ಶೀತದಿಂದ ಮೂಗು ಕಟ್ಟಿದರೆ ಇನ್ಮುಂದೆ ಹೀಗೆ ಮಾಡಿ

home remedies: ಶೀತಕ್ಕೆ  ಪರಿಣಾಮಕಾರಿ ಪರಿಹಾರ ಎಂದರೆ ಟೊಮಾಟೊ ಸೂಪ್. ಬೆಳ್ಳುಳ್ಳಿ, ನಿಂಬೆ ರಸ, ಕರಿ ಮೆಣಸಿನ ಪುಡಿ ಹಾಕಿ ಮಾಡಿದ ಟೊಮೆಟೊ ಸೂಪ್ ಕುಡಿಯುವುದರಿಂದ ಕೂಡ ಮೂಗು ಕಟ್ಟುವಿಕೆಯಿಂದ ಮುಕ್ತಿ ಪಡೆಯಬಹುದು.

zahir | news18-kannada
Updated:September 19, 2019, 1:43 PM IST
ಶೀತದಿಂದ ಮೂಗು ಕಟ್ಟಿದರೆ ಇನ್ಮುಂದೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • Share this:
ಶೀತವಾದಾಗ ಗಂಟಲು ಮೂಗು ಕಟ್ಟಿದಂತಾಗುತ್ತದೆ. ಅದರಲ್ಲೂ ಶೀತದಿಂದ ಮೂಗು ಕಟ್ಟಿದರೆ ಉಸಿರಾಡುವುದು ಕೂಡ ಕಷ್ಟ. ಇದರಿಂದಾಗಿ ನಿದ್ರೆಯ ಸಮಸ್ಯೆ ತಲೆದೂರುತ್ತದೆ. ಸಾಮಾನ್ಯವಾಗಿ ಶೀತದಿಂದ ಮೂಗು ಕಟ್ಟಿದರೆ, ಕೆಲ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲ ಟಿಪ್ಸ್​ಗಳನ್ನು ಇಲ್ಲಿ ನೀಡಲಾಗಿದೆ.

ಬಿಸಿ ಬಿಸಿ ಪಾನೀಯ:
ಶೀತದಿಂದ ಮೂಗು ಕಟ್ಟಿದರೆ ಬಿಸಿ ಪಾನೀಯವನ್ನು ಹೆಚ್ಚಾಗಿ ಕುಡಿಯಿರಿ. ಬಿಸಿ ಬಿಸಿಯಾದ ಹರ್ಬಲ್ ಟೀ ಉತ್ತಮ. ಇನ್ನು ಶುಂಠಿ, ಏಲಕ್ಕಿ ಟೀ ಕುಡಿಯುವುದರಿಂದ ಕೂಡ ಊದಿದ ಮೂಗಿನ ನರಗಳು ಚಿಕ್ಕದಾಗುತ್ತದೆ. ಇದರಿಂದ ಮೂಗಿನಿಂದಲೇ ಉಸಿರಾಡಲು ಸಾಧ್ಯವಾಗುತ್ತದೆ.

ಬಿಸಿ ನೀರಿನ ಸ್ನಾನ:
ಶೀತ ಅಥವಾ ಮೂಗು ಕಟ್ಟುವಿಕೆ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ತಣ್ಣೀರಿನಲ್ಲಿ ಸ್ನಾನ ಮಾಡಬೇಡಿ. ಇಂತಹ ಸಂದರ್ಭದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ದೇಹ ಬಿಸಿಯಾಗುವುದಲ್ಲದೆ, ಊದಿಕೊಂಡ ನರಗಳು ಚಿಕ್ಕದಾಗುತ್ತದೆ. ಇದರಿಂದ ಬ್ಲಾಕ್ ಆದ ಮೂಗು ತೆರೆದುಕೊಳ್ಳುತ್ತದೆ.

ಹಬೆ ಹಿಡಿಯುವುದು:
ಶೀತದ ಸಂದರ್ಭದಲ್ಲಿ ಹಬೆ ತೆಗೆದುಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಮೂಗು ಕಟ್ಟುವಿಕೆಗೂ ಅನ್ವಯಿಸುತ್ತದೆ.  ಬಿಸಿ ನೀರಿಗೆ ಸ್ವಲ್ಪ ವಿಕ್ಸ್ ಅಥವಾ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳಬೇಕು. ಸಂಪೂರ್ಣ ಹಬೆಯನ್ನು ಹೀರಿಕೊಳ್ಳಲು ಸುತ್ತಲೂ ಕವರ್​ ಮಾಡಿ 5 ರಿಂದ 10 ನಿಮಿಷ ಹಬೆಗೆ ಮುಖ ಒಡ್ಡಿದರೆ ಮೂಗು ಕಟ್ಟುವಿಕೆ ಸಮಸ್ಯೆಗೆ ಪರಿಹಾರ ಕಾಣಬಹುದು.ಮಸಾಲೆಯುಕ್ತ ಕಷಾಯ:
ಮೂಗು ಕಟ್ಟಿದಾಗ ಹೆಚ್ಚು ಖಾರಯುಕ್ತ ಆಹಾರಗಳನ್ನು ಸೇವಿಸಿ. ಅಥವಾ ಕರಿಮೆಣಸಿನ ಪುಡಿ, ಶುಂಠಿ ಕಷಾಯವನ್ನು ಮಾಡಿ ಕುಡಿಯಿರಿ. ಇದರಿಂದ ಶೀತ ಕಡಿಮೆಯಾಗುವುದಲ್ಲದೆ, ಮೂಗು ಕಟ್ಟುವಿಕೆ ದೂರವಾಗುತ್ತದೆ.

ಬಿಸಿ ನೀರು:
ಉಗುರು ಚೆಚ್ಚಗಿನ ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಕಲಸಿ. ಬಳಿಕ ಅದನ್ನು ನಿಧಾನಕ್ಕೆ ಮೂಗಿನ ಮೇಲೆ ಸುರಿಯುವುದರಿಂದ ಮೂಗು ಕಟ್ಟುವಿಕೆಯನ್ನು ದೂರ ಮಾಡಬಹುದು.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

ಟೊಮೆಟೊ ಸೂಪ್:
ಶೀತಕ್ಕೆ  ಪರಿಣಾಮಕಾರಿ ಪರಿಹಾರ ಎಂದರೆ ಟೊಮಾಟೊ ಸೂಪ್. ಬೆಳ್ಳುಳ್ಳಿ, ನಿಂಬೆ ರಸ, ಕರಿ ಮೆಣಸಿನ ಪುಡಿ ಹಾಕಿ ಮಾಡಿದ ಟೊಮೆಟೊ ಸೂಪ್ ಕುಡಿಯುವುದರಿಂದ ಕೂಡ ಮೂಗು ಕಟ್ಟುವಿಕೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ಜಿಯೋ  ಡಿಟಿಹೆಚ್​ ಎಫೆಕ್ಟ್: ಗ್ರಾಹಕರಿಗೆ ಉಚಿತ ಸೇವೆ, ಕ್ಯಾಶ್​ಬ್ಯಾಕ್ ಆಫರ್ ​ನೀಡಿದ ಡಿಶ್ ಟಿವಿ ಕಂಪೆನಿಗಳು

ಈರುಳ್ಳಿ:
ಈರುಳ್ಳಿಯ ವಾಸನೆಯಿಂದ ಕೂಡ ಮೂಗು ಕಟ್ಟುವಿಕೆಗೆ ಪರಿಹಾರ ಕಾಣಬಹುದು. ಈರುಳ್ಳಿಯನ್ನು ಕತ್ತರಿಸಿ ಅದರ ವಾಸನೆಯನ್ನು ಗ್ರಹಿಸುವುದರಿಂದ ಕಟ್ಟಿದ ಮೂಗನ್ನು ಸರಿಪಡಿಸಬಹುದು.

ಇದನ್ನೂ ಓದಿ: ನನ್ನ ಮಗಳು ನನ್ನ ಬಳಿ ಬರೋದಿಲ್ಲ..: ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading