ಕಣ್ಣು ಉರಿ ಸೇರಿದಂತೆ ನೇತ್ರದ ಸಮಸ್ಯೆಗಳಿಗೆ ಇಲ್ಲಿದೆ ಸಿಂಪಲ್ ಪರಿಹಾರ

home remedies: ಆಧುನಿಕ ಜೀವನಶೈಲಿಯಲ್ಲಿ ಕಂಪ್ಯೂಟರ್ ಬಳಕೆ ಅಥವಾ ಮೊಬೈಲ್​ಗಳಿಂದ ದೂರವಿರುವುದು ತುಸು ಕಷ್ಟ ಎನ್ನುವವರೇ ಹೆಚ್ಚು. ಆದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಕೆಲ ಮನೆಮದ್ಧುಗಳನ್ನು ಸೇವಿಸುವ ಮೂಲಕ ನೇತ್ರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ.

zahir | news18-kannada
Updated:October 19, 2019, 2:04 PM IST
ಕಣ್ಣು ಉರಿ ಸೇರಿದಂತೆ ನೇತ್ರದ ಸಮಸ್ಯೆಗಳಿಗೆ ಇಲ್ಲಿದೆ ಸಿಂಪಲ್ ಪರಿಹಾರ
home remedies
  • Share this:
ನಮ್ಮ ದೇಹದ ಸೂಕ್ಷ್ಮ ಅಂಗಳಳಲ್ಲೊಂದು ಕಣ್ಣುಗಳು. ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್​ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣಿನ ಅತಿಯಾದ ಶ್ರಮ ಒಂದಲ್ಲ ಒಂದು ವಿಧದಲ್ಲಿ ದೇಹಕ್ಕೆ ಅಹಿತಕರ.

ಸಾಮಾನ್ಯವಾಗಿ ಕಣ್ಣುಗಳಿಗೆ ನೀಡುವ ಅತಿಯಾದ ಶ್ರಮದಿಂದ ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದ ಸಮಸ್ಯೆಗಳು ಎದುರಾಗಬಹುದು.

ಅದರಲ್ಲೂ ಸತತವಾಗಿ ಕಣ್ಣುಗಳಿಗೆ ಕೆಲಸ ನೀಡುವುದರಿಂದ ನಯನಗಳಲ್ಲಿ ನೀರು ತುಂಬಿರುತ್ತದೆ. ಕಣ್ಣುಗಳು ತೇವಗೊಂಡಿದ್ದರೆ ಸಹ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯಲ್ಲಿ ಕಂಪ್ಯೂಟರ್ ಬಳಕೆ ಅಥವಾ ಮೊಬೈಲ್​ಗಳಿಂದ ದೂರವಿರುವುದು ತುಸು ಕಷ್ಟ ಎನ್ನುವವರೇ ಹೆಚ್ಚು. ಆದರೆ ನಿಮ್ಮ ಕಾರ್ಯಕ್ಕೆ ತಕ್ಕಂತೆ ಕೆಲ ಮನೆಮದ್ಧುಗಳನ್ನು ಸೇವಿಸುವ ಮೂಲಕ ನೇತ್ರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ. ಅವುಗಳೆಂದರೆ.

- ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ.

 

-ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್​ ಅನ್ನು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರವಾಗುತ್ತದೆ.

- ಊಟದೊಂದಿಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುವುದರಿಂದ ಸಹ ಕಣ್ಣು ನೋವು ಕಡಿಮೆಯಾಗುತ್ತದೆ.- ಮಾವಿನಹಣ್ಣಿನ ಸೀಕರಣೆಯನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

- ಮೊಸರಲ್ಲಿ ಬಾಳೆಹಣ್ಣನ್ನು ಕಿವುಚಿ ಪ್ರತಿದಿನ ತಿನ್ನುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೀಗೆ ನಿರಂತರ ಸೇವಿಸುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ.

-ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಂಪು ಮೂಲಂಗಿ ಮುಖ್ಯ ಪಾತ್ರವಹಿಸುತ್ತದೆ. ಇದನ್ನು ಆಹಾರದಲ್ಲಿ ಹೆಚ್ಚು ಬಳಸುವುದು ಉತ್ತಮ.

-ಬದನೆಕಾಯಿ ಕೂಡ ನಯನಗಳ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ಕಡಿಮೆಯಾಗುತ್ತದೆ.

-ವಿಪರೀತ ಕಣ್ಣು ಉರಿಯಿದ್ದರೆ, ಎದೆಹಾಲಿನಲ್ಲಿ ಉಪ್ಪಿನ ಹರಳನ್ನು ಕರಗಿಸಿ, ಕಣ್ಣಿಗೆ ಹಚ್ಚಿಕೊಳ್ಳುವುದು ಉತ್ತಮ.

-ಬೇವು ಕೂಡ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಬೇವಿನ ಸೊಪ್ಪಿನ ರಸವನ್ನು ಕಣ್ಣುಗಳಿಗೆ ಹನಿ ಹನಿಯಾಗಿ ವಾರಕ್ಕೊಮ್ಮೆ ಹಾಕಿದರೆ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತದೆ.

ಇದನ್ನೂ ಓದಿ: ರಾಕಿಂಗ್ ದಂಪತಿಗೆ ಈ ಬಾರಿ ಗಂಡು ಮಗುವಂತೆ, ಹೆಸರು ಕೂಡ ಫಿಕ್ಸ್​ ಅಂತೆ..!

ಇನ್ನು ಕಣ್ಣುಗಳ ಬಗ್ಗೆ ಪ್ರತಿದಿನ ಹೆಚ್ಚಿನ ಕಾಳಜಿವಹಿಸುವುದು ಉತ್ತಮ. ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.

 
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading