ಹೊಟ್ಟೆ ಉಬ್ಬರದ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು

ಈ ಸಮಸ್ಯೆ ಪ್ರತಿನಿತ್ಯ ಕಾಡುತ್ತಿದ್ದರೆ, ನಿಂಬೆ ರಸದ ಮೊರೆ ಹೋಗಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ನೀವು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಹಿಡಿ ಕುಡಿಯುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಲವರಿಗೆ ಕೆಲ ಆಹಾರ ಸೇವಿಸುತ್ತಿದ್ದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತದೆ. ತಿಂದ ತಕ್ಷಣವೇ ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬರಿಸಿದ ಅನುಭವವಾಗುತ್ತಿರುತ್ತದೆ. ಮುಖ್ಯವಾಗಿ ಉದ್ದಿನ ದೋಸೆ/ಇಡ್ಲಿ ಹಾಗೂ ಆಲೂಗಡ್ಡೆ ಪದಾರ್ಥಗಳ ಸೇವನೆ ವೇಳೆ ಈ ಸಮಸ್ಯೆ ಕಾಡುತ್ತಿರುತ್ತವೆ. ಇಂತಹ ಸಮಸ್ಯೆ ನಿಮ್ಮಲ್ಲೂ ಕಾಡುತ್ತಿದ್ದರೆ ಕೆಲ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.

  ಆಹಾರ ಸೇವಿಸಿದೊಡನೆ ಕಂಡು ಬರುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗಬೇಡಿ. ಬದಲಾಗಿ ಪುದೀನಾ ಎಲೆಗಳ ಚಹಾ ಸೇವಿಸಿ. ಇದನ್ನು ತಯಾರಿಸಲು ಒಂದು ಲೋಟ ನೀರಿಗೆ ಐದರಿಂದ ಹತ್ತು ಪುದೀನಾ ಎಲೆಗಳನ್ನು ಹಾಕಿ 10 ನಿಮಿಷ ಕುದಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದರಿಂದ ಸಮಸ್ಯೆ ದೂರವಾಗುತ್ತದೆ.

  ಇನ್ನು ಸೋಂಪು ಕಾಳುಗಳನ್ನು ಸಹ ಬಳಸಿ ಪರಿಹಾರ ಕಾಣಬಹುದು. ಇದಕ್ಕಾಗಿ ನೀವು ಒಂದು ಕಪ್ ನೀರಿಗೆ ಸೋಂಪು ಕಾಳುಗಳನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಿರಿ. ಬಳಿಕ ಸೋಸಿ ಕುಡಿಯಿರಿ. ನಿಮಗೆ ರುಚಿ ಬೇಕಿದ್ದರೆ ಒಂದು ಚಮಚ ಜೇನುತುಪ್ಪ ಬೆರಸಬಹುದು.

  ಅದೇ ರೀತಿ ಶುಂಠಿ ಚಹಾ ಮೂಲಕ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದು. ಹಾಗೆಯೇ ಆಹಾರದೊಂದಿಗೆ ಶುಂಠಿ ಚಟ್ನಿ ಮಾಡಿ ತಿನ್ನುವುದರಿಂದ ಸಹ ಹೊಟ್ಟೆ ಉಬ್ಬರದ ಸಮಸ್ಯೆ ದೂರವಾಗುತ್ತದೆ.

  ಇನ್ನು ಈ ಸಮಸ್ಯೆ ಪ್ರತಿನಿತ್ಯ ಕಾಡುತ್ತಿದ್ದರೆ, ನಿಂಬೆ ರಸದ ಮೊರೆ ಹೋಗಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ನೀವು ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಹಿಡಿ ಕುಡಿಯುವುದು ಉತ್ತಮ. ಹಾಗೆಯೇ ಊಟವಾದ ಬಳಿಕ ಒಂದು ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಇದರಿಂದ ಸಹ ಹೊಟ್ಟೆ ಉಬ್ಬರ ಸಮಸ್ಯೆ ಕಡಿಮೆಯಾಗುತ್ತದೆ.
  Published by:zahir
  First published: