• Home
  • »
  • News
  • »
  • lifestyle
  • »
  • Health Tips: ಗ್ಯಾಸ್ಟ್ರಿಕ್ ಸಮಸ್ಯೆಗೆ ಅಡುಗೆ ಮನೆಯಲ್ಲೇ ಇದೆ ಮದ್ದು, ಟ್ರೈ ಮಾಡಿ ನೋಡಿ!

Health Tips: ಗ್ಯಾಸ್ಟ್ರಿಕ್ ಸಮಸ್ಯೆಗೆ ಅಡುಗೆ ಮನೆಯಲ್ಲೇ ಇದೆ ಮದ್ದು, ಟ್ರೈ ಮಾಡಿ ನೋಡಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Home Remedies for Acidity: ಆಹಾರದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುವ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇರಿಸಲು, ಊಟದ ಜೊತೆಗೆ ಬಣ್ಣಬಣ್ಣದ ಪೌಷ್ಟಿಕಾಂಶಯುಕ್ತ ಸಲಾಡ್‍ಗಳನ್ನು ಸೇವಿಸಿ ಅಥವಾ ಅವುಗಳನ್ನೇ ತಿನಿಸಾಗಿ ಸೇವಿಸಿ.

  • Share this:

Gastric Problem: ನಿಮಗೆ ಯಾವಾಗಲೂ ಎದೆ ಉರಿ, ವಾಕರಿಕೆ ಅಥವಾ ಗಂಟಲಲ್ಲಿ ಆಹಾರ ಸಿಕ್ಕಿ ಹಾಕಿಕೊಂಡಂತಹ ಅನುಭವ ಆಗುತ್ತಿದ್ದರೆ , ಎಚ್ಚರಿಕೆ ವಹಿಸುವ ಸಮಯ ಬಂದಿದೆ ಎಂದರ್ಥ. ಅದು ಆ್ಯಸಿಡ್ ರಿಫ್ಲೆಕ್ಸ್, ಗ್ಯಾಸ್ಟ್ರೋಫೇಜಿಲ್ ರಿಫ್ಲೆಕ್ಸ್ ಕಾಯಿಲೆ ಅಥವಾ ಆಮ್ಲೀಯತೆಯ ಲಕ್ಷಣಗಳಾಗಿರಬಹುದು. ಆ್ಯಸಿಡ್ ರಿಫ್ಲೆಕ್ಸ್ ಆಹಾರ ಕ್ರಮವನ್ನು ಅನುಸರಿಸುವುದರಿಂದ ಈ ಅಹಿತಕರ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಆಮ್ಲೀಯತೆಯ ಪರಿಹಾರಕ್ಕೆ ಔಷಧಿಗಳನ್ನು ನೀಡುತ್ತಾರೆ, ಆದರೆ ಆಹಾರ ಕ್ರಮದಿಂದಲೂ ಪರಿಹಾರ ಸಾಧ್ಯವಿದೆ.


ಆಮ್ಲೀಯತೆಯ ನಿವಾರಣೆಗೆ ಕ್ಷಾರೀಯ ಆಹಾರ
ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆಯನ್ನು ತರುವುದು ಆಮ್ಲೀಯತೆಯನ್ನು ದೂರವಿಡಲು ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ವಿಧಾನ. ಆಮ್ಲೀಯ ಆಹಾರಗಳನ್ನು ಕಡಿಮೆ ತಿನ್ನುವುದು ಮತ್ತು ಕ್ಷಾರೀಯ ಆಹಾರಗಳನ್ನು ಹೆಚ್ಚಾಗಿ ತಿನ್ನುವುದರಿಂದ ಅನ್ನನಾಳದಲ್ಲಿ ಆಮ್ಲದ ಹಿಮ್ಮುಖ ಹರಿವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹೊಟ್ಟೆಯಲ್ಲಿರುವ ಆಮ್ಲೀಯ ಅಂಶಗಳನ್ನು ತಟಸ್ಥಗೊಳಿಸುವ ಕ್ಷಾರೀಯ ಆಹಾರಗಳು ರಿಫ್ಲಕ್ಸ್‍ನ ಪರಿಣಾಮಗಳನ್ನು ಕೂಡ ಸ್ತಬ್ಧಗೊಳಿಸುತ್ತದೆ.


ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ನಾನ್ ವೆಜ್ ತಿನ್ನುವುದಿಲ್ಲ ಯಾಕೆ? ಇದಕ್ಕೂ ವೈಜ್ಞಾನಿಕ ಕಾರಣ ಇದೆಯಾ?

ಆ ಆಹಾರಗಳು ಯಾವುವೆಂದರೆ:
• ಪಾಲಕ್, ಮೆಂತೆ ಸೊಪ್ಪು, ಬೆಂಡೆಕಾಯಿ, ಸೌತೆಕಾಯಿ, ಬೀಟ್ ರೂಟ್, ಕ್ಯಾರೆಟ್, ಬ್ರಾಕೋಲಿ, ಕ್ಯಾಬೆಜ್,ಕೊತ್ತಂಬರಿ ಸೊಪ್ಪು, ಹೂಕೋಸು, ಗೆಣಸು, ಬದನೆಕಾಯಿ, ಈರುಳ್ಳಿ, ಬಟಾಣಿ, ಕುಂಬಳಕಾಯಿ ಮತ್ತು ಮೂಲಂಗಿಯಂತಹ ತರಕಾರಿಗಳು.
• ಬಾಳೆಹಣ್ಣು, ಸೇಬು, ಕಲ್ಲಂಗಡಿ ಹಣ್ಣು, ಅಂಜೂರ ಮತ್ತು ದಾಳಿಂಬೆ ಸೇರಿದಂತೆ ಹೆಚ್ಚಿನ ಹಣ್ಣುಗಳು.
• ಸಿಹಿ ಇಲ್ಲದ ಮೊಸರು
• ಹಸಿರು ಬೀನ್ಸ್, ನೇವಿ ಬೀನ್ಸ್, ಅವರೆಕಾಯಿ(ಬ್ರಾಡ್ ಬೀನ್ಸ್), ಮೊಳಕೆ ಬರಿಸಿದ ಹೆಸರು ಕಾಳು, ಚಪ್ಪರದವರೆಕಾಯಿ(ಲೈಮಾ ಬೀನ್ಸ್), ಪಿಂಟೋ ಬೀನ್ಸ್ ಮತ್ತು ಕಾಳುಗಳು.
• ಬಾದಾಮಿ, ಕುಂಬಳಕಾಯಿ ಬೀಜ, ಅಗಸೆ ಬೀಜ, ಎಳ್ಳು ಮತ್ತು ಸೂರ್ಯಕಾಂತಿ ಬೀಜದಂತಹ ಒಣ ಬೀಜಗಳು.
ಆಹಾರದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುವ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇರಿಸಲು, ಊಟದ ಜೊತೆಗೆ ಬಣ್ಣಬಣ್ಣದ ಪೌಷ್ಟಿಕಾಂಶಯುಕ್ತ ಸಲಾಡ್‍ಗಳನ್ನು ಸೇವಿಸಿ ಅಥವಾ ಅವುಗಳನ್ನೇ ತಿನಿಸಾಗಿ ಸೇವಿಸಿ. ನಿಮ್ಮ ಮೇಜಿನ ಪಕ್ಕ ಒಣ ಬೀಜಗಳನ್ನು ಬಾಟಲಿಯಲ್ಲಿ ಹಾಕಿ ಇಟ್ಟಿರಿ, ಆಗಾಗ ಸ್ಪಲ್ಪ ಸ್ವಲ್ಪ ತಿನ್ನುತ್ತಿರಿ. ಮುಖ್ಯವಾಗಿ ಬೇಸಿಗೆಯಲ್ಲಿ, ಜಿಡ್ಡಾದ ಸಿಹಿ ಪದಾರ್ಥದ ಬದಲಿಗೆ, ಒಂದು ಕಪ್ ಹಣ್ಣು ಮತ್ತು ಮೊಸರನ್ನು ಸೇವಿಸಿ.
ನೀರು ಕುಡಿಯಿರಿ, ನೀರು ಕುಡಿಯಿರಿ ಮತ್ತು ನೀರು ಕುಡಿಯಿರಿ
ನೀರು ಕುಡಿಯುವ ಮೂಲಕ ದೇಹದಲ್ಲಿ ನಿರ್ಜಲೀಕರಣ ಆಗದಂತೆ ತಡೆಯುವುದು ಅತ್ಯಂತ ಆರೋಗ್ಯಕರ ಅಭ್ಯಾಸ. ಖನಿಜಯುಕ್ತ ನೀರನ್ನು ಕುಡಿಯುವದರಿಂದ ರಿಫ್ಲಕ್ಸ್ ರೋಗಗಳು ಕಡಿಮೆ ಆಗುತ್ತವೆ ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕ್ಷಾರೀಯ ನೀರನ್ನು ಕುಡಿಯುವದರಿಂದ ಆಮ್ಲೀಯ ರೋಗ ಲಕ್ಷಣಗಳು ಕಡಿಮೆ ಆಗುತ್ತದೆ ಎಂಬುವುದು ಮತ್ತೊಂದು ಪ್ರಯೋಗದಿಂದ ತಿಳಿದು ಬಂದಿದೆ.


ಇದನ್ನೂ ಓದಿ: Breastfeeding: ಹಾಲುಣಿಸುವ ತಾಯಿ ಏನನ್ನು ತಿನ್ನಬೇಕು? ಏನು ತಿನ್ನಬಾರದು? ವೈದ್ಯರು ಹೇಳಿದ ಕಿವಿಮಾತು...ಆಮ್ಲೀಯತೆ ಉಂಟು ಮಾಡುವ ಆಹಾರದಿಂದ ದೂರವಿರಿ
ನಿಮ್ಮ ಆಹಾರ ಕ್ರಮದಲ್ಲಿ ಆಮ್ಲೀಯತೆಯನ್ನು ಉಂಟು ಮಾಡುವ ಆಹಾರವನ್ನು ಗುರುತಿಸುವುದು ಮತ್ತು ಅದನ್ನು ದೂರವಿಡುವುದು ಅಗತ್ಯ. ಹೆಚ್ಚು ಕೊಬ್ಬುಳ್ಳ ಆಹಾರಗಳು ರೆಫ್ಲಕ್ಸನ್ನು ಹೆಚ್ಚಿಸುತ್ತವೆ. ಅವು ಯಾವುವೆಂದರೆ:
• ಕರಿದ ಪದಾರ್ಥಗಳು (ಪೂರಿ, ಶಂಕರ್‍ಪೋಳಿ, ಕರಿಗಡುಬು ಮತ್ತು ಸಮೋಸ)
• ಕೊಬ್ಬುಳ್ಳ ಸಿಹಿ ತಿನಿಸು (ಲಡ್ಡುಗಳು, ಬರ್ಫಿಗಳು, ಜಿಲೇಬಿಗಳು ಮತ್ತು ಕೇಸರಿಬಾತ್)
• ಎಣ್ಣೆಯುಕ್ತ ಆಹಾರ (ಉಪ್ಪಿನಕಾಯಿ ಮತ್ತು ಇತರ ಜಿಡ್ಡಿನ ಆಹಾರಗಳು)
ನಿಮ್ಮ ಹೊಟ್ಟೆಯ ಪದರಕ್ಕೆ ಕಿರಿಕಿರಿ ಉಂಟು ಮಾಡುವ, ಎದೆ ಉರಿ ಹೆಚ್ಚಿಸುವ ಮಸಾಲೆಯುಕ್ತ ಆಹಾರಗಳು:
• ಗರಂ ಮಸಾಲಾ ಹಾಕಿದ ಪಲ್ಯ ಮತ್ತು ಒಗ್ಗರಣೆ ಹಾಕಿದ ದಾಲ್
• ಪಾನಿಪುರಿ, ಬೇಲ್‍ಪುರಿ, ಪಾಪಡಿ ಚಾಟ್ ಮತ್ತು ಆಲೂ ಟಿಕ್ಕಿ.
• ಉಪ್ಪಿನಕಾಯಿ ಮತ್ತು ಚಟ್ನಿಯಂತಹ ಹೆಚ್ಚು ಖಾರವುಳ್ಳ ತಿನಿಸುಗಳು
ಚಾಕೇಲೇಟ್ ಮತ್ತು ಕಾಫಿಯಂತಹ ಆಹಾರಗಳು ಗ್ಯಾಸ್ಟ್ರೋಫೇಜಿಲ್ ರಿಫ್ಲೆಕ್ಸ್‌ಗೆ ಕಾರಣವಾಗುತ್ತವೆ. ಮದ್ಯಪಾನ ಮತ್ತು ಪ್ಯಾಕ್ ಮಾಡಿದ ಆಹಾರಗಳು ಕೂಡ ರಿಫ್ಲೆಕ್ಸ್‌ಗೆ ಕಾರಣವಾಗಬಲ್ಲವು.
ಅಭ್ಯಾಸಗಳ ಮೇಲೆ ಗಮನ ಇಡಿ
ನಿಮ್ಮ ಆಹಾರ ಕ್ರಮದ ಮೇಲೆ ಗಮನವಿಡಿ ಮತ್ತು ಸೂಕ್ತ ಆಹಾರ ಕ್ರಮವನ್ನು ಅನುಸರಿಸಿ. ಊಟ ಮಾಡಿದ ನಂತರ ಬಿಗಿ ಬಟ್ಟೆ ಧರಿಸುವುದು ಕೂಡ ಆಮ್ಲೀಯತೆಗೆ ಕಾರಣ ಆಗಬಲ್ಲದು. ಹಾಗಾಗಿ ತಾಜಾ ಮತ್ತು ಪೌಷ್ಟಿಕಾಂಶಯುಕ್ತ ಕ್ಷಾರೀಯ ಆಹಾರಗಳ ಸೇವನೆಗೆ ಒತ್ತು ನೀಡಬೇಕು.

Published by:Soumya KN
First published: