Home Remedies: ಪ್ರಸವದ ನಂತರದ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಿಕೊಳ್ಳಲು ಮನೆ ಮದ್ದು

ಅರಿಶಿನ ನಮ್ಮೆಲ್ಲರ ಮನೆಯಲ್ಲಿ ಇರುವ ಒಂದು ಔಷಧಿ ಎಂದೇ ಹೇಳಬಹುದು. ಇದನ್ನು ನಾವು ಹಲವಾರು ರೋಗಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅರಿಶಿನ ನಮ್ಮೆಲ್ಲರ ಮನೆಯಲ್ಲಿ ಇರುವ ಒಂದು ಔಷಧಿ (Medicine) ಎಂದೇ ಹೇಳಬಹುದು. ಇದನ್ನು ನಾವು ಹಲವಾರು ರೋಗಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸುತ್ತೇವೆ. ಇದು ಸ್ಟ್ರೆಚ್ ಮಾರ್ಕ್ (Stretch Mark) ಕಡಿಮೆ ಮಾಡಲು ಕೂಡಾ ಬಳಸಬಹುದು. ಅರಿಶಿನ (Turmeric) ಮಾತ್ರವಲ್ಲದೇ ಸಕ್ಕರೆ (Sugar) ಹಾಗು ನಿಂಬೆಹಣ್ಣಿನ ರಸ (Lemon Juice), ತೆಂಗಿನ ಎಣ್ಣೆ (Coconut oil), ಬಾದಾಮಿ ಎಣ್ಣೆ (Almond Oil) ಕೂಡಾ ಪ್ರಸವದ ನಂತರ ಉಂಟಾಗುವ ಸ್ಟ್ರೆಚ್ ಮಾರ್ಕ್ ಕಡಿಮೆಗೊಳಿಸಲು ಬಳಸಬಹುದು.  ಇವೆಲ್ಲವನ್ನೂ ಬಳಸಿ  ಸ್ಟ್ರೆಚ್ ಮಾರ್ಕ್ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಇಲ್ಲಿ ತಿಳಿಯಿರಿ. 

ಹಿಂದಿನ ಕಾಲದಿಂದಲೂ ಸಣ್ಣ ಪುಟ್ಟ ರೋಗಗಳು ಬಂದರೆ, ಅವುಗಳಿಗೆ ಮೊದಲು ನಾವು ದಿನ ನಿತ್ಯ ಬಳಸುವ ಅಥವಾ ಮನೆಯ ಸುತ್ತಮುತ್ತಲು ಸಿಗುವ ಗಿಡ ಮೂಲಿಕೆಗಳಿಂದ ಮನೆಮದ್ದನ್ನು ತಯಾರಿಸಿ ಅವುಗಳನ್ನು ಬಳಸುತ್ತೇವೆ. ಅವುಗಳಿಂದಲೂ ಕಡಿಮೆಯಾಗದಿದ್ದಲ್ಲಿ, ನಂತರ ವೈಧ್ಯರ ಸಲಹೆಯನ್ನು ಪಡೆಯುತ್ತೇವೆ. ಆದರೆ ಪ್ರಸವದ ನಂತರ ಉಂಟಾಗುವ ಸ್ಟ್ರೆಚ್ ಮಾರ್ಕ್ಸ್ ಗಳನ್ನು ಕಡಿಮೆ ಮಾಡಲು ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಕೂಡಾ ಬಳಸಬಹುದು. ಅವು ಯಾವುವು ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.



1. ಅರಿಶಿನ ಮತ್ತು ಶ್ರೀಗಂಧ
ಅರಿಶಿನ ನಮ್ಮೆಲ್ಲರ ಮನೆಯಲ್ಲಿ ಇರುವ ಒಂದು ಔಷಧಿ ಎಂದೇ ಹೇಳಬಹುದು. ಇದನ್ನು ನಾವು ಹಲವಾರು ರೋಗಗಳನ್ನು ಕಡಿಮೆ ಮಾಡಿಕೊಳ್ಳಲು ಬಳಸುತ್ತೇವೆ. ಇದನ್ನು ಸ್ಟ್ರೆಚ್ ಮಾರ್ಕ್‍ ಕಡಿಮೆ ಮಾಡಲು ಕೂಡಾ ಬಳಸಬಹುದು.

  • ಮೊದಲಿಗೆ ಒಂದು ಟೇಬಲ್ ಸ್ಪೂನ್ ತಾಜಾವಾಗಿ ಪುಡಿ ಮಾಡಿದ ಶ್ರೀಗಂಧದ ಪೇಸ್ಟ್ ಅನ್ನು ತೆಗೆದುಕೊಳ್ಳಬೇಕು.

  • ಇದಕ್ಕೆ ಒಂದು ಟೇಬಲ್ ಸ್ಪೂನ್ ತಾಜಾವಾಗಿ ಮಾಡಿದ ಅರಿಶಿನದ ಪೇಸ್ಟ್ ಅನ್ನು ಸೇರಿಸಿ ಮಿಶ್ರಣ ಮಾಡಿ.

  • ನಂತರ ಮಿಶ್ರಣವನ್ನು ಬಾಧಿತ ಪ್ರದೇಶಗಳಿಗೆ ಹಚ್ಚಿರಿ. ಭಾಗಶಃ ಒಣಗಿಸಿ ಮತ್ತು ನಂತರ ಎಲ್ಲವೂ ಹೊರಗೆ ಬರುವವರೆಗೂ ಸ್ಕ್ರಬ್ (ತಿಕ್ಕಿಕೊಳ್ಳಿ) ಮಾಡಿ.

  • ಮಾಡಿದ ನಂತರ ಆ ಜಾಗವನ್ನು ತೊಳೆಯಿರಿ. ಈ ವಿಧಾನವನ್ನು ಪ್ರತೀದಿನ ಸ್ನಾನದ ಮೊದಲು ಪುನರಾವರ್ತಿಸಿ.

    ಮುನ್ನೆಚ್ಚರಿಕೆಗಳು

  • ಸಿದ್ದ ಅರಿಶಿನದ ಪುಡಿಯನ್ನು ತಪ್ಪಿಸಿ, ಬದಲಿಗೆ ತಾಜಾ ಅರಿಶಿನದ ಬೇರುಗಳನ್ನು ಪುಡಿಮಾಡಿ ಬಳಸಿ.

  • ಸ್ಕ್ರಬ್ ಮಾಡುವಾಗ ನಿಧಾನವಾಗಿ ಮಾಡಿ ಮತ್ತು ಹೆಚ್ಚಾಗಿ ಇದನ್ನು ಮಾಡಲು ಹೋಗದಿರಿ.

    ಇದನ್ನೂ ಓದಿ:  ನಾಯಿ ಪ್ರೇಮಿಗಳೇ, ಕಬ್ಬನ್ ಪಾರ್ಕ್​ಗೆ ನಾಯಿಗಳಿಗೆ ನೋ ಎಂಟ್ರಿ!


    2. ಅರಿಶಿನ ಮತ್ತು ನಿಂಬೆ ರಸದ ಪೇಸ್ಟ್
    ಅರಿಶಿನ ಮತ್ತು ನಿಂಬೆ ರಸದಿಂದ ಸ್ಟ್ರೆಚ್ ಮಾರ್ಕ್ ಕಡಿಮೆಗೊಳಿಸಲು ಮತ್ತೊಂದು ಮನೆಮದ್ದನ್ನು ತಿಳಿಯಿರಿ.

  • ಎರಡು ಟೀ ಸ್ಪೂನ್ ಅರಿಶಿನದ ಪೇಸ್ಟ್, ಒಂದು ಟೀ ಸ್ಪೂನ್ ನಿಂಬೆ ರಸ ಮತ್ತು ಒಂದು ಟೀ ಸ್ಪೂನ್ ಸೌತೇಕಾಯಿ ರಸವನ್ನು ತೆಗೆದುಕೊಳ್ಳಿ.

  • ಸ್ಟ್ರೆಚ್ ಮಾರ್ಕ್‍ಗಳ ಮೇಲೆ ಅದನ್ನು ಲೇಪಿಸಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗುವ ವರೆಗೂ ಬಿಡಿ. ಬೆಚ್ಚಗಿನ ನೀರನ್ನು ಬಳಸಿ ಆ ಜಾಗವನ್ನು ತೊಳೆಯಿರಿ.

  • ಈಗ ಹೆಚ್ಚಿನ ತೆಂಗಿನ ಎಣ್ಣೆಯನ್ನು ಹಚ್ಚಿ ಮತ್ತು ಚೆನ್ನಾಗಿ ಮಸಾಜ್ ಮಾಡಿ. ಇದನ್ನೂ ಸಹ ಪ್ರತೀದಿನ ಸ್ನಾನದ ಮೊದಲು ಪುನರಾವರ್ತಿಸಿ.


ಮುನ್ನೆಚ್ಚರಿಕೆಗಳು


3. ಸಕ್ಕರೆ ಮತ್ತು ನಿಂಬೆ ಸ್ಕ್ರಬ್
ಅರಿಶಿನ ಮಾತ್ರವಲ್ಲದೇ ಸಕ್ಕರೆ ಹಾಗು ನಿಂಬೆಹಣ್ಣು ಕೂಡಾ ಸ್ಟ್ರೆಚ್ ಮಾರ್ಕ್ ಕಡಿಮೆಗೊಳಿಸಲು ಬಳಸಬಹುದು.

  • ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ತೆಗೆದುಕೊಂಡು ಅದನ್ನು ಒಂದು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯಲ್ಲಿ ಬೆರೆಸಿ.

  • ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಮಿಶ್ರಣ ಮಾಡಿದ ನಂತರ ಅದನ್ನು ಸ್ಟ್ರೆಚ್ ಮರ್ಕ್ ಮೇಲೆ ಹಚ್ಚಿ ಹತ್ತು ನಿಮಿಷಗಳ ಕಾಲ ಅದನ್ನು ಒಣಗಿಸಿ ನಂತರ ನೀರಿನಲ್ಲಿ ತೊಳೆದುಕೊಳ್ಳಿ.

  • ಪ್ರತೀ ದಿನ ಒಮ್ಮೆ ಇದನ್ನು ಪುನರಾವರ್ತಿಸಿ.


ಮುನ್ನೆಚ್ಚರಿಕೆಗಳು

  • ಇದನ್ನು ಹತ್ತು ನಿಮಿಷಕ್ಕಿಂತಾ ಹೆಚ್ಚಾಗಿ ಚರ್ಮದ ಮೇಲೆ ಬಿಡಬೇಡಿ.

  • ನಿಂಬೇ ರಸವನ್ನು ನೇರವಾಗಿ ಬಾಧಿತ ಪ್ರದೇಶದ ಮೇಲೆ ಹಚ್ಚಬೇಡಿ

Published by:Rahul TS
First published: