ಅವರೆಕಾಳಿನ ತವರು ದಕ್ಷಿಣ ಅಮೆರಿಕಾ. ಆದರೆ ಇದು ಬಳಿಕ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬೆಳೆಯಲಾಯಿತು. ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳು, ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುತ್ತದೆ. ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದು. ಮೆದುಳು ಮತ್ತು ನರಕೋಶಗಳನ್ನು ಸರಿಯಾಗಿಡಲು ಇದು ತುಂಬಾ ಸಹಕಾರಿಯಾಗಿದೆ. ಇಂತಹ ಅವರೆಕಾಳಿನಲ್ಲಿ ಹಲವಾರು ಬಗೆ ಖಾದ್ಯಗಳನ್ನು ಮಾಡಲಾಗುತ್ತದೆ. ಸದ್ಯ ಇದು ಅವರೆಕಾಳು ಸೀಸನ್. ಈ ಸೀಸನ್ ಬಿಟ್ಟರೆ, ಮತ್ತೆ ಹಗ್ಗದ ದರದಲ್ಲಿ ಅವರೆಕಾಳು ಸಿಗುವುದು ಕಷ್ಟ. ಹಾಗಾಗಿ ಬೆಳಗಿನ ತಿಂಡಿ ಜೊತೆಗೆ ನಂಚಿಕೊಳ್ಳಲು ಅವರೆಕಾಳಿ ಗೊಜ್ಜಿನ ರೆಸಿಪಿಯನ್ನು ನೀವು ಟ್ರೈಂ ಮಾಡಬಹುದು. ಅಷ್ಟಕ್ಕೂ ಅವರೆಕಾಳು ಗೊಜ್ಜು ಮಾಡೋದು ಹೇಗೆ ಅಂತೀರಾ? ಹಾಗದ್ರೆ ಈ ಕೆಳಗೆ ಓದಿ..
![]()
ಹಿತಕಿರುವ ಅವರೆಕಾಳು
ಹಿತಕಿದ ಅವರೆಕಾಯಿ ಗೊಜ್ಜು ಮಾಡಲು ಬೇಕಾಗುವ ಸಾಮಾಗ್ರಿಗಳು
- 1 ಕೆಜಿ ಹಿತಕಿದ ಅವರೆಕಾಯಿ
- 1 ಕಪ್ ತೆಂಗಿನಕಾಯಿ ತುರಿ
- 2 ಈರುಳ್ಳಿ
- 1 ಆಲೂಗಡ್ಡೆ
- 2 ಬಿಳಿ ಬದನೆಕಾಯಿ
- 1 ಗಡ್ಡೆ ಬೆಳ್ಳುಳ್ಳಿ
- 1 ಸ್ಪೂನ್ ಶುಂಠಿ
- 2 ಚಕ್ಕೆ ಏಲಕ್ಕಿ
- 10 ಲವಂಗ
- 1 ಏಲಕ್ಕಿ
- 2 ಟೊಮೆಟೋ
- 1 ಕಪ್ ಕೊತ್ತಂಬರಿ ಸೊಪ್ಪು
- 1 ಕಪ್ ಎಣ್ಣೆ
- ¼ ಚಮಚ ಅರಿಶಿನ
- 3 ಸ್ಪೂನ್ ಅಚ್ಚಖಾರದ ಪುಡಿ
- 1 ಸ್ಪೂನ್ ಧನ್ಯಾಪುಡಿ
![]()
ಹಿತಕಿದ ಬೇಳೆಕಾಳು
ಹಿತಕಿದ ಅವರೆಕಾಯಿ ಗೊಜ್ಜು ಮಾಡುವ ವಿಧಾನ
- 1 ಕೆಜಿ ಅವರೆಕಾಯಿಯನ್ನು ತಂದು ಸುಲಿದು, ನಂತರ ಅವರೆಕಾಯಿ ಹಿತಕಿ ಸಿದ್ಧಪಡಿಸಿಕೊಳ್ಳಬೇಕು. ಒಂದು ಮಿಕ್ಸರ್ ಜಾರಿಗೆ ಒಂದು ಕಪ್ ತೆಂಗಿನ ಕಾಯಿ ತುರಿ, ಕತ್ತರಿಸಿಟ್ಟುಕೊಂಡಿದ್ದ 2 ಈರುಳ್ಳಿ, ಒಂದು ಗಡ್ಡೆ ಬೆಳ್ಳುಳ್ಳಿ, ಒಂದು ಚಮಚ ಶುಂಠಿ, 1 ಏಲಕ್ಕಿ, 8 ರಿಂದ 10 ಲವಂಗ, 1 ಚಕ್ಕೆಯನ್ನು ಹಾಕಿ ರುಬ್ಬಿಕೊಳ್ಳಬೇಕು.
- ಬಳಿಕ ರುಬ್ಬಿಕೊಂಡ ಮಿಶ್ರಣಕ್ಕೆ 2 ಟೊಮೆಟೋ ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ 1 ಕಪ್ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಬಹುದು.
- ಬಳಿಕ ಒಲೆ ಮೇಲೆ ಪ್ಯಾನ್ ಇಟ್ಟು, ಅದಕ್ಕೆ 3-4 ಸ್ಪೂನ್ ಎಣ್ಣೆ ಹಾಕಿ, ಸ್ಲೈಸ್ ಮಾಡಿದ ಅರ್ಧ ಈರುಳ್ಳಿ ಹಾಕಿ ಉರಿದುಕೊಳ್ಳಬೇಕು. ಬಳಿಕ ಹಿತಕಿದ ಅವರೆಕಾಳನ್ನು ಈರುಳ್ಳಿ ಜೊತೆಗೆ ಬೆರೆಸಿ, ಒಂದು ಆಲೂಗಡ್ಡೆ, 2 ಅಥವಾ 3 ಕತ್ತರಿಸಿರುವ ಬಿಳಿ ಬದನೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ನಂತರ ಇದಕ್ಕೆ ¼ ಚಮಚ ಅರಿಶಿನ, 3 ಸ್ಪೂನ್ ಅಚ್ಚಖಾರದ ಪುಡಿ, 1 ಸ್ಪೂನ್ ಧನ್ಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮಿಕ್ಸ್ ಮಾಡಿದ ಮಿಶ್ರಣಕ್ಕೆ 2-3 ಗ್ಲಾಸಸ್ ನೀರನ್ನು ಬೆರಸಿ ಚೆನ್ನಾಗಿ ಕುದಿಸಬೇಕು. ಬಳಿಕ ರುಬ್ಬಕೊಂಡಿರುವ ಮಿಶ್ರಣವನ್ನು ಕೂಡ ಬಾಣಲಿಗೆ ಹಾಕಿ, 15 ನಿಮಿಷ ಬೇಯಿಸಬೇಕು.
- ನಂತರ ತಯಾರಾದ ಹಿತಕಿದ ಅವರೆಕಾಳು ಗೊಜ್ಜನ್ನು ನೀವು, ಅಕ್ಕಿರೊಟ್ಟಿ, ಚಪಾತಿ, ರೋಟಿ, ಪರೋಟ, ಪೂರಿ, ದೋಸೆ, ಇಡ್ಲಿ, ಅನ್ನ ಹೀಗೆ ಯಾವುದರ ಜೊತೆ ಬೇಕಾದರೂ ಸೇವಿಸಬಹುದು.