ಚಳಿಗಾಲದಲ್ಲಿ (Winter) ಉಗುರಿನ ಬಳಿ ಚರ್ಮ (Skin) ಉದುರುವ ಕಾರಣದಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಇದು ತುಂಬಾ ಸಾಮಾನ್ಯವಾದ (Problem) ಎಂದು ಅನಿಸಿದರೂ ಸಹ ಕೆಲವೊಮ್ಮೆ ಇದು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ದಿನವಿಡೀ ಕೆಲಸ ಮಾಡುವ ಜನರಿಗೆ ಇದು ದೊಡ್ಡ ಕಿರಿಕಿರಿ ಉಂಟು ಮಾಡುತ್ತದೆ ಎಂದರೆ ತಪ್ಪಲ್ಲ. ಈ ಉಗುರಿನ ಸುತ್ತ ಚರ್ಮ ಕಿತ್ತು ಬರುವುದನ್ನ ವೆರಿಕೋಸ್ ವೆಯಿನ್ಸ್ ಎಂದು ಕರೆಯುತ್ತಾರೆ. ಈ ಮಸಾಲೆಯುಕ್ತ ಆಹಾರವನ್ನು ತಿನ್ನುವಾಗ ಇದರಿಂದ ಹೆಚ್ಚು ನೋವು ಕಾಡುತ್ತದೆ. ಕೆಲವೊಮ್ಮೆ ರಕ್ತಸ್ರಾವ ಸಹ ಆಗುತ್ತದೆ. ಆದ್ದರಿಂದ ಈ ಸಮಸ್ಯೆಯು ತುಂಬಾ ಹೆಚ್ಚಾಗುತ್ತದೆ. ಕೆಲಸಗಳನ್ನು ಮಾಡಲು ಪರದಾಡಬೇಕಾಗುತ್ತದೆ.
ನೀವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದರಿಂದ ಮುಕ್ತಿ ಪಡೆಯಲು ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಏಕೆಂದರೆ ಇದಕ್ಕಾಗಿ ವೈದ್ಯರ ಬಳಿ ಹೋಗುವುದು ಹಣ ವ್ಯರ್ಥ ಮಾಡಿದಂತೆ. ಉಗುರುಗಳ ಬಳಿ ಚರ್ಮವನ್ನು ಸುಲಿದ ನಂತರ ಅಥವಾ ಚರ್ಮ ಸುಲಿಯದಂತೆ ತಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಬೆಚ್ಚಗಿನ ನೀರಿನಲ್ಲಿ ಕೈಗಳನ್ನು ಅದ್ದಿ
ಬೆರಳಿನ ಉಗುರುಗಳ ಸುತ್ತ ಸಿಪ್ಪೆ ಸುಲಿಯುವ ಚರ್ಮವನ್ನು ಸರಿಪಡಿಸಲು, ನೀವು ಪ್ರತಿದಿನ ಸುಮಾರು ಐದು ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನಿಮ್ಮ ಕೈಗಳನ್ನು ನೆನೆಸಿಡಬೇಕು. ನೀವು ಬಯಸಿದಲ್ಲಿ ನೀರಿಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು. ಅಲ್ಲದೇ, ನೀವು ಕೈಗೆ ವ್ಯಾಸಲಿನ್ ಅಥವಾ ಪಟ್ರೋಲಿಯಂ ಜೆಲ್ಲಿ ಹಚ್ಚಿ, ನಂತರ ಕೈಗಳನ್ನು ಬಿಸಿ ನೀರಿನಲ್ಲಿ ನೆನಸಿಡಬಹುದು. ನೀವು ಇದನ್ನು ಕಾಲುಗಳಿಗೆ ಸಹ ಮಾಡಬಹುದು.
ಪೆಟ್ರೋಲಿಯಂ ಜೆಲ್ಲಿ ಬಳಸಿ ಮಸಾಜ್ ಮಾಡಿ ಸಾಕು
ಈ ಸಮಸ್ಯೆಯನ್ನು ಕಡಿಮೆ ಮಾಡಲು, ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಉಗುರುಗಳ ಸುತ್ತಲೂ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ ಕೈಗಳಿಂದ ಮಸಾಜ್ ಮಾಡಿ. ಇದು ಕೇವಲ ಸಮಸ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ಸಮಸ್ಯೆ ಶುರುವಾಗುವ ಮೊದಲೇ ಮಾಡಿದರೆ ಚರ್ಮ ಸುಲಿಯುವುದಿಲ್ಲ.
ಓಟ್ ಪೇಸ್ಟ್ ಬಳಸಿ
ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಓಟ್ಸ್ ಪೇಸ್ಟ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಓಟ್ಸ್ ಅನ್ನು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿ ಪೇಸ್ಟ್ ತಯಾರಿಸಿ. ನಂತರ ಈ ಪೇಸ್ಟ್ ಅನ್ನು ಉಗುರುಗಳ ಮೇಲೆ ಹಚ್ಚಿ ಮಸಾಜ್ ಮಾಡಿ.
ಇದನ್ನೂ ಓದಿ: ಹಲ್ಲುಜ್ಜುವ ಬ್ರಷ್ ಖರೀದಿಸುವಾಗ ಈ ಅಂಶಗಳನ್ನು ಮರಿಬೇಡಿ
ಜೇನುತುಪ್ಪ ಬಳಸಿ ಮಸಾಜ್ ಮಾಡಿ
ನಿಮ್ಮ ಚರ್ಮದ ಅಂದ ಹೆಚ್ಚಿಸಲು ಹಾಗೂ ಸಿಪ್ಪೆ ಸುಲಿಯುವುದನ್ನ ಕಡಿಮೆ ಮಾಡಲು ನೀವು ಜೇನುತುಪ್ಪವನ್ನು ಸಹ ಬಳಸಬಹುದು. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರುಗಳು ಮತ್ತು ಅವುಗಳ ಸುತ್ತಲಿನ ಚರ್ಮಕ್ಕೆ ಜೇನುತುಪ್ಪವನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.
ಅಲೋವೆರಾ ಜೆಲ್ ಬಳಸಿ
ಚರ್ಮದ ಸರ್ವ ಸಮಸ್ಯೆಗಳಿಗೆ ಅಲೋವೆರಾ ಜೆಲ್ ರಾಮಬಾಣ ಎಂದು ಹೇಳಲಾಗುತ್ತದೆ. ಚಳಿಗಾಲದಲ್ಲಿ ನಿಮಗೂ ಸಹ ಉಗುರಿನ ಸುತ್ತ ಚರ್ಮ ಸುಲಿಯುತ್ತಿದ್ದರೆ ನೀವು ಅಲೋವೆರಾ ಜೆಲ್ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅಲೋವೆರಾ ಜೆಲ್ ಅನ್ನು ಉಗುರುಗಳು ಮತ್ತು ಅವುಗಳ ಪಕ್ಕದ ಚರ್ಮದ ಮೇಲೆ ಹಚ್ಚಿ ಮತ್ತು ಕೆಲವು ದಿನಗಳವರೆಗೆ ನಿಯಮಿತವಾಗಿ ಮಸಾಜ್ ಮಾಡಿ.
ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ
ಪ್ರತಿದಿನ ಆಲಿವ್ ಎಣ್ಣೆಯಿಂದ ನಿಮ್ಮ ಉಗುರುಗಳು ಮತ್ತು ಅವುಗಳ ಸುತ್ತಲಿನ ಚರ್ಮಕ್ಕೆ ಮಸಾಜ್ ಮಾಡಿ. ಆಲಿವ್ ಎಣ್ಣೆ ಲಭ್ಯವಿಲ್ಲದಿದ್ದರೆ, ನೀವು ಸಾಸಿವೆ ಅಥವಾ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.
ಇದನ್ನೂ ಓದಿ: ಇಷ್ಟ ಬಂದಾಗ ಮೊಸರು ತಿನ್ಬೇಡಿ, ಅದಕ್ಕೂ ಒಂದು ಸಮಯವಿದೆ
ಅಲ್ಲದೇ, ಈ ಸಮಸ್ಯೆಯಿಂದ ಪರಿಹಾರ ಪಡೆಯಲು ನೀವು ಸೌತೆಕಾಯಿಯನ್ನು ಸಹ ಬಳಸಬಹುದು. ಇದಕ್ಕಾಗಿ ಸೌತೆಕಾಯಿಯನ್ನು ಕತ್ತರಿಸಿ ಉಗುರುಗಳ ಸುತ್ತಲಿನ ಜಾಗದಲ್ಲಿ ನಿಧಾನವಾಗಿ ಉಜ್ಜಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ