• Home
  • »
  • News
  • »
  • lifestyle
  • »
  • Hilsa Fish: ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಹಿಲ್ಸಾ ಮೀನಿನ ಬಗ್ಗೆ ನಿಮಗೆಷ್ಟು ಗೊತ್ತು?

Hilsa Fish: ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಹಿಲ್ಸಾ ಮೀನಿನ ಬಗ್ಗೆ ನಿಮಗೆಷ್ಟು ಗೊತ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರುಚಿ ಮಾತ್ರವಲ್ಲದೇ ಹಿಲ್ಸಾ ಮೀನು ನಿಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ತಂದು ಕೊಡುತ್ತದೆ. ಹಿಲ್ಸಾ ಮೀನಿನ ಸೇವನೆಯು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದಿಂದ ನಿಮ್ಮನ್ನು ದೂರವಿಡುತ್ತದೆ.

  • Share this:

    ಪ್ರತೀ ವರ್ಷಗಳಂತೆ 2022ರ ದುರ್ಗಾ ಪೂಜೆ (Durga Pooja), ನವರಾತ್ರಿ ಹಬ್ಬದ (Festival) ಸಂಭ್ರಮದ ದಿನಗಳು ಶುರುವಾಗಲಿವೆ. ಭಾರತದಾದ್ಯಂತ (India) ದೇವಿ ದುರ್ಗೆಯ ಆರಾಧನೆ, ಪೂಜೆ ಎಲ್ಲವೂ ಆರಂಭ ಆಗಲಿದೆ. ಈ ಮಧ್ಯೆ ಮೀನು ಪ್ರಿಯರು (Fish Lovers) ಸಹ ಸಂತಸಗೊಂಡಿದ್ದಾರೆ. ಹಿಲ್ಸಾ (Hilsa) ಎಂಬ ಮೀನು ಬಾಂಗ್ಲಾದೇಶದಿಂದ (Bangladesh) ಉಡುಗೊರೆಯಾಗಿ ಬಂದಿದೆ.  ಹಿಲ್ಸಾ ಮೀನನ್ನು ಮೀನು ಪ್ರಿಯರು ಸ್ವಾಗತಿಸಿದ್ದಾರೆ. ಚಂಡೀಪುರ ಪ್ರದೇಶದ ಹಿಲ್ಸಾ ಮೀನು ಇದಾಗಿದೆ. ಹಿಲ್ಸಾ ಮೀನಿನ ಹೆಸರು ಕೇಳಿದ್ರೆ ಮೀನು ಪ್ರಿಯರ ಬಾಯಲ್ಲಿ ನೀರೂರುತ್ತದೆ. ಇದು ಹೂಗ್ಲಿಯ ಚುಚುರಾದ ಚಕ್‌ಬಜಾರ್ ಪ್ರದೇಶ ತಲುಪಿ ನಂತರ ಮೀನು ಪ್ರಿಯರ ಕೈ ಸೇರಲಿದೆ.


    ಹಿಲ್ಸಾ ಮೀನು ಆರೋಗ್ಯಕರ


    ಈ ಮೀನು ಸಿಹಿ ನೀರು ಅಥವಾ ಸಿಹಿ ನೀರಿನಲ್ಲಿ ಸಿಗುವ ಮೀನು ಆಗಿದೆ. ರುಚಿ ಮಾತ್ರವಲ್ಲದೇ ಹಿಲ್ಸಾ ಮೀನು ಇದು ನಿಮ್ಮ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ತಂದು ಕೊಡುತ್ತದೆ. ಹಿಲ್ಸಾ ಮೀನಿನ ಸೇವನೆಯು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದಿಂದ ನಿಮ್ಮನ್ನು ದೂರವಿಡುತ್ತದೆ ಎಂಬುದು ತಜ್ಞರ ಮಾತು. ಹಾಗಾದ್ರೆ ನಾವು ಇಲ್ಲಿ ಹಿಲ್ಸಾ ಮೀನಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.


    ಜನಪ್ರಿಯ ಹಿಲ್ಸಾ ಮೀನು ರುಚಿಕರ


    ಇದರ ಆರೋಗ್ಯ ಪ್ರಯೋಜನಗಳು ಮತ್ತು ಸಾಟಿಯಿಲ್ಲದ ರುಚಿ ಮೀನು ಪ್ರಿಯರನ್ನು ತನ್ನತ್ತ ಸೆಳೆಯುತ್ತದೆ. ಹಿಲ್ಸಾ ಮೀನು ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದರ ಜನಪ್ರಿಯತೆ ಎಂದರೆ ಇದು ತುಂಬಾ ದುಬಾರಿ ಮೀನು ಆಗಿದೆ. ಜೊತೆಗೆ ಹೆಚ್ಚಿನ ಬೇಡಿಕೆಯೂ ಇದಕ್ಕೆ ಇದೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಭಾರತದಲ್ಲಿ ಬಹುತೇಕವಾಗಿ ಹಿಲ್ಸಾ ಮೀನು ಅಳಿದು ಹೋಗಿದೆ. ಇದಕ್ಕಾಗಿ ದುರ್ಗಾ ಪೂಜೆ ವೇಳೆ ಹಿಲ್ಸಾ ಮೀನಿನ ಆಗಮನ ಬಂಗಾಳದಿಂದ ಬಂದಿದ್ದು, ಮೀನು ಪ್ರಿಯರು ಸಂತಸಗೊಂಡಿದ್ದಾರೆ.


    ನಾಲಿಗೆ ಮಾತ್ರವಲ್ಲದೆ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ


    ಎಲಿಶಾ ಎಂದೂ ಕರೆಯಲ್ಪಡುವ ಹಿಲ್ಸಾ ಮೀನು ಉತ್ತಮ ಕೊಬ್ಬಿನಾಮ್ಲಗಳು ಮತ್ತು ಒಮೆಗಾ -3 ಗಳಲ್ಲಿ ಸಮೃದ್ಧವಾಗಿದೆ. ಮತ್ತು ಪರಿಧಮನಿಯ ಹೃದಯ ಸಮಸ್ಯೆಗಳಿಂದ ರಕ್ಷಿಸುವ ಸಾಮರ್ಥ್ಯ ಇದು ಹೊಂದಿದೆ. ಹಿಲ್ಸಾ ಮೀನು ಅಸಾಮಾನ್ಯ ಸೂಕ್ಷ್ಮ ಮಾಂಸ ಹೊಂದಿರುವ ಕೆಲವು ಜಾತಿಯ ಮೀನುಗಳಲ್ಲಿ ಇದು ಒಂದಾಗಿದೆ.


    ಹಿಲ್ಸಾ ಮೀನು ಇದು ಪೂರ್ವ ಭಾರತದ ಶುದ್ಧ ನೀರಿನಲ್ಲಿ ಬೆಳೆಯುತ್ತದೆ. ರುಚಿಯ ಜೊತೆಗೆ ಇದು ಮೃದು ಮತ್ತು ಎಣ್ಣೆಯುಕ್ತ ವಿನ್ಯಾಸ ಹೊಂದಿದೆ. ಅಂದ ಹಾಗೇ ಕೆಲವು ವರ್ಷಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಹಿಲ್ಸಾ ಹೇರಳವಾಗಿ ಕಂಡು ಬಂದಿತ್ತು. ಮಿತಿ ಮೀರಿದ ಹಿಲ್ಸಾ ಮೀನಿನ ಬಳಕೆ ಮತ್ತು ಹೆಚ್ಚಿದ ಬೇಡಿಕೆಯು ಹಿಲ್ಸಾ ಮೀನುಗಳ ಇಳಿಕೆಗೆ ಕಾರಣವಾಯಿತು.


    ಇದರ ಬೆಲೆ ಏರಿಕೆಗೆ ಇದೂ ಒಂದು ಕಾರಣವಾಗಿತ್ತು. ಗೋವಾ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂ ಕರಾವಳಿ ನಗರಗಳಲ್ಲಿ ಹಿಲ್ಸಾ ಮೀನಿನ ಬೆಲೆ ಇತರೆ ಸ್ಥಳಗಳಿಗೆ ಹೋಲಿಸಿದರೆ ಕಡಿಮೆ. ಕ್ಲಾಸಿಕ್ ಬೆಂಗಾಲಿ ಭಕ್ಷ್ಯಗಳಿಗೆ ಹಿಲ್ಸಾ ವಿಶೇಷ ಮತ್ತು ಪರಿಪೂರ್ಣವೆಂದು ಪರಿಗಣಿತವಾಗಿದೆ.


    ಹಿಲ್ಸಾ ಮೀನು ಆರೋಗ್ಯಕ್ಕೆ ಏಕೆ ವಿಶೇಷವಾಗಿದೆ?


    ಹಿಲ್ಸಾ ರುಚಿಯಲ್ಲಿ ಮಾತ್ರವಲ್ಲದೇ ಆರೋಗ್ಯಕರ ಗುಣಗಳಿಂದ ಕೂಡಿದೆ. ಪ್ರೋಟೀನ್‌ನ ಉತ್ತಮ ಮೂಲವಾಗಿದೆ ಹಿಲ್ಸಾ ಮೀನು. ಇದರಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಹಿಲ್ಸಾ ಮೀನು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ.


    ಹಿಲ್ಸಾ ಮೀನಿನ ಸೇವನೆ ಪರಿಧಮನಿಯ ಹೃದಯ ಕಾಯಿಲೆ ತಡೆಯುತ್ತದೆ. ದೇಹಕ್ಕೆ ವಿಟಮಿನ್ ಎ ಮತ್ತು ಡಿ ಪೋಷಕಾಂಶ ಒದಗಿಸುತ್ತದೆ. ತ್ವಚೆಯನ್ನು ಸುಂದರವಾಗಿಡುತ್ತದೆ. ಇನ್ನು ಹಿಲ್ಸಾ ಮೀನು ಸಾಮಾನ್ಯವಾಗಿ ದುಬಾರಿಯಾಗಿದೆ. ಮೃದು ಫ್ಲಾಕಿ ರುಚಿಯಿಂದ ಕೂಡಿದೆ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ರುಚಿ ಮತ್ತು ಆರೋಗ್ಯದ ಅಪರೂಪದ ಗುಣಗಳ ಸಂಯೋಜನೆಯಿಂದ ಹಿಲ್ಸಾ ಮೀನುಗಳ ರಾಣಿ  ಎಂದೇ ಕರೆಯಲ್ಪಡುತ್ತದೆ.

    Published by:renukadariyannavar
    First published: