ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮು-ಕಫದ ಸಮಸ್ಯೆಗಳಿಗೆ ಇಲ್ಲಿದೆ ಮನೆಮದ್ದು

ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಸಾಮಾನ್ಯವಾಗಿ ನಾವು ನಗರಗಳಲ್ಲಿ ಕಂಡು ಬರುವಂತಹ ವಾಯು ಮಾಲಿನ್ಯದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಎಲೆಗಳನ್ನು ತಿಂದರೆ ಒಳ್ಳೆಯದು.

zahir | news18-kannada
Updated:September 30, 2019, 3:23 PM IST
ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮು-ಕಫದ ಸಮಸ್ಯೆಗಳಿಗೆ ಇಲ್ಲಿದೆ ಮನೆಮದ್ದು
ಸಾಂದರ್ಭಿಕ ಚಿತ್ರ
zahir | news18-kannada
Updated: September 30, 2019, 3:23 PM IST
ದೇಶದೆಲ್ಲೆಡೆ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯದಿಂದ ಉಸಿರಾಡುವುದು ಕೂಡ ಕಷ್ಟ ಎಂಬಂತಹ ಪರಿಸ್ಥಿತಿ  ಸೃಷ್ಟಿಯಾಗುತ್ತಿದೆ. ಸಾಮಾನ್ಯವಾಗಿ ವಾಯು ಮಾಲಿನ್ಯದಿಂದ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿರುತ್ತದೆ. ಇಂತಹ ತೊಂದರೆಗಳಿಗೆ ಕೆಲ ಮನೆಮದ್ದುಗಳ ಮೂಲಕ ಪರಿಹಾರ ಕಾಣಬಹುದು. ಅಂತಹ ಕೆಲವೊಂದು ಆರೋಗ್ಯಕರ ಟಿಪ್ಸ್ ಇಲ್ಲಿವೆ.

ತುಳಸಿ: ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಸಾಮಾನ್ಯವಾಗಿ ನಾವು ನಗರಗಳಲ್ಲಿ ಕಂಡು ಬರುವಂತಹ ವಾಯು ಮಾಲಿನ್ಯದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಎಲೆಗಳನ್ನು ತಿಂದರೆ ಒಳ್ಳೆಯದು.

ಬೆಲ್ಲ: ನೀವು ತುಂಬಾ ಹೊಗೆಯಲ್ಲಿ ಓಡಾಡಿದ್ದರೆ, ಊಟದ ಬಳಿಕ ಸ್ವಲ್ಪ ಬೆಲ್ಲವನ್ನು ತಿನ್ನಿರಿ. ಇದು ನಿಮ್ಮ ರಕ್ತ ಸ್ವಚ್ಛಗೊಳಿಸುತ್ತದೆ, ಹಾಗೆಯೇ ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಪ್ರವಾಹದಿಂದ ಜನರಿಗೆ ಪ್ರಾಣ ಸಂಕಟ: ನಟಿಗೆ ಚೆಲ್ಲಾಟ..!

ಬೆಳ್ಳುಳ್ಳಿ: ಮಾಲಿನ್ಯದಿಂದ ಕೆಮ್ಮಿನ ಸಮಸ್ಯೆಗೆ ತುತ್ತಾಗಿದ್ದರೆ ಬೆಳ್ಳುಳ್ಳಿಯನ್ನು ಸೇವಿಸಿ. ಒಂದು ಚಮಚ ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಮಿಶ್ರ ಮಾಡಿ ತಿನ್ನುವುದು ಉತ್ತಮ. ಇದನ್ನು ಸೇವಿಸಿದ ಬಳಿಕ ಅರ್ಧ ಗಂಟೆವರೆಗೆ ನೀರು ಕುಡಿಯಬೇಡಿ. ಹೀಗೆ ದಿನನಿತ್ಯ ಮಾಡುವುದರಿಂದ ಕೆಮ್ಮಿನ ಸಮಸ್ಯೆಗಳು ದೂರವಾಗುತ್ತದೆ.

ಕರಿಮೆಣಸು: ಮಾಲಿನ್ಯದಿಂದ ಕಫ ಮತ್ತು ಕೆಮ್ಮು ಹೆಚ್ಚಾಗಿದ್ದರೆ ಕರಿಮೆಣಸನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿ. ಇದರಿಂದ ಕೆಮ್ಮು ಕಡಿಮೆಯಾಗುವುದಲ್ಲದೆ ದೇಹದಲ್ಲಿರುವ ವಿಷಕಾರಿ ಮಾಲಿನ್ಯ ಕಡಿಮೆಯಾಗುತ್ತದೆ.

ಶುಂಠಿ: ಒಣ ಕೆಮ್ಮ ಮತ್ತು ಕಫ ಕಾಣಿಸಿಕೊಂಡಿದ್ದರೆ ಕರಿಮೆಣಸು, ಜೇನುತುಪ್ಪ ಮತ್ತು ಶುಂಠಿಯನ್ನು ಮಿಶ್ರಣ ಮಾಡಿ ತಿನ್ನಿರಿ. ಇದರಿಂದ ಮಾಲಿನ್ಯದಿಂದ ಉಂಟಾಗುವ ಸಮಸ್ಯೆ ಕಡಿಮೆಯಾಗುತ್ತದೆ.
Loading...

First published:September 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...