Health Tips: ಸ್ಟ್ರೆಚ್ ಮಾರ್ಕ್​ನಿಂದ ಮುಕ್ತಿ ಬೇಕಾ? ಇಲ್ಲಿದೆ ನೋಡಿ ಮನೆ ಮದ್ದು

Stretch Marks: ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಹಲವಾರು ರೋಗಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.  ಚರ್ಮದ ಹಲವು ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಉತ್ತಮ ಆಯ್ಕೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಗುವಿನ ಜನನದ ನಂತರ ಮತ್ತು ತೂಕ ಇಳಿದ ನಂತರ ಸಾಮಾನ್ಯವಾಗಿ ಸ್ಟ್ರೆಚ್ ಮಾರ್ಕ್ ಉಂಟಾಗುತ್ತದೆ. ಮಹಿಳೆಯರಿಗೆ ಇದೊಂದು ತಲೆನೋವಿನ ಸಂಗತಿ. ಅದನ್ನು ಹೋಗಲಾಡಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅದೆಷ್ಟು ಸರ್ಕಸ್ ಮಾಡುತ್ತಾರೋ ಅವರೇ ಬಲ್ಲರು.  ಅವರು ಏನೇ ಮಾಡಿದರೂ ಅದರಿಂದ ಪರಿಹಾರ ಪಡೆಯುವುದು ಕಷ್ಟಕರವಾಗಿದೆ. ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡಬಹುದು. ಅಂತಹ ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ.

ಹರಳೆಣ್ಣೆ

ಹರಳೆಣ್ಣೆ ಹಲವು ಆರೋಗ್ಕಕರ ಪ್ರಯೋಜನಗಳನ್ನು ಹೊಂದಿದೆ.  ಇನ್ನು ಸ್ಟ್ರೆಚ್ ಮಾರ್ಕ್ ಇರುವ ಕಡೆ ತುಂಬಾ ಒಣ ಚರ್ಮ ಎದ್ದು ಬರುತ್ತದೆ, ಇದು ನೋವುಂಟು ಮಾಡುತ್ತದೆ. ಸ್ಟ್ರೆಚ್ ಮಾರ್ಕ್ ಇರುವ ಕಡೆ  ಹರಳೆಣ್ಣೆ ಹಚ್ಚಿದರೆ, ಚರ್ಮ ಒಣಗುವುದನ್ನ ತಪ್ಪಿಸಬಹುದು. ಅಲ್ಲದೇ ಚರ್ಮ ಒರಟಾಗುವುದಿಲ್ಲ. ಇನ್ನು ಇದನ್ನು ನೀವು ನಿಯಮಿತವಾಗಿ ಮಾಡುವುದು ಒಳ್ಳೆಯದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಹಲವಾರು ರೋಗಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.  ಚರ್ಮದ ಹಲವು ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಉತ್ತಮ ಆಯ್ಕೆ. ಇದರಲ್ಲಿ ಅಮಿನೋ ಕೊಬ್ಬಿನಾಮ್ಲವಿದ್ದು, ಇದನ್ನು ಸೇವನೆ ಮಾಡಿದರೆ, ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಸತ್ತ ಚರ್ಮದ ಕೋಶಗಳನ್ನು ತೆಗೆದು ಹೊಸ ಚರ್ಮ ಬರಲು ಸಹಾಯ ಮಾಡುತ್ತದೆ.

ಆಲಿವ್ ತೈಲ

ಆಲಿವ್ ತೈಲದಲ್ಲಿ ವಿಟಮಿನ್ ಎ, ಡಿ ಮತ್ತು ಇ ಇದೆ. ಈ ಎಲ್ಲಾ ವಿಟಮಿನ್ ಗಳು ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ಚರ್ಮದಲ್ಲಿನ ಸತ್ತ ಕೋಶಗಳನ್ನು ಕಿತ್ತು ಹಾಕಿ, ಚರ್ಮವನ್ನು ಮೊಶ್ಚಿರೈಸ್ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ ಕಾರಣದಿಂದ ತುರಿಕೆ ಉಂಟಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಆಲಿವ್ ಆಯಿಲ್ ಬಳಕೆ ಮಾಡಿ.

ಇದನ್ನೂ ಓದಿ: ಪೇರಲೆಯ ಎಲೆಗಳಲ್ಲಿ ಅಡಗಿದೆ ನಿಮ್ಮ ತ್ವಚೆಯ ಸೌಂದರ್ಯದ ಗುಟ್ಟು

ಸ್ವಲ್ಪ ಆಲಿವ್ ತೈಲ ತೆಗೆದುಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ ಇರುವ ಭಾಗಕ್ಕೆ ಸರಿಯಾಗಿ ಮಸಾಜ್ ಮಾಡಿ . 30 ನಿಮಿಷ ಹಾಗೆ ಬಿಡಿ. ಇದನ್ನ ನಿಯಮಿತವಾಗಿ ಬಳಕೆ  ಮಾಡಿ.

ಆಲೋವೆರಾ

ಆಲೋವೆರಾ ಚರ್ಮದ ಹಲವು  ಸಮಸ್ಯೆಗಳಿಗೆ ರಾಮಬಾಣ ಎಂದು ಹೇಳಲಾಗುತ್ತದೆ. ಕೇವಲ ಚರ್ಮ ಮಾತ್ರವಲ್ಲದೇ ಕೂದಲಿನ ಆರೈಕೆ ಇದು ಹೇಳಿ ಮಾಡಿಸಿದ ವಸ್ತು. ಇದರಲ್ಲಿ, ವಿಟಮಿನ್, ಖನಿಜಾಂಶಗಳು ಸಮೃದ್ಧವಾಗಿದೆ. ನೀವು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಅಲೋವೆರಾವನ್ನು ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಅಥವಾ ತೊಳೆಯಿರಿ.

ಕೋಕಾ ಬಟರ್ ಮತ್ತು ಶಿಯಾ ಬೆಣ್ಣೆ

ಕೋಕಾ ಬಟರ್ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಇದು ಸ್ಟ್ರೆಚ್ ಮಾರ್ಕ್ ನ್ನು ನಿವಾರಣೆ ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: