• Home
  • »
  • News
  • »
  • lifestyle
  • »
  • Osteoporosis: ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುವ ಆಸ್ಟಿಯೊಪೊರೋಸಿಸ್ ತಡೆಗೆ ಈ ಆಹಾರ ಸೇವಿಸಿ!

Osteoporosis: ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುವ ಆಸ್ಟಿಯೊಪೊರೋಸಿಸ್ ತಡೆಗೆ ಈ ಆಹಾರ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸ್ಟಿಯೊಪೊರೋಸಿಸ್ ನಲ್ಲಿ ಮೂಳೆಗಳು ದುರ್ಬಲ ಆಗುತ್ತವೆ ಮತ್ತು ದುರ್ಬಲ ಆಗುತ್ತವೆ. ಈ ರೋಗವು ಸಾಮಾನ್ಯವಾಗಿ ನಿಮ್ಮ ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.

  • Share this:

    ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನ 2022 (World Osteoporosis Day) ಅನ್ನು ಆಚರಣೆ ಮಾಡಲಾಗುತ್ತದೆ. ಆಸ್ಟಿಯೊಪೊರೋಸಿಸ್ ತಡೆಗೆ, ಸಕಾಲಿಕ ರೋಗ (Disease) ನಿರ್ಣಯ ಮತ್ತು ಚಿಕಿತ್ಸೆ ಬಗ್ಗೆ ಜನರಿಗೆ (People) ಅರಿವು (Awareness) ಮೂಡಿಸುವುದು ಈ ದಿನದ ಉದ್ದೇಶ ಆಗಿದೆ. ಅಂತಹ ವೇಳೆ ಆಸ್ಟಿಯೊಪೊರೋಸಿಸ್ ನ್ನು ತಡೆಯಲು ತುಂಬಾ ಸುಲಭ ಮತ್ತು ಪರಿಣಾಮಕಾರಿ ಪರಿಹಾರ ಯಾವುದು ಅಂತಾ ನೋಡೋಣ. ಆಸ್ಟಿಯೊಪೊರೋಸಿಸ್ ನಲ್ಲಿ ಮೂಳೆಗಳು ದುರ್ಬಲ ಆಗುತ್ತವೆ. ಇದರಿಂದ ನಿಮಗೆ ಸೀನು, ಕೆಮ್ಮು ಸಹ ಉಂಟಾಗುವ ಸಾಧ್ಯತೆ ಇದೆ.


    ಆಸ್ಟಿಯೊಪೊರೋಸಿಸ್ ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುತ್ತದೆ


    ಈ ರೋಗವು ಸಾಮಾನ್ಯವಾಗಿ ನಿಮ್ಮ ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದರ ಲಕ್ಷಣಗಳನ್ನು ಚಿಕಿತ್ಸೆಯಿಂದ ಕಡಿಮೆ ಮಾಡಬಹುದು. ಇದಕ್ಕಾಗಿ ಆಹಾರದಲ್ಲಿ ಕೆಲವು ಬದಲಾವಣೆ ಮಾಡುವುದು ತುಂಬಾ ಮುಖ್ಯ.


    ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪೂರಕಗಳು ಮತ್ತು ನಿಯಮಿತ ವ್ಯಾಯಾಮ ಸೇರಿದಂತೆ ಕೆಲವು ಔಷಧಿ ನೀಡುತ್ತಾರೆ. ಆಸ್ಟಿಯೊಪೊರೋಸಿಸ್ ಫೌಂಡೇಶನ್ ಹೇಳುವ ಪ್ರಕಾರ, ವಿಶ್ವದ ಪ್ರತಿ ಮೂರನೇ ಒಬ್ಬ ಮಹಿಳೆ ಮತ್ತು ಪ್ರತಿ ಐದನೇ ಒಬ್ಬ ಪುರುಷ ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಮೂಳೆ ಕಾಯಿಲೆ ಆಗಿದೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪೋಷಕಾಂಶ ಕೊರತೆ


    ಹೆಚ್ಚಿನ ಜನರು ತಮ್ಮ ಮೂಳೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಲ್ಲ. ಇದನ್ನು ಅಂಕಿ ಅಂಶಗಳಿಂದ ಊಹಿಸುವುದು ಸುಲಭ ಆಗಿದೆ. ಮೂಳೆಗಳನ್ನು ಬಲಪಡಿಸುವ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳ ಸೇವನೆ ಕಡಿಮೆ ಮಾಡಿ. ಇದರಿಂದ ಆಹಾರದಲ್ಲಿ ಕೆಲವು ಬದಲಾವಣೆ ಮಾಡುವುದು, ನಿಮ್ಮ ಮೂಳೆಗಳನ್ನು ಮತ್ತೆ ಶಕ್ತಿಶಾಲಿಯಾಗಿಸಲು ಸಹಕಾರಿ ಆಗಿದೆ.


    ವಿಟಮಿನ್ ಡಿ ಪೋಷಕಾಂಶ ಇರುವ ಆಹಾರ ಸೇವಿಸಿ


    Webmd ಪ್ರಕಾರ, ನಿಮ್ಮ ಮೂಳೆಗಳು ಮತ್ತು ಸ್ನಾಯುಗಳಿಗೆ ವಿಟಮಿನ್ ಡಿ ಬಹಳ ಮುಖ್ಯ. ಸೂರ್ಯನ ಕಿರಣಗಳು ವಿಟಮಿನ್ ಡಿ ಯ ಮುಖ್ಯ ಮೂಲ ಆಗಿವೆ. ನೀವು ಅವುಗಳನ್ನು ಮುಖ್ಯವಾಗಿ ಕೆಲವು ಆಹಾರಗಳಲ್ಲಿ ಕಾಣಬಹುದು.


    ಕಿತ್ತಳೆ, ಕಾಲೋಚಿತ ಹಣ್ಣುಗಳು, ದ್ರಾಕ್ಷಿಗಳು, ಮೊಳಕೆಯೊಡೆದ ಹೆಸರು ಕಾಳು, ಹಸಿರು ಮತ್ತು ಕೆಂಪು ಮೆಣಸಿನಕಾಯಿ, ಪಾಲಕ್, ಸಾಸಿವೆ ಗ್ರೀನ್ಸ್, ಆಲೂಗಡ್ಡೆ, ಟೊಮೆಟೊ, ನಿಂಬೆ ಆಹಾರದಲ್ಲಿ ಸೇರಿಸಿದರೆ ಪೋಷಕಾಂಶ ಪಡೆಯಲು ಸಾಧ್ಯ.


    ಕ್ಯಾಲ್ಸಿಯಂಭರಿತ ಆಹಾರ ಸೇವಿಸಿ


    ಬಲವಾದ ಮೂಳೆಗಳಿಗೆ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ. ನಿಮ್ಮ ಹೃದಯ, ಸ್ನಾಯುಗಳು ಮತ್ತು ನರಗಳು ಸರಿಯಾಗಿ ಕೆಲಸ ಮಾಡಲು ಕ್ಯಾಲ್ಸಿಯಂ ಅಗತ್ಯ ಇದೆ. ಅಂತಹ ವೇಳೆ ಆಸ್ಟಿಯೊಪೊರೋಸಿಸ್ ನ್ನು ತಡೆಯಲು ಕ್ಯಾಲ್ಸಿಯಂ ಭರಿತ ಆಹಾರ ಸೇವನೆ ಮಾಡಿ. ಇದು ಡೈರಿ ಆಹಾರಗಳು, ಹಾಲು, ಮೊಸರು, ಚೀಸ್, ಎಲೆ ಹಸಿರು ತರಕಾರಿಗಳು, ಕೋಸುಗಡ್ಡೆ, ಕೇಲ್, ಕಿತ್ತಳೆ, ಬೀನ್ಸ್ ಮತ್ತು ಬಟಾಣಿ ಆಹಾರದಲ್ಲಿ ಸೇರಿಸಿ ಸೇವಿಸಬಹುದು.


    ಮದ್ಯಪಾನ ಮಾಡಬೇಡಿ


    ದೀರ್ಘಕಾಲದ ಮದ್ಯ ಸೇವನೆ ಮೂಳೆಯ ಬೆಳವಣಿಗೆ ಮತ್ತು ಮರು ರೂಪಿಸುವಿಕೆ ದುರ್ಬಲ ಮಾಡುತ್ತದೆ. ಇದರ ಪರಿಣಾಮ ಮೂಳೆ ಸಾಂದ್ರತೆ ಕಡಿಮೆ ಆಗುತ್ತದೆ. ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಾಗುತ್ತದೆ. ಇದು ಆಸ್ಟಿಯೊಪೊರೋಸಿಸ್ ಬರುವ ಸಾಧ್ಯತೆ ಹೆಚ್ಚಿಸುತ್ತದೆ. ಅಂತಹ ವೇಳೆ ನೀವು ಆಲ್ಕೊಹಾಲ್ ಸೇವಿಸುತ್ತಿದ್ದರೆ ನಂತರ ಜಾಗ್ರತೆ ವಹಿಸಿ.


    ಹೆಚ್ಚು ಉಪ್ಪು ಸೇವನೆ ಬೇಡ


    ಉಪ್ಪು (ಸೋಡಿಯಂ) ಅಧಿಕ ಆಹಾರ ಸೇವನೆ ಮಾಡುವುದು ನಿಮ್ಮ ದೇಹವು ಕ್ಯಾಲ್ಸಿಯಂ ನ್ನು ಕಡಿಮೆ ಮಾಡುತ್ತದೆ. ಮತ್ತು ಮೂಳೆಯ ನಷ್ಟಕ್ಕೆ ಕಾರಣ ಆಗಬಹುದು. ಇಂತಹ ವೇಳೆ ಆಹಾರದಲ್ಲಿ ಕಡಿಮೆ ಹೆಚ್ಚುವರಿ ಉಪ್ಪು ಸೇವನೆ ಜೊತೆಗೆ ಕಡಿಮೆ ಜಂಕ್ ಫುಡ್ ಸಂಸ್ಕರಿಸಿದ ಆಹಾರ ಸೇವಿಸಿ.


    ಇದನ್ನೂ ಓದಿ: ಹಸಿ ಹಾಲನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಹೀಗೂ ಬಳಸಬಹುದು


    ಕಾಫಿ ಅಥವಾ ಚಹಾದ ಮಿತಿ ಮೀರಿದ ಸೇವನೆ ಹಾನಿಕರ.


    ಕಾಫಿ, ಚಹಾ ಮತ್ತು ತಂಪು ಪಾನೀಯಗಳು ಕೆಫೀನ್ ಅನ್ನು ಹೊಂದಿರುತ್ತವೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆ ಮಾಡುತ್ತದೆ. ಮತ್ತು ಮೂಳೆಯ ನಷ್ಟಕ್ಕೆ ಕಾರಣ ಆಗಬಹುದು. ಪಾನೀಯ ಮಿತವಾಗಿ ಕುಡಿಯಿರಿ.

    Published by:renukadariyannavar
    First published: