ಬಾಯಿ ಹುಣ್ಣಿಗೆ ಅಂಗೈಯಲ್ಲೇ ಇದೆ ಪರಿಹಾರ

Home Remedies: ಪೇರಲೆ ಅಥವಾ ಸೀಬೆಕಾಯಿ ಮರದ ಚಿಗುರು ಎಲೆಯ ರಸ ಹುಣ್ಣಿರುವ ಜಾಗಕ್ಕೆ ತಗುಲಿಸಿ ಕುಡಿಯುವುದರಿಂದ ಸಹ ಪರಿಹಾರ ಕಾಣಬಹುದು.

zahir | news18-kannada
Updated:August 26, 2019, 5:53 PM IST
ಬಾಯಿ ಹುಣ್ಣಿಗೆ ಅಂಗೈಯಲ್ಲೇ ಇದೆ ಪರಿಹಾರ
ಸಾಂದರ್ಭಿಕ ಚಿತ್ರ
  • Share this:
ಸಾಮಾನ್ಯವಾಗಿ ಎಲ್ಲರಿಗೂ ಬಾಯಿ ಹುಣ್ಣು ಸಮಸ್ಯೆ ಕಾಡುತ್ತದೆ. ಇದನ್ನು ಸಮಸ್ಯೆ ಎನ್ನುವುದಕ್ಕಿಂತ ಕಿರಿಕಿರಿ ಎನ್ನಬಹುದು. ಏಕೆಂದರೆ ಬಾಯಲ್ಲಿ ಹುಣ್ಣಾದರೆ ಅತ್ತ ಆಹಾರ ಸೇವಿಸಲು, ಇತ್ತ ಉಗುಳಲು ಆಗದಂತ ಪರಿಸ್ಥಿತಿ ತಲೆದೂರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಮನೆ ಔಷಧಗಳ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬಾಯಿ ಹುಣ್ಣು ಉಂಟಾಗಲು ಮುಖ್ಯ ಕಾರಣ ದೇಹದ ಉಷ್ಣ. ಹಾಗೆಯೇ ಒತ್ತಡ ಮತ್ತು ಆಹಾರದ ಅಲರ್ಜಿಯಿಂದ ಸಹ ಈ ಸಮಸ್ಯೆ ಕಾಡಬಹುದು. ಇದಕ್ಕೆ ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮನೆಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ. ಅಂತಹ ಕೆಲವೊಂದು ಟಿಪ್ಸ್ ಇಲ್ಲಿ ನೀಡಲಾಗಿದೆ.

ಕೊತ್ತಂಬರಿ ಸೊಪ್ಪು: ಬಾಯಿ ಹುಣ್ಣು ಕಾಣಿಸಿದರೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿಯಬೇಕು. ಹಾಗೆಯೇ ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿ ಪರಿಹಾರ ಕಾಣಬಹುದು.

ತೆಂಗಿನ ಕಾಯಿ: ತೆಂಗಿನ ಕಾಯಿಯ ಹಾಲು ಹಿಂಡಿ ಬಾಯಿ ಹುಣ್ಣಿಗೆ ಮಸಾಜ್‌ ಮಾಡಿದರೆ ಸಹ ಹುಣ್ಣು ವಾಸಿಯಾಗುತ್ತದೆ.

ಮೆಂತೆ ಕಾಳು: ರಾತ್ರಿ ಮಲಗುವ ಮೊದಲು ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹೊತ್ತು ಜಗಿದು ನುಂಗಿದರೂ ಬಾಯಿ ಹುಣ್ಣಿನ ಸಮಸ್ಯೆ ದೂರವಾಗುತ್ತದೆ.

ಶುದ್ಧ ತುಪ್ಪ: ಶುದ್ಧ ತುಪ್ಪವನ್ನು ಬಾಯಿ ಹುಣ್ಣಿರುವ ಜಾಗಕ್ಕೆ ಸವರಿ ಮಲಗಿದರೆ ಕೂಡ ಶೀಘ್ರದಲ್ಲೇ ಹುಣ್ಣು ವಾಸಿಯಾಗುತ್ತದೆ.

ತುಳಸಿ ಎಲೆ: ಬಾಯಿ ಹುಣ್ಣಾದಾಗ ತುಳಸಿ ಎಲೆಯನ್ನು ಜಗಿಯುವುದರಿಂದ ಸಹ ಪರಿಹಾರ ಕಂಡುಕೊಳ್ಳಬಹುದು.ಅರಶಿಣ: ಅರಿಶಿಣವನ್ನು ಗ್ಲಿಸರಿನ್‌ಗೆ ಸೇರಿಸಿ ಹುಣ್ಣುಗಳಿಗೆ ಹಚ್ಚಿದರೂ ಹುಣ್ಣು ಮಾಯವಾಗುತ್ತದೆ.

ಸೀಬೆಕಾಯಿ ಎಲೆ: ಪೇರಲೆ ಅಥವಾ ಸೀಬೆಕಾಯಿ ಮರದ ಚಿಗುರು ಎಲೆಯ ರಸ ಹುಣ್ಣಿರುವ ಜಾಗಕ್ಕೆ ತಗುಲಿಸಿ ಕುಡಿಯುವುದರಿಂದ ಸಹ ಪರಿಹಾರ ಕಾಣಬಹುದು.

ಇನ್ನು ಕ್ಯಾಲ್ಸಿಯಂ, ವಿಟಮಿನ್‌ ಸಿ ಹೆಚ್ಚಿರುವ ಯೋಗರ್ಟ್‌, ಹಾಲು, ಚೀಸ್, ಕಿತ್ತಳೆ ಜ್ಯೂಸ್‌ ಸೇವಿಸುವುದು ಉತ್ತಮ. ಹಾಗೆಯೇ ಬಾಯಿ ಹುಣ್ಣಿನ ಸಮಸ್ಯೆಯಿದ್ದಾಗ ಮಾಂಸಹಾರಗಳಿಂದ ಸಾಧ್ಯವಾದಷ್ಟು ದೂರವಿರಿ.

 
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published: August 26, 2019, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading