Fitness Story: ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಫಿಟ್ನೆಸ್ ರಹಸ್ಯ ಇದಂತೆ

74 ವರ್ಷ ವಯಸ್ಸಿನ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಫಿಟ್ನೆಸ್ 74 ರ ಹರೆಯದಲ್ಲೂ ತುಂಬಾ ಅದ್ಭುತವಾಗಿದೆ. ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಟಕಿಲಾ ಅಥವಾ ಆಸ್ಟ್ರಿಯನ್ ಸ್ಪಿರಿಟ್‌ ಜೊತೆ ಪ್ರೋಟೀನ್ ಶೇಕ್ ಮಿಶ್ರಣ ಮಾಡಿ ಸೇವನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

 • Share this:
  ಸುಪ್ರಸಿದ್ಧ (Famous) ಹಾಲಿವುಡ್ ನಟ (Hollywood Actor), ಬರಹಗಾರರು (Writer) ಮತ್ತು ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಆಗಿರುವ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸಾಕಷ್ಟು ಹೆಸರು ಗಳಿಸಿದ್ದಾರೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ (Arnold Schwarzenegger) ಅವರು ವಿಶ್ವದ ಅತ್ಯಂತ ಪ್ರಸಿದ್ಧ ಬಾಡಿಬಿಲ್ಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು, ಏಳು ಬಾರಿ ವಿಶ್ವದ ಅತಿದೊಡ್ಡ ಮಿಸ್ಟರ್ ಒಲಂಪಿಯಾ ದೇಹದಾರ್ಢ್ಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಅವರು 1975 ರಲ್ಲಿ ಮಿಸ್ಟರ್ ಒಲಂಪಿಯಾ ಸ್ಪರ್ಧೆಯಲ್ಲಿ ಗೆದ್ದ ಮೇಲೆ ದೇಹದಾರ್ಢ್ಯದಿಂದ ನಿವೃತ್ತಿ ಪಡೆದರು. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಅನೇಕ ಸಿನೆಮಾಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ನಟನೆಯ ಕೆಲವು ಚಿತ್ರಗಳ ಹೆಸರು ಹೀಗಿದೆ.

  ಹರ್ಕ್ಯುಲಸ್ ಇನ್ ನ್ಯೂಯಾರ್ಕ್ (1969), ದಿ ಲಾಂಗ್ ಗುಡ್‌ಬೈ (1973), ಸ್ಟೇ ಹಂಗ್ರಿ (1976), ಪಂಪಿಂಗ್ ಐರನ್, ಕಮಾಂಡೋ (1985), ರಾ ಡೀಲ್ (1986), ದಿ ರನ್ನಿಂಗ್ ಮ್ಯಾನ್ (1987) ಸೇರಿದಂತೆ ಅನೇಕ ಮೂವಿಗಳಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ನಟಿಸಿದ್ದಾರೆ. ಜೊತೆಗೆ ಟರ್ಮಿನೇಟರ್ ಚಿತ್ರಗಳಂತಹ ಅನೇಕ ಚಿತ್ರಗಳಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಕೆಲಸ ಮಾಡಿದ್ದಾರೆ.

  ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಫಿಟ್ನೆಸ್ ಸ್ಟೋರಿ

  74 ವರ್ಷ ವಯಸ್ಸಿನ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಫಿಟ್ನೆಸ್ 74 ರ ಹರೆಯದಲ್ಲೂ ತುಂಬಾ ಅದ್ಭುತವಾಗಿದೆ. ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಟಕಿಲಾ ಅಥವಾ ಆಸ್ಟ್ರಿಯನ್ ಸ್ಪಿರಿಟ್‌ ಜೊತೆ ಪ್ರೋಟೀನ್ ಶೇಕ್ ಮಿಶ್ರಣ ಮಾಡಿ ಸೇವನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದರಿಂದ ಅವರು ಸಾಕಷ್ಟು ಪ್ರಯೋಜನ ಪಡೆದಿದ್ದಾರಂತೆ. ಹಾಗಾದರೆ ಅವರ ಫಿಟ್ನೆಸ್ ಹಿಂದಿನ ರಹಸ್ಯವೇನು ಎಂದು ಇಲ್ಲಿ ತಿಳಿಯೋಣ.

  ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

  ಹಾಲೊಡಕು ಪ್ರೋಟೀನ್ ಜೊತೆ ಆಲ್ಕೋಹಾಲ್ ಬೆರೆಸಿ ಕುಡಿಯುವುದು

  ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಆಲ್ಕೋಹಾಲ್ ಜೊತೆ ಪ್ರೋಟೀನ್ ಶೇಕ್ ನ್ನು ಮಿಶ್ರಣ ಮಾಡಿ ಸೇವಿಸುತ್ತಾರೆ. ಟಕಿಲಾ ಅಥವಾ ಆಸ್ಟ್ರಿಯನ್ ಸ್ಪಿರಿಟ್ ಸ್ನ್ಯಾಪ್‌ಗಳನ್ನು ಆಲ್ಕೋಹಾಲ್ ಆಗಿ ಸೇರಿಸಿ ಕುಡಿಯುವುದಾಗಿ ಹೇಳಿದ್ದಾರೆ. ಪ್ರೋಟೀನ್ ಪೌಡರ್ ಅನ್ನು ಆಲ್ಕೋಹಾಲ್ ಜೊತೆ ಬೆರೆಸಿ ಕುಡಿಯುವುದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ ಅರ್ನಾಲ್ಡ್.

  ಪ್ರೋಟೀನ್ ಪೌಡರ್ ಅನ್ನು ಆಲ್ಕೋಹಾಲ್ ಜೊತೆ ಬೆರೆಸಿ ಕುಡಿಯುವುದರಿಂದ ಪ್ರೋಟೀನ್ ಅವನ ರಕ್ತಪ್ರವಾಹಕ್ಕೆ ವೇಗವಾಗಿ ತಲುಪುತ್ತದೆ ಎಂದಿದ್ದಾರೆ. ಇದರ ಜೊತೆ ಬಾದಾಮಿ ಹಾಲು, ಚೆರ್ರಿ ಜ್ಯೂಸ್, ಬಾಳೆಹಣ್ಣು, ಪ್ರೊಟೀನ್ ಪೌಡರ್, ಮೊಟ್ಟೆ ಸಹ ಮಿಶ್ರಣ ಮಾಡುತ್ತಾರೆ. ಇದು ಶೇಕ್ ರುಚಿಯನ್ನು ನೀಡುತ್ತದೆ.

  ಆದರೆ ಅನೇಕ ಸಂಶೋಧನೆಗಳ ಪ್ರಕಾರ, ಹಾಲೊಡಕು ಪ್ರೋಟೀನ್ ಅನ್ನು ಆಲ್ಕೋಹಾಲ್ನೊಂದಿಗೆ ಬೆರೆಸಿ ಕುಡಿಯುವುದು ದೇಹಕ್ಕೆ ಸಿಗುವ ಪ್ರಯೋಜನಗಳು ಕಡಿಮೆಯಾಗುತ್ತವೆ. ಮತ್ತು ಅದೇ ವೇಳೆ ಸ್ನಾಯುವಿನ ಬೆಳವಣಿಗೆ ಕಡಿಮೆಯಾಗುತ್ತದೆ ಎಂದು ತಿಳಿಸಿವೆ.

  ಆದರೆ 74 ವರ್ಷದ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು, ಯೀಸ್ಟ್‌ನಿಂದ ತಯಾರಿಸಿದ ಪ್ರೋಟೀನ್ ಶೇಕ್ ನ್ನ ಅವರು ತಮ್ಮ ಹದಿಹರೆಯದಿಂದಲೂ ದೇಹದಾರ್ಢ್ಯಕ್ಕಾಗಿ ಸೇವಿಸುತ್ತಾ ಬಂದಿದ್ದಾಗಿ ತಿಳಿಸಿದ್ದಾರೆ. ದಿನವೂ ವ್ಯಾಯಾಮ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ.

  1960 ರ ದಶಕದಲ್ಲಿ, ಶ್ವಾರ್ಜಿನೆಗ್ಗರ್ 15 ವರ್ಷ ವಯಸ್ಸಿಗೆ ಕಾಲಿಟ್ಟಾಗ ಅವರ ಕುಟುಂಬವು ಹಾಲಿನಿಂದ ಪ್ರೋಟೀನ್ ಶೇಕ್ ಮಾಡಲು ಬಳಸುತ್ತಿದ್ದ ಹೊಸ ಮಿಕ್ಸರ್ ಖರೀದಿ ಮಾಡಿತ್ತು. ಯೀಸ್ಟ್, ಕೆನೆರಹಿತ ಹಾಲಿನ ಪುಡಿ ಮತ್ತು ಜೇನುತುಪ್ಪವನ್ನು ಪ್ರೋಟೀನ್ ಶೇಕ್ ಮಾಡಲು ಬಳಸುತ್ತಿದ್ದರಂತೆ.

  ಪ್ರತಿದಿನ ವ್ಯಾಯಾಮ ಮಾಡಿ

  ಅರ್ನಾಲ್ಡ್ ಅವರು 74 ನೇ ವಯಸ್ಸಿನಲ್ಲೂ ದಿನವೂ ತಪ್ಪದೇ ವ್ಯಾಯಾಮ ಮಾಡುತ್ತಾರೆ. ಪ್ರತಿದಿನ ಒಂದೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುವುದಾಗಿ ತಿಳಿಸಿದ್ದಾರೆ. ವ್ಯಾಯಾಮದಲ್ಲಿ 45 ರಿಂದ 60 ನಿಮಿಷಗಳ ಸೈಕ್ಲಿಂಗ್ ಮತ್ತು 30 ನಿಮಿಷಗಳ ತೂಕ ತರಬೇತಿ. ನಾನು 40 ವರ್ಷ ವಯಸ್ಸಿನವನಾಗಿದ್ದಾಗ ಸ್ನಾಯುವಿನ ದ್ರವ್ಯರಾಶಿಯು ತುಂಬಾ ಹೆಚ್ಚಿತ್ತು.

  ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?

  ಆದರೆ ಈಗ ವಯಸ್ಸಾದಂತೆ ಸ್ನಾಯುವಿನ ದ್ರವ್ಯರಾಶಿ ಕಡಿಮೆಯಾಗಿದೆ. ಆದರೆ ಉಳಿದ ಸ್ನಾಯುಗಳನ್ನು ಕಾಪಾಡಿಕೊಳ್ಳಲು ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡುವುದಾಗಿ ಹೇಳಿದ್ದಾರೆ. ಅರ್ನಾಲ್ಡ್ 23 ವರ್ಷದವನಾಗಿದ್ದಾಗ, ಅವರು ದಿನಕ್ಕೆ ಐದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು. ಅವರು 23 ನೇ ವಯಸ್ಸಿನಲ್ಲಿ ಮಿಸ್ಟರ್ ಒಲಂಪಿಯಾ ಪ್ರಶಸ್ತಿ ಗೆದ್ದಿದ್ದರು.
  Published by:renukadariyannavar
  First published: