• Home
  • »
  • News
  • »
  • lifestyle
  • »
  • Belly Fat: ಈ ವ್ಯಾಯಾಮ ಮಾಡಿದ್ರೆ ಸಾಕು ಹೊಟ್ಟೆಯ ಕೊಬ್ಬು ಬೇಗ ಕರಗುತ್ತೆ

Belly Fat: ಈ ವ್ಯಾಯಾಮ ಮಾಡಿದ್ರೆ ಸಾಕು ಹೊಟ್ಟೆಯ ಕೊಬ್ಬು ಬೇಗ ಕರಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

HIIT Training: ಈ ತೀವ್ರವಾದ ವ್ಯಾಯಾಮಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರು ಅಥವಾ ಫಿಟ್ನೆಸ್ ತರಬೇತುದಾರರ ಸಲಹೆ ಪಡೆಯಿರಿ.

  • Share this:

ತೂಕವನ್ನು ಕಳೆದುಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಆದ್ರೆ ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ತೂಕ ನಷ್ಟ ಗುರಿ ಸಾಧಿಸಬಹುದು. ಅದ್ರಲ್ಲೂ ವಿಶೇಷವಾಗಿ ಒಂದು ನಿರ್ದಿಷ್ಟ ವ್ಯಾಯಾಮವನ್ನು ಕಾರ್ಡಿಯೋಗಿಂತ ಹೆಚ್ಚು ಪರಿಣಾಮಕಾರಿ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದೇ HIIT (high intensity interval training) ಅಥವಾ ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು, ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (HIIT) ಕೊಬ್ಬಿನ ಚಯಾಪಚಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಅಂದರೆ ಅದು "ಏರೋಬಿಕ್ ವ್ಯಾಯಾಮಕ್ಕಿಂತ ಹೆಚ್ಚು ಕೊಬ್ಬನ್ನು ಕರಗಿಸುತ್ತದೆ ಎನ್ನಲಾಗಿದೆ. ಇದರಿಂದಾಗಿ ನೀವು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಬಯಸಿದರೆ, ವ್ಯಾಯಾಮದ ದಿನಚರಿಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.


ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (HIIT) ಎಂದರೇನು?


HIIT ಒಂದು ರೀತಿಯ ಮಧ್ಯಂತರ ತರಬೇತಿ ವ್ಯಾಯಾಮವಾಗಿದ್ದು ಅದು ತ್ವರಿತ, ತೀವ್ರವಾದ ವ್ಯಾಯಾಮವನ್ನು ಒಳಗೊಂಡಿರುತ್ತದೆ. ನಂತರ ಕಡಿಮೆ, ಕೆಲವೊಮ್ಮೆ ಸಕ್ರಿಯ, ಚೇತರಿಕೆಯ ಅವಧಿಗಳು. ಇದು ಕಡಿಮೆ ಸಮಯದಲ್ಲಿ ಗರಿಷ್ಠ ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ. ಜೊತೆಗೆ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯ ವ್ಯಾಯಾಮದಿಂದ ನೀವು ಪಡೆದುಕೊಳ್ಳಬಹುದಾದ ಮತ್ತೊಂದು ಪ್ರಯೋಜನವೆಂದರೆ ಸ್ನಾಯುಗಳ ಬೆಳವಣಿಗೆ.
ಅಧ್ಯಯನ ಏನು ಹೇಳುತ್ತೆ?


ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಅಧ್ಯಯನವು ಒಟ್ಟು 511 ವಯಸ್ಕ ಸ್ವಯಂಸೇವಕರನ್ನು ಪರೀಕ್ಷಿಸಿದೆ. ಅವರನ್ನು ಮೂರು ನಿಯಂತ್ರಣ ಗುಂಪುಗಳಾಗಿ ವಿಂಗಡಿಸಲಾಗಿದೆ. ಅವರು ಮೇಲ್ವಿಚಾರಣೆಯ HIIT ಗುಂಪು, ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮದ ಗುಂಪು ಹಾಗೂ ಯಾವ ವ್ಯಾಯಾಮವನ್ನೂ ಮಾಡದಿರುವ ಗುಂಪು. HIIT ವ್ಯಾಯಾಮದಲ್ಲಿ ಭಾಗವಹಿಸುವವರು 2-14 ವಾರಗಳ ವರೆಗೆ ತೊಡಗಿಕೊಂಡಿದ್ದರು. ಕೊನೆಗೆ HIITಯ 12 ವಾರಗಳ ನಂತರ, ಪ್ರತಿ ನಿಮಿಷದ ದೈಹಿಕ ಚಟುವಟಿಕೆಯು ಸುಮಾರು 0.13 ಗ್ರಾಂ ಕೊಬ್ಬನ್ನು ಕರಗಿಸುತ್ತದೆ ಎಂದು ಕಂಡುಬಂದಿದೆ.


ಸಂಶೋಧನೆಯಿಂದ ಗೊತ್ತಾಗಿದ್ದೇನು?


ಸಂಶೋಧಕರ ಪ್ರಕಾರ, HIIT ಹಲವು ಪ್ರಯೋಜನಗಳನ್ನು ಸೆಷನ್‌ಗಳಲ್ಲಿ ಮಾತ್ರವಲ್ಲದೆ ಇತರ ದೈಹಿಕ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕೊಬ್ಬು ಕರಗಿಸುವುದನ್ನು ಹೆಚ್ಚಿಸುತ್ತದೆ. "ಹೆಚ್‌ಐಐಟಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಕೊಬ್ಬು ಕರಗಿಸುವುದನ್ನು ಸುಧಾರಿಸಬಹುದು. ದೀರ್ಘ ತರಬೇತಿ ಕಟ್ಟುಪಾಡುಗಳು ಮತ್ತು ಅಧಿಕ ತೂಕ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚಿನ ಪರಿಣಾಮಗಳನ್ನು ನಿರೀಕ್ಷಿಸಬಹುದು" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಈ ಗೇಮ್​ಗಳು ನಿಮ್ಮ ನೆನಪಿನ ಶಕ್ತಿ ಹೆಚ್ಚು ಮಾಡುತ್ತವೆ, ಮರೆವಿನ ಕಾಯಿಲೆ ಇದ್ರೆ ಟ್ರೈ ಮಾಡಿ


ಹೆಚ್ಚುವರಿಯಾಗಿ, ಕೊಬ್ಬಿನ ಚಯಾಪಚಯವು "ಕೇವಲ ನಾಲ್ಕು ವಾರಗಳ ಎಚ್‌ಐಐಟಿಯ ನಂತರ ಸುಧಾರಿಸುತ್ತದೆ" ಮತ್ತು ಅದು "ಕಾಲಕ್ರಮೇಣ ಸುಧಾರಿಸುತ್ತದೆ" ಎಂದು ಹೇಳಲಾಗಿದೆ. ಮೆಲ್ಬೋರ್ನ್‌ನ ವಿಕ್ಟೋರಿಯಾ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಸ್ಪೋರ್ಟ್‌ನಿಂದ ಅಧ್ಯಯನ ಲೇಖಕ ಪ್ರೊಫೆಸರ್ ಝೆಲ್ಜ್ಕೊ ಪೆಡಿಸಿಕ್, "ಒಂದು ವೇಳೆ ಮೊಂಡುತನದ ದೇಹದ ಕೊಬ್ಬು ಹೋಗದಿದ್ದರೆ, ನಿಮ್ಮ ವ್ಯಾಯಾಮದ ದಿನಚರಿಗೆ HIIT ಸೇರಿಸುವುದನ್ನು ಪರಿಗಣಿಸಿ" ಎಂದು ಹೇಳಿದ್ದಾರೆ.


ನೀವು ಮಾಡಬಹುದಾದ ವ್ಯಾಯಾಮಗಳು


ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ನಿಮ್ಮ ಮನಸ್ಸನ್ನು ಮಾಡಿದ್ದರೆ, ತೂಕ ನಷ್ಟಕ್ಕೆ ನೀವು ಮಾಡಬಹುದಾದ ಕೆಲವು HIIT ವ್ಯಾಯಾಮಗಳೆಂದರೆ ಬರ್ಪೀಸ್, ಹೈ ನೀಸ್‌, ಲಂಗ್‌ ಜಂಪ್ಸ್‌, ಜಂಪಿಂಗ್ ಜ್ಯಾಕ್ಗಳು, ಪರ್ವತ ಹತ್ತುವವುದು, ಪುಷ್ ಅಪ್ಗಳು, ಸೈಡ್ ಜಾಕ್ನೈಫ್ ಇವುಗಳನ್ನು ಮಾಡಬಹುದಾಗಿದೆ.


HIIT ವ್ಯಾಯಾಮವನ್ನು ಯಾರು ಮಾಡಬಾರದು?


ಅಂದಹಾಗೆ ಎಚ್‌ಐಐಟಿ ತರಬೇತಿಯು ಎಲ್ಲರಿಗೂ ಅಲ್ಲ. ಗಾಯಗೊಂಡ ಜನರು, ಗರ್ಭಿಣಿಯರು, ಪ್ರಸವಾನಂತರದ ಮೊದಲ 3-6 ತಿಂಗಳಲ್ಲಿರುವ ಮಹಿಳೆಯರು, ಇಮ್ಯುನೊ ಕೊಂಪ್ರೊಮೈಸ್ಡ್ ಜನರು, ಗಂಭೀರ ಹೃದಯ ಕಾಯಿಲೆ, ಆಸ್ಟಿಯೋಪೆನಿಯಾ ಅಥವಾ ಆಸ್ಟಿಯೊಪೊರೋಸಿಸ್ ರೋಗನಿರ್ಣಯ ಮಾಡಿದ ಜನರು ಈ ವ್ಯಾಯಾಮ ಮಾಡದಿದ್ದರೆ ಒಳ್ಳೆಯದು.


ಇದನ್ನೂ ಓದಿ:ಸಮಸ್ಯೆ ಇದ್ರೆ ನಿಮ್ಮ ಆಹಾರ ಕ್ರಮ ಈ ರೀತಿ ಬದಲಾಗಲೇಬೇಕಂತೆ


ಈ ತೀವ್ರವಾದ ವ್ಯಾಯಾಮಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರು ಅಥವಾ ಫಿಟ್ನೆಸ್ ತರಬೇತುದಾರರ ಸಲಹೆ ಪಡೆಯಿರಿ.

Published by:Sandhya M
First published: