Cough Home Remedy: ಒಣ ಕೆಮ್ಮಿಗೆ ಈ ಸಿಂಪಲ್ ಔಷಧ ಮನೆಯಲ್ಲೇ ಮಾಡಿ, ಗುಣ ಆಗದಿದ್ರೆ ಹೇಳಿ

ನಿರಂತರ ಒಣ ಕೆಮ್ಮು ನಿಮ್ಮ ದಿನ ನಿತ್ಯದ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವೈರಲ್ ಸೋಂಕು ಒಣ ಕೆಮ್ಮನ್ನು ಉಂಟು ಮಾಡುತ್ತದೆ. ಅದು 8 ವಾರದವರೆಗೆ ಇರುತ್ತದೆ. ಇದು ವಯಸ್ಕರರಲ್ಲಿ ಎಂಟು ವಾರಗಳವರೆಗೆ ಮತ್ತು ಚಿಕ್ಕ ಮಕ್ಕಳಲ್ಲಿ ನಾಲ್ಕು ವಾರಗಳವರೆಗೆ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಶೀತ ಮತ್ತು ಕೆಮ್ಮು (Cold And Cough) ಎಲ್ಲರಲ್ಲೂ ಒಂದಲ್ಲ ಒಂದು ದಿನ ಅನುಭವಿಸಿಯೇ (Experience) ಇರುತ್ತೀರಿ. ಅದರಲ್ಲಿ ಒಂದು ಬಾರಿ ಲೋಳೆ ರಹಿತ ಕೆಮ್ಮು ಅಂದ್ರೆ ಒಣ ಕೆಮ್ಮು. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕೆಮ್ಮು ಅನುಭವಿಸಿಯೇ ಇರುತ್ತೀರಿ. ಆದರೆ ಒಣ ಕೆಮ್ಮು ಹೇಗೆ (How) ಸಂಭವಿಸುತ್ತದೆ ಎಂದು ನಿಮಗೆ ಗೊತ್ತಾ? ಅನೇಕ ವಿಷಯಗಳು (Things) ಒಣ ಕೆಮ್ಮನ್ನು ಉಂಟು ಮಾಡಬಹುದು. ಅಲರ್ಜಿಯಿಂದ (Allergy) ಆಸಿಡ್ ರಿಫ್ಲಕ್ಸ್ವ ಕೂಡ ಒಣ ಕೆಮ್ಮು ಉಂಟು ಮಾಡುತ್ತದೆ. ಅದೇ ವೇಳೆ ಕೆಲವು ಸಂದರ್ಭಗಳಲ್ಲಿ ಒಣ ಕೆಮ್ಮು ಉಂಟಾಗಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ.

  ವೈರಲ್ ಸೋಂಕು ಒಣ ಕೆಮ್ಮು ಉಂಟು ಮಾಡುತ್ತದೆ

  ಕಾರಣ ಯಾವುದೇ ಇರಲಿ, ನಿರಂತರ ಒಣ ಕೆಮ್ಮು, ನಿಮ್ಮ ದಿನ ನಿತ್ಯದ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಶೇಷವಾಗಿ ರಾತ್ರಿ ಕೆಮ್ಮು ಆರಂಭವಾದ್ರೆ ಒಣ ಕೆಮ್ಮು ಎಷ್ಟು ಸಮಯದವರೆಗೆ ಇರುತ್ತದೆ? ವೈರಲ್ ಸೋಂಕು, ಒಣ ಕೆಮ್ಮನ್ನು ಉಂಟು ಮಾಡುತ್ತದೆ. ಅದು 8 ವಾರದವರೆಗೆ ಇರುತ್ತದೆ.

  ಹಾಗಾಗಿ ಒಣ ಕೆಮ್ಮನ್ನು ದೀರ್ಘ ಕಾಲ ಇರುತ್ತದೆ ಎಂದು ಪರಿಗಣಿಸಲಾಗಿದೆ. ಇದು ವಯಸ್ಕರರಲ್ಲಿ ಎಂಟು ವಾರಗಳವರೆಗೆ ಮತ್ತು ಚಿಕ್ಕ ಮಕ್ಕಳಲ್ಲಿ ನಾಲ್ಕು ವಾರಗಳವರೆಗೆ ಇರುತ್ತದೆ. ಇದಕ್ಕಿಂತ ಹೆಚ್ಚು ಕಾಲ ಕೆಮ್ಮುವುದು ಮಾರಣಾಂತಿಕ ಕಾಯಿಲೆಯಲ್ಲಿ ಕ್ಯಾನ್ಸರ್‌ ಲಕ್ಷಣ ಆಗಿರಬಹುದು.

  ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ

  ಸಾಮಾನ್ಯವಾಗಿ ಒಣ ಕೆಮ್ಮು ರಾತ್ರಿಯಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಣ ಕೆಮ್ಮಿನ ಸಿರಪ್‌ಗಳು ಸಹ ಕೆಮ್ಮು ನಿಯಂತ್ರಿಸಲು ಸಾಧ್ಯವಾಗಲ್ಲ. ಇದು ಮನೆಮದ್ದುಗಳ ಸಹಾಯದಿಂದ ನೀವು ಅದರಿಂದ ಪರಿಹಾರ ಪಡೆಯಬಹುದು.

  ಬಿಸಿ ನೀರು ಮತ್ತು ಜೇನುತುಪ್ಪ

  NCBI ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಯಸ್ಕರು ಮತ್ತು ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ಜೇನುತುಪ್ಪವು ಒಣ ಕೆಮ್ಮಿಗೆ ಪರಿಹಾರ ನೀಡುತ್ತದೆ. ವಾಸ್ತವದಲ್ಲಿ ಜೇನುತುಪ್ಪವು ಜೀವ ವಿರೋಧಿ ಗುಣ ಹೊಂದಿದೆ. ಇದು ಕಿರಿಕಿರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಂಟಲು ಹೊದಿಕೆಗೆ ಸಹಾಯ ಮಾಡುತ್ತದೆ. ನೀವು ದಿನಕ್ಕೆ ಹಲವಾರು ಬಾರಿ 1 ಚಮಚ ಜೇನುತುಪ್ಪ ಸೇವಿಸಬಹುದು. ಇದನ್ನು ಚಹಾ ಅಥವಾ ಬಿಸಿನೀರಿನೊಂದಿಗೆ ಬೆರೆಸಿ ಕುಡಿಯಬಹುದು.

  ಅರಿಶಿನ ಮತ್ತು ಕಪ್ಪು ಮೆಣಸು

  ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ. ಇದು ಉರಿಯೂತದ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಒಣ ಕೆಮ್ಮು ಸೇರಿದಂತೆ ಅನೇಕ ಸ್ಥಿತಿಗಳಲ್ಲಿ ಇದು ಪ್ರಯೋಜನಕಾರಿ ಆಗಿದೆ. ಕರಿಮೆಣಸಿನೊಂದಿಗೆ ಸೇವಿಸಿದಾಗ ಕರ್ಕ್ಯುಮಿನ್ ರಕ್ತಪ್ರವಾಹವನ್ನು ಚೆನ್ನಾಗಿ ಹೀರಲ್ಪಡುತ್ತದೆ. ಕಿತ್ತಳೆ ರಸದಂತಹ ಪಾನೀಯದಲ್ಲಿ ಒಂದು ಟೀ ಚಮಚ ಅರಿಶಿನ ಮತ್ತು 1/8 ಟೀಚಮಚ ಕರಿಮೆಣಸು ಮಿಶ್ರಣ ಮಾಡಿ ಸೇವಿಸಿ.

  ಶುಂಠಿ ಮತ್ತು ಉಪ್ಪು

  ಒಂದು ಅಧ್ಯಯನದ ಪ್ರಕಾರ ಶುಂಠಿಯು ಆಂಟಿಮೈಕ್ರೊಬಿಯಲ್ ಅಂದ್ರೆ ಬ್ಯಾಕ್ಟೀರಿಯಾ ನಾಶಪಡಿಸುವ ಗುಣ ಹೊಂದಿದೆ. ಈ ವೇಳೆ ಒಣ ಕೆಮ್ಮಿನಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಒಂದು ಸಣ್ಣ ತುಂಡು ಶುಂಠಿಗೆ ಅದರ ಮೇಲೆ ಚಿಟಿಕೆ ಉಪ್ಪು ಸಿಂಪಡಿಸಿ ಅಥವಾ ಜೇನುತುಪ್ಪ ಹಚ್ಚಿ ಹಲ್ಲುಗಳ ಕೆಳಗೆ ಒತ್ತಿರಿ. ಈ ರೀತಿ ಶುಂಠಿ ರಸ ನಿಧಾನವಾಗಿ ಬಾಯಿಯೊಳಗೆ ಹೋಗಲಿ. ಸುಮಾರು 5 ರಿಂದ 7 ನಿಮಿಷದ ನಂತರ ಬಾಯಿ ತೊಳೆಯಿರಿ.

  ತುಪ್ಪ ಮತ್ತು ಕಪ್ಪು ಮೆಣಸು

  ತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಗುಣಲಕ್ಷಣ ಹೊಂದಿದೆ. ಇದು ಗಂಟಲನ್ನು ಮೃದುವಾಗಿಡಲು ಕೆಲಸ ಮಾಡುತ್ತದೆ. ಕರಿಮೆಣಸಿನ ಪುಡಿಯ ಜೊತೆ ತುಪ್ಪ ಬೆರೆಸಿ ತಿಂದರೆ ಒಣ ಕೆಮ್ಮಿನಿಂದ ಸಾಕಷ್ಟು ಪರಿಹಾರ ಪಡೆಯಬಹುದು.

  ಇದನ್ನೂ ಓದಿ: ಪ್ರೊಟೀನ್ ಭರಿತ ಪದಾರ್ಥ ಸೇವನೆ ಮಾಡಿದ್ರೆ ಅಸ್ಥಿಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತೆ

  ಉಪ್ಪು ಮತ್ತು ನೀರು

  ಒಣ ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆ ಮತ್ತು ಕಿರಿಕಿರಿ ಕಡಿಮೆ ಮಾಡಲು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಿ. ಉಪ್ಪು ನೀರು, ಬಾಯಿ ಮತ್ತು ಗಂಟಲಿನ ಬ್ಯಾಕ್ಟೀರಿಯಾ ಕೊಲ್ಲಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ಟೇಬಲ್ ಉಪ್ಪನ್ನು ದೊಡ್ಡ ಗಾಜಿನ ಬೆಚ್ಚಗಿನ ನೀರಿನಲ್ಲಿ ಕರಗಿಸಿ. ಗಾರ್ಗ್ಲ್ ಮಾಡಿ.
  Published by:renukadariyannavar
  First published: