ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕೂಡ ಪಿಜ್ಜಾ (Bun Pizza) ತಿನ್ನಲು ಇಷ್ಟಪಡುತ್ತಾರೆ. ಪಿಜ್ಜಾಗಳಲ್ಲಿ ವೆಜ್ ಪಿಜ್ಜಾ ಹಾಗೂ ನಾನ್ವೆಜ್ ಪಿಜ್ಜಾ ಹೀಗೆ ಹಲವಾರು ವಿವಿಧ ರೀತಿಯ ಪಿಜ್ಜಾಗಳಿದೆ. ಇಂದಿನ ಮಕ್ಕಳು ಪಿಜ್ಜಾ ತಿನ್ನುವ ಮೂಲಕ ಸಂತೋಷ ಪಡುತ್ತಾರೆ. ಆದರೆ ಯಾವುದೇ ಕಾರ್ಯಕ್ರಮ, ಸಮಾರಂಭ (Function) ಅಥವಾ ಪಾರ್ಟಿಯಲ್ಲಾಗಲಿ (Party) ಪಿಜ್ಜಾ ತಿನ್ನುವುದು ಒಳ್ಳೆಯದಲ್ಲ. ಅಲ್ಲದೇ ಯಾವಾಗಲೂ ಹೊರಗಿನ ಪಿಜ್ಜಾ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ ಮಕ್ಕಳು (Childrens) ಯಾವಾಗಲೂ ಪಿಜ್ಜಾ (Pizza) ತಿನ್ನಲು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಪಿಜ್ಜಾವನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದು ಬೆಸ್ಟ್ ಉಪಾಯವಾಗಿದೆ. ಆರೋಗ್ಯಕರ ಪದಾರ್ಥಗಳೊಂದಿಗೆ ಬನ್ ಪಿಜ್ಜಾವನ್ನು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ, ಬರ್ಗರ್ ಬನ್ (Burger Bun) ಅಥವಾ ಸಾಮಾನ್ಯ ಬನ್ ಉಪಯೋಗಿಸಬಹುದು ಮತ್ತು ಪಿಜ್ಜಾ ಸಾಸ್ನ ಅಗತ್ಯವಿದೆ. ಹಾಗಾದರೆ ಮನೆಯಲ್ಲಿಯೇ ಪಿಜ್ಜಾ ಮಾಡುವುದು ಹೇಗೆ ಅಂತ ತಿಳಿದುಕೊಳ್ಳೋಣ.
ಬನ್ ಪಿಜ್ಜಾ ಮಾಡಲು ಬೇಕಾಗುವ ಸಾಮಾಗ್ರಿಗಳು
ಇಂದಿನ ದಿನಗಳಲ್ಲಿ ಹಲವರಿಗೆ ಹೊತ್ತಿಗೆ ಸರಿಯಾಗಿ ಊಟ ಮಾಡೋದಕ್ಕಿಂತ ಪಿಜ್ಜಾ, ಬರ್ಗರ್ ಮೊದಲಾದ ಜಂಕ್‌ಫುಡ್ ತಿನ್ನೋದೆ ಇಷ್ಟವಾಗುತ್ತೆ. ಸಾಲ್ದು ಅಂತ ಇಂಥಾ ಡೊಮಿನೋಸ್, ಪಿಜ್ಜಾ ಹಟ್, ಮೆಕ್ ಡೊನಾಲ್ಡ್ ಮೊದಲಾದ ಕಡೆ ಬೈ ಒನ್ ಗೆಟ್ ಒನ್ ಎಂಬ ಆಫರ್ ಬೇರೆ ಕೊಟ್ಟಿರ್ತಾರೆ. ಮಾತ್ರವಲ್ಲ ಸ್ಪೀಡ್ ಡೆಲಿವರಿ ಅನ್ನೋ ಹೆಸರಿನಲ್ಲ ಕೆಲವೇ ನಿಮಿಷಗಳಲ್ಲಿ ಪಿಜ್ಜಾ ಮನೆ ಡೋರ್ ಮುಂದೆ ಇರುತ್ತೆ. ಹೀಗಾಗಿ ಎಲ್ರಿಗೂ ಹಸಿವಾದಾಗ ಥಟ್ಟಂತ ಪಿಜ್ಜಾ ಡೆಲಿವರಿ ಮಾಡೋದು ಸುಲಭವಾಗಿದೆ. ಆದ್ರೆ ಇನ್ಮುಂದೆ ಇದ್ಯಾವುದರ ಅಗತ್ಯವಿಲ್ಲ. ಮನೆಯಲ್ಲಿಯೇ ನೀವು ಬನ್ನಲ್ಲಿ ಪಿಜ್ಜಾ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ