Sarkari Naukri: 10ನೇ ತರಗತಿ ಪಾಸಾದವರಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್​ನಲ್ಲಿ ಉದ್ಯೋಗಾವಕಾಶ

Sarkari Naukri: ಅರ್ಜಿದಾರರ ವಯಸ್ಸು 28.01.2020 ರಂತೆ 18 ವರ್ಷದಿಂದ 30 ವರ್ಷದೊಳಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ನೀಡಲಾಗಿದೆ.

zahir | news18-kannada
Updated:January 31, 2020, 2:54 PM IST
Sarkari Naukri: 10ನೇ ತರಗತಿ ಪಾಸಾದವರಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್​ನಲ್ಲಿ ಉದ್ಯೋಗಾವಕಾಶ
jobs
  • Share this:
Hindustan Copper Limited Recruitment 2020: ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಟ್ರೇಡ್ ಅಪ್ರೆಂಟಿಸ್ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಮೂಲಕ 161 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಫೆಬ್ರವರಿ 15 ರೊಳಗೆ ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಹಾಗೆಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ

ಮೆಟ್ (ಗಣಿ) - 30 ಹುದ್ದೆಗಳು
ಬ್ಲಾಸ್ಟರ್ (ಗಣಿ) - 30 ಹುದ್ದೆಗಳು
ಫಿಟ್ಟರ್ - 25 ಹುದ್ದೆಗಳು
ಟರ್ನರ್ - 5 ಹುದ್ದೆಗಳು
ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) - 15 ಹುದ್ದೆಗಳುಎಲೆಕ್ಟ್ರಿಷಿಯನ್ - 30 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ - 6 ಹುದ್ದೆಗಳು
ಡ್ರಾಫ್ಟ್ಸ್‌ಮನ್ (ಸಿವಿಲ್) - 3 ಹುದ್ದೆಗಳು
ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್) - 2 ಹುದ್ದೆಗಳು
ಮೆಕ್ಯಾನಿಕ್ ಡೀಸೆಲ್ - 10 ಹುದ್ದೆಗಳು
ಪಂಪ್ ಆಪರೇಟರ್ ಕಮ್ ಮೆಕ್ಯಾನಿಕ್ - 1 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ - 2 ಹುದ್ದೆಗಳು
ವೈರ್‌ಮ್ಯಾನ್ - 2 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ - 161

ವಿದ್ಯಾರ್ಹತೆ:
ಮೆಟ್ (ಮೈನ್ಸ್), ಬ್ಲಾಸ್ಟರ್ (ಮೈನ್ಸ್) ಹುದ್ದೆಗೆ, ಅಭ್ಯರ್ಥಿಯು 10 ನೇ ಪಾಸ್ ಆಗಿರಬೇಕು. ಹಾಗೆಯೇ ಇತರೆ ಹುದ್ದೆಗಳಿಗೆ 10 ನೇ ತರಗತಿ ಪಾಸ್​ನೊಂದಿಗೆ ಸಂಬಂಧಿತ ವಿಷಯದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

ವಯೋಮಿತಿ:
ಅರ್ಜಿದಾರರ ವಯಸ್ಸು 28.01.2020 ರಂತೆ 18 ವರ್ಷದಿಂದ 30 ವರ್ಷದೊಳಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:
10ನೇ ಮತ್ತು ಐಟಿಐ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 15, 2020

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apprenticeship.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published: January 31, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading