸುವುದರಿಂದ ಇದು ಕಿಣ್ವಗಳ ಮೇಲೆ ಕೆಟ್ಟ ಪರಿಣಾಮ ಬೀರಿ , ದೇಹದ ಹಾರ್ಮೋನುಗಳನ್ನು ಹದಗೆಡಿಸುತ್ತದೆ.

ತಂಬಾಕು/ಗುಟ್ಕಾ ಸೇವನೆ ಅಪಾಯಕಾರಿ ಎಂದು ಗೊತ್ತಿದ್ದರೂ ಈ ಚಟವನ್ನು ಬಿಡಲು ತಯಾರಿರುವುದಿಲ್ಲ. ಇದರ ಸೇವನೆಯಿಂದ ಸಾವು ಮೊದಲೇ ಆವರಿಸಿಕೊಳ್ಳುತ್ತದೆ ಎಂದು ಇತ್ತೀಚಿನ ಕೆಲ ವರದಿಗಳು ತಿಳಿಸಿದೆ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯ ಕಾರಣದಿಂದ ಮರಣ ಹೊಂದುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಚಟದಿಂದ ಮುಕ್ತರಾಗಲು ಕೆಲ ಉಪಾಯಗಳನ್ನು ಇಲ್ಲಿ ತಿಳಿಸಲಾಗಿದೆ.
Loading...

 ಓಮ ಬೀಜಗಳನ್ನು ನಿಂಬೆ ರಸ ಮತ್ತು ಕಪ್ಪು ಉಪ್ಪಿನಲ್ಲಿ ಮಿಶ್ರಣ ಮಾಡಿ ಎರಡು ದಿನಗಳ ಕಾಲ ಇಡಬೇಕು. ತಂಬಾಕು ತಿನ್ನುವ ಬಯಕೆ ಉಂಟಾದಾಗ ಈ ಮಿಶ್ರಣ ಪದಾರ್ಥವನ್ನು ತಿನ್ನುವುದರಿಂದ ತಂಬಾಕು ಸೇವಿಸುವ ಬಯಕೆ ಕಡಿಮೆಯಾಗುತ್ತದೆ.

*  ಸೋಂಪನ್ನು ಕಲ್ಲು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಚ್ಯುಯಿಂಗ್​ ಗಮ್ ರೀತಿಯಲ್ಲಿ ಜಗಿಯುವುದರಿಂದ ತಂಬಾಕಿನ ಚಟದ ಅಭ್ಯಾಸದಿಂದ ನಿಧಾನವಾಗಿ ಹೊರ ಬರಬಹುದು.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ