Kidney Stone: ಮೂತ್ರಪಿಂಡದ ಕಲ್ಲುಗಳಿಗೆ ಮನೆಯಲ್ಲಿನ ಈ ವಸ್ತುಗಳಲ್ಲಿದೆ ಪರಿಹಾರ

Health Tips: ತುಳಸಿ ರಸದಲ್ಲಿ  ಆ್ಯಂಟಿ ಆಕ್ಸಿಡೆಂಟ್​ಗಳಿದ್ದು ಮತ್ತು ಉರಿಯೂತದ ಏಜೆಂಟ್‌ಗಳಿವೆ  ಹಾಗಾಗಿ ಇದು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಚಹಾ ತಯಾರಿಸಲು ತಾಜಾ ಅಥವಾ ಒಣಗಿದ ತುಳಸಿ ಎಲೆಗಳನ್ನು ಬಳಸಿ ಮತ್ತು ದಿನಕ್ಕೆ 2 ದಿಂದ 3 ಕಪ್ ಕುಡಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೂತ್ರ ವಿಸರ್ಜನೆಯ ಸಮಯದಲ್ಲಿ ಅತಿಯಾದ ನೋವು(Pain), ಹೊಟ್ಟೆ ನೋವು ಮತ್ತು ವಾಕರಿಕೆ ಈ ಲಕ್ಷಣಗಳು ಹೆಚ್ಚು ದಿನಗಳವರೆಗೆ ಕಾಣಿಸಿಕೊಂಡರೆ ಮೂತ್ರಪಿಂಡದಲ್ಲಿ ಕಲ್ಲುಗಳಿರುವ(Kidney Stone) ಸಾಧ್ಯತೆ ಇರುತ್ತದೆ. ಈ ಕಲ್ಲುಗಳು ಚಿಕ್ಕದಾಗಿದ್ದರೆ ಅವು ಮೂತ್ರದ ಜೊತೆಗೆ ಹೊರಗೆ ಹೋಗುತ್ತವೆ. ಆದರೆ ಇವು ದೊಡ್ಡದಾಗಿದ್ದರೆ ಮಾತ್ರ  ಹೆಚ್ಚು ಸಮಸ್ಯೆಯಾಗುತ್ತದೆ. ಹಾಗಾದ್ರೆ ಮನೆಯಲ್ಲಿಯೇ(Home Remedies) ಮೂತ್ರ ಕಲ್ಲುಗಳಿಗೆ ಪರಿಹಾರ ಪಡೆಯಲು ಇಲ್ಲಿದೆ ಟಿಪ್ಸ್

ಹೈಡ್ರೇಟೆಡ್ ಆಗಿರುವುದು ಮುಖ್ಯ

ಸಾಕಷ್ಟು  ನೀರನ್ನು ಮತ್ತು ನೀರಿನ ಅಂಶಗಳನ್ನು ಕುಡಿಯುವುದು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ ಮತ್ತು ಹೊಸ ಕಲ್ಲುಗಳು  ಉಂಟಾಗುವುದನ್ನ ತಡೆಯುತ್ತದೆ. ಇದು ವಿಷವನ್ನು ಹೊರಹಾಕುವುದಲ್ಲದೆ, ನಿಮ್ಮ ಮೂತ್ರನಾಳದ ಮೂಲಕ ಕಲ್ಲುಗಳು ಮತ್ತು ಕಲ್ಮಶಗಳು ಹೊರ ಹೋಗಲು ಸಹಾಯ ಮಾಡುತ್ತದೆ.

ಕೆಳಗೆ  ನೀಡಲಾದ ಯಾವುದೇ ಮನೆಮದ್ದುಗಳೊಂದಿಗೆ ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಕೆಲವೊಂದು ವಸ್ತುಗಳ ಅಲರ್ಜಿ ಇದ್ದಲ್ಲಿ ಬೇರೆ ಸಮಸ್ಯೆ ಉಂಟಾಗುತ್ತದೆ.

ನಿಂಬೆ ರಸ

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡಿ-ಆರೋಗ್ಯ ಲಾಭ ಪಡೆಯಿರಿ

ನಿಮಗೆ ಕಲ್ಲು ಇರುವುದು ಖಚಿತವಾದಲ್ಲಿ  ನಿಮಗೆ ಎಷ್ಟು  ಬೇಕೋ ಅಷ್ಟು ಬಾರಿ ನಿಮ್ಮ ನೀರಿಗೆ ನಿಂಬೆ ರಸವನ್ನು ಹಾಕಿ ಸೇವನೆ ಮಾಡಬಹುದು.  ನಿಂಬೆಹಣ್ಣಿನಲ್ಲಿ ಸಿಟ್ರೇಟ್ ಇದೆ, ಇದು ಕಲ್ಲುಗಳು ಉಂಟಾಗದಂತೆ ತಡೆಯುವ ರಾಸಾಯನಿಕವಾಗಿದೆ. ಸಿಟ್ರೇಟ್ ಸಣ್ಣ ಕಲ್ಲುಗಳನ್ನು ಒಡೆಯುತ್ತದೆ. ನಿಂಬೆ ರಸವು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ಇದು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ  ಅಗತ್ಯವಾಗುವಷ್ಟು ವಿಟಮಿನ್ ಸಿ ನೀಡುತ್ತದೆ.

ತುಳಸಿ ರಸ ಅಥವಾ ಟೀ

ತುಳಸಿಯಲ್ಲಿ ಅಸಿಟಿಕ್ ಆಮ್ಲವಿದೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪೋಷಕಾಂಶಗಳಿಂದ ಕೂಡಿದೆ. ಈ ಪರಿಹಾರವನ್ನು ಸಾಂಪ್ರದಾಯಿಕವಾಗಿ ಜೀರ್ಣಕಾರಿ ಮತ್ತು ಉರಿಯೂತದ ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ.

ತುಳಸಿ ರಸದಲ್ಲಿ  ಆ್ಯಂಟಿ ಆಕ್ಸಿಡೆಂಟ್​ಗಳಿದ್ದು ಮತ್ತು ಉರಿಯೂತದ ಏಜೆಂಟ್‌ಗಳಿವೆ  ಹಾಗಾಗಿ ಇದು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಚಹಾ ತಯಾರಿಸಲು ತಾಜಾ ಅಥವಾ ಒಣಗಿದ ತುಳಸಿ ಎಲೆಗಳನ್ನು ಬಳಸಿ ಮತ್ತು ದಿನಕ್ಕೆ 2 ದಿಂದ 3 ಕಪ್ ಕುಡಿಯಿರಿ. ನೀವು ತಾಜಾ ತುಳಸಿಯನ್ನು ಜ್ಯೂಸರ್‌ನಲ್ಲಿ ಜ್ಯೂಸ್ ಮಾಡಬಹುದು ಅಥವಾ ಅದನ್ನು ಸ್ಮೂಥಿಗೆ ಸೇರಿಸಿಕೊಳ್ಳಬಹುದು.

ನೀವು ಒಂದು ಸಮಯದಲ್ಲಿ 6 ವಾರಗಳಿಗಿಂತ ಹೆಚ್ಚು ಕಾಲ ತುಳಸಿ ರಸವನ್ನು ಬಳಸಬಾರದು.  ಹೆಚ್ಚು ಬಳಕೆ ಮಾಡುವುದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆಪಲ್ ಸೈಡರ್ ವಿನೆಗರ್

ಆ್ಯಪಲ್  ಸೈಡರ್ ವಿನೆಗರ್ ನಲ್ಲಿ ಅಸಿಟಿಕ್ ಆಮ್ಲವಿದೆ. ಅಸಿಟಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ.  ಅಲ್ಲದೇ ಇದು ಆಪಲ್ ಸೈಡರ್ ವಿನೆಗರ್ ಕಲ್ಲುಗಳಿಂದ ಉಂಟಾಗುವ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ನಿಂದ ಹಲವಾರು ಇತರ ಆರೋಗ್ಯ ಪ್ರಯೋಜನಗಳಿವೆ. ಒಂದು ಪ್ರಯೋಗಾಲಯ ಅಧ್ಯಯನವು ಆಪಲ್ ಸೈಡರ್ ವಿನೆಗರ್ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಕಂಡುಹಿಡಿದಿದೆ, ಆದರೂ ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ.

6 ರಿಂದ 8 ಚಮಚ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ಮಿಶ್ರಣವನ್ನು ಆಗಾಗ ಕುಡಿಯುತ್ತಿರಿ.  ನೀವು ಈ ಮಿಶ್ರಣವನ್ನು  ಹೆಚ್ಚು ಬಾರಿ ಸಹ ಸೇವಿಸಬಾರದು. ನೀವು ಅದನ್ನು ನೇರವಾಗಿ ಸಲಾಡ್‌ಗಳಲ್ಲಿ ಬಳಸಬಹುದು.

ಇದನ್ನೂ ಓದಿ: ನೀವು ಕಾಫಿ ಪ್ರಿಯರ ಹಾಗಾದ್ರೆ ಇದನ್ನು ಓದಲೇ ಬೇಕು..!

ಹೆಚ್ಚು ಸೇವನೆ ಮಾಡುವುದು ದೇಹದಲ್ಲಿ ಪೊಟ್ಯಾಸಿಯಮ್ ಮತ್ತು ಆಸ್ಟಿಯೊಪೊರೋಸಿಸ್ಗೆ ಕಡಿಮೆ ಮಾಡುತ್ತದೆ. ಮಧುಮೇಹ ಇರುವವರು ಈ ಮಿಶ್ರಣವನ್ನು ಕುಡಿಯುವಾಗ ಎಚ್ಚರಿಕೆ ವಹಿಸಬೇಕು. ದಿನವಿಡೀ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು.
Published by:Sandhya M
First published: