ಸಾಮಾನ್ಯವಾಗಿ ಮೊಡವೆಗಳ ಸಮಸ್ಯೆಯಿಂದ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗುತ್ತವೆ. ಇದನ್ನ ಫೇಸ್ ಪೋರ್ಸ್ ಎಂದೂ ಕರೆಯಲಾಗುತ್ತದೆ. ಕೆಲವರು ನೋಡುವುದಕ್ಕೆ ಎಷ್ಟೇ ಅಂದವಾಗಿದ್ದರು ಈ ರಂಧ್ರಗಳು ಅವರ ಮುಖದ ಸೌಂದರ್ಯವನ್ನೆ ಹಾಳು ಮಾಡುತ್ತದೆ.
ಹೆಚ್ಚಿನವರು ಇದರಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮ್ ಅಥವಾ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅದಕ್ಕಿಂತ ಈ ತೊಂದರೆಯಿಂದ ಪಾರಾಗಲು ಕೆಲವೊಂದು ನೈಸರ್ಗಿಕ ಕ್ರಮ ಅನುಸರಿಸಿದರೆ ಸಾಕು ಎಂಬುದು ಅನೇಕರಿಗೆ ತಿಳಿದಿಲ್ಲ. ಅಂತಹ ಕೆಲವೊಂದು ಸಲಹೆಗಳು ಇಲ್ಲಿ ನೀಡಲಾಗಿದೆ.
ವಾರದಲ್ಲಿ ಎರಡು ಬಾರಿ ಮುಖಕ್ಕೆ ಬಿಸಿ ನೀರಿನ ಹವೆ ತೆಗೆದುಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮದಲ್ಲಿನ ಮುಚ್ಚಿದ ರಂಧ್ರಗಳು ತೆರೆದು ಕೊಂಡು, ದೇಹದಲ್ಲಿರುವ ವಿಷಕಾರಿ ಅಂಶ ಹೊರ ಬರುತ್ತದೆ. ಹೀಗೆ ಮಾಡಿದರೆ ನಿಧಾನವಾಗಿ ಮುಖದ ಮೇಲಿನ ರಂಧ್ರಗಳು ಮುಚ್ಚುತ್ತವೆ.
ಮಂಜುಗಡ್ಡೆಯ ಒಂದು ಸಣ್ಣನೆ ತುಂಡು ತೆಗೆದುಕೊಂಡು ಸುಮಾರು 10 ರಿಂದ 15 ಸೆಕೆಂಡ್ ಕಾಲ ರಂಧ್ರಗಳಿರುವ ಜಾಗದಲ್ಲಿ ಮಸಾಜ್ ಮಾಡಿ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಆ ಜಾಗದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಮುಖದಲ್ಲಿನ ರಂಧ್ರಗಳ ಗಾತ್ರ ಕಡಿಮೆಯಾಗುತ್ತದೆ.
ಒಂದು ಟೀ ಸ್ಪೂನ್ ಆಗುವಷ್ಟು ಸೌತೆಕಾಯಿ ರಸ ಹಾಗೂ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ. ಬಳಿಕ ಹತ್ತಿ ಉಂಡೆಯಿಂದ ರಂಧ್ರಗಳ ಮೇಲೆ ಉಜ್ಜಿ. 15 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.
ಜೇನುತುಪ್ಪವನ್ನು ಮಖಕ್ಕೆ ಹಚ್ಚಿ ಮಸಾಜ್ ಮಾಡಿ. ಇದರಿಂದ ರಂಧ್ರಗಳಲ್ಲಿರುವ ಬ್ಯಾಕ್ಟೀರಿಯ ಸಾಯುತ್ತವೆ. 15 ನಿಮಿಷಗಳ ಬಳಿಕ ತುಸು ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ.
ರಂಧ್ರಗಳನ್ನು ತಡೆಯಲು ನೀರಿಗಿಂತ ಹಾಲಿನ ಸ್ಟೀಮಿಂಗ್ ಇನ್ನೂ ಉತ್ತಮ. ಸ್ಟೀಮಿಂಗ್ ಮಾಡಿದ ಬಳಿಕ ಸ್ವಚ್ಚವಾದ ಬಟ್ಟೆಯಿಂದ ಮುಖ ಶುಚಿಗೊಳಿಸಿ.
ಒಂದಿಷ್ಟು ಬೆಣ್ಣೆ ಹಾಗೂ ಉಪ್ಪು ತೆಗೆದುಕೊಂಡು ಚೆನ್ನಾಗಿ ಕಲಸಿ. ಬಳಿಕ ರಂಧ್ರಗಳಿರುವ ಜಾಗಕ್ಕೆ ಹಚ್ಚಿ. ಸುಮಾರು 15 ನಿಮಿಷಗಳ ಬಳಿಕ ತಣ್ಣಗಿನ ನೀರಲ್ಲಿ ಮುಖ ತೊಳೆಯಿರಿ.
ಸ್ವಲ್ಪ ಸಕ್ಕರೆ ಪುಡಿಗೆ ನಿಂಬೆರಸ ಹಾಕಿ ಮಿಶ್ರಣ ಮಾಡಿ. ರಂಧ್ರಗಳಿರುವ ಜಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ತುಸು ಬೆಚ್ಚನೆ ನೀರಲ್ಲಿ ಮುಖ ತೊಳೆಯಿರಿ. ವಾರಕ್ಕೆ ಒಂದು ಬಾರಿ ಈ ರೀತಿ ಮಾಡಿದರೆ ಸಾಕು.
ನಿಂಬೆ ಹಣ್ಣಿನ ರಸಕ್ಕೆ 4 ರಿಂದ 5 ಬಾದಾಮಿಯನ್ನು ಪುಡಿ ಮಾಡಿ ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಲೇಪಿಸಿ. 20 ನಿಮಿಷಗಳ ಕಾಲ ಹಾಗೇ ಬಿಟ್ಟು, ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆದರೆ ರಂಧ್ರಗಳು ಮಾಯವಾಗುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ