White Hair: ಬಿಳಿ ಕೂದಲಿನ ಸಮಸ್ಯೆಗೆ ಅಂಗೈನಲ್ಲಿದೆ ಪರಿಹಾರ

Home Remedies: ಇಂದು ನಮ್ಮ ಜೀವನವೂ ಒತ್ತಡದಿಂದ ತುಂಬಿ ಹೋಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಆದರೆ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕು. ನೀವು ಹಿತವಾದ ಸಂಗೀತವನ್ನು ಕೇಳಬಹುದು, ಧ್ಯಾನ ಮಾಡಬಹುದು, ವ್ಯಾಯಾಮ ಮಾಡಬಹುದು, ಯೋಗ ಅಥವಾ ಇನ್ನೇನಾದರೂ ಮಾಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಜಗತ್ತಿನಲ್ಲಿ ಕೂದಲು(Hair) ಬಹು ಬೇಗನೆ ಬಿಳಿಯಾಗುವುದು(White hair) ದುರದೃಷ್ಟವಶಾತ್ ಕೆಮ್ಮು ಮತ್ತು ಶೀತದಂತೆಯೇ ಸಾಮಾನ್ಯವಾಗಿದೆ. ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಅಪಾಯಕಾರಿ ದರದಲ್ಲಿ ಬಿಳಿ ಕುದಲು ಹೊಂದಿರುವ ಜನರನ್ನು ನೋಡಿರುತ್ತೇವೆ. ಸಾಮಾನ್ಯವಾಗಿ ಇದು ವಂಶವಾಹಿನಿಯಾಗಿ ಬರುತ್ತದೆ ಎನ್ನಲಾಗುತ್ತದೆ. ಆದರೆ ಅದು ಸುಳ್ಳು. ಬಹು ಬೇಗನೆ ಕೂದಲು ಬಿಳಿಯಾಗುವುದಕ್ಕೆ ಕಾರಣವಾಗುವ ಹಲವಾರು ಅಂಶಗಳಿವೆ. ಮೊದಲ ಮತ್ತು ಅಗ್ರಗಣ್ಯ ಅಂಶವೆಂದರೆ ಅಸಮತೋಲಿತ ಆಹಾರ. ನಿಮ್ಮಫಾಸ್ಟ್​ ಫುಡ್, ಬಿಳಿ ಹಿಟ್ಟಿನಿಂದ ಮಾಡಿದ ಭಕ್ಷ್ಯಗಳು, ಪಾನೀಯಗಳು ಮತ್ತು ಸಕ್ಕರೆಗಳನ್ನು ಹೊಂದಿರುವ ಪದಾರ್ಥಗಳು ಬಿಳಿ ಕೂದಲಿಗೆ ಕಾರಣವಾಗುತ್ತದೆ. ನೀವು ಆರೋಗ್ಯಕರ ಚರ್ಮ(Skin) ಅಥವಾ ಕೂದಲನ್ನು ಪಡೆಯಲು ಇದು ಅಡ್ಡವಾಗುತ್ತದೆ.  

ಬಿ 12, ಕಬ್ಬಿಣ ಮತ್ತು ಒಮೆಗಾ 3 ಇರುವ ಆಹಾರಗಳನ್ನು ಸೇವನೆ ಮಾಡುವುದು ಅಗತ್ಯ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯದ ಸಲುವಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಸಾಕಷ್ಟು ತಾಜಾ ಸಲಾಡ್‌ಗಳು, ಮೀನು ಮತ್ತು ಮಾಂಸ, ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ನೀವು ಸೇವನೆ ಮಾಡಬೇಕು. ಪಾನೀಯಗಳಿಗೆ ಬಂದರೆ, ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿ ಮತ್ತು ತೆಂಗಿನ ನೀರು, ನಿಂಬೆ ನೀರು, ಮಜ್ಜಿಗೆ ಅಥವಾ ತಾಜಾ ಹಣ್ಣಿನ ರಸವನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.

ಇಂದು ನಮ್ಮ ಜೀವನವೂ ಒತ್ತಡದಿಂದ ತುಂಬಿ ಹೋಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಆದರೆ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕು. ನೀವು ಹಿತವಾದ ಸಂಗೀತವನ್ನು ಕೇಳಬಹುದು, ಧ್ಯಾನ ಮಾಡಬಹುದು, ವ್ಯಾಯಾಮ ಮಾಡಬಹುದು, ಯೋಗ ಅಥವಾ ಇನ್ನೇನಾದರೂ ಮಾಡಬಹುದು ಅದು ನಿಮ್ಮನ್ನು ಸ್ವಲ್ಪ ಸಮಯದವರೆಗೆ ಸ್ವಿಚ್ ಆಫ್ ಮಾಡುತ್ತದೆ ಮತ್ತು ನಿಮ್ಮ ಭುಜಗಳು ಮತ್ತು ಬೆನ್ನಿನ ಒತ್ತಡ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ಬಿಳಿ ಕೂದಲನ್ನು ತಡೆಯುವುದು ಹೇಗೆ?

ಇದನ್ನೂ ಓದಿ: ಮನೆಯಲ್ಲಿ ಪ್ರತಿದಿನ ಈ ಕೆಲಸಗಳನ್ನು ಮಾಡಿದ್ರೆ ಜಿಮ್​ಗೆ ಹೋಗೋದೇ ಬೇಡ

ನೀವು ನಿಯಮಿತ ಕೂದಲ ರಕ್ಷಣೆಯನ್ನು ಮಾಡುತ್ತಿಲ್ಲ ಎಂದರೆ ತಕ್ಷನವೇ ರೂಢಿಸಿಕೊಳ್ಳಿ. ನಿಮ್ಮ ಸೌಂದರ್ಯವನ್ನು ವಿಶೇಷ ಸಂದರ್ಭಗಳಲ್ಲಿ ಕಾಯ್ದಿರಿಸುವ ಬದಲು ನೀವು ಹೆಚ್ಚು ಗಮನ ಹರಿಸಲು ಪ್ರಾರಂಭಿಸಿ. ನೀವು ನಿಯಮಿತವಾಗಿ ಮತ್ತು ಶ್ರದ್ಧೆಯಿಂದ ನಿಮ್ಮ ಕೂದಲು ಮತ್ತು ಚರ್ಮದ ಕಾಳಜಿ ವಹಿಸಿದಾಗ ಮಾತ್ರ ಕೂದಲನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ಕೆಲವೊಂದು ವಸ್ತುಗಳನ್ನು ಬಳಸಿ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಯಾವುವು ಆ ವಸ್ತುಗಳು ಇಲ್ಲಿದೆ.

ನೆಲ್ಲಿ ಪೌಡರ್

1 ಕಪ್ ನೆಲ್ಲಿಕಾಯಿ ಪುಡಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಬಿಸಿ ಮಾಡಿ. ಅದಕ್ಕೆ 500 ಮಿಲಿ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು 20 ನಿಮಿಷಗಳ ಕಾಲ ಬಿಸಿ ಮಾಡಿ. ಅದನ್ನು ತಣ್ಣಗಾಗಲು  ಬಿಡಿ, ತದನಂತರ ಮರುದಿನ ಗಾಳಿಯಾಡದ ಬಾಟಲಿಗೆ ಹಾಕಿ. ಇದನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಾಕಿ ಎಣ್ಣೆ ಮಸಾಜ್ ಆಗಿ ಬಳಸುವುದು ಬಿಳಿ ಕೂದಲಿಗೆ ಪರಿಹಾರ ನೀಡುತ್ತದೆ.

ಕರಿಬೇವು

ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 2 ಟೀಸ್ಪೂನ್ ಆಮ್ಲಾ ಪುಡಿ ಮತ್ತು 2 ಟೀಸ್ಪೂನ್ ಬ್ರಾಹ್ಮಿ ಪುಡಿಯನ್ನು ಹಾಕಿ ರುಬ್ಬಿಕೊಳ್ಳಿ. ಕೂದಲಿನ ಮೇಲೆ ಹೇರ್ ಮಾಸ್ಕ್ ಆಗಿ ಇದನ್ನು ಹಚ್ಚಿ, ಬೇರುಗಳಿಗೆ ಸರಿಯಾಗಿ ಹಚ್ಚುವುದನ್ನ ಮರೆಯಬೇಡಿ. ಒಂದು ಗಂಟೆ ಬಿಟ್ಟು ಶಾಂಪೂ ಬಳಸಿ ತಲೆ ಸ್ನಾನ ಮಾಡಿ.

ತೆಂಗಿನ ಎಣ್ಣೆ

ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಒಟ್ಟಿಗೆ ಸೇರಿಸಿ ಹಚ್ಚುವುದು ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ಈ ಎರಡರ ಸಂಯೋಜನೆಯು ರಾಸಾಯನಿಕ ಕ್ರಿಯೆಯನ್ನು ಉಂಟುಮಾಡುತ್ತದೆ, ಇದು ಸ್ವಲ್ಪ ಸಮಯದವರೆಗೆ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.

ಕಪ್ಪು ಚಹಾ

ಕಪ್ಪು ಚಹಾವು ಬಿಳಿ  ಕೂದಲನ್ನು ತಡೆಯಲು ಸಹಾಯ ಮಾಡುವ ಮತ್ತೊಂದು ಪರಿಣಾಮಕಾರಿ ಅಂಶವಾಗಿದೆ. ತಲೆ ಸ್ನಾನ ಮಾಡಿದ ನಂತರ ಇದನ್ನು ಕಂಡಿಷನರ್‌ ರೀತಿ ಬಳಕೆ ಮಾಡಿ.

ಇದನ್ನೂ ಓದಿ: ಅನಗತ್ಯ ಕೂದಲನ್ನು ತೆಗೆಯಲು ಇಲ್ಲಿದೆ ಸೂಪರ್ ವಿಧಾನಗಳು

ನೀವು ಕಪ್ಪು ಚಹಾ ಮಾಡಲು ಚಹಾ ಎಲೆಗಳನ್ನು 2 ಗಂಟೆಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತು ಅದನ್ನು ನಯವಾದ ಪೇಸ್ಟ್ ಮಾಡಿಕೊಳ್ಳಿ. ಸ್ವಲ್ಪ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮತ್ತು ಕೂದಲನ್ನು ತೊಳೆಯುವ ಮೊದಲು 40 ನಿಮಿಷಗಳ ಕಾಲ ಹೇರ್ ಮಾಸ್ಕ್ ಆಗಿ ಹಚ್ಚಿ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಬಿಳಿ ಕುದಲಿಗೆ ಪರಿಹಾರ ಸಿಗುತ್ತದೆ.
Published by:Sandhya M
First published: