Dry Cough Remedy: ರಾತ್ರಿ ಒಣಕೆಮ್ಮು ಬೆಂಬಿಡದೇ ಕಾಡುತ್ತಿದ್ರೆ ಈ ಮನೆಮದ್ದು ಬಳಸಿ

Home Remedies for Dry Cough: ಕ್ಯಾಪ್ಸೈಸಿನ್ ಅನ್ನು ಕ್ಯಾಪ್ಸುಲ್ ರೂಪದಲ್ಲಿ ತೆಗೆದುಕೊಳ್ಳಬಹುದಾದರೂ, ಅದರಿಂದ ಚಹಾ ತಯಾರಿಸಿಯೂ ಸೇವಿಸಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ, ಕೆಮ್ಮು(Cough)  ದೇಹಕ್ಕೆ ಕಿರಿಕಿರಿಯ ಅನುಭವ ಉಂಟು ಮಾಡುತ್ತದೆ. ಕೆಮ್ಮಿ ಕೆಮ್ಮಿ ಹೊಟ್ಟೆ, ಎದೆಗಳಲ್ಲಿ ನೋವೂ (Pain) ಬರಬಹುದು. ಕೆಮ್ಮಿನಲ್ಲಿ ಪ್ರಮುಖವಾಗಿ ಎರಡು ವಿಧಗಳು. ಅವುಗಳೆಂದರೆ, ಸಾಮಾನ್ಯವಾಗಿ ಜ್ವರ (Fever), ನೆಗಡಿಯಾದಾಗ ಕಫಗಟ್ಟಿ ಬರುವ ಕೆಮ್ಮು ಒಂದಾದರೆ ಇನ್ನೊಂದು ಒಣ ಕೆಮ್ಮು. ನಿಮಗೆ ಗೊತ್ತೆ, ಕೆಮ್ಮು ನಮ್ಮ ದೇಹದಲ್ಲಿರುವ ಸೋಂಕಿನಾಂಶಗಳು ಹೊರ ಹೋಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 

ನಾವು ಹಾಗೆಯೇ ಹಾಸಿಗೆಯ ಮೇಲೆ ಮಲಗಿಕೊಂಡ ಸಂದರ್ಭದಲ್ಲಿ ನಮ್ಮ ಮೂಗು ಹಾಗೂ ಗಂಟಲಿನಲ್ಲಿರುವ ಕಫ ಅಥವಾ ಲೊಳೆ (ಮ್ಯೂಕಸ್) ಒಂದೆಡೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಈ ಕ್ರಿಯೆ ನಡೆಯುವಾಗ ನಮಗೆ ಯಾವ ಅಡಚಣೆಯು ಉಂಟಾಗದಂತೆ ನಾವು ಸರಾಗವಾಗಿ ಮೂಗಿನಿಂದಲೇ ಉಸಿರಾಡುತ್ತಿದ್ದರೆ ಯಾವ ಚಿಂತೆಯೂ ಇಲ್ಲ. ಆದರೆ, ಇದು ನಮ್ಮ ಉಸಿರಾಟದಲ್ಲಿ ಸ್ವಲ್ಪ ಭಾದೆ ಉಂಟು ಮಾಡಿದರೆ ನಾವು ಮೂಗಿನ ಬದಲು ಬಾಯಿಯಿಂದ ಉಸಿರಾಡಲು ಪ್ರಾರಂಭಿಸುತ್ತೇವೆ. ಆಗ ಇದು ಒಣಗುತ್ತ ಕತ್ತಿನ ಹಿಂಭಾಗದ ನರಗಳಲ್ಲಿ ಇರಿಟೇಷನ್ ಉಂಟು ಮಾಡಿ ಒಣ ಕೆಮ್ಮು ಬರುವಂತೆ ಮಾಡುತ್ತದೆ. ಇದನ್ನು ಹೊರತುಪಡಿಸಿದರೆ ಒಣ ಕೆಮ್ಮು ಬರಲು ಇತರೆ ಬೇರೆ ಕಾರಣಗಳೂ ಇರಬಹುದು. ಉದಾಹರಣೆಗೆ ಅಲರ್ಜಿ, ಸೋಂಕು, ಆಸಿಡ್ ರಿಫ್ಲೆಕ್ಸ್ ಮುಂತಾದವುಗಳು.

ತುಂಬಾನೇ ಕಿರಿಕಿರಿಯ ಅನುಭವ ನೀಡುವ ಒಣಕೆಮ್ಮು ಇಂತಹವರಿಗಷ್ಟೆ ಬರುತ್ತದೆ ಎಂದೇನಿಲ್ಲ. ಮಕ್ಕಳು ಮತ್ತು ವಯಸ್ಕರಿಬ್ಬರಲ್ಲೂ ಒಣ ಕೆಮ್ಮು ಬರಬಹುದು. ಒಣಕೆಮ್ಮು ನಿವಾರಿಸಲು ಇಂದು ವೈದ್ಯಕೀಯವಾಗಿ ಹಲವಾರು ಚಿಕಿತ್ಸೆಗಳು ಲಭ್ಯವಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿರುವ ಮನೆಯಲ್ಲಿಯೇ ಇರುವ ಪರಿಹಾರಗಳೂ ಇವೆ.

ಒಟ್ಟಿನಲ್ಲಿ, ಒಣ ಕೆಮ್ಮು ಬಂದರೆ ಅದು ಬಹು ಬೇಗನೆ ತೊಲಗುವುದಿಲ್ಲ ಎಂಬುದು ಒಂದು ವಿಚಾರವಾದರೆ ಅದರಿಂದ ಹಲವು ರಾತ್ರಿಗಳನ್ನು ಅಹಿತಕರವಾದ ಅನುಭವದಲ್ಲಿ ಕಳೆಯಬೇಕಾಗುತ್ತದೆ. ರಾತ್ರಿ ನಿದ್ದೆಗೆಡುವುದಲ್ಲದೆ ವಿಪರೀತವಾದ ಕುತ್ತಿಗೆ ಹಾಗೂ ಎದೆ/ಬೆನ್ನು ನೋವುಗಳನ್ನು ಅನುಭವಿಸುವುದು ಇನ್ನೊಂದು ಕಿರಿಕಿರಿ. ಆದರೆ, ಒಣಕೆಮ್ಮಿನಿಂದ ನೀವು ಇಷ್ಟೊಂದು ಕಷ್ಟಪಡುವ ಅವಶ್ಯಕತೆಯಿಲ್ಲ. ಮನೆಯಲ್ಲೇ ಕೆಲವು ಸಲಹೆಗಳನ್ನು ಪಾಲಿಸುವುದರ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಹಾಗಾದರೆ, ಬನ್ನಿ, ಈ ಲೇಖನದ ಮೂಲಕ ಕೆಲವು ಅದ್ಭುತವಾದ ಮನೆಯಲ್ಲೇ ಮಾಡಬಹುದಾದ ವಿಧಾನಗಳ ಕುರಿತು ತಿಳಿಯೋಣ. 

ಗಿಡಮೂಲಿಕೆಗಳು ಮತ್ತು ಪೂರಕವಾದ ವಸ್ತುಗಳು 

ಮೊಟ್ಟಮೊದಲು ಒಣ ಕೆಮ್ಮಿಗೆ ಮನೆಯಲ್ಲೇ ಇರುವ ಮದ್ದುಗಳು ಎಲ್ಲರಿಗೂ ಒಂದೆ ರೀತಿ ಹಾಗೂ ಒಂದೇ ಗಾತ್ರದಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಪ್ರಯೋಗಗಳನ್ನು ಮಾಡುತ್ತ ನಿಮ್ಮ ದೇಹದ ಒಟ್ಟಾರೆ ಅಂಶಗಳಿಗೆ ತಕ್ಕಂತೆ ಯಾವ ಮದ್ದು ಕೆಲಸ ಮಾಡಬಹುದೆಂದು ನೀವೇ ತಿಳಿದುಕೊಳ್ಳಬೇಕಾಗುತ್ತದೆ. 

ಹೆಚ್ಚುವರಿಯಾಗಿ, ಈ ಎಲ್ಲಾ ಪರಿಹಾರಗಳನ್ನು ಸಂಪೂರ್ಣವಾಗಿ ಸಂಶೋಧಿಸಲಾಗಿಲ್ಲ ಮತ್ತು ಪರಿಣಾಮಕಾರಿ ಎಂದು ಸಾಬೀತುಪಡಿಸಲಾಗಿಲ್ಲ. ಕೆಲವು ಚಿಕಿತ್ಸೆಗಳು ಶಿಶುಗಳು ಅಥವಾ ಮಕ್ಕಳಿಗೆ ಸೂಕ್ತವಲ್ಲ.

ಜೇನು ತುಪ್ಪ:

ವಯಸ್ಕರು ಮತ್ತು ಮಕ್ಕಳಲ್ಲಿ 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ, ಒಣಕೆಮ್ಮು ಬಂದಾಗ ಅದನ್ನು ನಿವಾರಿಸಲು ಹಗಲು ಮತ್ತು ರಾತ್ರಿ ಜೇನುತುಪ್ಪವನ್ನು ಬಳಸಬಹುದು. 

ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ ಮತ್ತು ಗಂಟಲಿನ ಮೇಲೆ ಸಲೀಸಾಗಿ ಅಂಟಿಕೊಂಡು ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ. 

2007ರ ಟ್ರಸ್ಟೆಡ್ ಸೋರ್ಸ್‌ ಎಂಬ ಒಂದು ಅಧ್ಯಯನವು, ಕೆಮ್ಮು ನಿಗ್ರಹಿಸುವ ಅಂಶವಾದ ಡೆಕ್ಸ್ಟ್ರೋಮೆಥೋರ್ಫಾನ್‌ಗಿಂತ ಜೇನುತುಪ್ಪ ಹೆಚ್ಚು ಯಶಸ್ವಿಯಾಗಿರುವುದನ್ನು ಕಂಡುಕೊಂಡಿದೆ. ಇದು ಮಕ್ಕಳಲ್ಲಿ ರಾತ್ರಿಯಲ್ಲಿ ಬರುವ ಕೆಮ್ಮಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. 

ನೀವು ದಿನಕ್ಕೆ ಹಲವಾರು ಬಾರಿ ಟೀಚಮಚದಿಂದ ಜೇನುತುಪ್ಪವನ್ನು ತೆಗೆದುಕೊಳ್ಳಬಹುದು ಅಥವಾ ಅದನ್ನು ಚಹಾ ಅಥವಾ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು.  ಆದರೆ, 1 ವರ್ಷದೊಳಗಿನ ಮಗುವಿಗೆ ಜೇನುತುಪ್ಪವನ್ನು ಎಂದಿಗೂ ನೀಡಬೇಡಿ.

ಅರಿಶಿಣ:
ಅರಿಶಿಣವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ಉರಿಯೂತದ ವಿರೋಧಕ, ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ. ಒಣ ಕೆಮ್ಮು ಸೇರಿದಂತೆ ಹಲವಾರು ಇತರೆ ಸಮಸ್ಯೆಗಳಿಗೆ ಇದು ಪ್ರಯೋಜನಕಾರಿಯಾಗಿದೆ ಎಂದು ಕಂಡುಬಂದಿದೆ. 

ಇದನ್ನು ಕರಿಮೆಣಸಿನೊಂದಿಗೆ ಸೇವಿಸಿದಾಗ, ಕರ್ಕ್ಯುಮಿನ್ ರಕ್ತಪ್ರವಾಹದಲ್ಲಿ ಉತ್ತಮವಾಗಿ ಹೀರಲ್ಪಡುತ್ತದೆ. ನೀವು ಸೇವಿಸುವ ಪಾನೀಯಕ್ಕೆ 1 ಟೀಚಮಚ ಅರಿಶಿಣ ಮತ್ತು 1/8 ಟೀಚಮಚದಷ್ಟು ಕರಿಮೆಣಸನ್ನು ಸೇರಿಸಿ ಕುಡಿಯಬಹುದು, ಉದಾಹರಣೆಗೆ ತಂಪಾದ ಕಿತ್ತಳೆ ರಸವನ್ನು ಈ ರೀತಿ ಸೇವಿಸಿ. ನೀವು ಬೆಚ್ಚಗಿನ ಚಹಾವನ್ನು ಸಹ ಈ ರೀತಿಯಾಗಿ ಕುಡಿಯಬಹುದು. 

ಅರಿಶಿಣಕ್ಕೆ ಶತಮಾನಗಳಿಂದಲೂ ಆಯುರ್ವೇದ ಔಷಧದಲ್ಲಿ ಮಹತ್ವ ನೀಡಲಾಗಿದೆ. ಬ್ರಾಂಕೈಟಿಸ್ ಮತ್ತು ಆಸ್ತಮಾ ಚಿಕಿತ್ಸೆಗಾಗಿ ವಿಶ್ವಾಸಾರ್ಹ ಔಷಧಿಯಾಗಿಯೂ ಇದನ್ನು ಬಳಸಲಾಗುತ್ತದೆ.

ಶುಂಠಿ:

ಶುಂಠಿಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಕದ ಗುಣಲಕ್ಷಣಗಳನ್ನು ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ನೋವು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಶುಂಠಿಯನ್ನು ಬಳಸಲಾಗುತ್ತದೆ. 

ಶುಂಠಿಯನ್ನು ಅನೇಕ ಪ್ರಕಾರದ ಚಹಾಗಳಲ್ಲಿ ಒಂದು ಘಟಕಾಂಶವಾಗಿಯೂ ಬಳಸುವುದನ್ನು ನೋಡಬಹುದು. ಶುಂಠಿಅ ಸಿಪ್ಪೆ ಸುಲಿದ ಅಥವಾ ಕತ್ತರಿಸಿದ ಬೇರನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಅದರಿಂದ ಶುಂಠಿ ಚಹಾವನ್ನು ತಯಾರಿಸಬಹುದು. ಇದಕ್ಕೆ ಜೇನುತುಪ್ಪವನ್ನು ಸೇರಿಸಿದಾಗ ಒಣ ಕೆಮ್ಮಿಗೆ ಇದು ಇನ್ನಷ್ಟು ಪ್ರಯೋಜನಕಾರಿಯಾಗಬಲ್ಲದು. 

ಮಾರ್ಷ್ಮ್ಯಾಲೋ ಬೇರು:
ಮಾರ್ಷ್ಮ್ಯಾಲೋ ರೂಟ್ ಒಂದು ರೀತಿಯ ಕುರುಚಲಾದ ಗಿಡಮೂಲಿಕೆ. ಒಣ ಕೆಮ್ಮನ್ನು ಶಮನಗೊಳಿಸಲು ಇದನ್ನು ಕೆಮ್ಮಿನ ಸಿರಪ್‌ನಲ್ಲಿ ಮತ್ತು ಲೋಜೆಂಜ್‌ಗಳಲ್ಲಿ ಬಳಸಲಾಗುತ್ತದೆ.

 ಸಮೀಕ್ಷೆ-ಆಧಾರಿತ ಅಧ್ಯಯನವೊಂದು, ಇದು ಗಂಟಲನ್ನು ಶಮನಗೊಳಿಸಲು ಮತ್ತು ಒಣ ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ ಎಂದು ಕಂಡುಕೊಂಡಿದೆ. 

ಮಾರ್ಷ್ಮ್ಯಾಲೋ ಬೇರು ಸಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಹಿಳೆಯರು ಪ್ರತಿದಿನ ಈ ಟೀ ಕುಡಿದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

ಪುದೀನಾ:
ಪುದೀನಾದಲ್ಲಿ ಮೆಂಥಾಲ್ ಅಂಶವಿದೆ. ಇದು ಕೆಮ್ಮಿನಿಂದ ಕಿರಿಕಿರಿಗೊಳ್ಳುವ ಗಂಟಲಿನ ನರಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ನೋವು ನಿವಾರಕವಾಗಿದ್ದು ಕೆಮ್ಮು ಬರುವ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ. 

ಪುದೀನಾ ಗಂಟಲಿನಲ್ಲಿ ಕಫದ ಸಾಂದ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ, ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. 

ಪುದೀನಾ ಸೇವಿಸಲು ಹಲವಾರು ಮಾರ್ಗಗಳಿವೆ. ಪುದೀನಾ ಚಹಾ ಕುಡಿಯುವುದು ಅಥವಾ ಪುದೀನಾ ಪೆಪ್ಪರ್ಮಿಂಟುಗಳನ್ನು ಚೀಪಬಹುದು. ರಾತ್ರಿಯ ಕೆಮ್ಮುಗಳನ್ನು ನಿವಾರಿಸಲು ಮಲಗುವ ಮುನ್ನ ಪುದೀನಾ ಚಹಾವನ್ನು ಕುಡಿಯಿರಿ. 

ಮಸಾಲೆಯುಕ್ತ ಚಹಾ ಸೇವನೆ:

ಚಹಾ ಸವಿಯುವುದೆಂದರೆ ಬಹುತೇಕ ಎಲ್ಲರಿಗೂ ಬಹಳ ಅಚ್ಚುಮೆಚ್ಚು. 

ಇತ್ತೀಚಿನ ಕೆಲ ವರ್ಷಗಳಲ್ಲಿ ಮಸಾಲೆ ಚಹಾ ಅಮೆರಿಕದಲ್ಲಿ ಜನಪ್ರೀಯವಾಗುತ್ತಿದೆ. ಆದರೆ, ಭಾರತದಂತಹ ದೇಶದಲ್ಲಿ ಚಹಾ ಸೇವನೆ ದೊಡ್ಡ ವಿಷಯವಲ್ಲ, ನಮ್ಮಲ್ಲಿ ಗಂಟಲು ಕೆರೆತದ ಉಪಶಮನ ಹಾಗೂ ಒಣ ಕೆಮ್ಮನ್ನು ನಿಯಂತ್ರಿಸಲು ಚಹಾ ಸೇವನೆ ಮಾಡುತ್ತಾರೆ. ಅದರಲ್ಲೂ ಮಸಾಲೆಯುಕ್ತ ಚಹಾ ಅಂದರೆ ಲವಂಗ ಮತ್ತು ಏಲಕ್ಕಿ ಸೇರಿದಂತೆ ಹಲವಾರು ಇತರೆ ಸಾಂಬಾರು ಪದಾರ್ಥಗಳನ್ನು ಹೊಂದಿರುತ್ತದೆ. ಈ ಸಾಂಬಾರು ಪದಾರ್ಥಗಳಲ್ಲಿರುವ ಔಶಧೀಯ ಗುಣಗಳಿಂದ ಒಣಕೆಮ್ಮನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. 

ಇದನ್ನೂ ಓದಿ: ಈ ಆಹಾರಗಳನ್ನು ಮಿಕ್ಸ್ ಮಾಡಿ ತಿಂದ್ರೆ ಸಮಸ್ಯೆಗಳು ಸಾಲಾಗಿ ಬರುತ್ತೆ

ಕ್ಯಾಪ್ಸೈಸಿನ್: 
ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ದೀರ್ಘಕಾಲದಿಂದ ಕೆಮ್ಮನ್ನು ಕಡಿಮೆ ಮಾಡಲು ಬಳಸಲಾಗುತ್ತಿದೆ. 

ಕ್ಯಾಪ್ಸೈಸಿನ್ ಅನ್ನು ಕ್ಯಾಪ್ಸುಲ್ ರೂಪದಲ್ಲಿ ತೆಗೆದುಕೊಳ್ಳಬಹುದಾದರೂ, ಅದರಿಂದ ಚಹಾ ತಯಾರಿಸಿಯೂ ಸೇವಿಸಬಹುದು. 

ಕೇನ್ ಮೆಣಸಿನಕಾಯಿ ಎಂಬುದು ಮಣಸಿನಕಾಯಿಗಳಲ್ಲಿನ ಒಂದು ವಿಧವಾಗಿದೆ. ನೀರಿಗೆ ಕೇನ್ ಬಿಸಿ ಸಾಸ್‌ನ ಹನಿಗಳನ್ನು ಸೇರಿಸಿ, ನೀವು ಖಾರವನ್ನು ತಡೆದುಕೊಳ್ಳುವಷ್ಟು ಸೇವಿಸುತ್ತ ಹೋಗಿ. ಕ್ಯಾಪ್ಸೈಸಿನ್ ಆಧಾರಿತ ಈ ಚಿಕಿತ್ಸೆಯನ್ನು ಮಕ್ಕಳಿಗೆ ಶಿಫಾರಸ್ಸು ಮಾಡಲಾಗದು.
Published by:Sandhya M
First published: