• Home
  • »
  • News
  • »
  • lifestyle
  • »
  • Holi Care: ಹೋಳಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಸಾವಯವ ಬಣ್ಣ..! ಇಲ್ಲಿದೆ ನೋಡಿ ಮಾಡುವ ಸುಲಭ ವಿಧಾನ

Holi Care: ಹೋಳಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಸಾವಯವ ಬಣ್ಣ..! ಇಲ್ಲಿದೆ ನೋಡಿ ಮಾಡುವ ಸುಲಭ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೋಳಿ ಹಬ್ಬದ ವೇಳೆ ನೀವು ಬಳಸುವ ಸಂಶ್ಲೇಷಿತ ಬಣ್ಣಗಳು ನಿಮ್ಮ ಚರ್ಮಕ್ಕೆ ಎಷ್ಟು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..? ಇದನ್ನು ಬಳಸುವುದರಿಂದ ಚರ್ಮದ ಮೇಲೆ ದದ್ದುಗಳು, ಕಡಿತಗಳು, ಅಲರ್ಜಿ ಇತ್ಯಾದಿಗಳು ಉಂಟಾಗುತ್ತವೆ.

  • Share this:

ಬಣ್ಣಗಳ ಹಬ್ಬ ಎಂದು ಕರೆಯುವ ಈ ಹೋಳಿ (Holi) ಹಬ್ಬದ ದಿನ ಬಹುತೇಕರು ಇದನ್ನು ತುಂಬಾನೇ ಸಡಗರದಿಂದ ಆಚರಿಸಲು ಇಷ್ಟ ಪಡುವುದನ್ನು ನಾವು ನೋಡುತ್ತೇವೆ. ಆದರೆ ಕೆಲವರಿಗೆ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಬಣ್ಣಗಳ (Colour) ಬಗ್ಗೆ ಭಯ (Fear) ಇರುತ್ತದೆ ಎಂದು ಹೇಳಿದರೆ ಸುಳ್ಳಲ್ಲ. ಏಕೆಂದರೆ ಈ ಬಣ್ಣಗಳನ್ನು ಸಂಶ್ಲೇಷಿತ ಬಣ್ಣಗಳೆಂದು ಹೇಳಲಾಗುತ್ತದೆ ಮತ್ತು ಇವುಗಳು ನಮ್ಮ ಚರ್ಮದ ಮೇಲೆ ಅನೇಕ ರೀತಿಯ ಪರಿಣಾಮವನ್ನು ಬೀರಬಹುದು ಎಂದು ಭಯ ಪಡುತ್ತಾರೆ. ಪ್ರತಿವರ್ಷವೂ ಭಾರತದ ಜನತೆ ಹೋಳಿ ಹಬ್ಬವನ್ನು ((Holi Festival)) ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಬಹುತೇಕ ಜನರು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಗುಲಾಲ್‌ಗಳನ್ನು ಮತ್ತು ಸಂಶ್ಲೇಷಿತ ಬಣ್ಣಗಳೊಂದಿಗೆ ಹೋಳಿ ಆಡುತ್ತಾರೆ. ಆದರೆ ಈ ಸಂಶ್ಲೇಷಿತ ಬಣ್ಣಗಳು ನಿಮ್ಮ ಚರ್ಮಕ್ಕೆ ಎಷ್ಟು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..? ಇದನ್ನು ಬಳಸುವುದರಿಂದ ಚರ್ಮದ ಮೇಲೆ ದದ್ದುಗಳು, ಕಡಿತಗಳು, ಅಲರ್ಜಿ ಇತ್ಯಾದಿಗಳು ಉಂಟಾಗುತ್ತವೆ.


ಇದಕ್ಕೇನು ಪರಿಹಾರವಿದೆ ಎಂದು ನೀವು ಕೇಳಬಹುದು. ನೀವು ನಿಮ್ಮ ಮನೆಯಲ್ಲಿಯೇ ಸಾವಯವ ಬಣ್ಣಗಳನ್ನು ತಯಾರಿಸಿಕೊಂಡು, ಅವುಗಳನ್ನು ಬಳಸಿಕೊಂಡು ಹೋಳಿ ಹಬ್ಬವನ್ನು ಅಷ್ಟೇ ಸಡಗರದಿಂದ ಯಾವುದೇ ಭಯ ಮತ್ತು ಆತಂಕವಿಲ್ಲದೆಯೇ ಆಚರಿಸಬಹುದು.


ನಿಮ್ಮ ಚರ್ಮಕ್ಕೆ ಹಾನಿಯಾಗದಂತೆ ಹೋಳಿ ಆಡಲು ಇರುವ ಏಕೈಕ ಮಾರ್ಗವೆಂದರೆ ಸಾವಯವ ಬಣ್ಣಗಳನ್ನು ಬಳಸುವುದು, ಇದನ್ನು ಮನೆಯಲ್ಲಿ ಮತ್ತು ಪ್ರಕೃತಿಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ.


ಇದನ್ನೂ ಓದಿ: Holi Skin Care: ಹೋಳಿ ಹಬ್ಬದ ಸಂಭ್ರಮದಲ್ಲಿ ಕೂದಲು, ಚರ್ಮದ ಆರೈಕೆಯನ್ನು ಮರೆಯದಿರಿ - ಈ ಟಿಪ್ಸ್ ಫಾಲೋ ಮಾಡಿ


ಮನೆಯಲ್ಲಿ ಸಾವಯವ ಬಣ್ಣಗಳನ್ನು ಮಾಡುವುದು ಹೇಗೆ..?


1. ಹಳದಿ ಬಣ್ಣ:


ನೀವು ಹಳದಿ ಬಣ್ಣವನ್ನು ಮಾಡಿಕೊಳ್ಳಲು 1:2 ಅನುಪಾತದಲ್ಲಿ ಕಡಲೆಹಿಟ್ಟು ಮತ್ತು ಅರಿಶಿನವನ್ನು ನೀವು ಮಿಶ್ರಣ ಮಾಡಿಕೊಳ್ಳಬೇಕು. ನಿಮ್ಮ ಅಂಗೈಗಳಿಂದ ಈ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿರಿ. ಇದರಿಂದ ಅವು ಸಮವಾಗಿ ಮಿಶ್ರಣವಾಗಿರುತ್ತವೆ. ನಂತರ ನೀವು ಮಿಶ್ರಣದ ಉತ್ತಮ ವಿನ್ಯಾಸವನ್ನು ಪಡೆಯಲು ಸ್ಟ್ರೈನರ್ ಮೂಲಕ 2 - 3 ಬಾರಿ ಜರಡಿ ಹಿಡಿಯಬಹುದು. ಇದಲ್ಲದೆ ಚೆಂಡು ಹೂವುಗಳನ್ನು ನೀರಿನಲ್ಲಿ ಕುದಿಸಬಹುದು ಅಥವಾ ನೀರಿನಲ್ಲಿ ಅರಿಶಿನವನ್ನು ಸೇರಿಸಿ ಸಹ ಹಳದಿ ಬಣ್ಣಗಳನ್ನು ತಯಾರಿಸಿಕೊಳ್ಳಬಹುದು.


2. ಕೆಂಪು ಬಣ್ಣ:


ಅರಿಶಿನದಲ್ಲಿ ನಿಂಬೆ ರಸವನ್ನು ಬೆರೆಸಿಕೊಳ್ಳಬಹುದು. ನಿಂಬೆ ರಸವು ಆಮ್ಲೀಯ ಸ್ವಭಾವವನ್ನು ಹೊಂದಿರುತ್ತದೆ ಮತ್ತು ಇದು ಅರಿಶಿನವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. ನಂತರ ನೀವು ಮಿಶ್ರಣವನ್ನು ಒಣಗಲು ಚೆನ್ನಾಗಿ ಗಾಳಿಯಾಡುವ ಕೋಣೆಯಲ್ಲಿ ಇರಿಸಿ ಮತ್ತು ಅಲ್ಲಿ ಸೂರ್ಯನ ಬೆಳಕು ಇರಬಾರದು.


ಕೆಂಪು ದಾಸವಾಳದ ಹೂವುಗಳು ಗರಿಗರಿಯಾಗಿ ಬರುವವರೆಗೆ ನೀವು ಅವುಗಳನ್ನು ಒಣಗಿಸಿ. ನಂತರ ಪುಡಿ ಮಾಡಿಕೊಂಡು ನೀವು ಸಮ ಪ್ರಮಾಣದ ಅಕ್ಕಿ ಹಿಟ್ಟು ಮತ್ತು ಕೆಂಪು ಕೇಸರಿಯನ್ನು ಮಿಶ್ರಣ ಮಾಡಿ ಬಣ್ಣದ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು. ಕೆಂಪು ಒದ್ದೆ ಬಣ್ಣವನ್ನು ಪಡೆಯಲು ನೀವು ದಾಳಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಬಹುದು.


3. ಮೆಜೆಂಟಾ ಬಣ್ಣ (ಕೆನ್ನೆರಳೆ ಬಣ್ಣ):


ನೀವು ಬೀಟ್ ರೂಟ್ ಚೂರುಗಳನ್ನು ಕತ್ತರಿಸಿ ನೀರಿನಲ್ಲಿ ಕುದಿಸಬಹುದು. ನೀವು ಕೆಂಪು ಈರುಳ್ಳಿಯನ್ನು ಸಹ ಬಳಸಬಹುದು. ನೀರನ್ನು ಸೋಸಿ ಮತ್ತು ಬಳಸುವ ಮೊದಲು ಅದನ್ನು ತಣ್ಣಗಾಗಿಸಿ.


4. ಕಂದು ಬಣ್ಣ:


ಕಂದು ಬಣ್ಣವನ್ನು ಪಡೆಯಲು ನೀವು ಸುಮಾರು 200 ಗ್ರಾಂ ಕಾಫಿಯನ್ನು ನೀರಿನೊಂದಿಗೆ ಕುದಿಸಿ. ಆದರೆ ವಾಸನೆಯನ್ನು ತಪ್ಪಿಸಲು ನೀವು ರೋಸ್ ವಾಟರ್ ಅನ್ನು ಮಿಶ್ರಣ ಮಾಡಬಹುದು. ಆದರೆ ನೆನಪಿಡಿ, ಕಾಫಿ ನೀರು ಸಹ ಕಲೆಗಳಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: Hair Care: ಹೋಳಿಯಲ್ಲಿ ಮಿಂದೇಳುವ ಮೊದಲು ನಿಮ್ಮ ಕೂದಲಿನ ಆರೈಕೆ ಹೀಗೆ ಇರಲಿ


5. ನೇರಳೆ ಬಣ್ಣ:


ನೀವು ಕಪ್ಪು ಕ್ಯಾರೆಟ್‌ಗಳನ್ನು ಮಿಕ್ಸರ್‌ನಲ್ಲಿ ಪುಡಿ ಮಾಡಿ ಅದನ್ನು ಜೋಳದ ಹಿಟ್ಟಿನೊಂದಿಗೆ ಮಿಶ್ರಣ ಮಾಡಿದ ನಂತರ ನೀವು ಅದನ್ನು ಒಣಗಲು ಬಿಡಿ. ಸುಗಂಧಕ್ಕಾಗಿ ನೀವು ಗುಲಾಬಿ ನೀರನ್ನು ಸಹ ಸೇರಿಸಬಹುದು.


6. ಬೂದು ಬಣ್ಣ:


ಬೂದು ಬಣ್ಣವನ್ನು ಪಡೆಯಲು ನೀವು ನೆಲ್ಲಿಕಾಯಿಯ ಬೀಜಗಳನ್ನು ಬಳಸಬಹುದು. ಒಣಗಿದ ಪುಡಿಯನ್ನು ಜೋಳದ ಹಿಟ್ಟಿನೊಂದಿಗೆ ಬೆರೆಸಿ ಬೂದು ಬಣ್ಣವನ್ನು ಪಡೆಯಿರಿ.


7. ಹಸಿರು ಬಣ್ಣ:


ಹಸಿರು ಬಣ್ಣಕ್ಕಾಗಿ ನೀವು ಅಕ್ಕಿ ಹಿಟ್ಟು ಅಥವಾ ಮೈದಾದೊಂದಿಗೆ ಹೆನ್ನಾ ಪುಡಿಯನ್ನು ಮಿಶ್ರಣ ಮಾಡಿ ಬಳಸಬಹುದು. ಒದ್ದೆ ಬಣ್ಣಗಳನ್ನು ಪಡೆಯಲು ನೀವು ಅದನ್ನು ನೀರಿನಲ್ಲಿ ಮಿಶ್ರಣ ಮಾಡಬಹುದು. ನೆನಪಿಡಿ, ಹೆನ್ನಾವನ್ನು ನೀರಿನಲ್ಲಿ ಬೆರೆಸಿದ್ದಲ್ಲಿ ನಿಮ್ಮ ಚರ್ಮ ಮತ್ತು ಬಟ್ಟೆಯ ಮೇಲೆ ಕಲೆಗಳನ್ನು ಬಿಡಬಹುದು.

Published by:shrikrishna bhat
First published: