ಕ್ಷಣಾರ್ಧದಲ್ಲಿ ತಲೆನೋವಿಗೆ ಗುಡ್​ಬೈ ಹೇಳಲು ಇಲ್ಲಿದೆ ಸರಳ ಮನೆಮದ್ದುಗಳು

Home Remedies: ಹಾಗೆಯೇ ಒಂದು ಕಪ್ ಕುದಿಯುವ ನೀರಿಗೆ 1 ಟೀ ಸ್ಪೂನ್ ಒಣಗಿದ ಪುದೀನಾ ಸೇರಿಸಿ ಚಹಾ ಮಾಡಿ. ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ನಿಧಾನವಾಗಿ ಕುಡಿಯಿರಿ. ಇದರಿಂದ ಸಹ ತಲೆನೋವಿಗೆ ಗುಡ್​ಬೈ ಹೇಳಬಹುದು.

zahir | news18-kannada
Updated:August 5, 2019, 3:11 PM IST
ಕ್ಷಣಾರ್ಧದಲ್ಲಿ ತಲೆನೋವಿಗೆ ಗುಡ್​ಬೈ ಹೇಳಲು ಇಲ್ಲಿದೆ ಸರಳ ಮನೆಮದ್ದುಗಳು
ಸಾಂದರ್ಭಿಕ ಚಿತ್ರ
  • Share this:
ತಲೆನೋವು ಎಂಬುದು ಒಂದು ಕಾಯಿಲೆಯಲ್ಲ. ಆದರೂ ಆಧುನಿಕ ಜೀವನ ಶೈಲಿಯಲ್ಲಿ ತಲೆನೋವು ಎಂಬುದೇ ಒಂದು ತಲೆನೋವಾಗಿದೆ. ಕೇಳೋಕೆ ಸಾಮಾನ್ಯವಾಗಿದ್ದರೂ ತಲೆನೋವು ಬಂದರೆ ಅದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದನ್ನು ಅಲ್ಲೆಗೆಳೆಯುವಂತಿಲ್ಲ. ಹೀಗಾಗಿಯೇ ತಲೆನೋವು ಬಂದವರಿಗೆ ಗೊತ್ತು ಅದರ ನೋವು ಎಂಬ ಮಾತೊಂದಿದೆ.

ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಅಸ್ಪಿರಿನ್ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಮಾತ್ರೆಗಳ ಸೇವನೆಯಿಂದ ತಲೆನೋವು ಕಡಿಮೆಯಾದರೂ ಮುಂದಿನ ದಿನಗಳಲ್ಲಿ ನೀವು ತೆಗೆದುಕೊಳ್ಳುವ ಮಾತ್ರೆಯಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯು ಇದೆ. ಹೀಗಾಗಿ ಕಾಯಿಲೆಯಲ್ಲದ ಈ ನೋವಿಗೆ ಸರಳ ಉಪಾಯಗಳನ್ನು ಕಂಡುಕೊಳ್ಳುವುದು ಉತ್ತಮ. ಅದರಂತೆ ತಲೆನೋವಿಗೆ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದ್ದು, ಈ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಶುಂಠಿ:

ತಲೆನೋವಿಗೆ ಅಮೃತ ಎಂದು ಶುಂಠಿಯನ್ನು ಕರೆಯಲಾಗುತ್ತದೆ. ಏಕೆಂದರೆ ಶುಂಠಿಯ ಬಳಕೆಯಿಂದ ತ್ವರಿತವಾಗಿ ತಲೆನೋವಿಗೆ ಪರಿಹಾರ ಕಾಣಬಹುದಾಗಿದೆ. ಶುಂಠಿ ತಲೆಯಲ್ಲಿರುವ ರಕ್ತನಾಳಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ, ಮೈಗ್ರೇನ್ ಸಮಯದಲ್ಲಿ ಉಂಟಾಗುವ ವಾಕರಿಕೆ ಸಮಸ್ಯೆ ದೂರವಾಗುತ್ತದೆ.

ಶುಂಠಿಯನ್ನು ಹೇಗೆ ಬಳಸುವುದು?
ಶುಂಠಿ ಚಹಾ ಮಾಡಿ ಸೇವಿಸುವುದು ಉತ್ತಮ. ಒಂದು ತುಂಡು ಶುಂಠಿಯನ್ನು ಅಥವಾ ಅದರ ರಸವನ್ನು ಚಹಾದಲ್ಲಿ ಬೆರಸಿ. ಅದರೊಂದಿಗೆ ಒಂಚೂರು ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯಿರಿ. ತಲೆನೋವು ಉಂಟಾದಾಗ ಅಥವಾ ದಿನಕ್ಕೆ ಎರಡು ಮೂರು ಬಾರಿ ಇದನ್ನು ಸೇವಿಸಬಹುದು.

ಅದೇ ರೀತಿ ತಲೆನೋವು ಶೀಘ್ರ ನಿವಾರಣೆಗಾಗಿ ನೀವು ಕೆಲವು ನಿಮಿಷಗಳ ಕಾಲ ನಿಮ್ಮ ಹಣೆಯ ಮೇಲೆ ಶುಂಠಿ ಪುಡಿ ಮತ್ತು 2 ಚಮಚ ನೀರನ್ನು ಹಾಕಬಹುದು. ಇದರಿಂದ ಸಹ ತಲೆನೋವಿಗೆ ಪರಿಹಾರ ಕಾಣಬಹುದು.ಪುದೀನಾ ಎಣ್ಣೆ:
ಉಲ್ಲಾಸಕರ ಪರಿಮಳ ಹೊಂದಿರುವ ಪುದೀನಾ ತಲೆನೋವು ಉಂಟುಮಾಡುವ ರಕ್ತನಾಳಗಳನ್ನು ಮುಚ್ಚಿಡಲು ಸಹಾಯ ಮಾಡುತ್ತದೆ. ಇದು ಮೆಂಥಾಲ್ ಅನ್ನು ಹೊಂದಿರುವುದರಿಂದ ಇದು ದೇಹದಲ್ಲಿನ ರಕ್ತದ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಒಂದು ಚಮಚ ಬಾದಾಮಿ ಎಣ್ಣೆಯಲ್ಲಿ 3 ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಅಥವಾ ಸ್ವಲ್ಪ ನೀರು ಸೇರಿಸಿ ನಿಮ್ಮ ಕತ್ತಿನ ಹಿಂಭಾಗಕ್ಕೆ ಮಸಾಜ್ ಮಾಡಿ. ಪರ್ಯಾಯವಾಗಿ, ನಿಮ್ಮ ಹಣೆಯ ಮೇಲೆ ಪುಡಿಮಾಡಿದ ಪುದೀನಾ ಎಲೆಗಳನ್ನು ಅನ್ವಯಿಸಬಹುದು. ಇದರಿಂದ ತಲೆನೋವು ಶೀಘ್ರ ಮಾಯವಾಗುತ್ತದೆ.

ಹಾಗೆಯೇ ಒಂದು ಕಪ್ ಕುದಿಯುವ ನೀರಿಗೆ 1 ಟೀ ಸ್ಪೂನ್ ಒಣಗಿದ ಪುದೀನಾ ಸೇರಿಸಿ ಚಹಾ ಮಾಡಿ. ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ನಿಧಾನವಾಗಿ ಕುಡಿಯಿರಿ. ಇದರಿಂದ ಸಹ ತಲೆನೋವಿಗೆ ಗುಡ್​ಬೈ ಹೇಳಬಹುದು.

ದಾಲ್ಚಿನ್ನಿ:
ಮಸಾಲೆ ಪದಾರ್ಥಗಳ ಕಿಂಗ್ ಎನ್ನಲಾಗುವ ದಾಲ್ಚಿನ್ನಿ ಕೂಡ ಪರಿಣಾಮಕಾರಿ ತಲೆನೋವು ಪರಿಹಾರಗಳಲ್ಲಿ ಒಂದು. ನೀವು ದಾಲ್ಚಿನ್ನಿ ತುಂಡುಗಳನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಇದನ್ನು ನಿಮ್ಮ ಹಣೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಮಲಗಿಕೊಳ್ಳಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

ವ್ಯಾಯಾಮ:
ನಿಮ್ಮ ತಲೆ ಮತ್ತು ಕುತ್ತಿಗೆಯ ಕೆಲವು ಸರಳ ವ್ಯಾಯಾಮಗಳಿಂದ ಸಹ ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು. ನಿಮ್ಮ ಗಲ್ಲವನ್ನು ಮೇಲಕ್ಕೆ ಮತ್ತು ಕೆಳಕ್ಕೆ, ಎಡ ಮತ್ತು ಬಲಕ್ಕೆ ಸರಿಸಿ. ಬಳಿಕ ನಿಮ್ಮ ಕುತ್ತಿಗೆಯನ್ನು ಪ್ರತಿ ಭುಜದ ಕಡೆಗೆ ಬಾಗಿಸಿ. ಇದರಿಂದ ಭುಜ ಮತ್ತು ಕತ್ತಿನ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದರಿಂದ ಸಹ ತಲೆನೋವಿನಿಂದ ಮುಕ್ತಿ ಪಡೆಯಬಹುದು.

ಐಸ್ ಪ್ಯಾಕ್:
ನಿಮ್ಮ ಕತ್ತಿನ ಹಿಂಭಾಗಕ್ಕೆ ಐಸ್ ಪ್ಯಾಕ್ ಅನ್ನು ಅನ್ವಯಿಸುವುದರಿಂದ ತಲೆನೋವಿಂದ ಪರಿಹಾರ ಸಿಗುತ್ತದೆ. ಏಕೆಂದರೆ ಮಂಜುಗಡ್ಡೆಯಿಂದ ಬರುವ ಶೀತವು ತಲೆನೋವಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಹಾಗೆಯೇ ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿಡುವುದರಿಂದ ತಲೆನೋವನ್ನು ತೊಡೆದುಹಾಕಬಹುದು.

ಲವಂಗ:
ಲವಂಗದಲ್ಲಿ ನೋವು ನಿವಾರಿಸುವ ಗುಣಗಳು ಹೇರಳವಾಗಿವೆ. ಹೀಗಾಗಿ ಲವಂಗದ ಬಳಕೆಯಿಂದಲೂ ತಲೆನೋವನ್ನು ತಡೆಯಬಹುದು. ಕೆಲವು ಲವಂಗವನ್ನು ಪುಡಿ ಮಾಡಿ ಅವುಗಳನ್ನು ಸ್ಯಾಚೆಟ್ ಅಥವಾ ಕ್ಲೀನ್ ಕರವಸ್ತ್ರದಲ್ಲಿ ಇರಿಸಿ. ನಿಮಗೆ ತಲೆನೋವು ಬಂದಾಗಲೆಲ್ಲಾ ಪುಡಿಮಾಡಿದ ಲವಂಗದ ವಾಸನೆಯನ್ನು ಉಸಿರಾಡಿ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

ಹಾಗೆಯೇ ನೀವು 2 ಚಮಚ ಲವಂಗ ಎಣ್ಣೆಯನ್ನು ಒಂದು ಚಮಚ ತೆಂಗಿನ ಎಣ್ಣೆ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಮಿಶ್ರ ಮಾಡಿ. ಇದನ್ನು ನಿಮ್ಮ ಹಣೆಯ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ತುಳಸಿ:
ತಲೆನೋವು ಚಿಕಿತ್ಸೆಗೆ ಬಳಸುವ ಪರಿಮಳಯುಕ್ತ ಮೂಲಿಕೆ ಎಂದರೆ ತುಳಸಿ. ಇದು ಅನೇಕ ನೋವು ನಿವಾರಕ ಅಂಶಗಳನ್ನು ಹೊಂದಿವೆ. ಈ ಮನೆಮದ್ದನ್ನು ಮಾಡಲು ನೀವು, 3 ಅಥವಾ 4 ತಾಜಾ ತುಳಸಿ ಎಲೆಗಳನ್ನು ಒಂದು ಕಪ್ ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಚಹಾ ಮಾಡಿ. ಈ ತುಳಸಿ ಚಹಾವನ್ನು ನಿಧಾನವಾಗಿ ಕುಡಿಯುವುದರಿಂದ ತಲೆನೋವು ಮಂಗಮಾಯವಾಗುತ್ತದೆ.

ಹಾಗೆಯೇ ತಾಜಾ ತುಳಸಿ ಎಲೆಗಳನ್ನು ಅಗಿಯಬಹುದು ಅಥವಾ ತುಳಸಿಯನ್ನು ನೀರಿನ ಪಾತ್ರೆಯಲ್ಲಿ ಕುದಿಸಿ ನಂತರ ಹವೆಯನ್ನು ಉಸಿರಾಡುವುದರಿಂದ ಸಹ ತಲೆನೋವು ಕಡಿಮೆಯಾಗುತ್ತದೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ನಿದ್ದೆ ಮಾಡಿ. ಏಕೆಂದರೆ ತಲೆನೋವು ಬರಲು ಮುಖ್ಯ ಕಾರಣಗಳಲ್ಲಿ ನಿದ್ರೆ ಸರಿಯಾಗಿ ಮಾಡದಿರುವುದು ಒಂದಾಗಿದೆ. ಹಾಗಾಗಿ ಪ್ರತಿದಿನ 6 ರಿಂದ 8 ತಾಸು ನಿದ್ದೆ ಮಾಡುವುದರಿಂದ ತಲೆನೋವು ಬರುವುದನ್ನು ತಡೆಯಬಹುದು.
First published: August 5, 2019, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading