• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Periods Cramp: ಪಿರಿಯಡ್ಸ್​ ಸಮಯದಲ್ಲಿ ಹೊಟ್ಟೆ ನೋವು ಕಡಿಮೆ ಮಾಡೋಕೆ ಏನೇನೋ ಮಾಡ್ಬೇಡಿ, ಈ ಟಿಪ್ಸ್ ಫಾಲೋ ಮಾಡಿ ಸಾಕು

Periods Cramp: ಪಿರಿಯಡ್ಸ್​ ಸಮಯದಲ್ಲಿ ಹೊಟ್ಟೆ ನೋವು ಕಡಿಮೆ ಮಾಡೋಕೆ ಏನೇನೋ ಮಾಡ್ಬೇಡಿ, ಈ ಟಿಪ್ಸ್ ಫಾಲೋ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Home Remedies: ಈ ಹೂವಿನ ಟೀ ಬಗ್ಗೆ ಬಹಳಷ್ಟು ಜನರು ಕೇಳಿರುತ್ತಾರೆ, ಆದರೆ ಅದನ್ನು ಟ್ರೈ ಮಾಡಿರುವುದಿಲ್ಲ. ಆದರೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಇದನ್ನು ಕುಡಿದು ನೋಡಿ.

  • Share this:

ಒತ್ತಡ (Stress), ಹಾರ್ಮೋನಲ್ ಸಮಸ್ಯೆ, ನಿಯಮಿತ ತಿಂಗಳ (Monthly periods cycle) ಸೈಕಲ್​ನಲ್ಲಿ  ಏರುಪೇರು ಸೇರಿದಂತೆ ವಿವಿಧ ಸಮಸ್ಯೆಗಳ ಕಾರಣದಿಂದ ಬಹುತೇಕ ಮಹಿಳೆಯರು ತಮ್ಮ ಪಿರಿಯಡ್ಸ್​ ಸಮಯದಲ್ಲಿ ತಡೆಯಲಾರದ ಹೊಟ್ಟೆನೋವನ್ನು (Periods Cramp)  ಅನುಭವಿಸುತ್ತಾರೆ. ಪ್ರತಿ ತಿಂಗಳು ಈ ನೋವನ್ನು ಅನುಭವಿಸುವುದು ಬಹಳ ಕಷ್ಟ. ಈ ನೋವಿನಿಂದ ಮುಕ್ತಿ ಪಡೆಯಲು ಮಹಿಳೆಯರು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಎಲ್ಲರಿಗೂ ಎಲ್ಲವೂ ಸಾಧ್ಯವಿಲ್ಲ. ಈ ನೋವಿನಿಂದ ಪರಿಹಾರ ಪಡೆಯಲು ಏನು ಮಾಡಬೇಕು ಎಂಬುದನ್ನ ಆಯುರ್ವೇದ ತಜ್ಞೆ ಡಾ ರೇಷ್ಮಾ ಜೈನ್ ಅವರು ನ್ಯೂಸ್​ 18 ಜೊತೆ ಹಂಚಿಕೊಂಡಿದ್ದು, ಇಲ್ಲಿದೆ ಆ ಟಿಪ್ಸ್​ಗಳು.   


ಬಿಸಿ ನೀರಿನ ಬ್ಯಾಗ್


​ಈ ಹಾಟ್​ ವಾಟರ್ ಬ್ಯಾಗ್​ ಹಲವಾರು ಸಮಸ್ಯೆಗಳಿಗೆ ಪರಿಹಾರ ಎಂದರೆ ತಪ್ಪಲ್ಲ. ಬೆನ್ನು ನೋವಿದ್ದಾಗ ಅಥವಾ ಬಿದ್ದು ನೋವಾದಾಗ ಸಹ ಇದನ್ನು ಬಳಸಲು ಹಲವಾರು ಜನರು ಸಲಹೆ ನೀಡುತ್ತಾರೆ. ಬಿಸಿ ನೀರನ್ನು ಹಾಟ್ ವಾಟರ್ ಬ್ಯಾಗ್‍ನಲ್ಲಿ ಅಥವಾ ಒಂದು ಗಾಜಿನ ಬಾಟಲಿಯಲ್ಲಿ ಬಿಸಿ ನೀರನ್ನು ಹಾಕಿ ಶಾಖವನ್ನು ದೇಹಕ್ಕೆ ನೀಡುವುದು ನಿಜಕ್ಕೂ ಬೇಗ ಹೊಟ್ಟೆ ನೋವಿಗೆ ಮುಕ್ತಿ ನೀಡುತ್ತದೆ.


ನಿಮಗೆ ಬೆನ್ನು ನೋವು, ಹೊಟ್ಟೆ ನೋವು ಸೇರಿದಂತೆ ಎಲ್ಲೆಲ್ಲಿ ನೋವು ಇರುತ್ತದೆಯೋ ಅಲ್ಲಿ ಶಾಖ ನೀಡಿ. ಮುಖ್ಯವಾಗಿ ಇದನ್ನು 30 ನಿಮಿಷಗಳ ಕಾಲ ಮಾಡುವುದು ಪ್ರಯೋಜನ ನೀಡುತ್ತದೆ. ಬಿಸಿ ನೀರಿನ ಶಾಖದ ಕಾರಣ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ. ಅಲ್ಲದೇ ನೀವು ಸ್ನಾನ ಮಾಡುವಾಗ ಬಿಸಿ ಬಿಸಿ ನೀರನ್ನು ಹೊಟ್ಟೆಯ ಮೇಲೆ ಹಾಕಿದರೆ ರಿಲೀಫ್​ ಆಗುತ್ತದೆ.


ಹರಳೆಣ್ಣೆಗಿಂತ ಬೇರೆ ಮದ್ದಿಲ್ಲ


ಹೌದು ಈ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ. ನಿಮ್ಮ ಪಿರಿಯಡ್ಸ್​ ಸಮಯದಲ್ಲಿ ಕಾಡುವ ನೋವಿಗೆ ಈ ಹರಳೆಣ್ಣೆ ಪರಿಹಾರ. ನೀವು ಹರಳೆಣ್ಣೆಯನ್ನು ನೇರವಾಗಿ ಹೊಕ್ಕುಳ ಭಾಗದಲ್ಲಿ ಹಚ್ಚಿ ಬಿಡಬಹುದು. ಅಥವಾ ಅದನ್ನು ಹತ್ತಿಯಿಂದ ಹಚ್ಚಿ ಅದರ ಮೇಲೆ ಹಾಟ್​ ವಾಟರ್ ಬ್ಯಾಗ್​ ಇಟ್ಟರೆ ಸ್ವಲ್ಪ ಸಮಯದಲ್ಲಿ ನಿಮಗೆ ಪರಿಹಾರ ಸಿಗುತ್ತದೆ. ವೈದ್ಯರ ಪ್ರಕಾರ ಇದು ಅತ್ಯುತ್ತಮ ಪರಿಹಾರ. ಕೇವಲ ಅರ್ಧ ಗಂಟೆ ಹೀಗೆ ಮಾಡಿದ್ರೆ ಸಾಕು, ಬಹಳಷ್ಟು ನೋವು ನಿವಾರಣೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ಪ್ರಸೂತಿ ತಜ್ಞೆ ಡಾ ರೇಷ್ಮಾ.


ಇದನ್ನೂ ಓದಿ: ನಿಮ್ಮ ದೇಹದ ತೂಕ ಕಡಿಮೆ ಆಗ್ತಿಲ್ಲ ಅಂತ ಚಿಂತೆನಾ? ಹಾಗಿದ್ರೆ ಇವುಗಳ ಬಗ್ಗೆ ಸ್ವಲ್ಪ ಗಮನ ಕೊಡಿ


ಇಂಗು ಮತ್ತು ತುಪ್ಪ


ಇಂಗು ಸ್ವಲ್ಪ ಬಳಕೆ ಮಾಡಿದರೂ ಸಹ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಗಳನ್ನು ನೀಡುತ್ತದೆ. ನೀವು ಹೊಟ್ಟೆ ನೋವು ಕಡಿಮೆ ಮಾಡಲು ಹೀಗೆ ಮಾಡಿ ತಿನ್ನಿ ಸಾಕು.  ಒಂದು ಸಣ್ಣ ಸೌಟು ಅಥವಾ ಒಗ್ಗರಣೆ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ ಹಾಕಿ, 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಅದನ್ನು ಮಿಕ್ಸ್ ಮಾಡಿದ ನಂತರ ತಣ್ಣಗಾದ ಮೇಲೆ ತಿಂದರೆ ನಿಮ್ಮ ಹೊಟ್ಟೆ ನೋವಿಗೆ ಬೈ ಬೈ ಹೇಳಬಹುದು.


ಕ್ಯಾಮೊಮೈಲ್ ಚಹಾ


ಈ ಹೂವಿನ ಟೀ ಬಗ್ಗೆ ಬಹಳಷ್ಟು ಜನರು ಕೇಳಿರುತ್ತಾರೆ, ಆದರೆ ಅದನ್ನು ಟ್ರೈ ಮಾಡಿರುವುದಿಲ್ಲ. ಆದರೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಇದನ್ನು ಕುಡಿದು ನೋಡಿ.


ಕ್ಯಾಮೊಮೈಲ್ ಚಹಾ ಮಾಡುವ ವಿಧಾನ


4 ರಿಂದ 5 ಕ್ಯಾಮೊಮೈಲ್ ಹೂವುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕಪ್ ನೀರನ್ನು ಕುದಿಯಲು ಬಿಡಿ, 1 ನಿಮಿಷದ ನಂತರ ಆ ನೀರಿಗೆ ಈ ಹೂಗಳನ್ನು ಸೇರಿಸಿ, ಅರ್ಧ ಕಪ್ ಮಾಡಿಕೊಂಡು ಕುಡಿಯಿರಿ. ಇಲ್ಲದಿದ್ದಲ್ಲಿ ಇದರ ಚಹಾ ಪ್ಯಾಕೆಟ್​ಮಾರ್ಕೆಟ್​ನಲ್ಲಿ ಲಭ್ಯವಿದ್ದು ಖರೀದಿಸಿ ಕುಡಿಯಬಹುದು.


ಇದನ್ನೂ ಓದಿ: ಹೆಚ್ಚು ಪ್ರೋಟೀನ್ ಇರುವ ಈ 5 ಆರೋಗ್ಯಕರ ಪದಾರ್ಥಗಳನ್ನು ಮನೆಯಲ್ಲಿಯೇ ಟ್ರೈ ಮಾಡಿ


 ಅಜ್ವೈನ್​ ಮತ್ತು ಜೀರಿಗೆ


ಜೀರಿಗೆ ಕಷಾಯ, ಜೀರಿಗೆ ನೀರು ಇದು ಸಾಮಾನ್ಯವಾಗಿ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಈ ಪಿರಿಯಡ್ಸ್​ ಸಮಯದಲ್ಲಿ ಹೊಟ್ಟೆ ನೋವಿದ್ದರೆ, ಜೀರಿಗೆ ಹಾಗೂ ಅಜ್ವೈನ್​ 2 ಚಮಚ ತೆಗೆದುಕೊಂಡು ಅದಕ್ಕೆ 2 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ. ಅದು ಅರ್ಧವಾಗುವ ತನಕ ಕುದಿಸಿ ನಂತರ ಆಗಾಗ ಅದನ್ನು ಕುಡಿಯುತ್ತಿದ್ದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

top videos
    First published: