Back Pain : ಪದೇ ಪದೇ ಕಾಡುವ ಕೆಳ ಬೆನ್ನು ನೋವಿಗೆ ಮನೆಯಲ್ಲಿಯೇ ಇದೆ ಪರಿಹಾರ

Lower Back Pain :ಸ್ನಾಯು ಸೆಳೆತ, ಕುಳಿತುಕೊಳ್ಳುವುದು ಅಥವಾ ತಪ್ಪು ಭಂಗಿಯಲ್ಲಿ ಮಲಗುವುದು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಉಂಟಾಗುವ ಕೆಳ ಬೆನ್ನು ನೋವನ್ನು ಕಡಿಮೆ ಮಾಡಲು ಓಂ ಕಾಳು ಸಹಾಯ ಮಾಡುತ್ತದೆ

ಕೆಳ ಬೆನ್ನು

ಕೆಳ ಬೆನ್ನು

  • Share this:
    ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು (Back Pain)ಮತ್ತು ಸೊಂಟ ನೋವಿನ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಈ ಸಮಸ್ಯೆಗೆ ವಯಸ್ಸಿನ ಮಿತಿಯಿಲ್ಲ. ಹೀಗಾಗಿ ಸಣ್ಣ ವಯಸ್ಸಿನವರಿಂದ (Small age)ಪ್ರಾರಂಭವಾಗಿ ಹಿರಿಯರಲ್ಲಿಯೂ ಈ ಬೆನ್ನು ನೋವು ಮತ್ತು ಸೊಂಟ ನೋವಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ.ನಮ್ಮ ಜೀವನ ಶೈಲಿ (Life style)ಇದಕ್ಕೆ ಮುಖ್ಯ ಕಾರಣವಾಗಿದ್ದು, ಸಾಮಾನ್ಯವಾಗಿ ಇಂದಿನ ಯುವಪೀಳಿಗೆಯವರು ಉದ್ಯೋಗ(Job) ಕ್ಷೇತ್ರದಲ್ಲಿ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಬೆನ್ನು ನೋವು ಹಾಗೂ ಸೊಂಟ ನೋವಿನ ಸಮಸ್ಯೆಯೂ(Problems) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದ್ರಲ್ಲೂ ಕೆಳ ಬೆನ್ನು ನೋವು ಸಾಮಾನ್ಯವಾಗಿ ಆಟವಾಡುವಾಗ, ಬೊಜ್ಜಿದ್ದವರಲ್ಲಿ, ನಿಷ್ಕ್ರಿಯರಾಗಿದ್ದಾಗ, ಒತ್ತಡ ಅಥವಾ ಆರ್ತ್ರೈಟಿಸ್‌ನಿಂದ ಬರುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಕೆಲವು ವಾರಗಳಲ್ಲಿ ನೋವು ಗುಣ ಹೊಂದುತ್ತದೆ. ಆಗಲೂ ಸರಿಯಾಗದಿದ್ದರೆ ವೈದ್ಯರ ಸಲಹೆ(Doctor Advice)) ಮತ್ತು ಕೆಲ ಪರೀಕ್ಷೆಗಳ (Test)ಅಗತ್ಯ ಇರುತ್ತೆ.. ವೈದ್ಯರಿಗೆ ತೋರಿಸಿದಾಗ ಸಾಮಾನ್ಯವಾಗಿ ಔಷಧಗಳು(Medicine) ಅಥವಾ ಸೂಕ್ತವಾದ ವ್ಯಾಯಾಮಗಳನ್ನು(Exercise)) ಮಾಡಲು ಹೇಳುತ್ತಾರೆ. ಈ ಪ್ರೀತಿ ಮನೆಯಲ್ಲಿಯೇ ವ್ಯಾಯಾಮ ಹಾಗೂ ಯೋಗಗಳನ್ನು ಮಾಡುವುದರಿಂದ ಬೆನ್ನು ನೋವು ನಿವಾರಣೆ ಮಾಡಿಕೊಳ್ಳಬಹುದು..ಆದ್ರೆ ಮನೆಯಲ್ಲಿ ಸಿಗುವ ಈ ವಸ್ತುಗಳಿಂದ ಕೆಳ ಬೆನ್ನು ನೋವು ನಿವಾರಣೆ ಮಾಡಿಕೊಳ್ಳಬಹುದು..

    1)ಶುಂಠಿ

    ಹಿಂದಿನಿಂದಲೂ ಆಯುರ್ವೇದವು ಹಲವಾರು ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಹೆಚ್ಚಿನ ಖಾದ್ಯಗಳಿಗೆ ಬಳಸಲಾಗುವ ಶುಂಠಿಯು ಹಲವಾರು ರೀತಿಯ ಕಾಯಿಲೆಗಳ ನಿವಾರಣೆ ಮಾಡುವುದು.ಶುಂಠಿಯಲ್ಲಿ ತುಂಬಾ ಪ್ರಬಲ ಜಿಂಗಲ್, ಪಾಲಿಫಿನಾಲ್ ಗಳು, ಫ್ಲೇವನಾಯ್ಡ್ ಗಳು ಮತ್ತು ಟಾನಿನ್ ಗಳು ಇದೆ. ಇಷ್ಟು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳಿಂದಾಗಿ ಶುಂಠಿಯು ಉರಿಯೂತ ಶಮನಕಾರಿ ಅಥವಾ ಉರಿಯೂತ ತಗ್ಗಿಸುವ ಅಥವಾ ನೋವು ಕಡಿಮೆ ಮಾಡುವ ಗುಣ ಹೊಂದಿದೆ..

    ಇದನ್ನೂ ಓದಿ: ಸಮಸ್ಯೆಯಾಗಿ ಕಾಡುತ್ತಿರುವ ಬೆನ್ನು ನೋವು? ಇದಕ್ಕೆ ಪರಿಹಾರವೇನು?

    2)ಫೀವರ್ಫ್ಯೂ ಹೂ:

    ಫೀವರ್ಫ್ಯೂನ ಬಗ್ಗೆ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ.. ಇದರಲ್ಲಿ ಇರುವ ಔಷಧೀಯ ಗುಣಗಳು ಮೈಗ್ರೇನ್, ತಲೆನೋವು, ಹೊಟ್ಟೆ ನೋವು ಮತ್ತು ಹಲ್ಲುನೋವುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.

    3)ಅರಿಶಿನ

    ದೇಹದಲ್ಲಿನ ಉರಿಯೂತ ಮತ್ತು ನೋವಿನೊಂದಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅರಿಶಿನವನ್ನು ಬಳಸಲಾಗುತ್ತದೆ. ದೇಹದಲ್ಲಿನ ಜೀವಕೋಶಗಳ ಹಾನಿಯನ್ನು ನಿರ್ವಹಿಸಲುಸಂಬಂಧಿಸಿದ
    ಗಾಯಗಳ ಸಮಸ್ಯೆಗಳಿಗೆ ಇದು ನೈಸರ್ಗಿಕ ಚಿಕಿತ್ಸೆಯಾಗಿದೆ. ಅರಿಶಿನವು ಸಂಧಿವಾತ ಮತ್ತು ಎದೆಯುರಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮಸಾಲೆಯಾಗಿದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳ ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೀರ್ಘಕಾಲದವರೆಗೆ ತಡೆಯುತ್ತದೆ.

    4)ಡೆವಿಲ್ಸ್ ಕ್ಲಾ ಹರ್ಬ್

    ಡೆವಿಲ್ಸ್ ಕ್ಲಾ ಹರ್ಬ್ ಕೆಳ ಬೆನ್ನುನೋವಿಗೆ ಚಿಕಿತ್ಸೆ ನೀಡಲು ಪ್ರಪಂಚದ ಅನೇಕ ಭಾಗಗಳಲ್ಲಿ ಬಳಸಲಾಗುವ ಮೂಲಿಕೆಯಾಗಿದೆ. ಇದು ಮೂಲತಃ ಆಯುರ್ವೇದ ಪರಿಹಾರವಾಗಿದ್ದು, ಬೆನ್ನು ನೋವು ಮತ್ತು ಸಂಧಿವಾತದಂತಹ ಸಮಸ್ಯೆಗಳಿಗೆ ಚಿಕಿತ್ಸೆಗೆ ಸಹಕಾರಿಯಾಗಿದೆ.

    ಇದನ್ನೂ ಓದಿ: ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ, ಈ ವಿಷಯಗಳತ್ತ ಹೆಚ್ಚಿನ ಗಮನಹರಿಸಿ..!

    5)ಓಂ ಕಾಳು

    ಓಂ ಕಾಳು ನಿಮಗೆಲ್ಲಾ ಗೊತ್ತೇ ಇದೆ. ಅಜವಾನ ಎಂತಲೂ ಇದನ್ನು ಕರೆಯುತ್ತಾರೆ. ಇದು ನಮ್ಮ ದೇಹದ ರೋಗ - ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ, ನಮ್ಮ ದೇಹದ ತೂಕ ಕಡಿಮೆ ಮಾಡುವಲ್ಲಿ, ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾಯು ಸೆಳೆತ, ಕುಳಿತುಕೊಳ್ಳುವುದು ಅಥವಾ ತಪ್ಪು ಭಂಗಿಯಲ್ಲಿ ಮಲಗುವುದು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಉಂಟಾಗುವ ಕೆಳ ಬೆನ್ನು ನೋವನ್ನು ಕಡಿಮೆ ಮಾಡಲು ಓಂ ಕಾಳು ಸಹಾಯ ಮಾಡುತ್ತದೆ..
    Published by:ranjumbkgowda1 ranjumbkgowda1
    First published: