Home Loan: ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ; ಸಾಲ ಪಡೆಯಲು ಇದು ಸೂಕ್ತ ಸಮಯ

ಮಾರ್ಚ್ 31ರ ವರೆಗೆ ಕಡಿಮೆ ಬಡ್ಡಿದರದೊಂದಿಗೆ ಹೋಮ್ ಲೋನ್ ನೀಡುವ ಮೂಲಕ ಹಲವು ಬ್ಯಾಂಕುಗಳು ಮನೆ ಖರೀದಿದಾರರನ್ನು ಆಕರ್ಷಿಸುತ್ತಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗೃಹಸಾಲದ  ಮೇಲೆ ಹಲವು ಬ್ಯಾಂಕುಗಳು ಕಡಿಮೆ ಬಡ್ಡಿದರ ವಿಧಿಸಲು ಮುಂದಾಗಿವೆ. ಮನೆಯ ಖರೀದಿದಾರರನ್ನು ಸೆಳೆಯಲು ವಿವಿಧ ಬ್ಯಾಂಕುಗಳು ಈ ಹಿಂದಿನ 15 ವರ್ಷಗಳಲ್ಲಿ ಎಂದು ನೀಡದಂತಹ ಅತ್ಯಂತ ಕಡಿಮೆ ಬಡ್ಡದರವನ್ನು ನೀಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್​ಡಿಎಫ್​ಸಿ, ಕೊಟಕ್ ಮಹೀಂದ್ರಾ ಬ್ಯಾಂಕುಗಳು ಸೇರಿ ಹೌಸಿಂಗ್ ಫೈನಾನ್ಸ್ ಕಂಪನಿಗಳು ಮನೆ ಖರೀದಿದಾರರಿಗಾಗಿ ಸ್ಪರ್ಧೆ ನಡೆಸಿವೆ. ಮಾರ್ಚ್ 31ರ ವರೆಗೆ ಕಡಿಮೆ ಬಡ್ಡಿದರದೊಂದಿಗೆ ಹೋಮ್ ಲೋನ್ ನೀಡುವ ಮೂಲಕ ಹಲವು ಬ್ಯಾಂಕುಗಳು ಮನೆ ಖರೀದಿದಾರರನ್ನು ಆಕರ್ಷಿಸುತ್ತಿವೆ. ಹೋಮ್ ಲೋನ್ ಗೆ ಎಸ್​ಬಿಐ ಬ್ಯಾಂಕಿನಲ್ಲೂ ಅಗ್ಗದ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಎಸ್​ಬಿಐ ಬ್ಯಾಂಕಿನಲ್ಲಿ ದೊರೆಯುವ ಕಡಿಮೆ ಬಡ್ಡಿದರಗಳ ಸಾಲದಲ್ಲಿ ಹೋಮ್ ಲೋನ್ ಕೂಡ ಒಂದಾಗಿದೆ ಎಂದು ಎಸ್ಬಿಐ ಬ್ಯಾಂಕಿನ ಡಿಎಂಡಿ ( ಚಿಲ್ಲರೆ ವ್ಯಾಪಾರ) ಸಲೋನಿ ನಾರಾಯಣ್ ಅವರು ತಿಳಿಸಿದ್ದಾರೆ.

    ಇನ್ನು, ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರು ಎಸ್​ಬಿಐ ಬ್ಯಾಂಕಿನಲ್ಲಿ ಹೋಮ್ ಲೋನ್ ಪಡೆಯುವವರಿಗೆ 75 ಲಕ್ಷದಿಂದ 5 ಕೋಟಿ ರೂಪಾಯಿಗಳವರೆಗಿನ ಸಾಲಗಳಿಗೆ 6.75 ಪ್ರತಿಶತದಿಂದ ಬಡ್ಡಿದರ ಆರಂಭ ಆಗುತ್ತದೆ. ಇನ್ನು, 75 ಲಕ್ಷ ರೂಪಾಯಿ ಒಳಗಿನ ಹೋಮ್ ಲೋನ್ ಮೇಲಿನ ಬಡ್ಡಿದರವನ್ನು ಎಸ್‌ಬಿಐ ಬ್ಯಾಂಕ್ ಶೇ.6.70ಕ್ಕೆ ಇಳಿಕೆ ಮಾಡಿದೆ. ಈ ಆಫರ್ ಅನ್ನು ಮಾರ್ಚ್ 31ರ ವರಗೆ ಎಸ್​ಬಿಐ ನೀಡಿದೆ. ಇನ್ನು, ಕಳೆದ ವರ್ಷದ ಕೊರೋನಾ ಸೋಂಕಿನ ಆರ್ಭಟದಿಂದಾಗಿ ದೇಶದ ಆರ್ಥಿಕತ ಮೇಲೆ ಹೊಡೆತ ಬಿದ್ದಿತ್ತು. 2020ರ ಡಿಸೆಂಬರ್ ತಿಂಗಳಿನ ಬಳಿಕ ಹೋಮ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಳ ಆಗಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಹೇಳಿದರು.

    ಹೆಚ್​ಡಿಎಫ್​ಸಿ ಬ್ಯಾಂಕ್​ನಿಂದಲೂ ಆಕರ್ಷಕ ಬಡ್ಡಿದರ

    ಹೊಸ ಮನೆ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಹೆಚ್‌ಡಿಎಫ್‌ಸಿ ಬ್ಯಾಂಕಿನಲ್ಲಿಯೂ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಪಡೆಯಬಹುದಾಗಿದೆ. ಹೋಮ್ ಲೋನ್ ಬಡ್ಡಿದರವು ಹೆಚ್‌ಡಿಎಫ್‌ಸಿ ಬ್ಯಾಂಕ್ 5 ಬೇಸಿಸ್ ಪಾಯಿಂಟ್ನಿಂದ ಶೇ. 6.75ಕ್ಕೆ ಇಳಿಸಿದೆ. ಇದರಿಂದ ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ಹೋಮ್ ಲೋನ್ ಪಡೆಯುವರಿಗೆ ಇದು ಉತ್ತಮ ಸಮಯ.

    ಕೊಟಕ್ ಮಹೀಂದ್ರಾ ಬಡ್ಡಿದರ ಇನ್ನೂ ಕಡಿಮೆ

    ಎಸ್​ಬಿಐ ಬ್ಯಾಂಕ್ ಗೃಹಸಾಲ ಬಡ್ಡಿದರ ಇಳಿಕೆಗೊಳಿಸಿದ ಕೆಲವೇ ಸಮಯದಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆಗೊಳಿಸಿದೆ. ಕೊಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಹೋಮ್ ಲೋನ್ ಮೇಲಿನ ಬಡ್ಡಿದರವು 10 ಬೇಸಿಸ್ ಪಾಯಿಂಟ್​ಗಳಿಂದ ಶೇಕಡಾ 6.65ಕ್ಕೆ ಇಳಿಸಿದೆ. ಇದರಿಂದಾಗಿ ಹೋಮ್ ಲೋನ್ ಪಡೆದು ಹೊಸ ಮನೆ ಖರೀದಿ ಮಾಡುವವರಿಗೆ ಇದು ಅತ್ಯುತ್ತಮ ಸಮಯವಾಗಿದೆ. ಇನ್ನು, ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿರುವ ಪ್ರಕಾರ, ಹೋಮ್ ಲೋನ್ ಬಡ್ಡಿದರವು ಸಾಲಗಾರನ ಕ್ರೆಡಿಟ್ ಸ್ಕೋರ್ ಮತ್ತು ಸಾಲದಿಂದ ಮೌಲ್ಯ ಅನುಪಾತ (LTV)ದ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದೆ.

    ಇದನ್ನು ಓದಿ: ಪೊಲೀಸರ ಮುಂದೆ ದಿಢೀರ್​ ವಿಚಾರಣೆಗೆ ಹಾಜರಾದ ದಿನೇಶ್​ ಕಲ್ಲಹಳ್ಳಿ; ಸಂತ್ರಸ್ತೆಯ ಕೆಲ ಮಾಹಿತಿ ಬಹಿರಂಗ

    ಇನ್ನು, ಈ ಸಂದರ್ಭದಲ್ಲಿ ಗೃಹಸಾಲ ಪಡೆಯಲು ಉತ್ತಮ ಸಮಯ. ಈ ಸಮಯದಲ್ಲಿ ಅತಿ ಕಡಿಮೆ ಬಡ್ಡಿದರಗಳಲ್ಲಿ ಗೃಹಸಾಲ ಸಿಗುತ್ತದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕಿನ ಗ್ರಾಹಕ ಸ್ವತ್ತುಗಳ ಅಧ್ಯಕ್ಷ ಅಂಬುಜ್ ಚಾಂದ್ನಾ ಹೇಳಿದರು.

    ಬ್ಯಾಂಕುಗಳಿಂದ ಯಾಕೆ ಈ ಆಫರ್?

    ಕಳೆದ ವರ್ಷ ಕೊರೋನಾ ಆರ್ಭಟಕ್ಕೆ ದೇಶದ ಆರ್ಥಿಕತೆ ದಿಕ್ಕು ತಪ್ಪಿತ್ತು. ಕೊರೋನಾ ಸೋಂಕಿನ ಹಿನ್ನೆಲೆ ಎದುರಾದ ಲಾಕ್​ಡೌನ್​ನಿಂದಾಗಿ ಜನರು ಯಾವುದೇ ಕೆಲಸಗಳನ್ನು ಮಾಡದೇ ಮನೆಯಲ್ಲಿ ಕುಳಿತುಕೊಳ್ಳುವಂತೆ ಆಗಿತ್ತು. ಇನ್ನು, 2020ರ ಜನವರಿ ತಿಂಗಳಿನಲ್ಲಿ ಗೃಹಸಾಲ ತೆಗೆದುಕೊಳ್ಳುವವರ ಸಂಖ್ಯೆ ಶೇ.17.5 ಇದ್ದರೆ, 2021ರ ಜನವರಿ ತಿಂಗಳಿನಲ್ಲಿ ಗೃಹಸಾಲ ಪಡೆಯುವವರ ಸಂಖ್ಯೆ ಶೇ.7.7ಕ್ಕೆ ಇಳಿಕೆ ಆಗಿದೆ. ಇದರಿಂದಾಗಿ ಬ್ಯಾಂಕುಗಳು ಕಡಿಮೆ ಬಡ್ಡಿದರಗಳ ಮೂಲಕ ಮನೆ ಖರೀದಿ ಮಾಡುವವರಿಗೆ ಉತ್ತಮ ಆಫರ್ ನೀಡಿವೆ.

    ಗೃಹಸಾಲ  ಕಡೆಗೆ ಏಕೆ ಮುಖ ಮಾಡಬೇಕು?

    ಗೃಹಸಾಲ ತೆಗೆದುಕೊಳ್ಳುವುದು ಚಿಂತೆ ಮುಕ್ತ ಸಾಲವಾಗಿದೆ. ಪರ್ಸನಲ್ ಲೋನ್ ಗಿಂತ ಗೃಹಸಾಲ ಉತ್ತಮ. ಗೃಹಸಾಲ ಪಡೆದುಕೊಳ್ಳುವುದು, ಸಾಲ ಮರು ಪಾವತಿ ಮಾಡುವ ಪ್ರಕ್ರಿಯ ಸುಲಭ ಆಗಿರುತ್ತದೆ. ಕಡಿಮೆ ಬಡ್ಡಿ ಇರುವುದರಿಂದ ಹೆಚ್ಚಿನ ಹೊರೆ ಸಾಲಗಾರನ ಮೇಲೆ ಬೀಳುವುದಿಲ್ಲ.
    Published by:Seema R
    First published: