Beauty Tips: ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಮುಖದ ಅನಗತ್ಯ ಕೂದಲು ತೆಗೆಯಿರಿ

How To Get Rid Of Unwanted Hair: ಪೇಸ್ಟ್ ತಣ್ಣಗಾದ ನಂತರ, ಕೂದಲಿರುವ ಪ್ರದೇಶಗಳ ಮೇಲೆ ಕೂದಲಿನ ಬೆಳವಣಿಗೆ ಆಗುವ ದಿಕ್ಕಿನಲ್ಲಿ ಹಚ್ಚಿ. ನಂತರ ವ್ಯಾಕ್ಸಿಂಗ್ ಸ್ಟ್ರಿಪ್ ಅಥವಾ ಹತ್ತಿ ಬಟ್ಟೆಯನ್ನು ಬಳಸಿ, ಮತ್ತು ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಕೂದಲನ್ನು ಎಳೆಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಹದ ಇತರ ಭಾಗಗಳಲ್ಲಿನ ಕೂದಲಿನಂತೆ (Hairs) , ಮುಖದ ಕೂದಲು ಸ್ಪಷ್ಟವಾಗಿ ಕಾಣುತ್ತದೆ ಇದು ನಿಮ್ಮ ಅಂದವನ್ನು ಹಾಳು ಮಾಡುತ್ತದೆ. ಇದಕ್ಕಾಗಿ ನೀವು ವಾರಕ್ಕೊಮ್ಮೆ ಸಲೂನ್​ಗೆ (Saloon) ಭೇಟಿ ನೀಡಬೇಕು ಆದರೆ ಇದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ನಿಮ್ಮ ಮುಖದ ಕೂದಲನ್ನು (facial Hair)  ನೈಸರ್ಗಿಕವಾಗಿ ತೆಗೆದುಹಾಕಲು ಕೆಲವು ಸರಳ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ನಾವಿಲ್ಲಿ ನೀಡಿದ್ದೇವೆ.  

ಸಕ್ಕರೆ ಮತ್ತು ನಿಂಬೆ ರಸ

ನೀವು ಮಾಡಬೇಕಾಗಿರುವುದು ಎರಡು ಟೇಬಲ್ ಸ್ಪೂನ್ ಸಕ್ಕರೆ ಮತ್ತು ನಿಂಬೆ ರಸವನ್ನು 8-9 ಟೇಬಲ್ ಸ್ಪೂನ್​ ನೀರಿನೊಂದಿಗೆ ಮಿಶ್ರಣ ಮಾಡಿ. ಗುಳ್ಳೆಗಳು ಕಾಣಿಸಿಕೊಳ್ಳುವವರೆಗೆ ಈ ಮಿಶ್ರಣವನ್ನು ಬಿಸಿ ಮಾಡಿ ಮತ್ತು ನಂತರ ಅದನ್ನು ತಣ್ಣಗಾಗಲು ಬಿಡಿ.  ಒಂದು ಕಡ್ಡಿಯನ್ನು ಬಳಸಿ ಮುಖದ ಮೇಲೆ ಕೂದಲುಗಳಿರುವ ಕಡೆ ಹಚ್ಚಿ. ಸುಮಾರು 20-25 ನಿಮಿಷಗಳ ಕಾಲ ಅದು ಒಣಗಲು ಬಿಡಿ.

ನಂತರ ತಣ್ಣೀರಿನಿಂದ ಅದನ್ನು ತೊಳೆಯಿರಿ.  ಇದು ಹೇಗೆ ಕೆಲಸ ಮಾಡುತ್ತದೆ ಎಂಬುದು ನಿಮ್ಮ ಪ್ರಶ್ನೆಯಾದರೆ ಇಲ್ಲಿದೆ ಉತ್ತರ

ಸಕ್ಕರೆ ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಏಜೆಂಟ್​ ಆಗಿದ್ದು,  ಸಕ್ಕರೆಯನ್ನು ಬಿಸಿ ಮಾಡಿದಾಗ ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತದೆ ಆದರೆ ಇದು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ನಿಂಬೆ ರಸವು ಚರ್ಮದ ಕೂದಲಿಗೆ ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದು ವ್ಯಾಕ್ಸಿಂಗ್​ ನೋವಿನಿಂದ ಮುಕ್ತಿ ನೀಡುತ್ತದೆ.

ನಿಂಬೆ ಮತ್ತು ಜೇನುತುಪ್ಪ

ಇದನ್ನೂ ಓದಿ: ಹೆಚ್ಚು ಖರ್ಚು ಮಾಡದೇ ಸುಂದರ ತ್ವಚೆ ಪಡೆಯಲು ಹೀಗೆ ಮಾಡಿ

ವ್ಯಾಕ್ಸಿಂಗ್  ಬದಲು ಕೂದಲು ತೆಗೆಯಲು ಸುಲಭ ವಿಧಾನ ಮತ್ತೊಂದಿದೆ. ಎರಡು ಟೇಬಲ್ಸ್ಪೂನ್ ಸಕ್ಕರೆ ಮತ್ತು ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ, ಈ ಮಿಶ್ರಣವನ್ನು ಸುಮಾರು ಮೂರು ನಿಮಿಷಗಳ ಕಾಲ ಬಿಸಿ ಮಾಡಿ ಮತ್ತು ಅಗತ್ಯವಿದ್ದರೆ ಮಿಶ್ರಣವನ್ನು ತೆಳ್ಳಗೆ ಮಾಡಲು ನೀರನ್ನು ಸೇರಿಸಿ.

ಪೇಸ್ಟ್ ತಣ್ಣಗಾದ ನಂತರ, ಕೂದಲಿರುವ ಪ್ರದೇಶಗಳ ಮೇಲೆ ಕೂದಲಿನ ಬೆಳವಣಿಗೆ ಆಗುವ ದಿಕ್ಕಿನಲ್ಲಿ ಹಚ್ಚಿ. ನಂತರ ವ್ಯಾಕ್ಸಿಂಗ್ ಸ್ಟ್ರಿಪ್ ಅಥವಾ ಹತ್ತಿ ಬಟ್ಟೆಯನ್ನು ಬಳಸಿ, ಮತ್ತು ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಕೂದಲನ್ನು ಎಳೆಯಿರಿ.

ಇದು ಸರಾಗವಾಗಿ ಕೂದಲು ಬರಲು ಸಹಾಯ ಮಾಡುತ್ತದೆ. ಮುಖದ ಅಂದ ಹಾಳು ಮಾಡುವ ಕೂದಲನ್ನು ನಿವಾರಿಸುತ್ತದೆ.  ಜೇನುತುಪ್ಪವು ಚರ್ಮವನ್ನು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ನೀವು ಒಣ ಚರ್ಮವನ್ನು ಹೊಂದಿದ್ದರೆ ಈ ವಿಧಾನವನ್ನು ಹೆಚ್ಚು ಬಳಕೆ ಮಾಡುವುದು ಉತ್ತಮ.

ಓಟ್ಮೀಲ್ ಮತ್ತು ಬಾಳೆಹಣ್ಣು

ಈ ವಿಧಾನವು ಸಾಕಷ್ಟು ಸೂಕ್ತ ಎನ್ನಲಾಗುತ್ತದೆ. ಮಾಗಿದ ಬಾಳೆಹಣ್ಣಿನ ಜೊತೆಗೆ ಎರಡು ಟೇಬಲ್ ಸ್ಪೂನ್​ ಓಟ್ಮೀಲ್ ಅನ್ನು ಮಿಶ್ರಣ ಮಾಡಿ ಕೂದಲಿರುವ ಜಾಗದಲ್ಲಿ ಹಚ್ಚಿ. 15 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ತಂಪಾದ ನೀರಿನಿಂದ ತೊಳೆಯಿರಿ. ಓಟ್ ಮೀಲ್ ಉತ್ತಮವಾದ ಹೈಡ್ರೇಟಿಂಗ್ ಸ್ಕ್ರಬ್ ರೀತಿ ಕೆಲಸ ಮಾಡುತ್ತದೆ ಮತ್ತು ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ತುಂಬಿರುತ್ತದೆ.

ಅದು ನಿಮ್ಮ ಚರ್ಮದಿಂದ ಕೆಂಪು ಬಣ್ಣವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಈ ಪೇಸ್ಟ್ ನಿಮ್ಮ ಮುಖದ ಕೂದಲನ್ನು ತೆಗೆಯುವುದರ ಜೊತೆಗೆ ಹೊಳೆಯುವ ಚರ್ಮವನ್ನು ಸಹ ನೀಡುತ್ತದೆ.

 ಆಲೂಗಡ್ಡೆ ಮತ್ತು ಲೆಂಟಿಲ್

ಐದು ಚಮಚ ಆಲೂಗೆಡ್ಡೆ ರಸದೊಂದಿಗೆ ತಲಾ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದಕ್ಕು ಮುನ್ನ ರಾತ್ರಿಯೇ ಮಸೂರವನ್ನು ನೆನಸಿ ಇಟ್ಟುಕೊಂಡಿರಿ. ಅದನ್ನ ನಯವಾದ ಪೇಸ್ಟ್​ ರೀತಿ ರುಬ್ಬಿಕೊಳ್ಳಿ.

ಇದನ್ನೂ ಓದಿ: ಅಡುಗೆ ಮನೆಯ ಈ ಮಸಾಲೆಯಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು

ಎಲ್ಲಾ ಪದಾರ್ಥಗಳನ್ನು ಸೇರಿಸಿ ನಿಮ್ಮ ಮುಖದ ಮೇಲೆ ಹಚ್ಚಿ, ಸುಮಾರು 20 ನಿಮಿಷಗಳ ಕಾಲ ಮಿಶ್ರಣವನ್ನು ಒಣಗಲು ಬಿಡಿ ನಂತರ ಅದನ್ನು ತೊಳೆಯಿರಿ.ಆಲೂಗೆಡ್ಡೆ ಕೂದಲನ್ನು ಬ್ಲೀಚ್ ಮಾಡಲು ಸಹಾಯ ಮಾಡುತ್ತದೆ.
Published by:Sandhya M
First published: