Home Remedies: ತಲೆಹೊಟ್ಟು, ತಲೆತುರಿಕೆ ಸಮಸ್ಯೆಗೆ ಮನೆಯಲ್ಲೇ ಮಾಡಿ ಪರಿಹಾರ..!

ತಲೆಬುಡ ತೇವಾಂಶ ರಹಿತವಾಗಿದ್ದರೆ ನಿಮಗೆ ತಲೆಹೊಟ್ಟಿನ ಸಮಸ್ಯೆ ಎದುರಾಗುತ್ತದೆ. ತೆಂಗಿನೆಣ್ಣೆಯಲ್ಲಿ ನೈಸರ್ಗಿಕ ಅಂಶಗಳಿದ್ದು ಇದು ತುರಿಕೆ ಹಾಗೂ ಹೊಟ್ಟನ್ನು ನಿವಾರಿಸುತ್ತದೆ.

ತಲೆಹೊಟ್ಟು

ತಲೆಹೊಟ್ಟು

  • Share this:

ತಲೆಯ ತುರಿಕೆಯ ಸಮಸ್ಯೆಗೆ ಮುಖ್ಯ ಕಾರಣ ತಲೆಹೊಟ್ಟು. ಹೇರ್ ಕಲರಿಂಗ್ ಹಾಗೂ ಕೂದಲಿನಲ್ಲಿ ಎಣ್ಣೆ ಉಳಿಸಿಕೊಳ್ಳುವುದರಿಂದ ಕೂಡ ತಲೆಹೊಟ್ಟು ಸಮಸ್ಯೆಯಾಗಿ ಕಾಡುತ್ತದೆ. ತಲೆಬುಡದಲ್ಲಿ ಎಣ್ಣೆ ಇಲ್ಲದೇ ಇದ್ದಾಗ ಎಣ್ಣೆಯಿಲ್ಲದೆ ಕೂದಲಿನ ಬುಡ ಒಣಗಿದಾಗ ಶಿಲೀಂಧ್ರಗಳ ಸೋಂಕಿನಿಂದ ತಲೆಹೊಟ್ಟಿನ ಸಮಸ್ಯೆ ಕಂಡುಬರುತ್ತದೆ. ತಲೆಹೊಟ್ಟಿನ ಸಮಸ್ಯೆಗೆ ನೀವು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಪಾಲಿಸಬಹುದಾಗಿದೆ. ಆದರೆ ಈ ಮನೆಮದ್ದುಗಳ ಬಳಕೆಯನ್ನು ನೀವು ನಿಯಮಿತವಾಗಿ ಪಾಲಿಸಬೇಕಾಗುತ್ತದೆ.


ತೆಂಗಿನೆಣ್ಣೆ


ತಲೆಬುಡ ತೇವಾಂಶ ರಹಿತವಾಗಿದ್ದರೆ ನಿಮಗೆ ತಲೆಹೊಟ್ಟಿನ ಸಮಸ್ಯೆ ಎದುರಾಗುತ್ತದೆ. ತೆಂಗಿನೆಣ್ಣೆಯಲ್ಲಿ ನೈಸರ್ಗಿಕ ಅಂಶಗಳಿದ್ದು ಇದು ತುರಿಕೆ ಹಾಗೂ ಹೊಟ್ಟನ್ನು ನಿವಾರಿಸುತ್ತದೆ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಹತ್ತಿಯ ಉಂಡೆಯನ್ನು ಮುಳುಗಿಸಿ ನೆತ್ತಿಗೆ ಹಚ್ಚಿಕೊಳ್ಳಿ. ವಾರದಲ್ಲಿ ಎರಡು ಬಾರಿ ಇದನ್ನು ಅನುಸರಿಸಿ.


ಆ್ಯಪಲ್ ಸೀಡರ್ ವಿನೇಗರ್


ತಲೆಹೊಟ್ಟಿನ ಸಮಸ್ಯೆಗೆ ಆ್ಯಪಲ್ ಸೀಡರ್ ವಿನೇಗರ್ ಉತ್ತಮ ಪರಿಹಾರವಾಗಿದೆ. ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಅನ್ನು ನಾಲ್ಕು ಚಮಚ ನೀರಿನೊಂದಿಗೆ ಮಿಶ್ರ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ. ಒಂದು ಗಂಟೆಯ ನಂತರ ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ


ಬೇಕಿಂಗ್ ಸೋಡಾ


ಕೂದಲುದುರುವಿಕೆ ಹಾಗೂ ತಲೆತುರಿಕೆಯಿಂದ ಬೇಕಿಂಗ್ ಸೋಡಾ ತ್ವರಿತ ಉಪಶಮನ ಒದಗಿಸುತ್ತದೆ. ಎರಡು ಚಮಚ ಬೇಕಿಂಗ್ ಸೋಡಾ ನೀರು ಬೆರೆಸಿ ದಪ್ಪನೆಯ ಮಿಶ್ರಣ ಮಾಡಿಕೊಳ್ಳಿ. ನೆತ್ತಿಗೆ ಕೂದಲಿಗೆ ಹಚ್ಚಿದ ನಂತರ 15 ನಿಮಿಷ ಹಾಗೆಯೇ ಬಿಡಿ. ನಂತರ ತಲೆ ತೊಳೆದುಕೊಳ್ಳಿ. ಮೂರು ವಾರಗಳಿಗೊಮ್ಮೆ ಹೀಗೆ ಮಾಡಿ.


ಇದನ್ನೂ ಓದಿ:Coronavirus: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದರ ಅಸಲಿ ಕಾರಣವೇನು ಗೊತ್ತೇ..?

ಆಲೀವ್ ಆಯಿಲ್


ಎರಡು ಚಮಚ ಆಲೀವ್ ಆಯಿಲ್ ಬಿಸಿ ಮಾಡಿಕೊಳ್ಳಿ. ಈ ಎಣ್ಣೆಯನ್ನು ನಿಮ್ಮ ನೆತ್ತಿಗೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ರಾತ್ರಿಪೂರ್ತಿ ಹಾಗೆಯೇ ಬಿಡಿ. ಬೆಳಗ್ಗೆ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಆಲೀವ್ ಎಣ್ಣೆಯ ಮಸಾಜ್ ಅನ್ನು ಕೂದಲಿಗೆ ಮಾಡಿ.


ಲಿಂಬೆ ರಸ


ಲಿಂಬೆ ರಸ ನೈಸರ್ಗಿಕವಾಗಿ ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲಿದ್ದು ಇದರಲ್ಲಿರುವ ಆ್ಯಸಿಡಿಟಿ ಅಂಶದಿಂದ ತಲೆತುರಿಕೆ ಮಾಯವಾಗುತ್ತದೆ. ಲಿಂಬೆ ರಸವನ್ನು ಹತ್ತಿಯ ಉಂಡೆಯ ಸಹಾಯದಿಂದ ಕೂದಲಿನ ಬುಡಕ್ಕೆ ಹಾಗೂ ನೆತ್ತಿಗೆ ಹಚ್ಚಿಕೊಳ್ಳಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಕೂದಲಿಗೆ ಅನುಸರಿಸಿ.


ಅಲೊವೇರಾ


ಅಲೊವೇರಾ ನೈಸರ್ಗಿಕ ತಂಪಿನ ಗುಣಗಳನ್ನು ಹೊಂದಿದ್ದು ಇದು ತುರಿಕೆಯ ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೊವೇರಾ ಜೆಲ್ ತೆಗೆದುಕೊಂಡು ಕೂದಲಿನ ಬುಡಕ್ಕೆ ನೆತ್ತಿಗೆ ಹಚ್ಚಿ ಹಾಗೂ 15-20 ನಿಮಿಷ ಹಾಗೆಯೇ ಬಿಡಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಅನುಸರಿಸಿ.


ಪೆಪ್ಪರ್‌ಮೆಂಟ್ ತೈಲ


ಪೆಪ್ಪರ್‌ಮೆಂಟ್ ತೈಲ ಕೂಡ ತಲೆಹೊಟ್ಟಿನಿಂದ ಉಂಟಾಗುವ ತಲೆತುರಿಕೆಯನ್ನು ನಿವಾರಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ನೆತ್ತಿಗೆ ನೇರವಾಗಿ ಹಚ್ಚಬಹುದಾಗಿದೆ. ಇದರೊಂದಿಗೆ ತೆಂಗಿನ ಎಣ್ಣೆ, ಹರಳೆಣ್ಣೆಯನ್ನು ಮಿಶ್ರ ಮಾಡಿ ಹಚ್ಚಬಹುದಾಗಿದೆ. ವಾರದಲ್ಲಿ ಎರಡು ಬಾರಿ ಎಣ್ಣೆಯ ಬಳಕೆ ಮಾಡಿ.


ಇದನ್ನೂ ಓದಿ:Maharashtra HSC 12th Result 2021: ಇಂದು ಮಧ್ಯಾಹ್ನ 2 ಗಂಟೆಗೆ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆರ್ಗನ್ ತೈಲ


ನೈಸರ್ಗಿಕ ಆರ್ಗನ್ ತೈಲ ಕೂದಲಿನ ಬುಡಕ್ಕೆ ನೈಸರ್ಗಿಕ ತೇವಾಂಶವನ್ನುಂಟು ಮಾಡುತ್ತದೆ. ಈ ಎಣ್ಣೆಯನ್ನು ನಿಮ್ಮ ಕೂದಲಿನ ನೆತ್ತಿಗೆ ಹಾಗೂ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ರಾತ್ರಿಪೂರ್ತಿ ಹಾಗೆಯೇ ಬಿಡಿ ಮರುದಿನ ಬೆಳಗ್ಗೆ ಶ್ಯಾಂಪೂ ಮಾಡಿ ಕೂದಲು ತೊಳೆದುಕೊಳ್ಳಿ.




ಈರುಳ್ಳಿ ರಸ


ಈರುಳ್ಳಿಯು ಆ್ಯಂಟಿಮೈಕ್ರೋಬಿಯಲ್‌ ಅಂಶಗಳನ್ನು ಒಳಗೊಂಡಿದ್ದು ಇದು ತುರಿಕೆಯನ್ನು ನಿವಾರಿಸುತ್ತದೆ. ಈರುಳ್ಳಿಯನ್ನು ತುರಿದು ಅದರಿಂದ ರಸವನ್ನು ತೆಗೆದುಕೊಳ್ಳಿ. ರಸವನ್ನು ಕೂದಲಿಗೆ ಪೂರ್ತಿಯಾಗಿ ಹಚ್ಚಿ 20 ನಿಮಿಷ ಬಿಡಿ. ನಂತರ ಮೃದು ಶ್ಯಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ.

Published by:Latha CG
First published: