Home Remedies for Dengue: ನೀವು ಡೆಂಘೀ ಜ್ವರದಿಂದ ಬಳಲುತ್ತಿದ್ದರೆ, ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ..

Home medicine for dengue fever: ಡೆಂಘೀ ರೋಗ ಲಕ್ಷಣಗಳನ್ನು (Dengue Fever symptoms) ಆರಂಭದಲ್ಲಿಯೇ ನಿಯಂತ್ರಿಸಲು ಸಹಾಯ ಮಾಡುವ ಐದು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ತೀವ್ರ ಜ್ವರವನ್ನು ಕಡಿಮೆ ಮಾಡಬಹುದು ಮತ್ತು ರೋಗ ಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು.

ಡೆಂಘೀ ಜ್ವರಕ್ಕೆ ಮನೆಮದ್ದು

ಡೆಂಘೀ ಜ್ವರಕ್ಕೆ ಮನೆಮದ್ದು

  • Share this:
    ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಘೀ ಜ್ವರ ಸೊಳ್ಳೆಯಿಂದ (Dengue Fever) ಹರಡುವ ರೋಗವಾಗಿದ್ದು, ಇದು ಪ್ರತಿ ವರ್ಷ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿನ ಜನರನ್ನು ಕಾಡುವ ಕಾಯಿಲೆಯಾಗಿದೆ. ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಡೆಂಘೀ ಪ್ರಕರಣಗಳು ಎಲ್ಲೆಡೆ ಹೆಚ್ಚಾಗುತ್ತವೆ. ತೀವ್ರ ಜ್ವರ, ತಲೆನೋವು, ಕಣ್ಣುಗಳಲ್ಲಿ ನೋವು, ತುಂಬಾ ಆಯಾಸ, ಕೀಲು ನೋವು, ಚರ್ಮದ ಮೇಲೆ ದದ್ದು, ವಾಕರಿಕೆ ಮತ್ತು ವಾಂತಿ ಇವೆಲ್ಲವೂ ಡೆಂಘೀನ ಕೆಲವು ರೋಗ ಲಕ್ಷಣಗಳಾಗಿವೆ ಎಂದು ಹೇಳಬಹುದು. ಡೆಂಘೀ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.

    ಡೆಂಘೀ ರೋಗ ಲಕ್ಷಣಗಳನ್ನು (Dengue Fever symptoms) ಆರಂಭದಲ್ಲಿಯೇ ನಿಯಂತ್ರಿಸಲು ಸಹಾಯ ಮಾಡುವ ಐದು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ತೀವ್ರ ಜ್ವರವನ್ನು ಕಡಿಮೆ ಮಾಡಬಹುದು ಮತ್ತು ರೋಗ ಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು.

    ನಿಮ್ಮ ಮನೆಯಲ್ಲಿಯೇ ಇದೆ ಡೆಂಘೀ ಜ್ವರಕ್ಕೆ ಮದ್ದು (Home remedies for Dengue Fever):

    1. ಅಮೃತ ಬಳ್ಳಿ ರಸ (ಗಿಲೋಯ್ ರಸ - Giloy juice)

    ಈ ಅಮೃತ ಬಳ್ಳಿ (Amrutha Balli) ರಸವು ಡೆಂಘೀ ಜ್ವರಕ್ಕೆ ತುಂಬಾನೇ ಪರಿಣಾಮಕಾರಿಯಾದ ಪರಿಹಾರವಾಗಿದೆ. ಈ ರಸವು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಡೆಂಘೀ ಜ್ವರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಬಲವಾದ ರೋಗನಿರೋಧಕ ಶಕ್ತಿ ಒದಗಿಸುತ್ತದೆ. ಇದು ಪ್ಲೇಟ್ಲೆಟ್ ಎಣಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ (Helps increase platelet count). ನೀವು ಅಮೃತ ಬಳ್ಳಿಯ ಗಿಡದ ಎರಡು ಸಣ್ಣ ಕಾಂಡಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಬಹುದು. ಈ ನೀರನ್ನು ಸ್ವಲ್ಪ ಬೆಚ್ಚಗಿದ್ದಾಗ ಸೇವಿಸಿ.

    2. ಪಪ್ಪಾಯಿ ಎಲೆಯ ರಸ (Papaya Leaf Juice):

    ಡೆಂಘೀ ರೋಗಿಗಳಲ್ಲಿ ಪ್ಲೇಟ್ಲೆಟ್ ಎಣಿಕೆ ಕಡಿಮೆಯಾಗುತ್ತಿದ್ದಂತೆ, ಪ್ಲೇಟ್ಲೆಟ್ ಎಣಿಕೆ ಹೆಚ್ಚಿಸಲು ಪಪ್ಪಾಯಿ ಎಲೆಯ ರಸ ನೀಡಲಾಗುತ್ತದೆ. ಪಪ್ಪಾಯಿ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಇದು ಡೆಂಘೀ ಚಿಕಿತ್ಸೆಗೂ ಸಹಾಯ ಮಾಡುತ್ತದೆ. ಸ್ವಲ್ಪ ಪಪ್ಪಾಯಿ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸ ಹೊರತೆಗೆಯಲು ಅವುಗಳನ್ನು ಪುಡಿ ಮಾಡಿ. ನೀವು ದಿನಕ್ಕೆ 2 ಬಾರಿ ಸ್ವಲ್ಪ ಪ್ರಮಾಣದ ಪಪ್ಪಾಯಿ ಎಲೆಯ ರಸ ಸೇವಿಸಬಹುದು.

    3. ತಾಜಾ ಪೇರಳೆ ರಸ (Fresh Guava juice):

    ಪೇರಳೆ ಹಣ್ಣಿನ ರಸವು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಘೀ ಜ್ವರಕ್ಕೆ ಚಿಕಿತ್ಸೆ ನೀಡಲು ನೀವು ತಾಜಾ ಪೇರಳೆ ಹಣ್ಣಿನ ರಸವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಬಹುದು. ದಿನಕ್ಕೆ 2 ಬಾರಿ ಒಂದು ಕಪ್ ಪೇರಳೆ ಹಣ್ಣಿನ ರಸ ಕುಡಿಯಿರಿ ಅಥವಾ ರಸದ ಬದಲು ತಾಜಾ ಪೇರಳೆ ಹಣ್ಣನ್ನು ಸಹ ನೀವು ತಿನ್ನಬಹುದು.

    ಇದನ್ನೂ ಓದಿ: Guts Health: ಕರುಳಿನ ಆರೋಗ್ಯಕ್ಕೆ Vitamin C ಯುಕ್ತ ದ್ರಾಕ್ಷಿ ಬೆಸ್ಟ್

    4. ಮೆಂತ್ಯೆ ಬೀಜಗಳು:

    ಮೆಂತ್ಯೆ ಕಾಳುಗಳಲ್ಲಿ ಕೂಡ ಅನೇಕ ಪೋಷಕಾಂಶಗಳಿದ್ದು, ಡೆಂಘೀ ಜ್ವರ ನಿಯಂತ್ರಿಸಲು ನೆರವಾಗುತ್ತದೆ. ನೀವು ಸ್ವಲ್ಪ ಮೆಂತ್ಯೆ ಕಾಳುಗಳನ್ನು ಒಂದು ಕಪ್ ಬಿಸಿ ನೀರಿನಲ್ಲಿ ನೆನೆಸಿ ಇಡಬಹುದು. ನೀರು ತಣ್ಣಗಾಗಲು ಬಿಡಿ ಮತ್ತು ದಿನಕ್ಕೆ 2 ಬಾರಿ ಕುಡಿಯಿರಿ. ಮೆಂತ್ಯೆ ನೀರು ವಿಟಮಿನ್ ಸಿ, ಕೆ ಮತ್ತು ನಾರಿನಂಶ ಒಳಗೊಂಡಿರುವುದರಿಂದ ನಿಮಗೆ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಇದು ಒದಗಿಸುತ್ತದೆ. ಮೆಂತ್ಯೆ ನೀರು ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    ಇದನ್ನೂ ಓದಿ: Pomegranate Benefits: ಗ್ರೀನ್ ಟೀಗಿಂತಲೂ ದಾಳಿಂಬೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ನೋಡಿ

    5. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ (Eat immunity boosters):

    ಬಲವಾದ ರೋಗನಿರೋಧಕ ವ್ಯವಸ್ಥೆಯು ಡೆಂಘೀ ತಡೆಗಟ್ಟಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕತೆಯು ಡೆಂಘೀನ ಆರಂಭಿಕ ಲಕ್ಷಣಗಳನ್ನು ವಾಸಿ ಮಾಡುತ್ತದೆ. ಸಿಟ್ರಸ್ ಅಂಶವಿರುವ ಆಹಾರಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಮತ್ತು ಇನ್ನೂ ಅನೇಕ ರೀತಿಯ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ನೀವು ನಿಮ್ಮ ಆಹಾರಕ್ಕೆ ಸೇರಿಸಿಕೊಳ್ಳಿರಿ.

    ಇದನ್ನೂ ಓದಿ: Winter Immunity Booster: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಜ್ಯೂಸ್​ಗಳು

    ರೋಗ ಲಕ್ಷಣಗಳು ಕಂಡು ಬಂದರೆ ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ:

    ಡೆಂಘೀನ ಕೆಲವು ರೋಗ ಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ನಿಮ್ಮನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ವೈದ್ಯಕೀಯ ಸಹಾಯ ಪಡೆಯಬೇಕು.
    Published by:Sharath Sharma Kalagaru
    First published: