Jaundice: ಕಾಮಾಲೆ ರೋಗದ ಬಗ್ಗೆ ಆತಂಕ ಬೇಡ! ಈ ಮನೆ ಮದ್ದುಗಳನ್ನು ಬಳಸಿ ಪರಿಹಾರ ಸಿಗುತ್ತೆ

Home Remedies for Jaundice: ಕಬ್ಬಿನ ಹಾಲಿನಲ್ಲಿ ಉನ್ನತ ಮಟ್ಟ ಆಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ಕಾಮಾಲೆ ರೋಗ ನಿವಾರಣೆ ಮಾಡಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಕಬ್ಬಿನ ಹಾಲು ಕುಡಿದರೆ ಅದರಿಂದ ಯಕೃತ್ ನ ಚಟುವಟಿಕೆಯು ಆರಂಭವಾಗುವುದು ಮತ್ತು ಬಿಲಿರುಬಿನ್ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾಮಾಲೆ (Jaundice) ಕಣ್ಣಿಗೆ (Eye) ಕಾಣುವುದಿಲ್ಲ ಹಳದಿಯಂತೆ (Yellow) ಎಂಬ ಗಾದೆಯನ್ನು ಕೇಳಿಯೇ ಕೇಳಿರುತ್ತೇವೆ.. ಕಾಮಾಲೆ ರೋಗದಿಂದ (Disease) ಬಳಲುವ ಪ್ರತಿಯೊಬ್ಬ ವ್ಯಕ್ತಿಯ ಕಣ್ಣು ಹಳದಿ ಬಣ್ಣಕ್ಕೆ ತಿರುಗಿ ಇರುವುದರಿಂದ ಅವರ ಮುಖ (Face) ಹಳದಿಯಾಗಿ ಕಾಣುತ್ತದೆ. ಹೀಗಾಗಿಯೇ ಇದನ್ನು ಇಟ್ಟುಕೊಂಡು ಲೋಕಾರೂಢಿಯಾಗಿ ಉದಾಹರಣೆ ನೀಡುವಾಗ ಕಾಮಾಲೆ ಕಣ್ಣಿಗೆ ಕಾಣುವುದು ಹಳದಿ ಎಂಬ ಗಾದೆಯನ್ನು ಹೇಳಲಾಗುತ್ತೆ.. ಯಕೃತ್ತಿನ (Liver) ಮೇಲೆ ಹಾನಿ ಮಾಡುವ ಜಾಂಡಿಸ್ ಕಾಯಿಲೆ ಅಷ್ಟೊಂದು ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಸರಿಯಾಗಿ ಚಿಕಿತ್ಸೆ(Treatment) ಮಾಡಿಸಿಕೊಳ್ಳದಿದ್ದರೆ ಪ್ರಾಣಕ್ಕೆ ಅಪಾಯ ತರಲಿದೆ.. ಹೀಗಾಗಿಯೇ ವಿಶೇಷವಾಗಿ ಕಾಮಾಲೆ ಅಥವಾ ಜಾಂಡೀಸ್ ಆದಾಗ ಆಹಾರದ ಕಡೆ ಗಮನಕೊಡುವಂತೆ ವೈದ್ಯರು ಸೂಚಿಸುತ್ತಾರೆ.

    ಈ ಕಾಮಾಲೆ ಯಕೃತ್ತಿಗೆ ಸಂಬಂಧಿಸಿದ ಒಂದು ಸಾಮಾನ್ಯ ಕಾಯಿಲೆಯಾಗಿದ್ದು, ನವಜಾತ ಶಿಶುಗಳು, ಚಿಕ್ಕ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಹದಿಹರೆಯದವರು ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ..ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.

    ಕಾಮಾಲೆ ಎಂದರೇನು..?

    ಲಿವರ್‌ನಲ್ಲಿ ಉತ್ಪತ್ತಿಯಾಗುವ ಬಿಲುರುಬಿನ್‌ ಅಥವಾ ಪಿತ್ತದಾಂಶದ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಅವಸ್ಥೆಯನ್ನು ಜಾಂಡೀಸ್‌ ಅಥವಾ ಕಾಮಾಲೆ ಎನ್ನಲಾಗುವುದು. ಆಹಾರ ಪಚನದ ಕ್ರಿಯೆಗೆ ಅವಶ್ಯವಿರುವ ಈ ಅಂಶವು ಲಿವರ್‌ನ ಸೋಂಕು ಅಥವಾ ಇತರೆ ಕಾರಣಗಳಿಂದಾಗಿ ಕರುಳಿಗೆ ಸೇರದೆ ರಕ್ತದಲ್ಲೇ ಉಳಿಯುತ್ತದೆ. ಆದ್ದರಿಂದ ಜೀರ್ಣಶಕ್ತಿ ಬಹಳಷ್ಟು ಕಡಿಮೆ ಆಗುವುದರೊಂದಿಗೆ ದೇಹದ ಬಲ ಕುಂದುತ್ತದೆ. ಸುಲಭಸಾಧ್ಯವಲ್ಲದ ಆಹಾರವನ್ನು ಸೇವಿಸಿದಾಗ ಅಜೀರ್ಣವಾಗಿ ಹೊಟ್ಟೆನೋವು ಬರುತ್ತದೆ.

    ಇದನ್ನೂ ಓದಿ: ಬೆಳಗ್ಗೆ ಎದ್ದಾಗ ನೀವು ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಇಡೀ ದಿನ ಹಾಳಾಗುತ್ತೆ!

    ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಇದೆ ಮತ್ತು ಇದು ಯಕೃತ್ ಗೆ ದೇಹವನ್ನು ನಿರ್ವಿಷಗೊಳಿಸಲು ನೆರವಾಗುವುದು. ಹೀಗಾಗಿ ಕಾಮಾಲೆ ರೋಗದಿಂದ ವೇಗವಾಗಿ ಚೇತರಿಕೆ ಪಡೆಯಬಹುದು. ನಿಮ್ಮ ಆಹಾರ ಕ್ರಮದಲ್ಲಿ 3-4 ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ.

    ಕಾಫಿ ಮತ್ತು ಗ್ರೀನ್ ಟೀ: ಕಾಫಿ ಮತ್ತು ಗ್ರೀನ್ ಟೀ ಮಿತವಾಗಿ ಸೇವಿಸಿದರೆ ಇದು ಲಿವರ್ ಮೇಲೆ ಉತ್ತಮ ಪರಿಣಾಮಬೀರುತ್ತದೆ. ಇದು ಲಿವರ್ ನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಲಿವರ್ ಸರಿಯಾಗಿ ಕೆಲಸ ಮಾಡುತ್ತದೆ.

    ನೆಲ್ಲಿಕಾಯಿ: ವೈದ್ಯಕೀಯ ಉದ್ದೇಶದಿಂದ ನೆಲ್ಲಿಕಾಯಿಯನ್ನು ವಿವಿಧ ರೀತಿಯಿಂದ ಬಳಲ್ಪಡುತ್ತದೆ. ನೆಲ್ಲಿಕಾಯಿಯು ಹಿಂದಿನಿಂದಲೂ ಆಯುರ್ವೇದದಲ್ಲಿ ಕಾಮಾಲೆ ರೋಗ, ಭೇದಿ ಮತ್ತು ಉರಿಯೂತ ನಿವಾರಣೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ.

    ಟೊಮೇಟೊ: ಟೊಮಾಟೋದಲ್ಲಿರುವ ಲೈಕೋಪೀನ್ ಎಂಬ ಪೋಷಕಾಂಶಕ್ಕೆ ಯಕೃತ್‍ನ ತೊಂದರೆಗಳನ್ನು ನಿವಾರಿಸುವ ಗುಣವಿದೆ. ಇದಕ್ಕಾಗಿ ಒಂದು ಲೋಟ ಬೀಜ ಮತ್ತು ಸಿಪ್ಪೆ ನಿವಾರಿಸಿ ಸಂಗ್ರಹಿಸಿದ ಟೊಮಾಟೋ ತಿರುಳಿನ ರಸವನ್ನು ಕೊಂಚ ಉಪ್ಪು ಮತ್ತು ಸಕ್ಕರೆ ಬೆರೆಸಿ ರೋಗಿಗೆ ಕುಡಿಯಲು ನೀಡಬೇಕು. ನಿತ್ಯವೂ ಬೆಳಗ್ಗಿನ ಪ್ರಥಮ ಆಹಾರವಾಗಿ ಕಾಮಾಲೆ ಗುಣವಾಗುವವರೆಗೂ ಸೇವಿಸುತ್ತಾ ಬಂದರೆ ಕಾಮಾಲೆ ಶೀಘ್ರ ಗುಣವಾಗುತ್ತದೆ.

    ಹೆಚ್ಚು ನೀರು ಕುಡಿಯಿರಿ: ನೀರು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ, ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಯಕೃತ್ತಿನ ಕೆಲಸವನ್ನು ಸುಲಭಗೊಳಿಸುತ್ತದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯಿರಿ.

    ಕಬ್ಬಿನ ಹಾಲು: ಕಬ್ಬಿನ ಹಾಲಿನಲ್ಲಿ ಉನ್ನತ ಮಟ್ಟ ಆಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ಕಾಮಾಲೆ ರೋಗ ನಿವಾರಣೆ ಮಾಡಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಕಬ್ಬಿನ ಹಾಲು ಕುಡಿದರೆ ಅದರಿಂದ ಯಕೃತ್ ನ ಚಟುವಟಿಕೆಯು ಆರಂಭವಾಗುವುದು ಮತ್ತು ಬಿಲಿರುಬಿನ್ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು. ಪ್ರತಿನಿತ್ಯ 1-2 ಲೋಟ ಕಬ್ಬಿನ ಹಾಲು ಕುಡಿಯಿರಿ.

    ಮಜ್ಜಿಗೆ: ಮೊಸರಿನಿಂದ ಬೆಣ್ಣೆ ತೆಗೆದ ಬಳಿಕ ಉಳಿದ ದ್ರವವಾದ ಮಜ್ಜಿಗೆಯಲ್ಲಿ ಯಾವುದೇ ಕೊಬ್ಬು ಇರುವುದಿಲ್ಲವಾದುದರಿಂದ ಇದು ಜೀರ್ಣಕ್ರಿಯೆಗೆ ಉತ್ತಮವಾದ ಆಹಾರವಾಗಿದೆ. ಒಂದು ಲೋಟ ಮಜ್ಜಿಗೆಗೆ ಕೊಂಚ ಉಪ್ಪು, ಕಾಳುಮೆಣಸಿನ ಪುಡಿ, ಜೀರಿಗೆ ಗಳನ್ನು ಬೆರೆಸಿ ಪ್ರತಿ ಊಟದ ಬಳಿಕ ಸೇವಿಸುವ ಮೂಲಕ ಕಾಮಾಲೆ ರೋಗ ಶೀಘ್ರವೇ ಗುಣವಾಗುತ್ತದೆ.

    ಮೂಲಂಗಿ: ಮೂಲಂಗಿ ಸೇವಿಸಿದರೆ ಕಾಮಾಲೆ ರೋಗ ವಾಸಿಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೇ ಮೂಲಂಗಿ ಎಲೆಗಳನ್ನು ಕೂಡ ಸೇವಿಸಬಹುದು.

    ಇದನ್ನೂ ಓದಿ: ತೂಕ ಇಳಿಸೋಕೆ ಪ್ರಯತ್ನಿಸುತ್ತಿದ್ರೆ ತಪ್ಪದೇ ಆಲೂಗಡ್ಡೆ ಸೇವಿಸಿ

    ಜಾಂಡಿಸ್ ನಿಂದ ಬಳಲುತ್ತಿರುವವರು ಈ ಆಹಾರ ಸೇವಿಸಬೇಡಿ

    ಕಾಮಾಲೆ ರೋಗದಿಂದ ಬಳಲುತ್ತಿರುವಾಗ ಹುರಿದ, ಸಂಸ್ಕರಿಸಿದ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರಗಳಿಂದ ದೂರವಿರಬೇಕು. ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇದ್ದು, ಇದು ಯಕೃತ್ತಿನ ಕಾರ್ಯವನ್ನು ಕುಂಠಿತಗೊಳಿಸುತ್ತದೆ. ಅಂತೆಯೇ, ಸಂಸ್ಕರಿಸಿದ ಉಪ್ಪಿನಂಶವುಳ್ಳ ಆಹಾರವು ಸಹ ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ . ಏಕೆಂದರೆ ಇದು ದೇಹದಲ್ಲಿ ನೀರು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಕೊಬ್ಬುಗಳೂ ಇರುತ್ತವೆ, ಇದು ಯಕೃತ್ತಿನಲ್ಲಿ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ.ಆಲ್ಕೊಹಾಲ್ ಕೂಡ ಜೀರ್ಣಿಸಿಕೊಳ್ಳಲು ಬಹಳ ಕಷ್ಟ. ಅಷ್ಟೇ ಅಲ್ಲ, ಇದು ಯಕೃತ್ತಿಗೆ ವಿಷಕಾರಿಯಾಗುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಪಿತ್ತಜನಕಾಂಗದ ಉರಿಯೂತ ಮತ್ತು ಫೈಬ್ರೋಸಿಸ್’ಗೆ ಕಾರಣವಾಗಬಹುದು.
    Published by:ranjumbkgowda1 ranjumbkgowda1
    First published: